ದೇಶದ್ರೋಹದ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ಕಳುಹಿಸಿದ ಸುಪ್ರೀಂಕೋರ್ಟ್ !

ಸುಪ್ರೀಂಕೋರ್ಟ್ ೧೫೨ ವರ್ಷ ಹಳೆಯದಾದ ದೇಶದ್ರೋಹದ ಕಾನೂನನ್ನು ರದ್ದುಗೊಳಿಸುವಂತೆ ಕೋರಿದ ಎಡಿಟರ್ಸ್ ಗಿಲ್ಡ ಆಫ್ ಇಂಡಿಯ, ತೃಣಮೂಲ ಕಾಂಗ್ರೆಸನ ಸಂಸದ ಮಹುಮಾ ಮೊಹಿತ್ರಾ ಇತರ ೫ ಜನರ ಅರ್ಜಿಯನ್ನು ಸುಪ್ರೀಂ ಕೋರ್ಟ್ ೫ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಕಳುಹಿಸಿದೆ

ಸರ್ವೋಚ್ಚ ನ್ಯಾಯಾಲಯ ಮಣಿಪುರ ಸರಕಾರದಿಂದ ಉತ್ತರ ಕೇಳಿದೆ

ಮಣಿಪುರ ಸರಕಾರ ದೇಶದ ಸಂಪಾದಕರ ಸಂಘಟನೆಯಾಗಿರುವ `ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ವಿರುದ್ಧ ದೂರು ದಾಖಲಿಸಿದೆ. ಇದರ ವಿರುದ್ಧ ಈ ಸಂಘಟನೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಈ ಸಂದರ್ಭದಲ್ಲಿ ಮಣಿಪುರ ಸರಕಾರದಿಂದ ಉತ್ತರವನ್ನು ಕೇಳಿದೆ.

ಮೋಸದಿಂದ ಹಿಂದೂಗಳ ಮತಾಂತರವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ !

ಮೋಸದಿಂದ ನಡೆಯುವ ಮತಾಂತರಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರಕ್ಕೆ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕೆಂದು ಒತ್ತಾಯಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಅರ್ಜಿಯನ್ನು ಕರ್ನಾಟಕದ ನ್ಯಾಯವಾದಿ ಜೆರೋಮ್ ಆಂಟೊ ಸಲ್ಲಿಸಿದ್ದರು.

ಸರಕಾರಿ ಅಧಿಕಾರಿಗಳನ್ನು ಅನಗತ್ಯವಾಗಿ ಟೀಕಿಸಬೇಡಿ !- ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದಿಂದ ಉಚ್ಚ ನ್ಯಾಯಾಲಯಗಳಿಗೆ ಸಲಹೆ!

ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯಿಂದ ಕಲಂ ೩೭೦ ರದ್ದುಪಡಿಸಬೇಕಾಯಿತು !

ಫೆಬ್ರುವರಿ ೨೦೧೯ ರಲ್ಲಿ ಪುಲ್ವಾಮಾದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಿಂದ ಜಮ್ಮು ಕಾಶ್ಮೀರದಿಂದ ಕಲಂ ೩೭೦ ರದ್ದು ಪಡಿಸಬೇಕಾಯಿತು, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಮಣಿಪುರ ಹಿಂಸಾಚಾರದ ಮೊಕದ್ದಮೆ ಗೌಹಾತಿ (ಅಸ್ಸಾಂ)ಯಲ್ಲಿ ನಡೆಯಲಿದೆ

ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿ.ಬಿ,ಐ) ದಾಖಲಿಸಿರುವ ಪ್ರಕರಣವನ್ನು ಅಸ್ಸಾಂನ ರಾಜಧಾನಿ ಗೌಹಾತಿಗೆ ವರ್ಗಾಯಿಸಲು ಸುಪ್ರೀ ಕೋರ್ಟ್ ಆದೇಶಿಸಿದೆ.

ಸಾಮಾಜಿಕ ಜಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದರೆ ಪರಿಣಾಮ ಭೋಗಿಸಬೇಕಾಗುವುದು ! – ಸರ್ವೋಚ್ಚ ನ್ಯಾಯಾಲಯ

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ, ಅಸಭ್ಯ ಮತ್ತು ಅವಮಾನಾಸ್ಪದ ಪೋಸ್ಟ್ ಮಾಡುವವರಿಗೆ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ.- ಸರ್ವೋಚ್ಚ ನ್ಯಾಯಾಲಯ

ನ್ಯಾಯಾಲಯಗಳಲ್ಲಿ ಮಹಿಳೆಯರ ಬಗ್ಗೆ ಬಳಸುವ ಆಕ್ಷೇಪಾರ್ಹ ಪದಗಳನ್ನು ಸರ್ವೋಚ್ಚ ನ್ಯಾಯಾಲಯದಿಂದ ನಿಷೇಧ

ಸರ್ವೋಚ್ಚ ನ್ಯಾಯಾಲಯವು ‘ನ್ಯಾಯಾಲಯದಲ್ಲಿ ಯುಕ್ತಿವಾದ ಮತ್ತು ತೀರ್ಪುಗಳಲ್ಲಿ ‘ವೇಶ್ಯೆ’ ಮತ್ತು ‘ಸೂಳೆ’ ‘ಈ ರೀತಿಯ ಪದಗಳನ್ನು ಉಪಯೋಗಿಸಬಾರದು’, ಎಂದು ಹೇಳಿದೆ.

ಗೋಧ್ರಾ ಹತ್ಯಾಕಾಂಡ ಪ್ರಕರಣ: ಸರ್ವೋಚ್ಚ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮುಸ್ಲಿಮರ ಜಾಮೀನು ಅರ್ಜಿ ತಿರಸ್ಕೃತ !

ಫೆಬ್ರವರಿ 27, 2002 ರಂದು ಗುಜರಾತ್‌ನ ಗೋಧ್ರಾದಲ್ಲಿನ ಸಾಬರಮತಿ ಎಕ್ಸ್‌ಪ್ರೆಸ್ ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶೌಕತ್ ಯೂಸುಫ್, ಬಿಲಾಲ್ ಅಬ್ದುಲ್ಲಾ ಮತ್ತು ಸಿದ್ದಿಕಿ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಶ್ರೀಕೃಷ್ಣಜನ್ಮಭೂಮಿ ಮುಕ್ತಿ ನಿರ್ಮಾಣ ನ್ಯಾಸ’ದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಪ್ರಸ್ತುತ ವಾರಣಾಸಿಯಲ್ಲಿನ ಜ್ಞಾನವಾಪಿಯ ಪರಿಸರದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಇಂತಹದರಲ್ಲೇ ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮ ಭೂಮಿಯ ಕುರಿತು ಇದೇ ರೀತಿಯ ಸಮೀಕ್ಷೆ ನಡೆಯಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.