ಆದ್ಯಾಶಕ್ತಿ

ನವರಾತ್ರಿಯಲ್ಲಿ ಮೊದಲು ಮೂರು ದಿನ ತಮೋಗುಣ ಕಡಿಮೆ ಮಾಡಲು ಮಹಾ ಕಾಳಿಯ, ಮುಂದಿನ ೩ ದಿನ ಸತ್ತ್ವಗುಣ ಹೆಚ್ಚಿಸಲು ರಜೋ ಗುಣಿ ಮಹಾಲಕ್ಷ್ಮಿಯ ಮತ್ತು ಕೊನೆಯ ಮೂರು ದಿನ ಸಾಧನೆ ತೀವ್ರವಾಗಲು ಸತ್ತ್ವಗುಣಿ ಮಹಾ ಸರಸ್ವತಿಯ ಪೂಜೆ ಮಾಡುತ್ತಾರೆ. ಈ ಮೂರು ಶಕ್ತಿಗಳ ಸಮಾವೇಶವಿರುವ ಆದಿಶಕ್ತಿಯನ್ನು ಈ ಲೇಖನದಿಂದ ತಿಳಿದುಕೊಳ್ಳೋಣ

೧. ಅರ್ಥ

‘ಮಹಾಕಾಳಿಯು ‘ಕಾಲ’ತತ್ತ್ವದ, ಮಹಾಸರಸ್ವತಿಯು ‘ಗತಿ’ ತತ್ತ್ವದ ಮತ್ತು ಮಹಾಲಕ್ಷ್ಮೀಯು ‘ದಿಕ್‌’ತತ್ತ್ವದ ಪ್ರತೀಕಳಾಗಿದ್ದಾಳೆ. ಕಾಲದ ಉದರದಲ್ಲಿ ಎಲ್ಲ ಪದಾರ್ಥಗಳು ನಾಶವಾಗುತ್ತವೆ. ಎಲ್ಲಿ ಗತಿ ಇಲ್ಲವೋ ಅಲ್ಲಿ ನಿರ್ಮಿತಿಯ ಪ್ರಕ್ರಿಯೆಯೇ ಕುಂಠಿತ ವಾಗುತ್ತದೆ. ಆದರೂ ಅಷ್ಟದಿಶೆಗಳಲ್ಲಿ ಜಗತ್ತಿನ ಸೃಷ್ಠಿ, ಪಾಲನೆ-ಪೋಷಣೆ ಹಾಗೂ ಸಂವರ್ಧನೆಗಾಗಿ ಒಂದು ವಿಧದ ಶಕ್ತಿ ಯಾವಾಗಲೂ ಕಾರ್ಯನಿರತವಾಗಿರುತ್ತದೆ. ಇವಳೇ ಆದ್ಯಾಶಕ್ತಿ. ಮೇಲೆ ಹೇಳಿರುವ ಮೂರೂ ತತ್ತ್ವಗಳು ಮಹಾಶಕ್ತಿಯಲ್ಲಿ ಅಖಂಡವಾಗಿರುತ್ತವೆ’.

೨. ಮೂರು ಮುಖ್ಯ ರೂಪಗಳು

ಆದ್ಯಾಶಕ್ತಿಯು ಕಾರ್ಯಕ್ಕನುಸಾರ ಧರಿಸಿರುವ ರೂಪಗಳು ಮತ್ತು ವೈಶಿಷ್ಟ್ಯಗಳ ಮಾಹಿತಿಯನ್ನು ಕೋಷ್ಟಕದಲ್ಲಿ ಕೊಡಲಾಗಿದೆ.

೩. ಕೆಲವು ಇತರ ಹೆಸರುಗಳು

ಆದಿಶಕ್ತಿ, ಪರಾಶಕ್ತಿ, ಮಹಾಮಾಯಾ, ಕಾಳಿ, ತ್ರಿಪುರಸುಂದರಿ ಮತ್ತು ತ್ರಿಪುರಾ. ಇವುಗಳಲ್ಲಿನ ಕೆಲವು ಶಕ್ತಿಗಳ ವಿಶಿಷ್ಟ ಮಾಹಿತಿಯನ್ನು ಮುಂದೆ ಕೊಡಲಾಗಿದೆ.

