(ಜೆ.ಎನ್. ಯು. ಎಂದರೆ ಜವಾಹರಲಾಲ ನೆಹರು ವಿಶ್ವವಿದ್ಯಾಲಯ)
ನವ ದೆಹಲಿ – ಇಲ್ಲಿಯ ಜವಹರ ಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಭಾರತದಲ್ಲಿನ (ಜೆ.ಎನ್.ಯು.ದಲ್ಲಿನ) ಇರಾನ್, ಪ್ಯಾಲೆಸ್ಟೈನ್ ಮತ್ತು ಲೆಬೀನಾನ್ ಈ ದೇಶಗಳ ರಾಯಭಾರಿಗಳ ವ್ಯಾಖ್ಯಾನಗಳು ಆಯೋಜಿಸಲಾಗಿದ್ದವು. ಇದರಲ್ಲಿ ಪ್ಯಾಲೇಸ್ಟೈನ್ ಮತ್ತು ಲೆಬೀನಾನ್ ರಾಯಭಾರಿಗಳ ವ್ಯಾಖ್ಯಾನಗಳು ರದ್ದುಪಡಿಸಲಾಗಿದೆ ಹಾಗೂ ಇರಾನಿನ ರಾಯಭಾರಿ ಡಾ. ಇರಾಜ್ ಇಲಾಹಿ ಇವರ ಆಯೋಜಿತ ವ್ಯಾಖ್ಯಾನ ಮುಂದೂಡಲಾಗಿದೆ. ‘ಪಶ್ಚಿಮ ಏಷ್ಯಾದಲ್ಲಿನ ಘಟನೆಗಳನ್ನು ಇರಾನ್ ಹೇಗೆ ನೋಡುತ್ತಿದೆ ?’, ಈ ವಿಷಯದ ಕುರಿತು ಡಾ. ಇರಾಜ್ ಇಲಾಹಿ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವವರಿದ್ದರು. ಜೆ.ಎನ್.ಯು.ದ ಪಶ್ಚಿಮ ಏಷ್ಯಾ ಅಧ್ಯಯನ ಕೇಂದ್ರದಿಂದ ಈ ವ್ಯಾಖ್ಯಾನಗಳು ಆಯೋಜಿಸಲಾಗಿದ್ದವು. ‘ಇಂತಹ ವ್ಯಾಖ್ಯಾನಗಳಿಂದ ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿ ಪ್ರತಿಭಟನೆ ಆಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಕ್ರಮ ರದ್ದು ಪಡಿಸಲಾಗಿದೆ’ ಎಂದು ಹೇಳಲಾಗಿದೆ. ಈ ವಿಷಯದ ಕುರಿತು ಜೆ.ಎನ್.ಯು. ‘ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್,’ನ ಅಧ್ಯಕ್ಷ ಅಮಿತಾಭ ಮಟ್ಟು ಇವರು, ಭಾವನೆಗೆ ಸಹಜವಾಗಿ ನೋವುಂಟು ಮಾಡಬಹುದಾದಂತಹ ಜಗತ್ತಿನಲ್ಲಿ ವಾಸಿಸುತ್ತೇವೆ ಎಂದು ಹೇಳಿದರು.
ಪ್ಯಾಲೇಸ್ಟೈನ್ ನ ರಾಯಭಾರಿ ಅದನಾನ್ ಅಬೂ ಅಲ್ ಹಾಯಿಜಾ ಇವರ ನವಂಬರ್ ೭ ರಂದು ಮತ್ತು ಲೆಬೆನಾನ್‌ನ ರಾಯಭಾರಿ ಡಾ. ರಾಬಿ ನಾರ್ಶ್ ಇವರ ವ್ಯಾಖ್ಯಾನ ನವೆಂಬರ್ ೧೪ ರಂದು ಇತ್ತು. ‘ಪ್ಯಾಲೇಸ್ಟೈನ್ ನ ಹಿಂಸಾಚಾರ’ ಮತ್ತು ‘ಲೆಬೀನಾನ್ ನ ಪರಿಸ್ಥಿತಿ’ ಇದು ಅವರ ವ್ಯಾಖ್ಯಾನದ ವಿಷಯವಾಗಿತ್ತು.
ಸಂಪಾದಕೀಯ ನಿಲುವು
|