ಅಲ್ಲಾಹನ ಹೆಸರಿನಲ್ಲಿ ಬಾಂಗ್ಲಾದೇಶದ ಮಸೀದಿಗಳಲ್ಲಿ ಮತ್ತು ಮದರಸಾಗಳಲ್ಲಿ ಪ್ರತಿದಿನ ಅತ್ಯಾಚಾರ ನಡೆಯುತ್ತದೆ ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರಿನ್ ಅವರ ಆರೋಪ

ಬಾಂಗ್ಲಾದೇಶದ ಮಸೀದಿ ಮತ್ತು ಮದರಸಾಗಳಲ್ಲಿ ಪ್ರತಿದಿನ ಅತ್ಯಾಚಾರ ನಡೆಯುತ್ತಿದೆ. ಅಲ್ಲಾಹನ ಹೆಸರಿನಲ್ಲಿ ಅತ್ಯಾಚಾರ ನಡೆಯುತ್ತಿದೆ. ಮದರಸಾದಲ್ಲಿ ಅತ್ಯಾಚಾರಿ ಶಿಕ್ಷಕ ಮತ್ತು ಮಸೀದಿಯಲ್ಲಿ ಅತ್ಯಾಚಾರಿ ಇಮಾಮ್ ಅವರಿಗೆ ದಿನಕ್ಕೆ ಐದು ಬಾರಿ ನಮಾಜ ಪಠಣ ಮಾಡಿದರೆ, ಅಲ್ಲಾಹನು ಅವರನ್ನು ಕ್ಷಮಿಸುವನು ಮತ್ತು ಅವರು ಈ ಪಾಪದಿಂದ ಮುಕ್ತರಾಗುತ್ತಾರೆ ಎಂದು ಭಾವಿಸುತ್ತಾರೆ ಎಂದು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಲೇಖಕಿ ತಸ್ಲೀಮಾ ನಸ್ರಿನ್ ಟ್ವೀಟ್ ಮಾಡಿದ್ದಾರೆ.

ಎಲ್ಲಾ ಭಯೋತ್ಪಾದಕರು ಮದರಸಾಗಳಲ್ಲಿ ಬೆಳೆದ ಕಾರಣ ಮದರಸಾಗಳನ್ನು ಮುಚ್ಚಬೇಕು ! – ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್

ಎಲ್ಲ ಜಿಹಾದಿ ಭಯೋತ್ಪಾದಕರು ಮದರಸಾಗಳಲ್ಲಿ ಬೆಳೆದಿದ್ದಾರೆ. ಆದ್ದರಿಂದ ಅವುಗಳನ್ನು ಮುಚ್ಚಬೇಕು ಎಂದು ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಸರ್ಕಾರಿ ಹಣದಿಂದ ಮದರಸಾ ನಡೆಸಬಾರದು ಎಂದಾದರೆ ಕುಂಭಮೇಳವೂ ಬೇಡ !’(ವಂತೆ) – ಕಾಂಗ್ರೆಸ್‌ನ ನಾಯಕ ಉದಿತ್ ರಾಜ್

ಸರಕಾರದ ಹಣವನ್ನು ಯಾವುದೇ ಧಾರ್ಮಿಕ ಕಾರ್ಯಗಳಿಗೆ ಬಳಸಬಾರದು. ಇದು ತಪ್ಪಾಗಿದೆ. ಅಸ್ಸಾಂನ ಸರಕಾರ ಸರಕಾರಿ ಬೊಕ್ಕಸದಿಂದ ಸರಕಾರಿ ಮದರಸಾಗಳನ್ನು ನಡೆಸದಿರಲು ನಿರ್ಧರಿಸಿದೆ. ಅದರಂತೆ ಉತ್ತರಪ್ರದೇಶ ಸರಕಾರವು ಕುಂಭಮೇಳದ ಆಯೋಜನೆಗೆ ೪ ಸಾವಿರದ ೨೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಬಾರದು, ಎಂದು ಕಾಂಗ್ರೆಸ್‌ನ ಮುಖಂಡ ಹಾಗೂ ಮಾಜಿ ಸಂಸದ ಉದಿತ ರಾಜ್ ಟ್ವೀಟ್ ಮಾಡಿದ್ದಾರೆ.