ಅ. ಕಾಳಿ : ‘ಮಹಾನಿರ್ವಾಣತಂತ್ರದಲ್ಲಿ ಉಲ್ಲೇಖಿಸಿದಂತೆ ಕಾಳಿಯು (ಆದ್ಯಾ ಶಕ್ತಿಯು) ವಸ್ತುತಃ ಅರೂಪವಾಗಿದ್ದಾಳೆ; ಆದರೆ ಅವಳ ಗುಣ ಮತ್ತು ಕ್ರಿಯೆಗಳಿಗೆ ಅನುಸರಿಸಿ ಅವಳ ರೂಪವನ್ನು ಕಲ್ಪಿಸಲಾಗುತ್ತದೆ. ಯಾವಾಗ ಅವಳು ಸೃಷ್ಟಿಕರ್ಮದಲ್ಲಿ ಮಗ್ನಳಾಗಿರುತ್ತಾಳೆಯೋ ಆಗ ಅವಳು ರಜೋಗುಣೀ ಮತ್ತು ರಕ್ತವರ್ಣದವಳಾಗುತ್ತಾಳೆ; ವಿಶ್ವಸ್ಥಿತಿಯ ಕಾರ್ಯದಲ್ಲಿದ್ದಾಗ ಅವಳು ಸತ್ತ್ವಗುಣೀ ಮತ್ತು ಶ್ವೇತವರ್ಣ ದವಳಾಗುತ್ತಾಳೆ ಮತ್ತು ಸಂಹಾರಕ್ರಿಯೆಯಲ್ಲಿ ತೊಡಗಿದ್ದಾಗ ಅವಳು ತಮೋಗುಣೀ ಮತ್ತು ಕಪ್ಪು ವರ್ಣದವಳಾಗುತ್ತಾಳೆ.

ಆ. ತ್ರಿಪುರಾ : ‘ತ್ರಿಪುರಾ ಪದದ ವ್ಯಾಖ್ಯೆಯು ಹೀಗಿದೆ – ‘ತ್ರೀನ್‌ ಧರ್ಮಾರ್ಥಕಾಮಾನ್‌ ಪುರತಿ ಪುರತೋ ದದಾತೀತಿ |’- ಶಬ್ದಕಲ್ಪದ್ರುಮಅರ್ಥ : ಧರ್ಮ, ಅರ್ಥ ಮತ್ತು ಕಾಮ ಈ ಮೂರು ಪುರುಷಾರ್ಥಗಳನ್ನು ಯಾವ ದೇವಿಯು ಸಾಧಿಸಿಕೊಡುತ್ತಾಳೆಯೋ ಅವಳೇ ತ್ರಿಪುರಾ.

ಇ. ತ್ರಿಪುರಸುಂದರಿ : ತ್ರಿಪುರಸುಂದರಿಯನ್ನು ಶಾಕ್ತರು ‘ಪರಾಶಕ್ತಿ’ ಎಂದು ಕರೆದಿದ್ದಾರೆ. ಉಪಾಸಕರು ತ್ರಿಪುರ ಸುಂದರಿಯ ಉಪಾಸನೆಯನ್ನು ಚಂದ್ರನ ರೂಪದಲ್ಲಿ ಮಾಡುತ್ತಾರೆ. ಚಂದ್ರನ ಹದಿನಾರು ಕಲೆಗಳಿರುತ್ತವೆ. ಒಂದರಿಂದ ಹದಿನೈದನೆಯ ವರೆಗಿನ ಕಲೆಗಳ ಉದಯ ಮತ್ತು ಅಸ್ತವಾಗುತ್ತಿರುತ್ತದೆ; ಆದರೆ ಹದಿನಾರನೆಯ ಕಲೆ (ಷೋಡಶಿ) ಮಾತ್ರ ನಿತ್ಯವಿರುತ್ತದೆ. ಅವಳಿಗೆ ‘ನಿತ್ಯ ಷೋಡಶಿಕಾ’ ಎನ್ನಲಾಗಿದೆ. ಈ ಷೋಡಶಿಯೆಂದರೆ ಸೌಂದರ್ಯ
ಹಾಗೂ ಆನಂದ ಮತ್ತು ಇವುಗಳ ಪರಮಧಾಮವೆಂದರೆ ‘ಮಹಾತ್ರಿಪುರಸುಂದರಿ’.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಶಕ್ತಿ’)