ಭಾರತ-ಕೆನಡಾದ ಸಂಘರ್ಷದಲ್ಲಿ ಭಾರತದ ಆಕ್ರಮಣಕಾರಿ ನಿಲುವು !

ಕೆನಡಾದಲ್ಲಿ ೩ ತಿಂಗಳ ಹಿಂದೆ ‘ಖಾಲಿಸ್ತಾನಿ ಟೈಗರ್‌ ಫೋರ್ಸ್‌’ ಈ ಉಗ್ರ ಸಂಘಟನೆಯ ಮುಖ್ಯಸ್ಥ ಹರ್ದೀಪ್‌ ಸಿಂಗ್‌ ನಿಜ್ಜರ್‌ ಇವನ ಹತ್ಯೆಯಾಯಿತು. ಈ ಘಟನೆ ನಡೆದು ೩ ತಿಂಗಳಾದ ನಂತರ ೧೮ ಸೆಪ್ಟೆಂಬರ್‌ ೨೦೨೩ ರಂದು, ಕೆನಡಾದ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೊ ಇವರು ತಮ್ಮ ಸಂಸತ್ತಿನಲ್ಲಿ ‘ನಿಜ್ಜರ್‌ ಹತ್ಯೆಯಲ್ಲಿ ಭಾರತದ ಗುಪ್ತಚರ ಸಂಸ್ಥೆಯ ಕೈವಾಡವಿರುವ ಸಾಧ್ಯತೆಯಿದೆ’ ಎಂದು ಆರೋಪಿಸಿದರು. ಇಲ್ಲಿಂದಲೇ ಭಾರತ ಮತ್ತು ಕೆನಡಾ ಇವುಗಳ ನಡುವೆ ಉದ್ವಿಗ್ನತೆ ಹೆಚ್ಚಾಗಲು ಪ್ರಾರಂಭವಾಯಿತು. ತದನಂತರ, ಎರಡೂ ದೇಶಗಳು ಪರಸ್ಪರರ ನಾಗರಿಕರಿಗೆ ವೀಸಾ ನೀಡಲು ಕೆಲವು ನಿರ್ಬಂಧಗಳನ್ನು ಹೇರಿದವು. ಭಾರತ ಮತ್ತು ಕೆನಡಾ ಇವುಗಳ ನಡುವಿನ ಸಂಘರ್ಷದ ಬಗ್ಗೆ ವಿದೇಶಾಂಗ ನೀತಿಯ ವಿಶ್ಲೇಷಕರಾದ ಡಾ. ಶೈಲೇಂದ್ರ ದೇವಳಾಣಕರ ಇವರು ಇತ್ತೀಚೆಗೆ ‘ಮುಂಬೈ ತಕ’ ಈ ಯೂಟ್ಯೂಬ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಷಯಗಳು ಬಹಿರಂಗಗೊಂಡವು.

೧. ಏನಿದು ಖಾಲಿಸ್ತಾನಿ ಪ್ರಕರಣ ?

