ಪಾಕಿಸ್ತಾನದಲ್ಲಿ ಕೃಷ್ಣ ಜಯಂತಿಯನ್ನು ಆಚರಿಸುತ್ತಿದ್ದ ಹಿಂದೂಗಳ ಮೇಲೆ ಮತಾಂಧರಿಂದ ಆಕ್ರಮಣ !

ಶ್ರೀಕೃಷ್ಣನ ಮೂರ್ತಿಯನ್ನು ಒಡೆದುಹಾಕಿದ ಮತಾಂಧರು

  • ಪಾಕಿಸ್ತಾನದ ಪ್ರಧಾನಮಂತ್ರಿಗಳು ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ, ಹಾಗೆಯೇ ಭಾರತದಲ್ಲಿರುವ ಅಲ್ಪಸಂಖ್ಯಾತರ ಮೇಲಾಗುತ್ತಿರುವ ತಥಾಕಥಿತ ಅತ್ಯಾಚಾರಗಳ ಮೇಲೆ ಸಂತಾಪ ವ್ಯಕ್ತಪಡಿಸುತ್ತಿರುತ್ತಾರೆ. ಅವರು ತಮಗೆ ಇಂತಹ ಘಟನೆಗಳನ್ನು ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವರು ಹೇಳಬೇಕು !
  • ಪಾಕಿಸ್ತಾನದಲ್ಲಿನ ಹಿಂದೂ ದೇವಸ್ಥಾನಗಳ ಮತ್ತು ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರವು ಪಾಕಿಸ್ತಾನದ ವಿರುದ್ಧ ಕಠೋರ ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ !
  • ಭಾರತದಲ್ಲಿ ಗುಂಪು ಗಲಭೆಯಲ್ಲಿ ಅಖಲಾಖ ಎಂಬ ಹೆಸರಿನ ಮುಸಲ್ಮಾನ ವ್ಯಕ್ತಿಯು ಮೃತನಾದ ನಂತರ ಬಾಯಿ ಬಡಿದುಕೊಳ್ಳುವ ಜಗತ್ತಿನ ಮಾನವತಾವಾದಿ ಕಾರ್ಯಕರ್ತರು ಪಾಕಿಸ್ತಾನದಲ್ಲಿ ಸಾವಿರಾರು ಹಿಂದೂಗಳ ಹತ್ಯೆಯಾಗುತ್ತಿರುವಾಗ ಮತ್ತು ಅವರ ದೇವಸ್ಥಾನಗಳ ವಿಧ್ವಂಸವಾಗುತ್ತಿರುವಾಗ ಶಾಂತವಾಗಿ ಇರುತ್ತಾರೆ. ಇದರಿಂದ ಅವರ ಮಾನವಾಧಿಕಾರದ ಪ್ರೀತಿಯು ಕೇವಲ ತೋರಿಕೆಯದ್ದಾಗಿದೆ ಮತ್ತು ಅವರಿಗೆ ಕೇವಲ ಹಿಂದೂದ್ವೇಷದ ತುರಿಕೆಯನ್ನು ಶಮನಗೊಳಿಸಬೇಕಾಗಿದೆ ಎಂಬುದು ಗಮನಕ್ಕೆ ಬರುತ್ತದೆ !

(ಈ ಚಿತ್ರವನ್ನು ಹಾಕಿರುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ)

