ಅನೇಕ ಗುರುಗಳು ಇಲ್ಲಿಯವರೆಗೆ ತಮ್ಮ ಶಿಷ್ಯರಿಗೆ ಗುರುಮಂತ್ರವನ್ನು ನೀಡಿದ್ದಾರೆ. ಗುರುಗಳು ಶಿಷ್ಯರ ಆಧ್ಯಾತ್ಮಿಕ ಉನ್ನತಿ ಬೇಗನೆ ಆಗಬೇಕೆಂದು ಮತ್ತು ಅವರನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡಲು ಗುರುಮಂತ್ರದ ಮೂಲಕ ತಮ್ಮ ಶಕ್ತಿಯನ್ನು ಪ್ರದಾನಿಸುತ್ತಾರೆ. ಗುರುಮಂತ್ರದ ಹಿಂದೆ ಗುರುಗಳ ಸಂಕಲ್ಪ ಇರುವುದರಿಂದ ಅದನ್ನು ಜಪಿಸುವುದರಿಂದ ಶೀಘ್ರವಾಗಿ ಶಿಷ್ಯರ ಅಧ್ಯಾತ್ಮಿಕ ಉನ್ನತಿಯಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ೧೪.೫.೨೦೨೧ ರಂದು ಸಾಧಕರಿಗೆ “ನಿರ್ವಿಚಾರ” ನಾಮಜಪಿಸಲು ಹೇಳಿದರು. ಶ್ರೀವಿಷ್ಣುಸ್ವರೂಪರಾದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಂತಹ ಅತ್ಯುಚ್ಚ ಮಟ್ಟದ ಗುರುಗಳು ಉಚ್ಚರಿಸಿದ ಒಂದು ಶಬ್ದ ಅಥವಾ ವಾಕ್ಯವು ಬ್ರಹ್ಮವಾಕ್ಯವೇ ಆಗಿರುತ್ತದೆ, ಅದೇ ರೀತಿ ಅವರು ಜಪಿಸಲು ಹೇಳಿರುವ ನಾಮಜಪವು ಗುರು ಮಂತ್ರವೇ ಆಗಿರುತ್ತದೆ. ಈ ನಾಮಜಪದಿಂದ ಸಾಧಕರ ಮನಸ್ಸು ನಿರ್ವಿಚಾರವಾಗಿ ಅರ್ಥಾತ್ ಒಂದುರೀತಿಯಲ್ಲಿ ಮನಸ್ಸು ನಷ್ಟವಾಗಿ ಅವರ ಆಧ್ಯಾತ್ಮಿಕ ಪ್ರಗತಿ ಬೇಗನೆ ಆಗಬೇಕು ಎಂಬುದು ಡಾಕ್ಟರರ ಉದ್ದೇಶವಾಗಿದೆ. ಆದ್ದರಿಂದ ಸಾಧಕರು ಈ ನಾಮಜಪವನ್ನು ಮಾಡುವಾಗ ಈ ಜಪದ ಹಿಂದೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸಂಕಲ್ಪ ಶಕ್ತಿಯು ಕಾರ್ಯನಿರತವಾಗಲಿದೆ. ಈ ದೃಷ್ಟಿಯಿಂದ ಇದು ಒಂದು ರೀತಿಯಲ್ಲಿ ಇದು ಸಮಷ್ಟಿ ಗುರುಮಂತ್ರವೇ ಆಗಿದೆ.
ನಿರ್ವಿಚಾರ ನಾಮಜಪವನ್ನು ಮಾಡಲು ಪ್ರಾರಂಭಿಸಿದ ನಂತರ ಮನಸ್ಸಿನ ವಿಚಾರಗಳು ಬಹಳ ಕಡಿಮೆ ಆಗುವುದು ಮತ್ತು ಮನಸ್ಸು ಸ್ಥಿರವಾಗುವುದು ಎಂಬಂತಹ ಅನುಭೂತಿಗಳನ್ನು ಇಲ್ಲಿಯವರೆಗೆ ಅನೇಕ ಸಾಧಕರು ಪಡೆದಿದ್ದಾರೆ, ಮಾತ್ರವಲ್ಲ ಸಮಾಜದ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಿಗೂ ಈ ನಾಮಜಪದಿಂದ ಲಾಭವಾಗುತ್ತಿದೆ.
ಒಮ್ಮೆ ಒಂದು ಸತ್ಸಂಗದಲ್ಲಿ ನಾನು ಕೆಲವು ಸಾಧಕರ ಜೊತೆ ಉಪಸ್ಥಿತನಿದ್ದೆ. ನಾವು ಎಲ್ಲರೂ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಆಗಮನದ ದಾರಿ ಕಾಯುತ್ತಿದ್ದೆವು. ಅವರು ಬರುವ ಸ್ವಲ್ಪ ಸಮಯ ಮೊದಲು ನಿರ್ವಿಚಾರ ಎಂಬ ನಾಮಜಪವು ತನ್ನಿಂದ ತಾನೇ ಆರಂಭವಾಯಿತು ಮತ್ತು ಈ ನಾಮಜಪದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸ್ಪಂದನಗಳು ಇರುವುದು ಗಮನಕ್ಕೆ ಬಂದಿತು. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ನಾಮಜಪದೊಂದಿಗೆ ಅವರ ಶಕ್ತಿ ಅಂದರೆ ಅವರು ನಮ್ಮ ಜೊತೆಗೆ ಸೂಕ್ಷ್ಮದಲ್ಲಿ ಇರುತ್ತಾರೆ ಎಂಬ ಭಾವ ಹೆಚ್ಚಾಗಲು ಸಹಾಯವಾಯಿತು. ಇದು ಗುರುಮಂತ್ರವೇ ಆಗಿದೆ ಎಂಬ ಭಾವದಿಂದ ನಾಮ ಜಪಿಸಲು ಆರಂಭಿಸಿದ ನಂತರ ನಾಮಜಪವು ಮನಃಪೂರ್ವಕ, ಸಹಜವಾಗಿ ಮತ್ತು ಗುರುಸ್ಮರಣೆಯ ಸಹಿತ ಆಗುತ್ತಿದೆ ಎಂಬುದು ನನ್ನ ಅರಿವಿಗೆ ಬಂತು. ಸಾಧಕರು ಕೂಡ ಈ ರೀತಿ ಭಾವವಿಟ್ಟು ನಾಮಜಪ ಮಾಡಿದರೆ ಅವರಿಗೂ ಕೂಡ ಈ ನಾಮಜಪದಿಂದ ಹೆಚ್ಚಿನ ಫಲ ನಿಶ್ಚಯವಾಗಿ ಸಿಗುವುದು.
– ಪೂ. ಸಂದೀಪ ಆಳಶಿ, ರಾಮನಾಥಿ, ಗೋವಾ ೨೫.೯.೨೦೨೩