ಸಾಮಾಜಿಕ ಜಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದರೆ ಪರಿಣಾಮ ಭೋಗಿಸಬೇಕಾಗುವುದು ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ, ಅಸಭ್ಯ ಮತ್ತು ಅವಮಾನಾಸ್ಪದ ಪೋಸ್ಟ್ ಮಾಡುವವರಿಗೆ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ. ಇಂತಹ ಜನರು ಕ್ಷಮೆಯಾಚಿಸಿ ಕ್ರಿಮಿನಲ್ ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಅವರ ಕೃತ್ಯದ ಪರಿಣಾಮ ಭೋಗಿಸ ಬೇಕಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಕುರಿತು, ನ್ಯಾಯಾಲಯವು ತಮಿಳುನಾಡಿನ ನಾಯಕ ಮತ್ತು ಮಾಜಿ ಶಾಸಕ ಎಸ್.ವಿ. ಶೇಖರ್ ಇವರ ವಿರುದ್ಧ ದಾಖಲಿಸಲಾಗಿರುವ ಅರ್ಜಿಯನ್ನು ರದ್ದುಪಡಿಸಲು ನಿರಾಕರಿಸಿದೆ. ೨೦೧೮ ರಲ್ಲಿ ಶೇಖರ್ ಇವರು ಮಹಿಳಾ ಪತ್ರಕರ್ತೆಯ ಸಂದರ್ಭದಲ್ಲಿ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡುವ ಪೋಸ್ಟ್ ಪ್ರಸಾರ ಮಾಡಿರುವುದರ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.

ಓರ್ವ ಮಹಿಳಾ ಪತ್ರಕರ್ತೆಯು ತಮಿಳುನಾಡಿನ ತತ್ಕಾಲಿನ ರಾಜ್ಯಪಾಲ ಬನವಾರಿಲಾಲ್ ಪುರೋಹಿತ್ ಇವರ ಬಗ್ಗೆ, ಅವರು ನನ್ನ ಕೆನ್ನೆಗೆ ಸ್ಪರ್ಶ ಮಾಡಿದರು’, ಎಂದು ಆರೋಪಿಸಿದ್ದರು. ಮಹಿಳಾ ಪತ್ರಕರ್ತೆಯ ಈ ಆರೋಪದ ಸಂದರ್ಭದಲ್ಲಿ ಶೇಖರ್ ಇವರು ಫೇಸ್ ಬುಕ್ ನಲ್ಲಿ ಅಭಿಪ್ರಾಯ ಮಂಡಿಸಿದ್ದರು. ಅವರ ಪೋಸ್ಟ್ ನಿಂದ ವಿವಾದ ನಡೆಯಿತು. ದ್ರಾವಿಡ ಮುನ್ನೆತ್ರಿ ಕಳಗಂ ಇವರು ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ನಂತರ ಶೇಖರ್ ಇವರು ಕ್ಷಮೆ ಯಾಚಿಸಿ ಪೋಸ್ಟ್ ಡಿಲೀಟ್ ಕೂಡ ಮಾಡಿದರು. ಆದರೆ ಈ ಪೋಸ್ಟ್ ಬಗ್ಗೆ ತಮಿಳುನಾಡಿನಲ್ಲಿ ಅವರ ವಿರುದ್ಧ ಅನೇಕ ದೂರುಗಳು ದಾಖಲಾಗಿದ್ದವು.