ತೆಲ್ ಅವಿವ (ಇಸ್ರೇಲ್) – ಇಸ್ರೇಲ್ ಮತ್ತು ಹಮಾಸ್ ಇವರಲ್ಲಿ ಯುದ್ಧ ಆರಂಭವಾಗಿ ಈಗ ೧೯ ದಿನ ಕಳೆದಿದೆ. ಇಂತಹದರಲ್ಲಿ ಇಸ್ರೇಲ್ ಸಿರಿಯಾದೊಂದಿಗೂ ಯುದ್ಧ ಮಾಡುತ್ತಿದೆ. ಅದು ಅಕ್ಟೋಬರ್ ೨೪ ರ ರಾತ್ರಿ ಸಿರಿಯಾದ ಸೈನ್ಯದ ನೆಲೆಯ ಮೇಲೆ ದಾಳಿ ಮಾಡಿದೆ. ಇಸ್ರೇಲ್ ರಕ್ಷಣಾ ದಳವು (’ಐ.ಡಿ.ಎಫ್.’), ಇಸ್ರೇಲ್ ನಲ್ಲಿ ಸಿರಿಯಾದ ಗಡಿಗೆ ಹೊಂದಿಕೊಂಡಿರುವ ’ಗೋಲನ್ ಹೈಟ್ಸ್’ ಪ್ರದೇಶದಲ್ಲಿ ಇಸ್ರೇಲ್ ಜನಾಂಗದ ಮೇಲೆ ಸಿರಿಯಾದಿಂದ ರಾಕೆಟ್ ಬಿಡಲಾಯಿತು. ಇಸ್ರೇಲ್ ಪ್ರತ್ಯುತ್ತರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ವ ಸಂಸ್ಥೆಯ ಮುಖ್ಯಸ್ಥರು ಇಸ್ರೇಲ್ ಹಮಾಸ್ ಯುದ್ಧ ನಿಲ್ಲಿಸಲು ಆಗ್ರಹಿಸಿದೆ.
ಯುದ್ಧದ ಸಂದರ್ಭದಲ್ಲಿನ ಮಹತ್ವದ ಘಟನಾವಳಿ !
೧. ವಿಶ್ವ ಆರೋಗ್ಯ ಸಂಘಟನೆ, ಇಂಧನದ ಕೊರತೆಯಿಂದಾಗಿ ಗಾಝಾದಲ್ಲಿನ ೬ ಆಸ್ಪತ್ರೆಗಳು ಮುಚ್ಚಿವೆ. ಇದರಲ್ಲಿ ೧ ಸಾವಿರ ಜನರು ’ಡಯಾಲಿಸಿಸ್’ನಲ್ಲಿ ಇರುವರು ಹಾಗೂ ೧೩೦ ’ಪ್ರಿಮೆಚ್ಯುಯರ್’ ಮಕ್ಕಳಿರುವರು. ಪರಿಸ್ಥಿತಿ ಸುಧಾರಿಸದಿದ್ದರೆ ರೋಗಿಗಳು ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.
೨. ಅರಬ ವಾರ್ತಾಸಂಸ್ಥೆ ’ಅಲ್ ಜಝೀರ’, ಇಸ್ರೇಲ್ ನಿಂದ ಅಕ್ಟೋಬರ್ ೨೪ ರಂದು ಗಾಝಾದಲ್ಲಿನ ಅಲ್ ಅಮಲ್ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. ಇಲ್ಲಿ ಸುಮಾರು ೪ ಸಾವಿರ ಪ್ಯಾಲೆಸ್ಟೈನಿಗಳು ಆಶ್ರಯ ಪಡೆದಿದ್ದಾರೆ. ದಾಳಿಯಲ್ಲಿ ಎಷ್ಟು ಜನರು ಸಾವನ್ನಪ್ಪಿರುವುದು ಇದರ ಮಾಹಿತಿ ಬೆಳಕಿಗೆ ಬಂದಿಲ್ಲ ಎಂದು ಹೇಳಿದೆ.
