ಪಠಾಣಕೋಟದಲ್ಲಿನ ಸೈನ್ಯ ಕೇಂದ್ರದ ಮೇಲಿನ ದಾಳಿಯ ಸೂತ್ರಧಾರನ ಹತ್ಯೆ

ಸಿಯಾಲಕೋಟ್ (ಪಾಕಿಸ್ತಾನ್) – ಭಾರತದಲ್ಲಿನ ಪಠಣಕೋಟ ಇಲ್ಲಿಯ ಸೈನ್ಯದ ನೆಲೆಯ ಮೇಲೆ ೨೦೧೬ ರಲ್ಲಿ ನಡೆದಿರುವ ಜಿಹಾದಿ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರದಾರ ಶಾಹಿದ್ ಲತೀಫ್ ಇವನನ್ನು ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇಲ್ಲಿಯ ಮಸೀದಿಯ ಹೊರಗೆ ಈ ಹತ್ಯೆ ಮಾಡಲಾಗಿದೆ. ಅವನು ರಾಷ್ಟ್ರೀಯ ತನಿಖಾ ದಳದ ಪರಾರಿ ಭಯೋತ್ಪಾದಕರ ಪಟ್ಟಿಯಲ್ಲಿದ್ದನು. ಪಠಾನಕೋಟದ ದಾಳಿಯಲ್ಲಿ ಭಾರತದ ೭ ಸೈನಿಕರು ಹುತಾತ್ಮರಾಗಿದ್ದರು. ಜೈಶ ಎ ಮಹಮ್ಮದ್ ಈ ಭಯೋತ್ಪಾದಕ ಸಂಘಟನೆಯಿಂದ ಈ ದಾಳಿ ನಡೆಸಲಾಗಿತ್ತು. ಇಲ್ಲಿ ೩೬ ಗಂಟೆಗಳ ಕಾಲ ಚಕಿಮಕಿ ಮುಂದುವರೆದಿತ್ತು. ೧೯೯೯ ರ ಇಂಡಿಯನ್ ಏರ ಲೈನ್ಸ್ ವಿಮಾನದ ಅಪಹರಣ ಮಾಡಿರುವ ಭಯೋತ್ಪಾದಕರಲ್ಲಿ ಲತೀಫ್ ನ ಸಮಾವೇಶ ಇರುವುದಾಗಿ ಕೂಡ ಆರೋಪವಿದೆ.

ಆಗಿನ ಕಾಂಗ್ರೆಸ್ ಸರಕಾರವು ಲತೀಫ್ ಇವನನ್ನು ‘ಸದ್ಭಾವನಾ’ ಎಂದು ಪಾಕಿಸ್ತಾನಕ್ಕೆ ಒಪ್ಪಿಸಿತ್ತು.

ಶಾಹಿದ್ ಸಿಯಾಲಕೋಟ ಪ್ರದೇಶದಲ್ಲಿ ಜೈಶ್ ಏ ಮಹಮ್ಮದ್ ನ ಉನ್ನತ ಕಮಂಡರ್ ಆಗಿದ್ದನು. ಅವನನ್ನು ಭಾರತದಲ್ಲಿ ಬಂಧಿಸಿದ ನಂತರ ಶಿಕ್ಷೆ ವಿಧಿಸಿತ್ತು. ೨೦೧೦ ರಲ್ಲಿ ಶಿಕ್ಷೆ ಪೂರ್ಣವಾದ ನಂತರ ಭಾರತದಿಂದ ಅವನನ್ನು ಪಾಕಿಸ್ತಾನಕ್ಕೆ ಸದ್ಭಾವನೆಯ ಅಂತರ್ಗತ ಪ್ರತ್ಯಾರ್ಪಣೆ ಮಾಡಲಾಗಿತ್ತು. ಪಾಕಿಸ್ತಾನಕ್ಕೆ ಹೋದ ನಂತರ ಅವನು ಮತ್ತೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಮುಂದುವರೆಸಿದ್ದನು.