ದತ್ತ ಸಂಪ್ರದಾಯ

ಅ. ನಾಥ ಸಂಪ್ರದಾಯ : ದತ್ತಾತ್ರೇಯನು ಹೇಳಿದ ‘ಅವಧೂತಗೀತೆ’ ಮತ್ತು ಗೋರಕ್ಷನಾಥಕೃತ ‘ಸಿದ್ಧ ಸಿದ್ಧಾಂತಪದ್ಧತಿ’ ಇವುಗಳಲ್ಲಿ ಅವಧೂತಾವಸ್ಥೆಯ ಬಗ್ಗೆ ಒಂದೇ ರೀತಿಯ ವಿಚಾರಗಳನ್ನು ಮಂಡಿಸಲಾಗಿದೆ. ನಾಥಪಂಥದ ಯೋಗಿಗಳಿಗೂ ‘ಅವಧೂತ’ ಈ ಸಂಜ್ಞೆಯೇ ಇದೆ. ಇವರು ಬಂಧನಾತೀತರಾಗಿರುತ್ತಾರೆ ಮತ್ತು ಪತಿತರನ್ನು (ಪಾಪಿ) ಬಿಟ್ಟು ಎಲ್ಲ ಜನರಿಂದ ಅನ್ನಗ್ರಹಣ ಮಾಡುತ್ತಾರೆ. ದತ್ತನು ಹೇಳಿದ ಇಪ್ಪತ್ನಾಲ್ಕು ಗುಣಗುರುಗಳಲ್ಲಿನ ಹೆಬ್ಬಾವು ಈ ಗುಣಗುರುವಿನಂತೆ ಈ ಯೋಗಿಗಳು ವರ್ತಿಸುತ್ತಾರೆ ಮತ್ತು ತಮ್ಮ ಎಲ್ಲ ಸಮಯವನ್ನು ಆತ್ಮಚಿಂತನೆಯಲ್ಲಿ ಕಳೆಯುತ್ತಾರೆ.

ಆ. ಮಹಾನುಭಾವ ಸಂಪ್ರದಾಯ : ಇದರಲ್ಲಿ ದತ್ತಾತ್ರೇಯ – ಚಾಂಗದೇವ ರಾವೂಳ – ಗುಂಡಮ ರಾವೂಳ – ಚಕ್ರಧರ ಎಂಬ ಪರಂಪರೆಗಳಿವೆ. ‘ದತ್ತನೆಂದರೆ ಬ್ರಹ್ಮ’ ಎಂದು ಈ ಪಂಥದ ವಾಙ್ಮಯದಲ್ಲಿ ಹೇಳಲಾಗಿದೆ.

ಇ. ಚೈತನ್ಯ ಸಂಪ್ರದಾಯ : ಈ ಸಂಪ್ರದಾಯದ ಆದಿಸತ್ಪುರುಷರಾದ ರಾಘವ ಚೈತನ್ಯರು ಗಿರನಾರದಲ್ಲಿ ದತ್ತಾತ್ರೇಯನ ಸಾಧನೆ ಮಾಡಿದರು.

ಈ. ಆನಂದ ಸಂಪ್ರದಾಯ : ಇದರಲ್ಲಿ ದತ್ತನನ್ನು ಆದಿಗುರು ಎಂದು ತಿಳಿಯಲಾಗಿದೆ.

ಉ. ಶ್ರೀಪಾದ ಶ್ರೀವಲ್ಲಭ ಹಾಗೂ ಶ್ರೀ ನೃಸಿಂಹ ಸರಸ್ವತಿ ಸಂಪ್ರದಾಯ : ಶ್ರೀಪಾದ ಶ್ರೀವಲ್ಲಭ ಇವರು ದತ್ತನ ಮೊದಲ ಅವತಾರವಾಗಿದ್ದಾರೆ. ಇವರು ಹದಿನೈದನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ದತ್ತೋಪಾಸನೆಯನ್ನು ಆರಂಭಿಸಿದರು. ಶ್ರೀ ನೃಸಿಂಹ ಸರಸ್ವತಿ ಇವರು ಎರಡನೇ ಅವತಾರವಾಗಿದ್ದಾರೆ. ಶ್ರೀ ಗುರುಚರಿತ್ರೆಯಲ್ಲಿ ಶ್ರೀಪಾದ ಶ್ರೀವಲ್ಲಭ ಹಾಗೂ ಶ್ರೀ ನೃಸಿಂಹ ಸರಸ್ವತಿ ಈ ಎರಡೂ ಅವತಾರಗಳ ಮಾಹಿತಿಯಿದೆ.

ಉ ೧. ಕೆಲವು ಪ್ರಮುಖ ಸಂತರು : ಏಕನಾಥ, ಮಾಣಿಕಪ್ರಭು, ಅಕ್ಕಲಕೋಟದ ಸ್ವಾಮಿ ಸಮರ್ಥರು, ವಾಸುದೇವಾನಂದ ಸರಸ್ವತಿ, ಪಂತಮಹಾರಾಜ ಬಾಳೆಕುಂದ್ರೀಕರ. (ಬೆಳಗಾವಿಯ ಹತ್ತಿರ ಬಾಳೆ ಕುಂದ್ರಿ ಎಂಬ ಊರಿದೆ.)