೩. ಇಲ್ಲಿಯವರೆಗೆ ಗಾಝಾದ ಒಟ್ಟು ೫೪ ಟ್ರಕ್ ಸಹಾಯ ಸಾಮಗ್ರಿ ತಲುಪಿದೆ, ಆದರೂ ಇದರಲ್ಲಿ ಔಷಧಗಳು ಮತ್ತು ಆಹಾರ ಪದಾರ್ಥಗಳೇ ಇವೆ; ಆದರೆ ಪೆಟ್ರೋಲ್ ಡೀಸೆಲ್ ಇಲ್ಲ. ಈ ವಾರದಲ್ಲಿ ಒಟ್ಟು ೨೫೦ ಟ್ರಕ್ ಗಳು ತಲುಪಿವೆ; ಆದರೆ ಅದರಲ್ಲಿ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಕಳುಹಿಸಲಾಗಿದೆ ಅಥವಾ ಇಲ್ಲ ಅದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.
೪. ’ನ್ಯೂಯಾರ್ಕ್ ಟೈಮ್ಸ್’ ಇಂದ ಗಾಝಾದ ಆರೋಗ್ಯ ಸಚಿವಾಲಯದ ವರದಿಯಲ್ಲಿ, ಅಕ್ಟೋಬರ್ ೨೩, ೨೪ ರಂದು ಗಾಝಾದಲ್ಲಿ ೪೭ ವೈಮಾನಿಕ ದಾಳಿಗಳು ನಡೆದಿದೆ. ಇದರಲ್ಲಿ ೭೦೪ ಜನರು ಸಾವನ್ನಪ್ಪಿದ್ದಾರೆ. ಯುದ್ಧ ಆರಂಭವಾದಾಗಲಿಲ್ಲ ಒಂದು ದಿನದಲ್ಲಿ ಸಾವನ್ನಪ್ಪಿರುವ ಜನರ ಸಂದರ್ಭದಲ್ಲಿ ಈ ಸಂಖ್ಯೆ ಬಹಳ ದೊಡ್ಡದಾಗಿದೆ. ಒಂದು ದಿನದಲ್ಲಿ ೪೦೦ ಸ್ಥಳಗಳನ್ನು ಗುರಿ ಮಾಡಿರುವುದರಿಂದ ಸ್ವತಃ ಇಸ್ರೆಲ್ ಕೂಡ ಒಪ್ಪಿಕೊಂಡಿದೆ, ಆದರೆ ಕೇವಲ ೪೭ ಜನರು ಸಾವನ್ನಪ್ಪಿರುವುದಾಗಿ ಇಸ್ರೇಲ್ ಹೇಳುತ್ತಿದೆ.
ಒತ್ತೆಯಾಳಾಗಿ ಇಟ್ಟು ಕೊಂಡಿರುವ ಇಸ್ರೇಲಿನ ಮಾಹಿತಿ ನೀಡುವವರಿಗೆ ಇಸ್ರೇಲ್ ಸೈನ್ಯದಿಂದ ರಕ್ಷಣೆಯ ಭರವಸೆ !
ಇಸ್ರೇಲ್ ಸೈನ್ಯದಿಂದ ಅಕ್ಟೋಬರ್ ೨೪ ರಂದು ಗಾಝಾದಲ್ಲಿ ಕೆಲವು ಕರಪತ್ರಕಗಳನ್ನು ಹಾಕಲಾಗಿದೆ. ಅದರಲ್ಲಿ ಹಮಾಸದಿಂದ ಒತ್ತೆಯಾಳಾಗಿ ಇಟ್ಟು ಕೊಂಡಿರುವ ಜನರ ಬಗ್ಗೆ ಸುಳಿವು ನೀಡುವವರಿಗೆ ರಕ್ಷಣೆ ಮತ್ತು ಬಹುಮಾನ ಸಹ ನೀಡುವ ಭರವಸೆ ನೀಡಲಾಗಿದೆ. ಕರ ಪತ್ರದಲ್ಲಿ ಇಸ್ರೇಲ್ ಸೈನ್ಯದ ಸಂಪರ್ಕ ಸಂಖ್ಯೆ ಜೊತೆಗೆ ’ಟೆಲಿಗ್ರಾಂ’, ’ವಾಟ್ಸಪ್’ ಮತ್ತು ’ಸಿಗ್ನಲ್ ಮೆಸೇಜ್’ ಈ ಸೈನ್ಯದ ಸಾಮಾಜಿಕ ಜಾಲತಾಣದ ಮಾಹಿತಿ ಕೂಡ ನೀಡಲಾಗಿದೆ.