ಇಸ್ಲಾಮಾಬಾದ – ಪಾಕಿಸ್ತಾನದ ಸಿಂಧನಲ್ಲಿರುವ ಸಂಘರ ಜಿಲ್ಲೆಯಲ್ಲಿನ ಖಿಪ್ರೋ ಈ ಪ್ರದೇಶದಲ್ಲಿ ಮತಾಂಧರು ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ಮಂದಿರದಲ್ಲಿ ಪೂಜೆ ಮಾಡುತ್ತಿದ್ದ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾ ಅವರನ್ನು ಥಳಿಸಿದರು. ಹಾಗೆಯೇ ಅಲ್ಲಿನ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಒಡೆದುಹಾಕಿದರು. ಈ ಘಟನೆಯ ನಂತರ ಇಲ್ಲಿನ ಪರಿಸರದಲ್ಲಿ ಒತ್ತಡದ ವಾತಾವರಣವು ನಿರ್ಮಾಣವಾಗಿದೆ. ಈ ಪರಿಸರದಲ್ಲಿ ಪೊಲೀಸರನ್ನು ನೇಮಿಸಲಾಗಿದೆ; ಆದರೆ ಇಲ್ಲಿಯವರೆಗೆ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ ಎಂಬ ಮಾಹಿತಿಯನ್ನು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮಾನವಾಧಿಕಾರಿಗಳಿಗಾಗಿ ಕಾರ್ಯನಿರತವಾಗಿರುವ ರಾಹತ ಆಸ್ಟಿನ್ ಇವರು ಟ್ವೀಟ್ ಮಾಡಿದ್ದಾರೆ.

1. ಸಾಮಾಜಿಕ ಮಾಧ್ಯಮಗಳಿಂದ ಈ ವಿಧ್ವಂಸದ ಛಾಯಾಚಿತ್ರಗಳು ಪ್ರಸಾರಿತವಾಗಿವೆ. ಇವುಗಳಲ್ಲಿ ಹಿಂದೂ ಭಕ್ತರನ್ನು ಹೊಡೆಯುತ್ತಿರುವುದು ಕಂಡುಬರುತ್ತಿದೆ.

2. ‘ದ ರಾಯಿಸ್’ ಈ ವಾರ್ತಾ ಸಂಸ್ಥೆಯ ಸಂಪಾದಕಿ ಹಾಗೂ ಪತ್ರಕರ್ತೆ ವಿಂಗಾಸ್ ಇವರು ಟ್ವೀಟ್ ಮಾಡಿ ‘ಖಿಪ್ರೊನಲ್ಲಿ ಶ್ರೀಕೃಷ್ಣ ಜಯಂತಿಯಂದು ಅನೇಕ ಜನರು ವಿಧ್ವಂಸ ಮಾಡಿದ್ದಾರೆ. ಈ ಘಟನೆಯಲ್ಲಿನ ಆರೋಪಿಗಳಿಗೆ ಶಿಕ್ಷೆಯಾಗುವುದೇ?’ ಎಂದು ಪ್ರಶ್ನಿಸಿದ್ದಾರೆ.

3. ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಹಿಂದೂಗಳನ್ನು ಥಳಿಸುವುದು ಅಥವಾ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು ಸಾಮಾನ್ಯ ಸಂಗತಿಯಾಗಿದೆ. ಈ ತಿಂಗಳ ಆರಂಭದಲ್ಲಿ ಲಾಹೋರಿನಿಂದ ಸುಮಾರು 590 ಕಿಲೋಮೀಟರ್ ದೂರದಲ್ಲಿರುವ ರಹೀಮ ಯಾರ ಖಾನ ಜಿಲ್ಲೆಯಲ್ಲಿನ ಭೊಂಗ ನಗರದಲ್ಲಿ ನೂರಾರು ಮತಾಂಧರು ಶ್ರೀ ಗಣಪತಿ ದೇವಸ್ಥಾನವನ್ನು ಒಡೆದು ಹಾಕಿದ್ದರು.

4. 2020ರಲ್ಲಿ ಸಿಂಧನಲ್ಲಿನ ಥಾರಪಾರಕರ ಜಿಲ್ಲೆಯಲ್ಲಿನ ನಾಗಾರಪಾರಕರದಲ್ಲಿ ಮತಾಂಧರು ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಒಡೆದು ಹಾಕಿದ್ದರು. ಹಾಗೆಯೇ ಸಪ್ಟೆಂಬರ್ 2020ರಲ್ಲಿ ಇದೇ ಪ್ರಾಂತ್ಯದಲ್ಲಿನ ಬಾದಿನ ಜಿಲ್ಲೆಯಲ್ಲಿ ಒಂದು ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು.

