|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭಾರತ ಮತ್ತು ಪಾಕಿಸ್ತಾನದ ವಿಭಜನೆಗೆ ಮಹಮ್ಮದ್ ಅಲಿ ಜಿನ್ನಾ ಅಲ್ಲ, ಹಿಂದೂ ಮಹಾಸಭಾ ಕಾರಣವಾಗಿತ್ತು. ಹಿಂದೂ ರಾಷ್ಟ್ರವನ್ನು ಕೋರುವ ಜನರು ದೇಶದ ಶತ್ರುಗಳಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಅವರು ಹುರುಳಿಲ್ಲದ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಬಾಂದಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಅವರು ಮೇಲಿನ ಹೇಳಿಕೆ ನೀಡಿದ್ದಾರೆ.
(ಸೌಜನ್ಯ – News18 India)
1. ಮೌರ್ಯ ಅವರು ತಮ್ಮ ಮಾತನ್ನು ಮುಂದುವರಿಸಿ, ಭಾರತದ ಸಂವಿಧಾನದ ಅನುಗುಣವಾಗಿ ಧರ್ಮ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಲು ಬರುವುದಿಲ್ಲ. ಯಾರಾದರೂ ‘ಹಿಂದೂ ರಾಷ್ಟ್ರಬೇಕು’ ಎಂದು ಬೇಡಿಕೆ ಇಟ್ಟರೆ ಬೇರೆಯವರು ಕೂಡ ಅದನ್ನೇ ಬೇಡುವುದಿಲ್ಲವೇ ? ಈ ಹಿಂದೆ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಕ್ಕೆ ಬೇಡಿಕೆ ಸಲ್ಲಿಸಿತ್ತು. ಇದರಿಂದಾಗಿಯೇ ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಯಾಯಿತು ಎಂದು ಹೇಳಿದರು. (ಭಾರತದ ವಿಭಜನೆಯು ಜಿನ್ನಾ ಮತ್ತು ಗಾಂಧಿಯವರ ಕಾರಣದಿಂದ ಆಗಿದೆ. ಈ ಸತ್ಯವನ್ನು ನಿರಾಕರಿಸುವವರು ಇತಿಹಾಸದ ದ್ರೋಹಿಗಳೇ ಆಗಿದ್ದಾರೆ ! – ಸಂಪಾದಕರು)
2. ಈ ಹಿಂದೆಯೂ ಮೌರ್ಯ ಇವರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದರು. ಆಗಸ್ಟ್ 2023 ರಲ್ಲಿ ಮೌರ್ಯ ಇವರು, ಹಿಂದೂ ಧರ್ಮ ಯಾವುದೇ ಧರ್ಮವಲ್ಲ, ಅದು ಕೇವಲ ಒಂದು ಅಪಾಯವಾಗಿದೆ. ಬ್ರಾಹ್ಮಣವಾದ ಬಹಳ ಆಳವಾದ ಬೇರುಗಳನ್ನು ಹೊಂದಿದೆ. ಸಮಾಜದ ಅಸಮಾನತೆಗೆ ಬ್ರಾಹ್ಮಣವಾದವೇ ಕಾರಣವಾಗಿದೆ ಎಂದು ಹೇಳಿದ್ದರು.
ಸಂಪಾದಕೀಯ ನಿಲುವುಈ ದೇಶವನ್ನು ಪಾತಾಳಕ್ಕೆ ಕೊಂಡೊಯ್ಯುವವರು, ಮುಸಲ್ಮಾನರನ್ನು ಓಲೈಸುವವರು ಮತ್ತು ಮೌರ್ಯರ ಹೇಳಿಕೆಗಳನ್ನು ಸಹಿಸುತ್ತಿರುವವರು ಜಾತ್ಯತೀತ ಆಡಳಿತ ವ್ಯವಸ್ಥೆಯ ವಿರೋಧಿಗಳು ಎಂಬುದನ್ನು ಹಿಂದೂ ರಾಷ್ಟ್ರವನ್ನು ಕೋರುವವರು ಗಮನದಲ್ಲಿಟ್ಟುಕೊಳ್ಳಬೇಕು ! ದೇಶವನ್ನು ಇಸ್ಲಾಮಿಸ್ತಾನ ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಮೌರ್ಯ ಇವರು ಎಂದೂ ಯಾವುದೇ ಹೇಳಿಕೆ ನೀಡಿರುವುದು ಕಂಡು ಬಂದಿಲ್ಲ ! ಹಿಂದೂಗಳಲ್ಲಿರುವ ಅತಿಸಹಿಷ್ಣುತೆಯಿಂದಾಗಿಯೇ ಮೌರ್ಯರು ಈ ರೀತಿಯ ಹಿಂದೂ ವಿರೋಧಿ ಹೇಳಿಕೆಗಳನ್ನು ಮೇಲಿಂದ ಮೇಲೆ ನೀಡುತ್ತಿದ್ದಾರೆ. ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಒಂದು ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಇಂತಹ ಹೇಳಿಕೆ ನೀಡಲು ಧೈರ್ಯ ತೋರಿಸುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ವಿಷಯವಾಗಿದೆ ! ಈಗ ಮೌರ್ಯ ಅವರಿಗೆ ಈ ಐತಿಹಾಸಿಕ ಶೋಧಕ್ಕಾಗಿ ಪ್ರಶಸ್ತಿಯನ್ನೇ ನೀಡಬೇಕು ! |