ನ್ಯಾಯಾಲಯಗಳಲ್ಲಿ ಮಹಿಳೆಯರ ಬಗ್ಗೆ ಬಳಸುವ ಆಕ್ಷೇಪಾರ್ಹ ಪದಗಳನ್ನು ಸರ್ವೋಚ್ಚ ನ್ಯಾಯಾಲಯದಿಂದ ನಿಷೇಧ

ನವ ದೆಹಲಿ – ನ್ಯಾಯಾಲಯದಲ್ಲಿ ಮಹಿಳೆಯರ ಬಗ್ಗೆ ಬಳಸುವ ಆಕ್ಷೇಪಾರ್ಹ ಪದಗಳನ್ನು ಸರ್ವೋಚ್ಚ ನ್ಯಾಯಾಲಯ ನಿಷೇಧಿಸಿದೆ. ಮಹಿಳೆಯರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ‘ನ್ಯಾಯಾಲಯದಲ್ಲಿ ಯುಕ್ತಿವಾದ ಮತ್ತು ತೀರ್ಪುಗಳಲ್ಲಿ ‘ವೇಶ್ಯೆ’ ಮತ್ತು ‘ಸೂಳೆ’ ‘ಈ ರೀತಿಯ ಪದಗಳನ್ನು ಉಪಯೋಗಿಸಬಾರದು’, ಎಂದು ಹೇಳಿದೆ. ಇದಕ್ಕಾಗಿ ಭಾರತದ ಮುಖ್ಯನ್ಯಾಯಾಧೀಶ ಡಿ.ವೈ. ಚಂದ್ರಚೂಡರವರು ಅಗಸ್ಟ 16, 2023 ರಂದು ಹೊಸ ಪದಗಳು ಮತ್ತು ವಾಕ್ಯಗಳ ಸಹಿತ ‘ಲಿಂಗ ಸ್ಟೀರಿಯೋ ಟೈಪ್’ ಎಂಬ ಪುಸ್ತಕವನ್ನು ಪ್ರಕಟಿಸಿದರು. ನ್ಯಾಯಾಧೀಶ ಮತ್ತು ವಕೀಲರಿಗೆ ಉಪಯುಕ್ತವಾಗುವುದೆ೦ದು ಮುಖ್ಯ ನ್ಯಾಯಾಧೀಶರು ಹೇಳಿದರು.