ತೊಂದರೆ ನಿವಾರಣೆಗಾಗಿ ದತ್ತನ ಜಪವನ್ನು ಎಷ್ಟು ಮಾಡಬೇಕು ?

. ಯಾವುದೇ ರೀತಿಯ ತೊಂದರೆ ಆಗದಿದ್ದರೆ ಮುಂದೆ ತೊಂದರೆ ಆಗಬಾರದೆಂದು, ಸ್ವಲ್ಪ ತೊಂದರೆ ಇದ್ದರೆ ಪ್ರತಿದಿನ ೧ ರಿಂದ ೨ ಗಂಟೆ ‘ಶ್ರೀಗುರುದೇವ ದತ್ತ’ ಈ ನಾಮಜಪವನ್ನು ಮಾಡಬೇಕು.

. ಮಧ್ಯಮ ತೊಂದರೆ ಇದ್ದರೆ ಕುಲ ದೇವತೆಯ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೨ ರಿಂದ ೪ ಗಂಟೆ ಮಾಡಬೇಕು. ಅದರೊಂದಿಗೆ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆ ಹಾಕಬೇಕು ಹಾಗೂ ಅಲ್ಲಿ ಕುಳಿತು ಒಂದೆರಡು ಮಾಲೆ ಜಪ ಮಾಡಬೇಕು.ಇದನ್ನು ಒಂದು ವರ್ಷದ ವರೆಗಾದರೂ ಮಾಡಬೇಕು. ಅನಂತರ ಮೂರು ಮಾಲೆ ಜಪವನ್ನು ನಿಯಮಿತವಾಗಿ ಮಾಡಬೇಕು.

. ತೀವ್ರ ತೊಂದರೆಯಿದ್ದರೆ ಕುಲದೇವತೆಯ ನಾಮಜಪದ ಜೊತೆಗೆ ‘ಶ್ರೀಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೪ ರಿಂದ ೬ ಗಂಟೆ ಮಾಡಬೇಕು. ಯಾವುದಾದರೊಂದು ಜ್ಯೋತಿರ್ಲಿಂಗದ ಸ್ಥಳಕ್ಕೆ ಹೋಗಿ ನಾರಾಯಣ ನಾಗಬಲಿ, ನಾಗಬಲಿ, ತ್ರಿಪಿಂಡಿ ಶ್ರಾದ, ಕಾಳಸರ್ಪ ಶಾಂತಿ ಇತ್ಯಾದಿ ವಿಧಿ ಮಾಡಬೇಕು. ಅದರ ಜೊತೆಗೆ ಯಾವುದಾದರೊಂದು ದತ್ತ ಕ್ಷೇತ್ರಲ್ಲಿದ್ದು ಸಾಧನೆ ಮಾಡಬೇಕು ಅಥವಾ ಸಂತರ ಸೇವೆ ಮಾಡಿ ಅವರ ಆಶೀರ್ವಾದ ಪಡೆಯಬೇಕು.

. ಪಿತೃಪಕ್ಷದಲ್ಲಿ ದತ್ತನ ನಾಮಜಪ ಮಾಡುವುದರಿಂದ ಪಿತೃಗಳ ಮುಂದಿನ ಪ್ರವಾಸಕ್ಕೆ ಗತಿ ಪ್ರಾಪ್ತಿಯಾಗುತ್ತದೆ; ಆದ್ದರಿಂದ ಈ ಅವಧಿಯಲ್ಲಿ ಪ್ರತಿದಿನ ೬ ಗಂಟೆ (೭೨ ಮಾಲೆ) ದತ್ತನ ನಾಮಜಪ ಮಾಡಬೇಕು.  ನಾಮಜಪದ ಹೊರತು ಉಳಿದ ಸಮಯದಲ್ಲಿ ಪ್ರಾರಬ್ಧದಿಂದ ತೊಂದರೆಯಾಗಬಾರದೆಂದು ಹಾಗೂ ಆಧ್ಯಾತ್ಮಿಕ ಉನ್ನತಿಯಾಗಲು ಸಾಮಾನ್ಯ ಜನರು ಹಾಗೂ ಪ್ರಾಥಮಿಕ ಹಂತದ ಸಾಧಕರು ತಮ್ಮ ಕುಲ ದೇವತೆಯ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ದತ್ತನಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

. ಹೇ ದತ್ತಾತ್ರೇಯಾ, ನೀನು ಇಪ್ಪತ್ನಾಲ್ಕು ಗುಣಗುರುಗಳನ್ನು ಮಾಡಿದಂತೆ ನನ್ನಲ್ಲಿಯೂ ಎಲ್ಲರಲ್ಲಿನ ಒಳ್ಳೆಯ ಗುಣಗಳನ್ನು ತೆಗೆದುಕೊಳ್ಳುವ ವೃತ್ತಿಯನ್ನು ನಿರ್ಮಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.

. ಹೇ ದತ್ತಾತ್ರೇಯಾ, ಭುವರ್ಲೋಕದಲ್ಲಿ ಸಿಲುಕಿಕೊಂಡಿರುವ ನನ್ನ ಅತೃಪ್ತ ಪೂರ್ವಜರಿಗೆ ಮುಂದಿನ ಗತಿಯನ್ನು ನೀಡು.

. ಹೇ ದತ್ತಾತ್ರೇಯಾ, ನನ್ನನ್ನು ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸು. ನಿನ್ನ ರಕ್ಷಾಕವಚವು ನನ್ನ ಸುತ್ತಲೂ ಯಾವಾಗಲೂ ಇರಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.

. ‘ಹೇ ದತ್ತಾತ್ರೇಯಾ, ನಿನ್ನ ಕಾರ್ಯನಿರತವಾಗಿರುವ ಸೂಕ್ಷ್ಮಶಕ್ತಿಯನ್ನು ನಮಗೆ ಅಧಿಕ ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗಲಿ.’