ಜರ್ಮನಿಯಲ್ಲಿ ಚಾಕೂನಿಂದ ದಾಳಿ ನಡೆಸಿದ ಯುವಕ : ಕೆಲವರ ಸಾವು !

ಜರ್ಮನಿಯ ವುರ್ಜಬರ್ಗ್ ಪಟ್ಟಣದ ಬಾರ್ಬಾರೊಸಾ ವೃತ್ತದಲ್ಲಿ ಜೂನ್ ೨೬ ರಂದು ಸಂಜೆ ಓರ್ವ ಯುವಕನು ಚಾಕೂವಿನಿಂದ ದಾಳಿ ನಡೆಸಿದಾಗ ಕೆಲವರು ಸಾವನ್ನಪ್ಪಿದರು, ಹಾಗೂ ಕೆಲವರು ಗಾಯಗೊಂಡರು. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡ ನಂತರ ಆತನನ್ನು ಬಂಧಿಸಲಾಯಿತು.

ವಲಸಾಡ (ಗುಜರಾತ) ನಲ್ಲಿ, ಕಟುಕರಿಂದ ಗೋರಕ್ಷಕನ ಮೇಲೆ ವಾಹನ ಓಡಿಸಿ ಹತ್ಯೆ !

ಧರ್ಮಪುರ-ವಲಸಾಡ ರಸ್ತೆಯಲ್ಲಿ ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಟುಕರು ೨೯ ವರ್ಷದ ಹಾರ್ದಿಕ ಕಂಸಾರಾ ಇವರ ಮೇಲೆ ವಾಹನ ಓಡಿಸಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ೧೦ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾರ್ದಿಕ ಕಂಸಾರಾ ಇವರು ಅಕ್ರಮವಾಗಿ ಗೋಸಾಗಾಟವನ್ನು ತಡೆಯಲು ಯತ್ನಿಸುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಯಿತು.

ಕೆನಡಾದಲ್ಲಿ ಚರ್ಚ್ ನಡೆಸುವ ಶಾಲೆಯೊಂದರ ಆವರಣದಲ್ಲಿ ಹೂಳಿದ್ದ ೨೧೫ ಮಕ್ಕಳ ಶವಗಳು ಪತ್ತೆ !

ಇಲ್ಲಿನ ಕ್ಯಮೆಲೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಶಾಲಾ ಮೈದಾನದಲ್ಲಿ ೨೧೫ ಮಕ್ಕಳ ಶವಗಳನ್ನು ಹೂಳಿರುವ ಮಾಹಿತಿಯು ಬೆಳಕಿಗೆ ಬಂದಿದೆ. ನೆಲದೊಳಗಿನ ವಸ್ತುಗಳನ್ನು ಹುಡುಕುವ ರಾಡಾರ್‌ನಲ್ಲಿ ಈ ಶವಗಳು ಪತ್ತೆಯಾಗಿವೆ. ಈ ಶಾಲೆ ಒಂದು ಕಾಲದಲ್ಲಿ ಕೆನಡಾದ ಅತಿದೊಡ್ಡ ಶಾಲೆಯಾಗಿತ್ತು. ಇಲ್ಲಿ ಇನ್ನೂ ಹೆಚ್ಚಿನ ಮೃತದೇಹಗಳು ಪತ್ತೆಯಾಗಬಹುದು