Bangladesh Mass Protests : ಬಾಂಗ್ಲಾದೇಶದಲ್ಲಿ ಆರಾಜಕತೆ : ಪ್ರಧಾನಮಂತ್ರಿ ಶೇಖ ಹಸೀನಾ ವಿರುದ್ಧ ಬೀದಿಗಿಳಿದ ೧ ಲಕ್ಷ ಜನರು !

ಮುಖ್ಯನ್ಯಾಯಮೂರ್ತಿಗಳ ಮನೆಯ ಮೇಲೆಯೂ ದಾಳಿ , ಒಬ್ಬ ಪೊಲೀಸ ಅಧಿಕಾರಿಯ ಹತ್ಯೆ !

ಢಾಕಾ (ಬಾಂಗ್ಲಾದೇಶ) – ಪ್ರಧಾನಮಂತ್ರಿ ಶೇಖ ಹಸಿನಾ ಇವರು ರಾಜೀನಾಮೆಗೆ ಒತ್ತಾಯಿಸಿ ೧ ಲಕ್ಷ ಜನರು ಬೀದಿಗೆ ಇಳಿದಿದ್ದಾರೆ. ಆ ಸಮಯದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಒಬ್ಬ ಪೊಲೀಸ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು,೧೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎರಡು ದೊಡ್ಡ ರಾಜಕೀಯ ವಿರೋಧಿ ಪಕ್ಷಗಳಾದ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಮತ್ತು ಜಮಾತ- ಎ- ಇಸ್ಲಾಮಿ ಕಾರ್ಯಕರ್ತರು ಅಕ್ಟೋಬರ್ ೨೮ ರಂದು ಹಿಂಸಾಚಾರ ನಡೆಸಿದರು.

೧. ಮುಂದಿನ ವರ್ಷ ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ರಾಷ್ಟ್ರೀಯ ಚುನಾವಣೆ ನಡೆಯಲಿದೆ. ಈ ದೃಷ್ಟಿಯಿಂದ ಪ್ರಧಾನಮಂತ್ರಿ ಶೇಖ ಹಸೀನಾ ಇವರು ರಾಜೀನಾಮೆ ನೀಡಬೇಕು ಮತ್ತು ನಿಷ್ಪಕ್ಷ ಚುನಾವಣೆಗಾಗಿ ಉಸ್ತುವಾರಿ ಸರಕಾರವನ್ನು ರಚಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

೨. ಸ್ಥಳೀಯ ದಿನಪತ್ರಿಕೆ `ಡೆಲಿ ಸ್ಟಾರ್’ ಪ್ರಕಾರ ಕಳೆದ ೪೫ ತಿಂಗಳಲ್ಲಿ ಇದು ಅತಿ ದೊಡ್ಡ ಪ್ರತಿಭಟನೆ ಆಗಿದೆ.

೩. ಈ ಸಮಯದಲ್ಲಿ ದೇಶದ ಮುಖ್ಯನ್ಯಾಯಮೂರ್ತಿ ಒಬೆದುಲ್ ಹಸನ ಇವರ ಮನೆಯ ಮೇಲೆಯೂ ದಾಳಿ ನಡೆದಿದೆ. ಭದ್ರತಾ ಇಲಾಖೆಯವರು ದಾಳಿಕೋರರನ್ನು ತಡೆಯಲು ಪ್ರಯತ್ನಿಸಿದಾಗ ಕಕರೆಲ್ ವೃತ್ತ , ಸರ್ವೋಚ್ಚ ನ್ಯಾಯಾಲಯದ ಪರಿಸರ ಮತ್ತು ನ್ಯಾಯಾಧೀಶರ ನಿವಾಸಸ್ಥಾನದ ಎದುರು ಘರ್ಷಣೆ ಸಂಭವಿಸಿತು..

೪. ಘರ್ಷಣೆಯಲ್ಲಿ ಕನಿಷ್ಠ ೧೩ ವಾಹನಗಳು ಮತ್ತು ಒಂದು ಪೊಲೀಸ ಠಾಣೆ ಸುಡಲಾಯಿತು ಮತ್ತು ೧೨ ಕ್ಕಿಂತಲೂ ಅಧಿಕ ವಾಹನಗಳನ್ನು ಧ್ವಂಸಗೊಳಿಸಲಾಗಿದೆ..