ಪಂಜಶೀರ ಪ್ರಾಂತ್ಯದ ಮೇಲೆ ದಾಳಿ ಮಾಡಿದ ೩೫೦ ತಾಲಿಬಾನೀ ಉಗ್ರರು ಹತ ! – ನಾರ್ದನ್ ಅಲಯೆನ್ಸ್ ನ ದಾವೆ

ಬಂಧನದಲ್ಲಿರುವ ತಾಲಿಬಾನ್ ಉಗ್ರರು

ಕಾಬುಲ(ಅಫಘಾನಿಸ್ತಾನ) – ಅಫಫ್ಘಾನಿಸ್ತಾನದ ಪಂಜಶೀರ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ತಾಲಿಬಾನಿಗಳು ಖಾವಕ ಎಂಬಲ್ಲಿ ಮಾಡಿರುವ ದಾಳಿಯಲ್ಲಿ ತಾಲಿಬಾನಿನ ೩೫೦ ಉಗ್ರರು ಹತರಾಗಿದ್ದು, ಹಾಗೂ ೪೦ ಉಗ್ರರನ್ನು ಬಂಧಿಸಿರುವುದಾಗಿ ನಾರ್ದನ್ ಅಲಯೆನ್ಸ್ (ತಾಲಿಬಾನರ ವಿರೋಧದಲ್ಲಿ ಸ್ಥಾಪಿಸಲಾಗಿರುವ ‘ಉತ್ತರಿ ಮಿತ್ರ ಪಕ್ಷ’) ದಾವೆ ಮಾಡಿದೆ. ತಾಲಿಬಾನಿಗಳ ಈ ದಾಳಿಯನ್ನು ಹಿಮ್ಮೆಟ್ಟಿಸಿದ ನಂತರ ನಾರ್ದನ್ ಅಲಯೆನ್ಸ್ ನ ಸೈನಿಕರು ತಾಲಿಬಾನಿಗಳು ಉಪಯೋಗಿಸುತ್ತಿದ್ದ ಅಮೆರಿಕಾ ಸೈನ್ಯದ ವಾಹನಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ತಾಲಿಬಾನಿಗಳು ಪಂಜಶಿರನ ಮೇಲೆ ದಾಳಿ ಮಾಡುತ್ತಿದ್ದಾರೆ. ತಾಲಿಬಾನಿಗಳು ಹೆಚ್ಚುಕಡಿಮೆ ಪೂರ್ಣ ಅಫಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದರೂ ಅದಕ್ಕೆ ಈವರೆಗೆ ಪಂಜಶಿರ ಪ್ರಾಂತ್ಯದ ಮೇಲೆ ನಿಯಂತ್ರಣ ಸಾಧಿಸಲು ಆಗಿಲ್ಲ. ನಾರ್ದನ್ ಅಲಯೆನ್ಸ್ ನ ಅಹಮದ್ ಮಸೂದ್ ಇವನ ನೇತೃತ್ವದಲ್ಲಿ ತಾಲಿಬಾನಿಗಳ ವಿರುದ್ಧ ಸಂಘರ್ಷ ಮಾಡಲಾಗಿದೆ.

ಅಫಘಾನಿಸ್ತಾನದ ಮಾಜಿ ಉಪರಾಷ್ಟ್ರಪತಿ ಅಮರುಲ್ಲಾಹ ಸಾಲೆಹ ಮತ್ತು ಅಫಘಾನಿಸ್ತಾನ ಸೈನ್ಯದ ಕೆಲವು ಅಧಿಕಾರಿಗಳು ಮತ್ತು ಸೈನಿಕರು ಇವರಿಗೆ ಸಹಾಯ ಮಾಡುತ್ತಿದ್ದಾರೆ.