ಪುಲವಾಮಾ(ಜಮ್ಮು-ಕಾಶ್ಮೀರ)ದಲ್ಲಿ ಭಯೋತ್ಪಾದಕರಿಂದ ಮಾಜಿ ಪೊಲೀಸ್ ಅಧಿಕಾರಿ ಸಹಿತ ಅವರ ಹೆಂಡತಿ ಮತ್ತು ಮಗಳ ಹತ್ಯೆ

ಜಮ್ಮುವಿನಲ್ಲಿ ಭಾರತೀಯ ವಾಯುದಳದ ನೆಲೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡಿದ ೨೪ ಗಂಟೆಗಳಲ್ಲಿ ಜಿಹಾದಿ ಭಯೋತ್ಪಾದಕರು ಇಲ್ಲಿಯ ಅವಂತಿಪೊರಾ ಪ್ರದೇಶದ ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಫಯ್ಯಾಜ ಅಹಮದ ಇವರನ್ನು ಹತ್ಯೆ ಮಾಡಿದ್ದಾರೆ. ಭಯೋತ್ಪಾದಕರು ಅಹಮದರ ಮನೆಗೆ ನುಗ್ಗಿ ಅವರ ಮತ್ತು ಅವರ ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಜರ್ಮನಿಯಲ್ಲಿ ಚಾಕೂನಿಂದ ದಾಳಿ ನಡೆಸಿದ ಯುವಕ : ಕೆಲವರ ಸಾವು !

ಜರ್ಮನಿಯ ವುರ್ಜಬರ್ಗ್ ಪಟ್ಟಣದ ಬಾರ್ಬಾರೊಸಾ ವೃತ್ತದಲ್ಲಿ ಜೂನ್ ೨೬ ರಂದು ಸಂಜೆ ಓರ್ವ ಯುವಕನು ಚಾಕೂವಿನಿಂದ ದಾಳಿ ನಡೆಸಿದಾಗ ಕೆಲವರು ಸಾವನ್ನಪ್ಪಿದರು, ಹಾಗೂ ಕೆಲವರು ಗಾಯಗೊಂಡರು. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡ ನಂತರ ಆತನನ್ನು ಬಂಧಿಸಲಾಯಿತು.

ದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿದೆ ! – ಎನ್.ಐ.ಎ.

ದೇಶದಲ್ಲಿ ೨೬/೧೧ ನಂತಹ ದೊಡ್ಡ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಲಾಗುತ್ತಿದೆ, ಎಂಬ ಮಾಹಿತಿಯನ್ನು ನೀಡುವ ದೂರವಾಣಿ ಕರೆ ಬಂದಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.)ವು ಹೇಳಿದೆ. ಹಾಗಾಗಿ ಈ ಪ್ರಕರಣದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ದೂರವಾಣಿ ಕರೆಯು ಬಂಗಾಳದ ರಣಘಾಟ್‍ನಿಂದ ಬಂದಿರುವುದು ಬೆಳಕಿಗೆ ಬಂದಿದೆ.