ಸಂಪಾದಕೀಯ : ಹಿಂದೂಗಳ ದೌರ್ಭಾಗ್ಯ !
ಸದ್ಯ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಉತ್ಸವ ೧೪೪ ವರ್ಷಗಳ ನಂತರ ಬಂದಿರುವುದರಿಂದ ಅದು ‘ಮಹಾಕುಂಭಮೇಳ’ವಾಗಿದೆ. ಸೂರ್ಯ ಮತ್ತು ಗುರು ಗ್ರಹಗಳು ೧೪೪ ವರ್ಷಗಳಿಗೊಮ್ಮೆ ಸಂಪರ್ಕಿಸುವ ವಿಶಿಷ್ಟ ರಾಶಿಗಳ ಸಂಬಂಧದಿಂದ ಈ ಯೋಗ ಬರುತ್ತದೆ.
ಸದ್ಯ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಉತ್ಸವ ೧೪೪ ವರ್ಷಗಳ ನಂತರ ಬಂದಿರುವುದರಿಂದ ಅದು ‘ಮಹಾಕುಂಭಮೇಳ’ವಾಗಿದೆ. ಸೂರ್ಯ ಮತ್ತು ಗುರು ಗ್ರಹಗಳು ೧೪೪ ವರ್ಷಗಳಿಗೊಮ್ಮೆ ಸಂಪರ್ಕಿಸುವ ವಿಶಿಷ್ಟ ರಾಶಿಗಳ ಸಂಬಂಧದಿಂದ ಈ ಯೋಗ ಬರುತ್ತದೆ.
ಒಂದು ವೇಳೆ ಗುರು ಕುಂಭ ರಾಶಿಯಲ್ಲಿದ್ದರೆ, ಸೂರ್ಯ ಮೇಷ ರಾಶಿಯಲ್ಲಿದ್ದರೆ, ಹರಿದ್ವಾರದಲ್ಲಿ; ಗುರು ಮೇಷ ರಾಶಿಯಲ್ಲಿದ್ದರೆ, ಸೂರ್ಯ ಮಕರ ರಾಶಿಯಲ್ಲಿದ್ದರೆ ಪ್ರಯಾಗದಲ್ಲಿ; ಗುರು ಸಿಂಹ ರಾಶಿಯಲ್ಲಿದ್ದರೆ ಸೂರ್ಯ ಮೇಷ ರಾಶಿಯಲ್ಲಿದ್ದರೆ, ಆಗ ನಾಶಿಕದ ತ್ರ್ಯಂಬಕೇಶ್ವರದಲ್ಲಿ ಕುಂಭಮೇಳ ಆಚರಿಸಲಾಗುತ್ತದೆ.
ಪ್ರಯಾಗರಾಜದಲ್ಲಿ ಜನವರಿ ೧೩ ರಿಂದ ಫೆಬ್ರವರಿ ೨೬, ೨೦೨೫ ರ ಕಾಲಾವಧಿಯಲ್ಲಿ ನಡೆಯಲಿದೆ. ಈ ಸಮಯದಲ್ಲಿ ಮುಖ್ಯ ಪರ್ವಕಾಲವು ಜನವರಿ ೧೪, ೨೯ ಮತ್ತು ಫೆಬ್ರವರಿ ೩ ರಂದು ಇರಲಿದೆ.