ನಮ್ಮ ಆತ್ಮೋನ್ನತಿಯ ತಳಮಳ ನಮಗಿಂತ ನಿಮಗೇ ಹೆಚ್ಚು !
ಸತತ ಸಾಧಕರ ಸಾಧನೆಯಗಬೇಕು, ಗುರುಕಾರ್ಯ ವೃದ್ಧಿಯಾಗಬೇಕೆಂಬ ತೀವ್ರ ತಳಮಳ ಇರುವ ಸಮಷ್ಟಿ ಸಂತರನ್ನು ನಮಗೆ ನೀಡಿದ
ಶ್ರೀ ಗುರುಚರಣಗಳಿಗೆ ಅನಂತ ಕೋಟಿ ಕೃತಜ್ಞತೆಗಳು…
ಸತತ ಸಾಧಕರ ಸಾಧನೆಯಗಬೇಕು, ಗುರುಕಾರ್ಯ ವೃದ್ಧಿಯಾಗಬೇಕೆಂಬ ತೀವ್ರ ತಳಮಳ ಇರುವ ಸಮಷ್ಟಿ ಸಂತರನ್ನು ನಮಗೆ ನೀಡಿದ
ಶ್ರೀ ಗುರುಚರಣಗಳಿಗೆ ಅನಂತ ಕೋಟಿ ಕೃತಜ್ಞತೆಗಳು…
ನಾವು ಪ್ರಾರ್ಥನೆಯನ್ನು ಮಾಡಿ ಸೇವೆಯನ್ನು ಪ್ರಾರಂಭಿಸುವಾಗ ‘ಸೇವೆಯನ್ನು ಯಾರಿಗಾಗಿ ಮಾಡುತ್ತಿದ್ದೇನೆ ?, ಈ ವಿಚಾರಕ್ಕಿಂತ ಆ ಪರಿಸ್ಥಿತಿಯಲ್ಲಿನ ತತ್ತ್ವಕ್ಕೆ ಅಥವಾ ದೇವರನ್ನು ಪ್ರಸನ್ನಗೊಳಿಸಲು ಸೇವೆಯನ್ನು ಮಾಡುತ್ತಿದ್ದೇವೆ, ಎಂಬ ಭಾವ ಮಹತ್ವದ್ದಾಗಿದೆ, ಹೀಗಾದರೆ ಮಾತ್ರ ಆ ಸೇವೆಯು ಅಪೇಕ್ಷಾರಹಿತ ಸೇವೆಯಾಗುತ್ತದೆ.
ಶರೀರದ ಬಂಧನ ಇಲ್ಲದಿರುವುದು ಅಲ್ಲಿನ ಜೀವಗಳಿಗೆ ಸ್ಥೂಲ ದೇಹವಿರುವುದಿಲ್ಲ. ಅದಕ್ಕಾಗಿ ಅವರಿಗೆ ಬಾಯಾರಿಕೆ – ಹಸಿವು, ರೋಗರುಜಿನಗಳು ಮತ್ತು ದೇಹದ ಮಿತಿ ಇರುವುದಿಲ್ಲ. ಶರೀರದ ಬಂಧನವಿರದ ಕಾರಣ ಲಿಂಗದೇಹವು ಸತತ ಸಾಧನೆಯನ್ನು ಮಾಡಬಹುದು.
ಮೂರನೆಯ ಮಹಾಯುದ್ಧವು ಮಹಾಭಯಂಕರವಾಗಿರಲಿದೆ. ಇದರಲ್ಲಿ ಭಾರತವು ಸಹ ಸಿಲುಕಲಿದೆ. ಪರಮಾಣು ಬಾಂಬ್‌ನಿಂದಾಗುವ ಸಂಹಾರವು ಇನ್ನೂ ಭಯಂಕರವಾಗಿರಲಿದೆ. ಊರಿಗೆ ಊರುಗಳು ನಾಶವಾಗಿ ಹೋಗುವುವು.ಮೂರನೆಯ ವಿಶ್ವಯುದ್ಧದ ನಂತರ ಸಂಪೂರ್ಣ ಪೃಥ್ವಿಯನ್ನು ಶುದ್ಧಗೊಳಿಸ ಬೇಕಾಗುವುದು. ಅದಕ್ಕಾಗಿ ಅನೇಕ ಸಂತರ ಅವಶ್ಯಕತೆಯಿದೆ.
‘ಕಲಿಯುಗದಲ್ಲಿ ಸಾಧನೆ ಮಾಡುವ ವ್ಯಕ್ತಿಯು ಸಿಗುವುದು ಕಠಿಣವಿರುತ್ತದೆ ಹಾಗೂ ಸಾಧನೆ ಮಾಡುವ ಸಾಧಕರು ಭೇಟಿಯಾಗುವುದು ಅದಕ್ಕಿಂತಲೂ ಕಠಿಣವಿರುತ್ತದೆ. ಯಾವುದಾದರೊಂದು ಕುಟುಂಬದಲ್ಲಿನ ಓರ್ವ ಸಾಧಕನು ಸಾಧನೆಯಲ್ಲಿದ್ದರೆ, ಆ ಸಾಧಕ ಹಾಗೂ ಅವನ ಕುಟುಂಬದವರ ಬಹಳ ದೊಡ್ಡ ಪುಣ್ಯವಿರುತ್ತದೆ.
