‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯಕ್ಕಾಗಿ ಬೇಕಾಗುವ ಭಾರತೀಯ ಮತ್ತು ವಿದೇಶಿ ವಾದ್ಯಗಳ ದುರಸ್ತಿ ಮಾಡಲು ಬರುವವರಿಗಾಗಿ ಸೇವೆಯ ಸುವರ್ಣಾವಕಾಶ

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಕರೆ !

೧೪ ವಿದ್ಯೆ ಮತ್ತು ೬೪ ಕಲೆಗಳು, ಎಂದರೆ ಹಿಂದೂ ಧರ್ಮವು ಜಗತ್ತಿಗೆ ಸಾಧನೆಯ ಸಂದರ್ಭದಲ್ಲಿ ನೀಡಿರುವ ಅಮೂಲ್ಯ ಕೊಡುಗೆ. ಈ ವಿದ್ಯೆ ಮತ್ತು ಕಲೆಗಳಿಂದ ಮನುಷ್ಯನಿಂದ ಅಂತರಿಕ ಸುಖ, ಸಮಾಧಾನ ಮತ್ತು ಐಹಿಕ ಉನ್ನತಿ ಸಾಧಿಸಲಾಗುತ್ತದೆ ಹಾಗೂ ಅದರ ಮೂಲಕ ಸಾಧನೆ ಮಾಡಿ ಕಲಾವಿದರು ಈಶ್ವರಪ್ರಾಪ್ತಿ ಮಾಡಿಕೊಳ್ಳಬಹುದು.

‘ಜನರ ಮನಸ್ಸಿನಲ್ಲಿ ಭಾರತೀಯ ಸಂಗೀತದ ಮಹತ್ವವನ್ನು ಬಿಂಬಿಸುವುದು’, ಇದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವ್ಯಾಪಕ ಉದ್ದೇಶವಾಗಿದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಭಾರತೀಯ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತ, ಹಾಗೂ ಭಾರತೀಯ ನೃತ್ಯ ಮತ್ತು ಪಾಶ್ಚಾತ್ಯ ನೃತ್ಯ ಇವುಗಳ ತುಲನಾತ್ಮಕ ದೃಷ್ಟಿಯಿಂದ ಆಗುವ ಪರಿಣಾಮ’, ಇದರ ಸಂದರ್ಭದಲ್ಲಿ ಸಂಶೋಧನೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಗಾಯನ, ವಾದನ ಮತ್ತು ನೃತ್ಯ ಇವುಗಳ ಸಂದರ್ಭದಲ್ಲಿ ೭೦೦ ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಲಾಗಿದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಅಂತರ್ಗತ ಮಾಡಲಾಗುವ ಈ ಪ್ರಯೋಗಗಳಿಗಾಗಿ ‘ಕೊಳಲು, ಸಿತಾರ್, ತಬಲಾ, ಹಾರ್ಮೋನಿಯಂ, ತಂಬೂರಿ’, ಮುಂತಾದ ಭಾರತೀಯ ಅದೇ ರೀತಿ ‘ಗಿಟಾರ್, ವಾಯಿಲಿನ್, ಮೆಂಡೋಲಿನ್, ಸಿಂಥೆಸೈಝರ್’ ಮುಂತಾದ ವಿದೇಶಿ ವಾದ್ಯಗಳನ್ನು ಉಪಯೋಗಿಸಲಾಗುತ್ತದೆ. ಆದ್ದರಿಂದ ವಾದ್ಯಗಳ ದುರಸ್ತಿ ಮಾಡಲು ಬರುವವರ ಆವಶ್ಯಕತೆ ಇದೆ. ವಾದ್ಯಗಳನ್ನು ಉಚಿತವಾಗಿ ದುರಸ್ತಿ ಮಾಡಬಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮುಂದಿನ ವಿಳಾಸದಲ್ಲಿ ಸಂಪರ್ಕಿಸಿರಿ.

ಹೆಸರು ಮತ್ತು ಸಂಪರ್ಕ ಸಂಖ್ಯೆ :
ಶ್ರೀ. ಅಭಿಜಿತ ಸಾವಂತ – ೮೭೯೩೬೭೮೧೭೮
ವಿ-ಅಂಚೆ ವಿಳಾಸ : [email protected]
ಅಂಚೆ ವಿಳಾಸ : ಶ್ರೀ. ಅಭಿಜಿತ ಸಾವಂತ, ‘ಭಗವತಿಕೃಪಾ ಅಪಾರ್ಟ್‌ಮೆಂಟ್ಸ್‌’, ಎಸ್‌-೧, ಎರಡನೇ ಮಹಡಿ, ಬಿಲ್ಡಿಂಗ್‌ ಎ, ಢವಳಿ, ಫೋಂಡಾ, ಗೋವಾ. ೪೦೩೪೦೧.’