ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯಿಂದ ಕಲಂ ೩೭೦ ರದ್ದುಪಡಿಸಬೇಕಾಯಿತು !

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಸ್ಪಷ್ಟ ನಿಲುವು !

ದೆಹಲಿ – ಫೆಬ್ರುವರಿ ೨೦೧೯ ರಲ್ಲಿ ಪುಲ್ವಾಮಾದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಿಂದ ಜಮ್ಮು ಕಾಶ್ಮೀರದಿಂದ ಕಲಂ ೩೭೦ ರದ್ದು ಪಡಿಸಬೇಕಾಯಿತು, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಕಲಂ ೩೭೦ ರದ್ದುಪಡಿಸಿರುವುದರ ವಿರುದ್ಧ ದಾಖಲಿಸಲಾಗಿರುವ ಅರ್ಜಿಯ ಕುರಿತಾದ ವಿಚಾರಣೆಯ ಸಮಯದಲ್ಲಿ ಕೇಂದ್ರ ಸರಕಾರದಿಂದ ತನ್ನ ಯುಕ್ತಿವಾದ ಮಂಡಿಸಲಾಯಿತು.

ಜಮ್ಮು ಕಾಶ್ಮೀರದಲ್ಲಿನ ‘ನ್ಯಾಷನಲ್ ಕಾನ್ಫರೆನ್ಸ್’ ಮತ್ತು ‘ಪೀಪಲ್ಸ್ ಡೆಮೋಕ್ರಟಿಕ್ ಪಾರ್ಟಿ’ ( ಪಿಡಿಪಿ) ಇಂದ ಕೇಂದ್ರ ಸರಕಾರವು ೩೭೦ ನೇ ಕಲಂ ರದ್ದುಪಡಿಸುವ ನಿರ್ಣಯದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ೧೧ ದಿನಗಳಿಂದ ಈ ಅರ್ಜಿಯ ಕುರಿತು ವಿಚಾರಣೆ ನಡೆಯುತ್ತಿದೆ. ಆಗಸ್ಟ್ ೨೮ ರಂದು ನಡೆದಿರುವ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹಿತ ಇವರು ಕೇಂದ್ರ ಸರಕಾರದ ಪರ ಯುಕ್ತಿವಾದ ಮಂಡಿಸಿದರು. ‘ಫೆಬ್ರವರಿ ೧೪, ೨೦೧೯ ರಂದು ಪುಲ್ವಾಮದಲ್ಲಿ ಕೇಂದ್ರ ಅರೆ ಸೇನಾ ಪಡೆಯ (ಸಿ.ಆರ್.ಪಿ.ಎಫ್.) ಸೈನಿಕರ ತಂಡದ ಮೇಲೆ ನಡೆದಿರುವ ದಾಳಿಯ ನಂತರ ಕೇಂದ್ರ ಸರಕಾರದಿಂದ ಕಲಂ ೩೭೦ ರದ್ದುಪಡಿಸುವ ನಿರ್ಣಯ ತೆಗೆದುಕೊಂಡಿತು.

ಜಮ್ಮು ಕಾಶ್ಮೀರದ ವಿಶೇಷ ರಾಜ್ಯದ ಸ್ಥಾನಮಾನ ತೆರವುಗೊಳಿಸಿ ಅದನ್ನು ಭಾರತದಲ್ಲಿ ಸಮಾವೇಶಗೊಳಿಸುವುದು ಮತ್ತು ದೇಶದ ಸಾರ್ವಭೌಮತ್ವ ಕಾಪಾಡುವುದು ಇದೇ ಇದರ ಹಿಂದಿನ ಎರಡು ಮುಖ್ಯ ಉದ್ದೇಶವಾಗಿತ್ತು’, ಎಂದು ಸಾಲಿಸಿಟರ್ ಜನರಲ್ ಮೆಹತಾ ಇವರು ಸ್ಪಷ್ಟಪಡಿಸಿದರು.