ಡಾ. ಶೈಲೇಂದ್ರ ದೇವಳಾಣಕರ

ಇದು ಪಂಜಾಬ್‌ನಲ್ಲಿ ಸ್ವತಂತ್ರ ಖಾಲಿಸ್ತಾನದ ನಿರ್ಮಿತಿ ಗಾಗಿ ಹೋರಾಡುವ ಪ್ರತ್ಯೇಕತಾವಾದಿ ಚಳುವಳಿಯಾಗಿದ್ದು, ಇದು ೧೯೮೦ ರ ದಶಕದಲ್ಲಿ ಅತ್ಯಂತ ಪ್ರಭಾವಪೂರ್ಣವಾಗಿ ಮುಂದೆ ಬಂದಿತ್ತು. ಅದರ ವಿರುದ್ಧ ಭಾರತ ಸರಕಾರವು ವಿವಿಧ ಸೇನಾ ಕಾರ್ಯಾಚರಣೆಗಳನ್ನು ನಡೆಸಿತು. ಕೆಲವು ವರ್ಷಗಳ ನಂತರ, ಈ ಚಳುವಳಿಯಲ್ಲಿನ ಬಹಳಷ್ಟು ಜನರು ಹೊರ ದೇಶಗಳಿಗೆ ಓಡಿ ಹೋದರು. ಅವರಲ್ಲಿ ಹೆಚ್ಚಿನವರು ಕೆನಡಾ, ಕೆಲವರು ಯುರೋಪ್, ಇನ್ನೂ ಕೆಲವರು ಅಮೇರಿಕಾಗೆ ಹೋದರು. ಭಾರತವು ಖಾಲಿಸ್ತಾನಿ ಭಯೋತ್ಪಾದಕತೆಯನ್ನು ಪಂಜಾಬ್‌ನಲ್ಲಿ ನಿರ್ಮೂಲನೆ ಮಾಡುವಲ್ಲಿ ಯಶಸ್ವಿ ಆಗಿದ್ದರೂ, ಖಾಲಿಸ್ತಾನಿ ಬೆಂಬಲಿಗರು ಜಗತ್ತಿನಾದ್ಯಂತ ಇನ್ನೂ ಅಸ್ತಿತ್ವದಲ್ಲಿದ್ದಾರೆ. ಅವರು ವಿವಿಧ ಮಾಧ್ಯಮಗಳಿಂದ ಖಾಲಿಸ್ತಾನದ ಬೇಡಿಕೆಯನ್ನು ಎತ್ತಿ ಹಿಡಿಯುತ್ತಾರೆ ಮತ್ತು ಅವರ ಬೆಂಬಲಿಗರಿಗೆ ಸಮರ್ಥನೆ ಅಥವಾ ಹಣಕಾಸಿನ ನೆರವು ನೀಡುತ್ತಿರುತ್ತಾರೆ. ಭಾರತದ ಶತ್ರು ರಾಷ್ಟ್ರ ವಿಶೇಷ ವಾಗಿ ಪಾಕಿಸ್ತಾನ ಈ ಚಳುವಳಿಗೆ ನೀರುಗೊಬ್ಬರ ಹಾಕುವ ಕೆಲಸವನ್ನು ಮಾಡುತ್ತಿರುತ್ತದೆ. ಮಧ್ಯಂತರದಲ್ಲಿ, ಅವರ ಕೃತ್ಯಗಳು ಭಾರತದಲ್ಲಿಯೂ ಆಗಿದ್ದವು; ಆದರೆ ಅವುಗಳ ತೀವ್ರತೆ ಕಡಿಮೆ ಇತ್ತು. ಕಳೆದ ೨-೩ ವರ್ಷಗಳಲ್ಲಿ ಜಗತ್ತಿನಾದ್ಯಂತ ಅವರ ಚಟುವಟಿಕೆಗಳು ಹೆಚ್ಚಾಗಿವೆÉ. ಅಮೇರಿಕಾ, ಯುರೋಪ ಅಥವಾ ಕೆನಡಾದಲ್ಲಿರುವ ಭಾರತದ ರಾಯಭಾರಿ ಕಚೇರಿಗಳ ಮೇಲೆ ದಾಳಿಗಳು ನಡೆದಿವೆ. ಹರದೀಪ ಸಿಂಗ ನಿಜ್ಜರ್, ಪನ್ನು ಅವರಂತಹ ಅನೇಕ ಬೆಂಬಲಿಗರಿಂದ ಸಂಘಟಿತ ಅಪರಾಧ, ಕಳ್ಳಸಾಗಣೆ, ಮಾದಕ ಪದಾರ್ಥಗಳ ವ್ಯಾಪಾರ ಇತ್ಯಾದಿಗಳ ಮೂಲಕ ಹಣವನ್ನು ಸಂಗ್ರಹಿಸುತ್ತಾರೆ ಮತ್ತು ಅದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮ್ಮ ಬೆಂಬಲಿಗರಿಗೆ ಕಳುಹಿಸುತ್ತಾರೆ. ಇದು ಒಂದು ರೀತಿಯ ರ್ಯಾಕೆಟ್‌ ಆಗಿದ್ದು, ಇತ್ತೀಚಿನ ದಿನಗಳಲ್ಲಿ ತಲೆ ಎತ್ತಲು ಪ್ರಾರಂಭಿಸಿದೆ.

