ಬ್ರಹ್ಮದೇವರ ಕನ್ಯೆ ಮತ್ತು ಶಬ್ದಬ್ರಹ್ಮನ ಉತ್ಪತ್ತಿ ಅಂದರೆ ಶ್ರೀ ಶಾರದಾದೇವಿ !

೨೧ ಅಕ್ಟೋಬರ್‌ ೨೦೨೩ ರಂದು ‘ಶ್ರೀ ಸರಸ್ವತಿದೇವಿಯ ಪೂಜೆ’ ಇದೆ. ಆ ನಿಮಿತ್ತ…

ಭಾರತೀಯರು ಆಶ್ವಯುಜ ಶುಕ್ಲ ಸಪ್ತಮಿಯನ್ನು ಶ್ರೀ ಸರಸ್ವತಿದೇವಿಯ ಪೂಜೆಯ ದಿನ ಎಂದು ಪಾಲಿಸುತ್ತಾರೆ. ಶ್ರೀ ಸರಸ್ವತಿ ದೇವಿ ಅಥವಾ ಶ್ರೀ ಶಾರದಾ ದೇವಿಯನ್ನು ವಿದ್ಯೆಯ ದೇವತೆ ಎಂದು ನಂಬಲಾಗಿದೆ. ಆಶ್ವಯುಜ ಶುಕ್ಲ ಸಪ್ತಮಿಯ ದಿನವನ್ನು ಅತ್ಯಂತ ಶುಭ, ಸುಮಂಗಲ ಮತ್ತು ಕಲ್ಯಾಣಿಕಾರಿ ಎಂದು ನಂಬಲಾಗಿದೆ. ಧರಣಿಮಾತೆಗೆ ‘ಸುಜಲಾಮ್‌ ಸುಫಲಾಮ್‌’, ಎಂಬ ಸ್ವರೂಪವನ್ನು ನೀಡುವ ವರ್ಷಋತು ಮುಗಿದು ಎಲ್ಲ ಕಡೆಗೆ ಶಾಂತಿ, ನಿರ್ಮಲತೆ ಮತ್ತು ಪ್ರಸನ್ನತೆ ಇರುತ್ತದೆ. ಇದರಲ್ಲಿಯೇ ದೇವತೆಗಳಿಗೆ ಶಾರದೆಯ ದರ್ಶನ ವಾಗಿರಬಹುದು. ‘ಸಜ್ಜನ ಹೃದಯದಂತಹ ಸರೋವರದಲ್ಲಿ ವಿಹರಿಸುವ ಪ್ರಸನ್ನ ಕಮಲಗಳು ಮತ್ತು ಆಕಾಶದಲ್ಲಿ ಅನಂತ ಕಾವ್ಯದ ಚಿಲುಮೆಗಳನ್ನು ಬಿಡುವ ರಸಸ್ವಾಮಿ ಚಂದ್ರ, ಈ ಇಬ್ಬರು ಯಾವಾಗ ಪರಸ್ಪರರ ಧ್ಯಾನವನ್ನು ಮಾಡುತ್ತಿದ್ದರೋ, ಆಗ ದೇವತೆಗಳು ಶಾರದೆಯ ಆವಾಹನೆಯನ್ನು ಮಾಡಿದರು. ಶಾರದೆ ಬಂದಳು ಮತ್ತು ವನದೇವಿಯ ವೈಭವ ವಿಸ್ತಾರ ವಾಯಿತು. ಶಾರದೆ ಬಂದಳು ಮತ್ತು ಮನೆಮನೆಗಳಲ್ಲಿ ಸಮೃದ್ಧಿ ಹೆಚ್ಚಾಯಿತು. ಶಾರದೆ ಬಂದನಂತರ ವೀಣೆಯ ಝೇಂಕಾರ ಪ್ರಾರಂಭವಾಯಿತು. ಸಂಗೀತ ಮತ್ತು ನೃತ್ಯ ಎಲ್ಲೆಡೆ ಹರಡಿತು.’

