ಇಸ್ರೈಲ್‌-ಹಮಾಸ್‌ ಯುದ್ಧದ ತೀಕ್ಷ್ಣ ವಿಶ್ಲೇಷಣೆ

೧. ಇಸ್ರೈಲ್‌ ಮತ್ತು ಹಮಾಸದ ಯುದ್ಧದಲ್ಲಿ ಈಗ ಅಮೇರಿಕಾ ಪ್ರೇವೇಶಿಸಿದೆ. ಇಸ್ರೈಲ್‌ನ ಸಹಾಯಕ್ಕಾಗಿ ಅಮೇರಿಕಾದ ವಿಮಾನ ಸಾಗಾಟ ಹಡಗುಗಳು, ‘ಎಫ್‌ ೧೬’ ಮತ್ತು ‘ಎಫ್‌ ೩೫’ ಈ ಯುದ್ಧ ವಿಮಾನಗಳನ್ನು ಪಶ್ಚಿಮ ಏಶಿಯಾ ಸಾಗರದಲ್ಲಿ ನಿಲ್ಲಿಸಲಾಗಿದೆ. ಇದರಿಂದ ಈ ಸಂಘರ್ಷದ ಸ್ವರೂಪ ವ್ಯಾಪಕವಾಗುವುದು ಕಾಣಿಸುತ್ತಿದೆ. ಭಾರತಕ್ಕೆ ಇಂಧನಮೂಲದ ಪರ್ಯಾಯವನ್ನು ಸಿದ್ಧವಿಡಬೇಕಾಗಿದ್ದು ಅದಕ್ಕೆ ರಷ್ಯಾ ಉತ್ತಮ ಪರ್ಯಾಯವಾಗಿದೆ. ಇದರ ಜೊತೆಗೆ ಅಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವುದು ಕೂಡ ಇನ್ನೊಂದು ದೊಡ್ಡ ಸವಾಲಾಗಿದೆ.

ಡಾ. ಶೈಲೇಂದ್ರ ದೇವಳಾಣಕರ

೨. ಹಮಾಸ್‌ ಇಸ್ರೈಲ್‌ ಮೇಲೆ ದಾಳಿ ಮಾಡಿದ ನಂತರ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ವಿಶೇಷ ತುರ್ತು ಸಭೆಯನ್ನು ಕರೆಯಲಾಯಿತು. ಅಮೇರಿಕಾ, ಫ್ರಾನ್ಸ್‌ನ ಮೇಲಿನ ಭಯೋತ್ಪಾದಕರ ದಾಳಿಗಳ ನಂತರವೂ ತಕ್ಷಣ ಇಂತಹ ಸಭೆಗಳನ್ನು ಕರೆಯಲಾಗಿತ್ತು. ಪಾಕ್‌ಪುರಸ್ಕೃತ ಭಯೋತ್ಪಾದಕರು ಮುಂಬಯಿ, ಪಠಾಣಕೋಟ, ಪುಲ್ವಾಮಾದಲ್ಲಿ ಭೀಕರ ಆಕ್ರಮಣ ಮಾಡಿದರು; ಆದರೆ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತು ಯಾವತ್ತೂ ಇಂತಹ ಸಭೆಯನ್ನು ಕರೆದಿರಲಿಲ್ಲ.

೩. ಇಸ್ರೈಲ್‌ನ ಸೇನಾ ಸಾಮರ್ಥ್ಯಕ್ಕೆ ನಾವು ಸರಿಸಾಠಿಯಾಗಲು ಸಾಧ್ಯವಿಲ್ಲ ಎಂಬುದು ಹಮಾಸ್‌ಗೆ ತಿಳಿದಿದೆ. ಹಮಾಸ್‌ನ ಆಕ್ರಮಣದಿಂದ ಒಬ್ಬ ಇಸ್ರೈಲ್‌ ನಾಗರಿಕನು ಮೃತಪಟ್ಟರೂ, ಇಸ್ರೈಲ್‌ ಎಷ್ಟು ಭೀಕರ ಪ್ರತಿದಾಳಿ ಮಾಡುತ್ತದೆ, ಎಂಬುದೂ ಹಮಾಸ್‌ ಅನುಭವಿಸಿದೆ. ಆದರೂ ನೂರಾರು ಇಸ್ರೈಲ್‌ ನಾಗರಿಕರನ್ನು ಸಾಯಿಸುವ ಧೈರ್ಯ ಹಮಾಸ್‌ಗೆ ಎಲ್ಲಿಂದ ಬಂತು ? ಹಮಾಸ್‌ ಒಬ್ಬಂಟಿಯಾಗಿರದೆ ಅದು ಮಾಡಿದ ಆಕ್ರಮಣವು ಸಾಮೂಹಿಕ ಒಳಸಂಚಿನ ಪರಿಣಾಮವಾಗಿದೆ.

– ಡಾ. ಶೈಲೇಂದ್ರ ದೇವಳಾಣಕರ ವಿದೇಶ ನಿಲುವಿನ ವಿಶ್ಲೇಷಕರು (೯.೧೦.೨೦೨೩)