೨. ಕೆನಡಾದ ‘ಲಿಬರಲ್‌ ಲೆಫ್ಟ್ ಸರ್ಕಾರ’ದಿಂದ ಖಾಲಿಸ್ತಾನಕ್ಕೆ ಮೊದಲಿನಿಂದಲೂ ಸಮರ್ಥನೆ

ಈ ಸಂದರ್ಭದಲ್ಲಿಯೇ ಭಾರತ ಮತ್ತು ಕೆನಡಾ ಇವುಗಳ ನಡುವೆ ವಿವಾದ ಉಂಟಾಗಿದೆ. ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕರಿಗೆ ಮುಕ್ತ ವಾತಾವರಣವನ್ನು ನೀಡಲಾಗಿದೆ. ಅಲ್ಲಿಂದ ಅವರ ಚಟುವಟಿಕೆಗಳು ಬಹಳ ವ್ಯವಸ್ಥಿತವಾಗಿ ನಡೆಯುತ್ತಿವೆ. ಭಾರತೀಯ ತನಿಖಾ ದಳ (ಎನ್‌.ಐ.ಎ.) ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಿದ ೬ ಕುಖ್ಯಾತ ಭಯೋತ್ಪಾದಕರ ಪಟ್ಟಿಯನ್ನು ಘೋಷಿಸಿದೆ. ಅದರಲ್ಲಿನ ಮೂವರು ಉಗ್ರರು ಸದ್ಯ ಕೆನಡಾದಲ್ಲಿದ್ದಾರೆ. ಅವರು ಬಹಿರಂಗವಾಗಿ ಭಾರತದ ವಿರುದ್ಧ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ವೀಡಿಯೋ ಟೇಪ್‌ಗಳು ಪ್ರಸಾರವಾಗುತ್ತಿರುತ್ತವೆ ಅಥವಾ ಪ್ರತಿಕ್ರಿಯೆಗಳು ಬರುತ್ತಿರುತ್ತವೆ. ಈ ವಿಷಯದ ಬಗ್ಗೆ ಭಾರತವು ನಿರಂತರವಾಗಿ ಕೆನಡಾಕ್ಕೆ ದೂರು ನೀಡುತ್ತಿದೆ; ಆದರೆ ಕೆನಡಾ ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ. ಇದು ವಿಶೇಷವಾಗಿ ಲಿಬರಲ್‌ ಲೆಫ್ಟ್ ಸರಕಾರ (ಉದಾರವಾದಿ ಸಾಮ್ಯವಾದಿ ಸರಕಾರ) ಕೆನಡಾದಲ್ಲಿರುವಾಗ ನಡೆದಿದೆ. ಈಗಲೂ ಜಸ್ಟಿನ್‌ ಟ್ರುಡೊ ಇವರ ಲಿಬರಲ್‌ ಲೆಫ್ಟ್ ಸರಕಾರ ಅಧಿಕಾರದಲ್ಲಿದೆ. ಅವರ ತಂದೆಯವರು ಮೂರು ಬಾರಿ ಕೆನಡಾದ ಪ್ರಧಾನಮಂತ್ರಿಗಳಾಗಿದ್ದರು. ಆಯಾ ಕಾಲಾವಧಿಯಲ್ಲಿ ಈ ರೀತಿಯ ಬೆಂಬಲವು ಹೆಚ್ಚುತ್ತಾ ಹೋಗಿದೆ. ಅದರಿಂದಾಗಿ ಈಗಲೂ ಅದೇ ಪರಿಸ್ಥಿತಿ ತಲೆದೋರಿದೆ. ಭಾರತದ ವಿದೇಶಾಂಗ ವಕ್ತಾರ ಅರಿಂದಮ್‌ ಬಾಗಚಿ ಇವರು ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಅದರಲ್ಲಿ ಭಾರತವು ಬಹಿರಂಗವಾಗಿ, ಕೆನಡಾ ಖಾಲಿಸ್ತಾನಿಗಳಿಗೆ ಸುರಕ್ಷಿತ ತಾಣವಾಗಿದೆ. ಪಾಕಿಸ್ತಾನವು ‘ಕ್ರಾಸ್‌ ಬಾರ್ಡರ್’ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿದ್ದರೆ, ಕೆನಡಾವು ಭಯೋತ್ಪಾದಕರಿಗೆ ಸ್ವರ್ಗದಂತಹ ಸೌಲಭ್ಯ ಮತ್ತು ಸುರಕ್ಷಿತ ಆಶ್ರಯವನ್ನು ಒದಗಿಸತೊಡಗಿದೆ ಎಂದು ಆರೋಪಿಸಿದೆ. ಭಾರತವು ಪಾಕಿಸ್ತಾನದ ನಂತರ ಅಧಿಕೃತವಾಗಿ ಕೆನಡಾದ ಹೆಸರನ್ನು ಉಲ್ಲೇಖಿಸಿದೆ.

