ಇಸ್ರೈಲ್ ಮತ್ತು ಪ್ಯಾಲೆಸ್ಟೈನ್‌ನ ಉಗ್ರ ಸಂಘಟನೆ ಹಮಾಸ್ ಇವುಗಳ ನಡುವೆ ದೊಡ್ಡ ಯುದ್ಧ ಆರಂಭವಾಗಿದೆ. ನೂರಾರು ಹಮಾಸ ಉಗ್ರರು ಇಸ್ರೈಲ್ ಒಳಗೆ ನುಗ್ಗಿ ೫,೦೦೦ ರಾಕೆಟ್‌ಗಳ ಸಹಾಯದಿಂದ ಇಸ್ರೈಲ್ ಮೇಲೆ ದಾಳಿಯನ್ನು ಮಾಡಿದ್ದಾರೆ. ಅದರಿಂದಾಗಿ ಇಸ್ರೈಲ್‌ಕ್ಕೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಉಗ್ರರ ಗುಂಪಾದ ಹಮಾಸ್ ಅನ್ನು ಇರಾನ್ ಬೆಂಬಲಿಸುತ್ತಿದೆ ಎಂದು ತಿಳಿದುಬಂದಿದೆ. ಈ ಯುದ್ಧವನ್ನು ನಿಲ್ಲಿಸಲು ಸೌದಿ ಅರೇಬಿಯಾ ಮತ್ತು ಇತರ ಕೆಲವು ದೇಶಗಳು ಪ್ರಯತ್ನಿಸುತ್ತಿವೆ; ಆದರೆ ಹಮಾಸ್ ಅಥವಾ ಇಸ್ರೈಲ್ ಇಬ್ಬರೂ ಕೇಳಲು ಸಿದ್ಧರಿಲ್ಲ. ಇಸ್ರೈಲ್ ತನ್ನ ವಾಯುಪಡೆ, ಕಮಾಂಡೋ ಮುಂತಾದ ಎಲ್ಲಾ ಶಸ್ತ್ರಾಸ್ತ್ರÀಗಳು ಮತ್ತು ಸಾಂಪ್ರದಾಯಿಕ ಪಡೆಗಳನ್ನು ಬಳಸಿ ಹಮಾಸ್ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ದೊಡ್ಡ ಭೀಕರ ಹಿಂಸಾಚಾರ ಮತ್ತು ದೊಡ್ಡ ಹಾನಿಯಾಗುತ್ತಿದೆ. ಈ ಮೂಲಕ ಜಗತ್ತು ಮತ್ತೊಮ್ಮೆ ಒಂದು ದೊಡ್ಡ ಯುದ್ಧದಲ್ಲಿ ಮುಳುಗಬಹುದು; ಏಕೆಂದರೆ ಇಸ್ರೈಲ್ ಯುದ್ಧವನ್ನು ನಿಲ್ಲಿಸಲು ಸಿದ್ಧವಿಲ್ಲ ಮತ್ತು ಹಮಾಸ ಕೂಡ ಯುದ್ಧವನ್ನು ನಿಲ್ಲಿಸಲು ಸಿದ್ಧವಿಲ್ಲ. ಇದರಿಂದ ಮುಂದೆ ಯಾವ ರೀತಿಯ ಪರಿಸ್ಥಿತಿ ಉದ್ಭವಿಸಲಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಯುದ್ಧದಿಂದ ಹಮಾಸ್ ನಾಗರಿಕರಿಗೂ ಹಾನಿಯಾಗಲಿದೆ. ಆದ್ದರಿಂದ, ಸಾಧ್ಯವಾದರೆ ಜಗತ್ತು ತಕ್ಷಣವೇ ಈ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸಬೇಕು.
ಇಸ್ರೈಲ್-ಹಮಾಸ್ ಯುದ್ಧವು ಮೂರನೇ ಮಹಾಯುದ್ಧದ ಒಂದು ಭಾಗವಾಗಿದೆ
ಮೂರನೇ ಮಹಾಯುದ್ಧ ನಡೆಯುತ್ತಿದೆ. ಸದ್ಯ ಅಮೇರಿಕಾ ಮತ್ತು ಚೀನಾ ನಡುವೆ ಆರ್ಥಿಕ ಯುದ್ಧ ನಡೆದಿದೆ. ಸದ್ಯ ಕೆನಡಾ ಭಾರತದ ವಿರುದ್ಧ ನಡೆಸಿರುವ ಸಂಘμರ್Àವೂ ಒಂದು ಯುದ್ಧವೇ ಆಗಿದೆ. ಯುದ್ಧವು ಕೇವಲ ಬಂದೂಕುಗಳಿಂದ ಮಾತ್ರ ಆಗಬೇಕು ಎಂದೇನಿಲ್ಲ. ಇದನ್ನು ನಾವು ‘ಬಹುಮುಖ ಯುದ್ಧ’ ಎಂದು ಹೇಳಬಹುದು. ಇಸ್ರೈಲ್-ಹಮಾಸ್ ಯುದ್ಧ ಭಾರತದ ಹೊರಗೆ ನಡೆದಿದೆ. ಇದರಲ್ಲಿ ಇರಾನ್ ಮತ್ತು ಇಸ್ರೈಲ್‌ನ ಹಣ ವ್ಯರ್ಥವಾಗುತ್ತಿದೆ. ಈ ಎರಡು ರಾಷ್ಟ್ರಗಳ ಹಾನಿಯಿಂದ ಭಾರತದ ಮೇಲೆನೂ ಪರಿಣಾಮ ಆಗಲಾರದು.’ – ಬ್ರಿಗೇಡಿಯರ್ ಹೇಮಂತ್ ಮಹಾಜನ್ (ನಿವೃತ್ತ), ಪುಣೆ. (೭.೧೦.೨೦೨೩)