ನವ ದೆಹಲಿ – ಭಾರತ ಮತ್ತು ಚೀನಾ ಸೇನೆಗಳ ನಡುವೆ ‘ಕಾರ್ಪ್ಸ್ ಕಮಾಂಡರ್’ ಹಂತದ 20ನೇ ಸುತ್ತಿನ ಚರ್ಚೆಯು ಅಕ್ಟೋಬರ್ 9 ಮತ್ತು 10 ರಂದು ಲಡಾಖ್ ಸೆಕ್ಟರ್‌ನ ಚುಶುಲ್-ಮೊಲ್ಡೊ ಬಳಿ ನಡೆಯಿತು. ಈ ಸಂದರ್ಭದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಈ ಸಭೆಯಲ್ಲಿ ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಲಡಾಖನ ಡೆಪಸಾಂಗ್ ಮತ್ತು ಡೆಮ್‌ಚೋಕ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಭಾರತೀಯ ಸೈನ್ಯಾಧಿಕಾರಿಗಳು ಚೀನಾದ ಮೇಲೆ ಒತ್ತಡ ಹೇರಿದರು. ಭಾರತ ಮತ್ತು ಚೀನಾ ದೇಶಗಳು ಗಡಿಭಾಗದಲ್ಲಿ ಶಾಂತಿ ಕಾಪಾಡಲು ಒಪ್ಪಿಕೊಂಡಿವೆ. ಎರಡೂ ದೇಶಗಳು ಮುಕ್ತವಾಗಿ ತಮ್ಮ ವಿಚಾರಗಳನ್ನು ಮಂಡಿಸಿದೆ.
(ಸೌಜನ್ಯ – Prabhasakshi)
ಸಂಪಾದಕೀಯ ನಿಲುವುಚೀನಾವು ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಗೆ ಸೂಚಿಸಿದ್ದರೂ. ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದ ಕಾರಣ ಭಾರತ ಸದಾ ಎಚ್ಚರಿಕೆಯಿಂದ ಇರಬೇಕು ! |