ಉ ೨. ಅವತಾರಗಳು : ಐತಿಹಾಸಿಕ ಕಾಲದಲ್ಲಿ ಶ್ರೀಪಾದ ಶ್ರೀವಲ್ಲಭ, ಶ್ರೀ ನೃಸಿಂಹ ಸರಸ್ವತಿ, ಮಾಣಿಕಪ್ರಭು ಈ ಮೂವರು ಹಾಗೂ ನಾಲ್ಕನೇಯವರು ಶ್ರೀ ಸ್ವಾಮಿ ಸಮರ್ಥ ಮಹಾರಾಜರು ಅವತಾರಿಗಳಾಗಿದ್ದರು. ಈ ನಾಲ್ಕೂ ಜನರು ಪೂರ್ಣ ಅವತಾರಗಳಾಗಿದ್ದಾರೆ ಮತ್ತು ಅಂಶಾತ್ಮಕ ಅವತಾರ ಬಹಳಷ್ಟು ಜನರಿದ್ದಾರೆ. ಇವುಗಳಲ್ಲಿ ಶ್ರೀ ವಾಸುದೇವಾನಂದ ಸರಸ್ವತಿ (ಟೇಂಬೆ ಸ್ವಾಮಿ) ಇವರ ಸಮಾವೇಶವಿದೆ.

ಜನರನ್ನು ತೊಂದರೆಗಳಿಂದ ರಕ್ಷಿಸಲು ಶ್ರೀ ನೃಸಿಂಹ ಸರಸ್ವತಿಯವರು ತಮ್ಮ ಶಿಷ್ಯರಿಗೆ ಹೇಳಿ ಕರ್ದಲೀ ವನಕ್ಕೆ ಹೋದರು. ಅಲ್ಲಿ ತಪಶ್ಚರ್ಯೆ ಮಾಡುತ್ತಿರುವಾಗ ಅವರ ಶರೀರದ ಮೇಲೆ ಇರುವೆಗಳು ಹುತ್ತವನ್ನು ಕಟ್ಟಿದವು ಮತ್ತು ಅವರ ಸಂಪೂರ್ಣ ಶರೀರವು ಮುಚ್ಚಿ ಹೋಯಿತು. ಬಹಳಷ್ಟು ವರ್ಷಗಳ ನಂತರ ಓರ್ವ ಕಟ್ಟಿಗೆ ಕಡಿಯುವವನು ಆ ವನದಲ್ಲಿ ಕಟ್ಟಿಗೆಯನ್ನು ಕಡಿಯುವಾಗ ಅವನ ಕೊಡಲಿಯ ಏಟು ತಪ್ಪಿ ಆ ಹುತ್ತದ ಮೇಲೆ ಬಿದ್ದಿತು. ಕೊಡಲಿಗೆ ರಕ್ತ ತಗಲಿದ್ದನ್ನು ನೋಡಿ ಅವನು ಹೆದರಿದನು ಮತ್ತು ಹುತ್ತವನ್ನು ಕೆದರಿದನು. ಅದರಿಂದ ನೃಸಿಂಹ ಸರಸ್ವತಿಯವರು ಅಕ್ಕಲಕೋಟಸ್ವಾಮಿಯೆಂದು ಹೊರಗೆ ಬಂದರು. ಸ್ವಾಮಿಗಳ ವಾಸ್ತವ್ಯವು ಅಕ್ಕಲಕೋಟದಲ್ಲಿನ ಸದ್ಯದ ಮಠದಲ್ಲಿನ ಔದುಂಬರದ ಕೆಳಗಿತ್ತು.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ದತ್ತ’)

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

ಈ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ  ವೈಯಕ್ತಿಕ  ಅನುಭೂತಿಯಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು

ದತ್ತ ಜಯಂತಿಯಂತು ‘ಶ್ರೀ ಗುರುದೇವ ದತ್ತ |’ ಈ ನಾಮಜಪ ಹೆಚ್ಚೆಚ್ಚು ಮಾಡಿರಿ !

ದತ್ತಜಯಂತಿಯ ದಿನದಂದು (ಡಿಸೆಂಬರ್ ೭) ದತ್ತನ ನಾಮಜಪವನ್ನು ಮಾಡಿರಿ. ದತ್ತ ಜಯಂತಿಯ ದಿನದಂದು ದತ್ತತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಪ್ರಮಾಣದಲ್ಲಿ ಕಾರ್ಯರತವಿರುತ್ತದೆ. ಅದರ ಅಧಿಕಾಧಿಕ ಲಾಭವನ್ನು ಪಡೆಯಲು ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಅಧಿಕಾಧಿಕ ಮಾಡಿರಿ.