ಕಾರ್ಯಕ್ರಮ ನೋಡುವಾಗ ನಾನು ನಾನಾಗಿ ಇರಲಿಲ್ಲ. ಕಾರ್ಯಕ್ರಮದಲ್ಲಿ ಮೈ ಮರೆತೆ. ಕಾರ್ಯಕ್ರಮ ಮುಗಿದಿದೆ ಎಂದರೂ ನನ್ನ ಅರಿವಿಗೆ ಅದು ಬಂದಿರಲಿಲ್ಲ. ಸಂತರ, ಸದ್ಗುರುಗಳ ವಿಷಯ ಮಂಡನೆಯಿಂದ ತುಂಬಾ ಕಲಿಯಲು ಸಿಕ್ಕಿತು. ಇಂತಹ ಮಹಾನ್ ಜ್ಞಾನಗುರು ಹಾಗೂ ಮೋಕ್ಷ ಗುರುಗಳನ್ನು ಪಡೆದ ನಾವೇ ಧನ್ಯರು ಎಂದು ಕೃತಜ್ಞತೆ ಅನಿಸಿತು.
‘ತೊಂದರೆಯದ್ದು ಸಹ ಒಂದು ಕಾಲವಿರುತ್ತದೆ. ಅದು ಹೋದ ಕೂಡಲೇ, ಪುನಃ ಒಳ್ಳೆಯ ಕಾಲವು ಬರುತ್ತದೆ. ಅಲ್ಲಿಯವರೆಗೆ ಸಂಪೂರ್ಣ ಶ್ರದ್ಧೆಯಿಂದ ಹೇಳಿದ ನಾಮಜಪ ಮುಂತಾದ ಉಪಾಯಗಳನ್ನು ‘ಸೇವೆ’ಯೆಂದೇ ಮಾಡಬೇಕು. ಅಂದರೆ ಉಪಾಯಗಳ ಬಗ್ಗೆಯೂ ಬೇಸರ ಬರುವುದಿಲ್ಲ.
೨೦೧೫ ನೇ ಇಸವಿಯಲ್ಲಿ ಪೂ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಮಹರ್ಷಿಗಳೂ ನಾಡಿಪಟ್ಟಿಯ ಮೂಲಕ ಪರಾತ್ಪರ ಗುರು ಡಾಕ್ಟರರು ವಿಷ್ಣುವಿನ ಅವತಾರವಾಗಿದ್ದಾರೆ ಎಂದು ಹೇಳಿದರು. ಇದರಿಂದ ‘ಸೂಕ್ಷ್ಮದಲ್ಲಿನ ಜ್ಞಾನ ಹೇಳುವವರು ಬದಲಾದರೂ, ಕಾಲ ಬದಲಾದರೂ ಅಧ್ಯಾತ್ಮದಲ್ಲಿನ ಜ್ಞಾನವು ಒಂದೇ ಆಗಿರುತ್ತದೆ’, ಎಂಬುದು ಗಮನಕ್ಕೆ ಬರುತ್ತದೆ.’
ಇದನ್ನು ಕೇಳಿ ನನಗೆ ಪರಾತ್ಪರ ಗುರು ಡಾಕ್ಟರರ ಅಪಾರ ಅಧ್ಯಯನ ನಿಷ್ಠತೆಯ ಬಗ್ಗೆ ಆಶ್ಚರ್ಯವೆನಿಸಿತು. ಅದರಲ್ಲಿ ವಿಶೇಷವೆಂದರೆ ‘ಪರಾತ್ಪರ ಗುರು ಡಾಕ್ಟರರಿಗೆ ತುಂಬಾ ಶಾರೀರಿಕ ದಣಿವಿದ್ದರೂ ಅವರು ಪ್ರತಿಯೊಂದು ವಿಷಯದ ಕಡೆಗೆ ಅಧ್ಯಯನ ನಿಷ್ಠತೆಯಿಂದ ಹಾಗೂ ಸಮಷ್ಟಿಯ ದೃಷ್ಟಿಯಿಂದ ನೋಡುತ್ತಾರೆ’, ಎಂದು ಗಮನಕ್ಕೆ ಬಂದಿತು.’
ಯಾವಾಗ ಭಾರತದಲ್ಲಿನ ರಾಷ್ಟ್ರ ಹಾಗೂ ಧರ್ಮ ಇವುಗಳ ಹಾಳಾದ ಸ್ಥಿತಿಯಲ್ಲಿ ಸುಧಾರಣೆಯಾಗುವುದೋ, ಆಗಲೇ ಪರಾತ್ಪರ ಗುರು ಡಾಕ್ಟರರಿಗಾಗುತ್ತಿರುವ ಶಾರೀರಿಕ ತೊಂದರೆಯು ದೂರವಾಗಿ ಅವರ ಮೇಲಿನ ಮೃತ್ಯುವಿನ ಸಂಕಟವು ತಪ್ಪಲಿದೆ.’