ಮದರಸಾಗಳಲ್ಲಿ ಭಯೋತ್ಪಾದಕರ ಹಣ ಇರುವುದರಿಂದ ಎಲ್ಲ ಮದರಸಾಗಳನ್ನು ಮುಚ್ಚಬೇಕು !

ಮದರಸಾಗಳಲ್ಲಿ ಭಯೋತ್ಪಾದಕರ ಹಣವಿರುತ್ತದೆ. ಅದರಲ್ಲಿ ಭಯೋತ್ಪಾದಕರನ್ನು ಹುಟ್ಟುಹಾಕುವ ಕಟ್ಟರವಾದಿ ದೇಶಗಳ ಹಣವಿದೆ. ಆದ್ದರಿಂದ ದೇಶದ ಎಲ್ಲ ಮದರಸಾಗಳನ್ನು ಮುಚ್ಚಬೇಕು ಹಾಗೂ ಅಲ್ಲಿ ಶಾಲಾ ಶಿಕ್ಷಣವನ್ನು ಪ್ರಾರಂಭಿಸಬೇಕು, ಎಂದು ಶಿಯಾ ವಕ್ಫ್ ಬೋರ್ಡ್‌ನ ಅಧ್ಯಕ್ಷ ವಾಸಿಮ್ ರಿಜ್ವಿ ಒತ್ತಾಯಿಸಿದ್ದಾರೆ.

ಸರಕಾರಿ ಹಣದಿಂದ ‘ಕುರಾನ್’ನ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಎಲ್ಲಾ ಸರಕಾರಿ ಮದರಸಾಗಳನ್ನು ಮುಚ್ಚಲಾಗುವುದು ! – ಅಸ್ಸಾಂನ ಭಾಜಪ ಸರಕಾರದ ನಿರ್ಧಾರ

ಅಸ್ಸಾಂನ ಭಾಜಪ ಸರಕಾರವು ನವೆಂಬರ್‌ನಿಂದ ರಾಜ್ಯದ ಎಲ್ಲಾ ಸರಕಾರಿ ಮದರಸಾಗಳನ್ನು ಮುಚ್ಚಲಿದೆ ಎಂದು ಅಸ್ಸಾಂ ಆರೋಗ್ಯ ಮತ್ತು ಶಿಕ್ಷಣ ಸಚಿವ ಹಿಮಂತ್ ಬಿಸ್ವ ಸರಮಾ ಇವರು ಮಾಹಿತಿ ನೀಡಿದ್ದಾರೆ. ‘ಸರಕಾರಿ ಹಣದಿಂದ ‘ಕುರಾನ್’ನ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.

ಗುಜರಾತ್‌ನಲ್ಲಿ ಸತತ ೪ ವರ್ಷ ಲೈಂಗಿಕ ಶೋಷಣೆಯನ್ನು ಮಾಡಿದ ಮದರಸಾದ ಮೌಲಾನಾನ ಬಂಧನ

ಇಲ್ಲಿಯ ನಖತರಾಣಾ ತಾಲೂಕಿನ ನಾರಾ ಗ್ರಾಮದಲ್ಲಿಯ ಮದರಸಾದ ಶಿಕ್ಷಕ ಮೌಲಾನಾ ಸಮದುದ್ದೀನ ಹಾಜಿ ಸುಲೆಮಾನ ಜಾಟ ಈತನು ಓರ್ವ ವಿದ್ಯಾರ್ಥಿನಿಯನ್ನು ಸತತ ೪ ವರ್ಷಗಳಿಂದ ಲೈಂಗಿಕ ಶೋಷಣೆಯನ್ನು ಮಾಡಿರುವ ಘಟನೆ ನಡೆದಿದೆ.

ಉತ್ತರಪ್ರದೇಶದ ಮದರಸಾದ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ

ಉತ್ತರಪ್ರದೇಶದ ಮದರಸಾದಲ್ಲಿ ಆಗಿರುವ ಎಲ್ಲ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ, ಎಂದು ರಾಜ್ಯದ ಅಲ್ಪಸಂಖ್ಯಾತ ಖಾತೆಯ ಸಚಿವ ಮೊಹಸೀನ ರಜಾ ಇವರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಸರಕಾರ ಇರುವಾಗ ಮದರಸಾದಲ್ಲಿ ಆದಂತಹ ನೇಮಕದ ಬಗ್ಗೆ ತನಿಖೆ ನಡೆಯಲಿದೆ.