೩. ಒತ್ತಡ ಹೆಚ್ಚುತ್ತಿರುವುದರ ಹಿಂದಿನ ಕಾರಣ

ಈ ಹಿಂದೆ ಹರದೀಪ ನಿಜ್ಜರ ಓರ್ವ ‘ಪ್ಲಂಬರ್’ ಆಗಿದ್ದನು. ಬಳಿಕ ಅವನು ಕೆನಡಾಕ್ಕೆ ಹೋದನು. ಅಲ್ಲಿ ಅವನು ಇಂತಹ ಎಲ್ಲ ಚಟುವಟಿಕೆಗಳಲ್ಲಿ ತೊಡಗಲಾರಂಭಿಸಿದನು. ಮುಂದೆ ನಿಜ್ಜರನ ಹತ್ಯೆಯಾಯಿತು. ಈ ಹತ್ಯೆಯ ತನಿಖೆ ನಡೆಯುತ್ತಿದೆ. ಈ ತನಿಖೆಗೆ ಭಾರತವೂ ಸಹಕರಿಸುತ್ತಿದೆ. ಯಾವಾಗ ಉಭಯ ದೇಶಗಳ ನಡುವೆ ಸಮಸ್ಯೆಗಳು ಉದ್ಭವಿಸುತ್ತವೆಯೋ, ಆಗ ಅದರ ಕೆಲವು ಪ್ರಕ್ರಿಯೆಗಳು ಇರುತ್ತವೆ. ಯಾವಾಗ ಒಬ್ಬ ಪ್ರಧಾನಿ ತಮ್ಮ ಸಂಸತ್ತಿನಲ್ಲಿ ಭಾಷಣ ಮಾಡುವುದು ಮತ್ತು ಅದಕ್ಕೂ ಮುಂದೆ ಹೋಗಿ ‘ಕ್ರೆಡಿಬಲ ಎಲಿಗೇಶನ’ (ವಿಶ್ವಾಸಾರ್ಹ ಆರೋಪ) ಎಂಬಂತಹ ಶಬ್ದಗಳನ್ನು ಬಳಸಿ ನೇರವಾಗಿ ಭಾರತದ ಮೇಲೆ ಆರೋಪ ಮಾಡುತ್ತಾರೆಯೋ, ಆಗ ಅದು ಅಯೋಗ್ಯವಾಗುತ್ತದೆ. ಇಷ್ಟೇ ಅಲ್ಲ, ಅವರ ವಿದೇಶಾಂಗ ಸಚಿವರು ಅಲ್ಲಿನ ಭಾರತದ ಹೈಕಮಿಷನರ ಅವರನ್ನು ಹೊರಹಾಕಿದರು. ಇಂತಹ ಘಟನೆಯಾಗಿರುವುದು ಮೊದಲ ಬಾರಿಯೇನಲ್ಲ. ಭಾರತ ಕೆನಡಾದೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದರೂ, ಭಾರತವನ್ನು ಹತ್ತಿಕ್ಕಲು ಕೆನಡಾ ಹಲವು ಬಾರಿ ಪ್ರಯತ್ನಿಸಿದೆ. ಇಂತಹ ೩ ಪ್ರಸಂಗ ಪ್ರಕರಣಗಳನ್ನು ಇಲ್ಲಿ ಉಲ್ಲೇಖಿಸಬಹುದು. – ಡಾ. ಶೈಲೇಂದ್ರ ದೇವಳಾಣಕರ, ವಿದೇಶಾಂಗ ನೀತಿ ವಿಶ್ಲೇಷಕರು

