ಹಿಂದೂಗಳೇ, ಅಜೇಯ ಸಮಾಜ ಮತ್ತು ಅದರ ರಾಷ್ಟ್ರಕ್ಕೇ ವಿಜಯದಶಮಿಯನ್ನು ಆಚರಿಸುವ ಅರ್ಹತೆ ಇರುತ್ತದೆ, ಎಂಬುದನ್ನು ಗಮನದಲ್ಲಿಡಿ !

ವಿಜಯದಶಮಿ ನಿಮಿತ್ತ ಸಂದೇಶ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಶ್ರೀದುರ್ಗಾದೇವಿಯು ಮಹಿಷಾಸುರನನ್ನು ವಧಿಸಿರುವುದನ್ನು ಮತ್ತು ಪ್ರಭು ಶ್ರೀರಾಮನು ರಾವಣನನ್ನು ವಧಿಸಿರುವುದನ್ನು ಸ್ಮರಿಸುವ ದಿನವೆಂದರೆ ವಿಜಯದಶಮಿ !

ಹಿಂದೂಗಳ ಸರ್ವಶಕ್ತಿವಂತರಾದ ದೇವತೆಗಳು ಅಜೇಯರಾಗಿರುವುದರಿಂದ ಅವರ ವಿಜಯದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ. ಇತ್ತೀಚೆಗೆ ವಿಜಯದಶಮಿಯ ದಿನದಂದು ಊರಿನ ಹೆಬ್ಬಾಗಿಲಿನ ದೇವಸ್ಥಾನಕ್ಕೆ ಹೋಗಿ ಸಿಮೋಲ್ಲಂಘನ ಮಾಡುವುದು ಮತ್ತು ಮಂದಾರದ ಎಲೆಗಳನ್ನು ಬಂಗಾರವೆಂದು ಪರಸ್ಪರರಿಗೆ ಕೊಡುವುದು ಈ ಕೃತಿಯನ್ನು ಕೇವಲ ಕರ್ಮಕಾಂಡವೆಂದು ಮಾಡಲಾಗುತ್ತಿದೆ. ಮೂಲದಲ್ಲಿ ‘ಸೀಮೋಲ್ಲಂಘನದ ಪರಂಪರೆಯು ದೇಶದಲ್ಲಿ ಏಕೆ ನಿರ್ಮಾಣವಾಯಿತು ?’, ಎಂದು ಹಿಂದೂ ಸಮಾಜವು ಎಂದಾದರೂ ಯೋಚಿಸಿದೆಯೇ ?

‘ದಾಳಿಯೇ ಅತ್ಯುತ್ತಮ ರಕ್ಷಣೆಯ ಮಾರ್ಗವಾಗಿರುತ್ತದೆ’, ಎಂದು ಪ್ರಾಚೀನ ಕಾಲದ ಹಿಂದೂ ಆಡಳಿತಗಾರರಿಗೆ ತಿಳಿದಿತ್ತು; ಆದ್ದರಿಂದ ಶತ್ರುಗಳ ಗಡಿಯನ್ನು ಉಲ್ಲಂಘಿಸುವ ಶೌರ್ಯ ಪರಂಪರೆಯನ್ನು ದೇಶದಲ್ಲಿ ರಚಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಈ ಪರಂಪರೆಯು ಕಣ್ಮರೆಯಾಗಿ ‘ಚುನಾವಣೆಯಲ್ಲಿ ರಾಜಕೀಯ ಪಕ್ಷದ ಗೆಲವು ಎಂದರೆ ಹಿಂದೂಗಳ ವಿಜಯ’, ಎಂದು ತಿಳಿಯಲಾಗುತ್ತಿದೆ. ಪ್ರತ್ಯಕ್ಷದಲ್ಲಿ ನೂಂಹದಲ್ಲಿನ ಗಲಭೆ, ಮಣಿಪುರದಲ್ಲಿನ ಹಿಂಸಾಚಾರ, ಕನ್ಹೈಲಾಲನಿಗೆ ಮಾಡಿದ ‘ಸರ ತನ ಸೆ ಜುದಾ’ (ಶಿರಚ್ಛೇದ), ಶ್ರದ್ಧಾ ವಾಲಕರಳನ್ನು ೩೫ ತುಂಡುಗಳಾಗಿಸಿದ್ದು, ಈ ಘಟನೆಗಳನ್ನು ನೋಡಿದರೆ ಎಲ್ಲೆಡೆಯ ಹಿಂದೂ ಸಮಾಜವು ಸೋಲಿನ ನೆರಳಿನಲ್ಲಿ ಬದುಕುತ್ತಿರುವುದು ಗಮನಕ್ಕೆ ಬರುತ್ತದೆ. ಇಂತಹ ವಾತಾವರಣ ದಲ್ಲಿ ವಿಜಯದಶಮಿಯನ್ನು ಆಚರಿಸುವುದೆಂದರೆ ಕೇವಲ ಔಪಚಾರಿಕತೆಯಾಗಿದೆ. ಚಂದ್ರಯಾನವು ಚಂದ್ರನ ಗಡಿ ದಾಟಿದರೂ, ಇದು ವೈಜ್ಞಾನಿಕ ಪ್ರಗತಿಯಾಗಿದೆ. ಇದರಿಂದ ಹಿಂದೂಗಳ ಸೀಮೋಲ್ಲಂಘನವಾಯಿತು ಎಂದು ಹೇಳುವುದು ಅಯೋಗ್ಯವಾಗಿದೆ.

ಹಿಂದೂಗಳೇ, ಯಾವ ಸಮಾಜವು ಅಜೇಯವಾಗಿರು ತ್ತದೆಯೋ, ಆ ರಾಷ್ಟ್ರವೇ ವಿಜಯದಶಮಿಯನ್ನು ಆಚರಿಸಲು ಅರ್ಹವಾಗಿದೆ, ಎಂಬುದನ್ನು ಗಮನದಲ್ಲಿಡಿ ! ಆದುದರಿಂದ ವಿಜಯದಶಮಿಯ ನಿಮಿತ್ತ ಹಿಂದೂ ಸಮಾಜವನ್ನು ಅಜೇಯ ವನ್ನಾಗಿಸಲು ಕೃತಿಶೀಲ ಸಂಕಲ್ಪ ಮಾಡಿ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ (೧೬.೯.೨೦೨೩)