ನವರಾತ್ರಿಯ ಮಹತ್ವ

ನವರಾತ್ರಿ ಎಂದರೆ ಪವಿತ್ರ, ಮಂಗಲಮಯ ಸಂದೇಶ ನೀಡುವ ಉತ್ಸವ !

ಈ ಸಮಯವು ಭಕ್ತರಿಗೆ ದೇವಿಯ ಆರಾಧನೆಗೆ ಬಹಳ ಅನುಕೂಲಕರವಾಗಿರುತ್ತದೆ. ಹಿಂದುಗಳ ಪ್ರತಿಯೊಂದು ಹಬ್ಬವು ಆನಂದವನ್ನು ಪಡೆಯುತ್ತಾ ಭಗವಂತನ ಸಮೀಪ ಹೇಗೆ ಹೋಗುವುದು ? ಎಂಬುದನ್ನು ಕಲಿಸುತ್ತದೆ. ನವರಾತ್ರಿಯ ಪ್ರತಿಯೊಂದು ಧಾರ್ಮಿಕ ಆಚರಣೆಯು ದೇವಿಯ ಆಶೀರ್ವಾದವನ್ನು ಪಡೆಯಲು ಪೂರಕವಾಗಿರಬೇಕು.

ನವರಾತ್ರಿಯ ಇತಿಹಾಸ

೧. ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಭತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ವಧಿಸಿದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.
೨. ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ಕೊಂದನು. ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತಲೂ ೧,೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.

ಹೆಚ್ಚಾಗಿರುವ ಈ ದೇವಿತತ್ತ್ವದ ಲಾಭವನ್ನು ಪಡೆಯಲು ಮುಂದಿನಂತೆ ಮಾಡಬೇಕು.

೧. ನವರಾತ್ರಿಯ ಸಮಯದಲ್ಲಿ ಭಾವಪೂರ್ಣವಾಗಿ ದೇವಿಯ ಆರಾಧನೆಯನ್ನು ಮಾಡಬೇಕು ಮತ್ತು ‘ಶ್ರೀ ದುರ್ಗಾದೇವ್ಯೈ ನಮಃ |’ ಎಂಬ ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು. (ಎಲ್ಲ ದೇವಿಯರು ಆದಿಶಕ್ತಿ ಶ್ರೀ ದುರ್ಗಾದೇವಿಯ ರೂಪಗಳೇ ಆಗಿದ್ದಾರೆ; ಆದುದರಿಂದ ‘ಶ್ರೀ ದುರ್ಗಾದೇವ್ಯೈ ನಮಃ |’ ಎಂಬ ನಾಮಜಪವನ್ನು ಮಾಡಲು ಹೇಳಲಾಗಿದೆ.)
೨. ಈ ಕಾಲದಲ್ಲಿ ಸಂಪೂರ್ಣ ದಿನದಲ್ಲಿ ಆಗಾಗ ಶ್ರೀ ದುರ್ಗಾದೇವಿಗೆ, ‘ಹೇ ಶ್ರೀ ದುರ್ಗಾದೇವಿ, ನಿನ್ನ ಕೃಪೆಯಿಂದ ನವರಾತ್ರೋತ್ಸವದ ಕಾಲದಲ್ಲಿ ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದ ಲಾಭವು ನನಗೆ ಹೆಚ್ಚು ಪ್ರಮಾಣದಲ್ಲಿ ಆಗಲಿ’ ಎಂದು ಪ್ರಾರ್ಥನೆ ಮಾಡಬೇಕು.