ಮೊದಲನೇಯದಾಗಿ ೧೯೭೪ ರಲ್ಲಿ, ಭಾರತವು ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿದಾಗ, ಇದೇ ಕೆನಡಾ ದೇಶವು ಭಾರತದ ಮೇಲೆ ಬಹಿಷ್ಕಾರವನ್ನು ಹೇರಿತ್ತು. ಹಾಗೆಯೇ ಭಾರತದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿತ್ತು. ತದನಂತರ ೧೯೮೫ ರಲ್ಲಿ, ಭಾರತದ ‘ಕನಿಷ್ಕ’ ವಿಮಾನವನ್ನು ಸ್ಫೋಟಗೊಳಿಸಿ ಧ್ವಂಸಗೊಳಿಸಲಾಯಿತು. ಅದನ್ನು ಇದೇ ಖಾಲಿಸ್ತಾನಿ ಭಯೋತ್ಪಾದಕರು ಸ್ಫೋಟಿಸಿದ್ದರು. ತದನಂತರ, ಭಾರತವು ೧೯೮೫ ರಲ್ಲಿ ಪೋಖ್ರಾನ್‌ನಲ್ಲಿ ಎರಡನೇ ಪರಮಾಣು ಪರೀಕ್ಷೆಯನ್ನು ನಡೆಸಿತು. ಆಗಲೂ ಕೆನಡಾ ದೇಶವು ಮತ್ತೊಮ್ಮೆ ಭಾರತದ ಮೇಲೆ ಬಹಿಷ್ಕಾರವನ್ನು ಹಾಕಿತ್ತು.

೪. ಕೆನಡಾ ವಿರುದ್ಧ ಭಾರತದ ಆಕ್ರಮಣಕಾರಿ ನೀತಿ

ಮೊದಲು ಭಾರತ ಕೇವಲ ಕಳವಳ ವ್ಯಕ್ತಪಡಿಸುತ್ತಿತ್ತು. ಈ ಸಲ ಮಾತ್ರ ಭಾರತ ಇದೇ ಮೊದಲ ಬಾರಿ ಅತ್ಯಂತ ಆಕ್ರಮಣಕಾರಿ ಪ್ರತ್ಯುತ್ತರ ನೀಡಿದೆ. ಅವರು ಭಾರತದ ಹೈಕಮಿಷನರ್‌ನ್ನು ಹೊರಹಾಕಿದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತವೂ ಕೆನಡಾದ ಹೈಕಮಿಷನರ್‌ ಅವರನ್ನು ಹೊರಹಾಕಿತು. ಭಾರತವು ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಕೆನಡಾದ ಪ್ರಜೆಗಳು ಭಾರತ ಪ್ರವೇಶಿಸುವುದನ್ನು ನಿಷೇಧಿಸಿತು. ಇದು ಭಾರತದ ಅತ್ಯಂತ ತೀವ್ರ ಪ್ರತಿಕ್ರಿಯೆಯಾಗಿದೆ. ಇಷ್ಟು ಆಕ್ರಮಣಕಾರಿ ರೀತಿಯನ್ನು ಭಾರತವು ಈ ಹಿಂದೆ ಯಾವತ್ತೂ ವ್ಯಕ್ತಪಡಿಸಿರಲಿಲ್ಲ. – ಡಾ. ಶೈಲೇಂದ್ರ ದೇವಳಾಣಕರ, ವಿದೇಶಾಂಗ ನೀತಿ ವಿಶ್ಲೇಷಕರು

ಭಾರತದ ಆಕ್ರಮಣಕಾರಿ ವಿದೇಶಾಂಗ ನೀತಿಯ ಗುರುತರ ಅನುಭವ !

ಕೆನಡಾ ವಿರುದ್ಧದ ಭಾರತದ ನಡೆ ಎಂದರೆ, ಭಾರತದ ಹೆಚ್ಚುತ್ತಿರುವ ಆತ್ಮವಿಶ್ವಾಸ ಮತ್ತು ಆಕ್ರಮಣಕಾರಿ ವಿದೇಶಾಂಗ ನೀತಿಯ ಸಂಕೇತವಾಗಿದೆ. ‘ಜಿ-೭’ (ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ, ಬ್ರಿಟನ್‌ ಮತ್ತು ಅಮೇರಿಕಾ ಈ ೭ ಅಭಿವೃದ್ಧಿ ಹೊಂದಿದ ದೇಶಗಳ ಗುಂಪು) ಈ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಸಂಘಟನೆಯ ಸದಸ್ಯ ದೇಶವಾಗಿರುವ ಕೆನಡಾದ ಮೇಲೆ ವೀಸಾ ನಿರ್ಬಂಧವನ್ನು ಹೇರಿರುವುದು, ಕೆನಡಾದೊಂದಿಗೆ ಯುರೋಪ್‌ ಮತ್ತು ಅಮೇರಿಕಾ ದೇಶಗಳಿಗೂ ಕಠಿಣ ಸಂದೇಶವಾಗಿದೆ.

