ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ ಹರಿಜನ ಅವರ ಖೇದಕರ ಪೋಸ್ಟ್ !
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭಗವಾನ ಶ್ರೀರಾಮ ಇಂದು ಇಲ್ಲಿದ್ದರೆ, ಋಷಿ ಶಂಭುಕನ ಹತ್ಯೆ ಮಾಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಅವರನ್ನು ಕಾರಾಗೃಹಕ್ಕೆ ಹಾಕಲಾಗುತ್ತಿತ್ತು. ಶ್ರೀಕೃಷ್ಣ ಇದ್ದಿದ್ದರೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಪ್ರಕರಣದಲ್ಲಿ ಅವರನ್ನೂ ಕಾರಾಗೃಹಕ್ಕೆ ಹಾಕಲಾಗುತ್ತಿತ್ತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ ಪ್ರಸಾರ ಮಾಡುವ ಪ್ರಾಧ್ಯಾಪಕ ಡಾ. ವಿಕ್ರಮ ಹರಿಜನ ವಿರುದ್ಧ ಪ್ರಯಾಗರಾಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. `ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಕರ್ನಲ್‌ಗಂಜ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಗೋವಿಂದ ಯಾದವ ಇವರು ತಿಳಿಸಿದ್ದಾರೆ. ಪ್ರೊ. ಡಾ. ವಿಕ್ರಮ ಹರಿಜನ ಅವರು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರು ಮಧ್ಯಕಾಲೀನ ಇತಿಹಾಸವನ್ನು ಕಲಿಸುತ್ತಾರೆ. ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಮತ್ತು ಹಿಂದೂ ಜಾಗರಣ ಮಂಚ ಈ ಹಿಂದೂ ಸಂಘಟನೆಗಳು ಪ್ರಾಧ್ಯಾಪಕ ಡಾ. ವಿಕ್ರಮ ಹರಿಜನ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವಂತೆ ಕೋರಿವೆ.
ಪ್ರಾಧ್ಯಾಪಕ ಡಾ. ವಿಕ್ರಮ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ!
ನಾನೊಬ್ಬ ಇತಿಹಾಸ ಶಿಕ್ಷಕನಾಗಿದ್ದೇನೆ. ಪುಸ್ತಕಗಳನ್ನು ಓದುತ್ತೇನೆ. ಪುಸ್ತಕ ಓದಿದ ನಂತರವೇ ನಾನು ಆ ಪೋಸ್ಟ್ ಬರೆದಿದ್ದೇನೆ ಎಂದು ಪ್ರಾಧ್ಯಾಪಕ ಡಾ. ವಿಕ್ರಮ ಹೇಳಿದ್ದಾರೆ. ಈ ಹಿಂದೆಯೂ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧದ ಅವರ ಒಂದು ವಿಡಿಯೋ ಪ್ರಸಾರವಾಗಿತ್ತು. (ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೇ ಇರುವುದರಿಂದ, ಅವರು ಅಂತಹ ಅಪರಾಧಗಳನ್ನು ಮಾಡುತ್ತಿದ್ದಾರೆ ಎಂದು ಪೊಲೀಸರು ಮತ್ತು ಆಡಳಿತಕ್ಕೆ ಯಾವಾಗ ತಿಳಿಯುವುದು? – ಸಂಪಾದಕರು)
ಸಂಪಾದಕೀಯ ನಿಲುವುಇತರ ಧರ್ಮದ ದೇವರುಗಳ ಬಗ್ಗೆ ಹೀಗೆ ಹೇಳುವ ಧೈರ್ಯ ಪ್ರೊ. ವಿಕ್ರಮ ಇವರು ಮಾಡಿಲ್ಲ; ಏಕೆಂದರೆ ಹಾಗೆ ಮಾಡಿದರೆ ಅವರ ತಲೆ ಕಡಿಯುವ ಫತ್ವಾ ಹೊರಬೀಳುತ್ತದೆ ಎಂದು ಅವರಿಗೆ ಗೊತ್ತಿರಬೇಕು.! |