ಸರಸ್ವತಿದೇವಿಯ ದೇವಿಯ ಸ್ವರೂಪ ಹೇಗಿದೆ ? ಅವಳು ಮಂಜುಳಹಾಸಿನಿ ಬಾಲಕಿಯಲ್ಲ, ಮನಮೋಹಿನಿ ಮುಗ್ಧೆಯಲ್ಲ, ವಿಲಾಸಚತುರ ಪ್ರೌಢಳೂ ಅಲ್ಲ, ಅವಳು ನಿತ್ಯ ಯೌವನಾ ಮಾತೆಯಾಗಿದ್ದಾಳೆ. ಅವಳು ವಿಶ್ವದ ತಾಯಿ ಆಗಿದ್ದಾಳೆ. ವೇದಮಾತಾ, ಬ್ರಹ್ಮಸೂತಾ, ಮೂಲಮಾಯೆ ಆಗಿರುವ ಶ್ರೀ ಶಾರದಾದೇವಿಯು ಸಕಲ ಪ್ರಾಣಿಸೃಷ್ಟಿಯ ಆದಿಜನನಿ ಆಗಿದ್ದಾಳೆ. ಅವಳು ಅತೀಸೂಕ್ಷ್ಮ, ನಿರ್ವಿಕಲ್ಪ, ಶಬ್ದಾತೀತ ಮತ್ತು ಸ್ಫೂರ್ತಿರೂಪ ಆಗಿದ್ದಾಳೆ. ‘ಬ್ರಹ್ಮನಿಷ್ಠ ಸಂತರು ಅವಳ ಸ್ವರೂಪದಲ್ಲಿ ಸಮಾಧಿಸುಖವನ್ನು ಭೋಗಿಸುತ್ತಾರೆ.

ನಿರ್ಗುಣ ನಿರಾಕಾರ ಪರಬ್ರಹ್ಮನ ಜಾಗದಲ್ಲಿ ‘ಸ ಏಕಾಕೀ ನ ರಮತೇ |’ (ಮಹೋಪನಿಷದ್, ಅಧ್ಯಾಯ ೧) ಅಂದರೆ ‘ಅವನಿಗೆ (ಈಶ್ವರನಿಗೆ) ಒಬ್ಬನಿಗೆ ಆಗುತ್ತಿರಲಿಲ್ಲ.’ ‘ಏಕೋಽಹಂ ಬಹು ಸ್ಯಾಮ್‌ |’ ಅಂದರೆ ಈಗ ನಾನು ಒಬ್ಬನಿದ್ದೇನೆ, ಈಗ ನಾನು ಅನಂತ ರೂಪಗಳಲ್ಲಿ ಪ್ರಕಟನಾಗುವೆನು’, ಎಂದು ಯಾವ ಆದಿಸ್ಫುರಣ ಆಯಿತೋ, ಅದೇ ಶಾರದೆಯ ಮೂಲಸ್ವರೂಪವಾಗಿದೆ. ಅವಳಿಗೇ ಪುರುಷ-ಪ್ರಕೃತಿ, ಶಿವ-ಶಕ್ತಿ, ಗಣೇಶ-ಶಾರದಾ ಎಂಬ ಹೆಸರುಗಳಿವೆ. ಏಕತ್ವ ನಾಶವಾಗದೇ ಈ ಎರಡು ರೂಪಗಳಾದವು. ಇದೇ ಶಾರದೆಗೆ ಸಮರ್ಥರು ಈ ಶಬ್ದಗಳಲ್ಲಿ ವಂದಿಸಿದ್ದಾರೆ. – ನಾನು ಈಗ ವೇದಗಳ ಜನನಿ, ಬ್ರಹ್ಮದೇವನ ಕನ್ಯೆ, ಶಬ್ದಬ್ರಹ್ಮನ ಉತ್ಪತ್ತಿ ಯಾವಳಿಂದ ಆಯಿತೋ, ಆ ವಾಗ್ಧೇವತಾ ರೂಪಿ ಮಹಾಮಾಯೆಗೆ, ಶ್ರೀ ಶಾರದೆಗೆ ವಂದಿಸುತ್ತೇನೆ. (ಆಧಾರ : ‘ದಿನವಿಶೇಷ’)