 

ಇಂದಿನ ಭಾರತ ‘ಏಟಿಗೆ ಎದಿರೇಟು’ ನೀಡುವ ದೇಶವಾಗಿದೆ

ಭಾರತ-ಕೆನಡಾ ಈ ದೇಶಗಳ ಸಂಬಂಧದ ದೃಷ್ಟಿಯಿಂದ ಇತಿಹಾಸವನ್ನು ನೋಡಿದರೆ, ಹಿಂದೆ ಕೆನಡಾ ಹಲವು ಬಾರಿ ಭಾರತವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು ಕಂಡುಬರುತ್ತದೆ. ೧೯೭೪ ರಲ್ಲಿ, ೧೯೯೮ ರಲ್ಲಿ ಭಾರತದ ಮೇಲೆ ಆರ್ಥಿಕ ಬಹಿಷ್ಕಾರವನ್ನು ಹೇರಿತು. ಏರ್‌ ಇಂಡಿಯಾದ ‘ಕನಿಷ್ಕ’ ವಿಮಾನವನ್ನು ಸ್ಫೋಟಿಸಿದ ಖಲಿಸ್ತಾನಿಗಳ ತನಿಖೆಯನ್ನು ೨೧ ವರ್ಷ ತಡವಾಗಿ, ಪ್ರಾರಂಭಿಸಿತು. ಆದರೆ, ಈ ಬಾರಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೊ ಇವರು ಇದು ಬದಲಾದ ಭಾರತವಾಗಿದ್ದು, ಒತ್ತಡಕ್ಕೆ ಮಣಿಯುವುದಿಲ್ಲ, ‘ಏಟಿಗೆ ಎದಿರೇಟು’ ನೀಡುತ್ತದೆ ಎಂಬುದನ್ನು ಮರೆತಿದ್ದಾರೆ.

 

ಭಾರತದ ವಿರುದ್ಧದ ಆರೋಪಗಳ ವಿಷಯದಲ್ಲಿ ಜಸ್ಟಿನ್‌ ಟ್ರುಡೊ ಒಬ್ಬಂಟಿಯಾಗಿದ್ದಾರೆ !

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೊ ಭಾರತದ ವಿರುದ್ಧ ಮಾಡಿರುವ ಆರೋಪಗಳ ವಿಷಯದಲ್ಲಿ ಈ ಬಾರಿ ಒಬ್ಬಂಟಿಯಾಗಿದ್ದಾರೆ ಮತ್ತು ಅವರ ಎಲ್ಲಾ ಅಂದಾಜುಗಳು ತಪ್ಪಾದವು. ಭಾರತದ ವಿರುದ್ಧ ಅಮೇರಿಕಾ, ಯುರೋಪ್‌ ಇತ್ಯಾದಿ ‘ಜಿ-೭’ ದೇಶಗಳು ಕೆನಡಾವನ್ನು ಬೆಂಬಲಿಸುತ್ತವೆ ಎಂದು ಅವರು ಬಲವಾಗಿ ನಂಬಿದ್ದರು; ಆದರೆ ಹಾಗೆ ಆಗಲಿಲ್ಲ. ವ್ಯತಿರಿಕ್ತವಾಯಿತು. ವಿಶ್ವದ ೫ ನೇ ಅತಿದೊಡ್ಡ ಆರ್ಥಿಕತೆಯ (ಭಾರತದೊಂದಿಗೆ) ವಿರುದ್ಧವಾಗಿ ಹೋಗಲು ಯಾರೂ ಸಿದ್ಧರಿಲ್ಲ. ಅಮೇರಿಕಾದ ಭದ್ರತಾ ಇಲಾಖೆಯು ಜಸ್ಟಿನ್‌ ಟ್ರುಡೊರವರ ಆರೋಪವನ್ನು ‘ದೊಡ್ಡ ತಪ್ಪು’ ಎಂದು ಕರೆದಿದ್ದಾರೆ. – ಡಾ. ಶೈಲೇಂದ್ರ ದೇವಳಾಣಕರ