5. ಕಳೆದ ವರ್ಷ ಸಿಂಧನಲ್ಲಿ ಮಾತಾ ರಾಣಿ ಭಟಿಯಾನಿ ದೇವಸ್ಥಾನ, ಗುರುದ್ವಾರ ಶ್ರೀ ಜನ್ಮಸ್ಥಾನ, ಖೈಬರ ಪಖ್ತುನಖ್ವಾದ ಕರಾಕದಲ್ಲಿನ ಹಿಂದೂ ಮಂದಿರ ಸಹಿತ ಪಾಕಿಸ್ತಾನದಲ್ಲಿನ ಅನೇಕ ದೇವಸ್ಥಾನಗಳ ಮೇಲೆ ಆಕ್ರಮಣಗಳಾಗಿವೆ.

6. ಮಾನವಾಧಿಕಾರ ಸಂಸ್ಥೆಯಾದ ‘ಮುಮೆಂಟ್ ಫಾರ್ ಸಾಲಿಡಾರಿಟಿ ಅಂಡ್ ಪೀಸ್’ ಹೇಳಿದಂತೆ ಪಾಕಿಸ್ತಾನದಲ್ಲಿ ಪ್ರತಿವರ್ಷ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಕ್ರೈಸ್ತ ಮತ್ತು ಹಿಂದೂ ಮಹಿಳೆಯರು ಹಾಗೂ ಹುಡುಗಿಯರನ್ನು ಅಪಹರಿಸಲಾಗುತ್ತದೆ. ಅನಂತರ ಅವರನ್ನು ಮತಾಂತರಿಸಿ ಇಸ್ಲಾಮಿ ಪದ್ಧತಿಗನುಸಾರ ವಿವಾಹ ಮಾಡಿಸಲಾಗುತ್ತದೆ. ಈ ಸಂತ್ರಸ್ತ ಮಹಿಳೆ ಹಾಗೂ ಹುಡುಗಿಯರ ಸರಾಸರಿ ವಯಸ್ಸು 12ರಿಂದ 25 ಆಗಿರುತ್ತದೆ.

ಪಾಕಿಸ್ತಾನದಲ್ಲಿ ಮುಸಲ್ಮಾನೇತರರ ದೇವತೆಗಳ ಅವಮಾನ ಮಾಡುವವರಿಗೆ ಶಿಕ್ಷೆಯಾಗುವುದಿಲ್ಲ ! – ಮಾನವಾಧಿಕಾರ ಕಾರ್ಯಕರ್ತ ರಾಹತ ಅಸ್ಟಿನ

ಈ ಬಗ್ಗೆ ಭಾರತದಲ್ಲಿನ ಮುಸಲ್ಮಾನ ಸಂಘಟನೆಗಳು, ಅವರ ನೇತಾರರು, ಮುಸಲ್ಮಾನ ಪ್ರೇಮಿ ರಾಜಕೀಯ ಪಕ್ಷಗಳು ಏಕೆ ಬಾಯಿ ತೆರೆಯುವುದಿಲ್ಲ ?

ಮಾನವಾಧಿಕಾರ ಕಾರ್ಯಕರ್ತ ರಾಹತ ಅಸ್ಟಿನ

ಈ ಘಟನೆಯ ಬಗ್ಗೆ ಮಾನವಾಧಿಕಾರ ಕಾರ್ಯಕರ್ತ ನ್ಯಾಯವಾದಿ ರಾಹತ ಆಸ್ಟಿನರು ಟ್ವೀಟ್ ಮಾಡಿ ‘ಇಸ್ಲಾಮಿನ ವಿರುದ್ಧ ಈಶನಿಂದೆಯ ಸುಳ್ಳು ಆರೋಪಗಳನ್ನು ಮಾಡಿದಾಗಲೂ ಸಾಮೂಹಿಕ ಹತ್ಯೆ ಅಥವಾ ಮರಣದಂಡನೆಯನ್ನು ವಿಧಿಸಲಾಗುತ್ತದೆ; ಆದರೆ ಮುಸಲ್ಮಾನೇತರರ ದೇವತೆಗಳು ಅವಮಾನ ಮಾಡಿದರೆ ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ’ ಎಂದು ಹೇಳಿದ್ದಾರೆ.