ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತ ವಚನಗಳು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧ ಕಾಲ

೧ ಅ. ತೊಂದರೆಯ ಕಾಲವು ಕಳೆದ ನಂತರ ಒಳ್ಳೆಯ ಕಾಲವು ಬರುತ್ತದೆ : ‘ತೊಂದರೆಯದ್ದು ಸಹ ಒಂದು ಕಾಲವಿರುತ್ತದೆ. ಅದು ಹೋದ ಕೂಡಲೇ, ಪುನಃ ಒಳ್ಳೆಯ ಕಾಲವು ಬರುತ್ತದೆ. ಅಲ್ಲಿಯವರೆಗೆ ಸಂಪೂರ್ಣ ಶ್ರದ್ಧೆಯಿಂದ ಹೇಳಿದ ನಾಮಜಪ ಮುಂತಾದ ಉಪಾಯಗಳನ್ನು ‘ಸೇವೆ’ಯೆಂದೇ ಮಾಡಬೇಕು. ಅಂದರೆ ಉಪಾಯಗಳ ಬಗ್ಗೆಯೂ ಬೇಸರ ಬರುವುದಿಲ್ಲ.

೧ ಆ. ಸ್ವೇಚ್ಛೆ ಹಾಗೂ ಈಶ್ವರೇಚ್ಛೆ : ಯಾವುದಾದರೊಂದು ಘಟನೆಯು ಕಾಲಾನುಸಾರ ಈಶ್ವರೇಚ್ಛೆಯಿಂದ ಘಟಿಸಿದರೆ, ನಾವು ಅದಕ್ಕೆ ‘ಈಶ್ವರನ ಲೀಲೆ’ ಎಂದು ಹೇಳಬಹುದು; ಆದರೆ ಅದು ಸ್ವೇಚ್ಛೆಯಿಂದ ಘಟಿಸಿದರೆ, ಆ ವ್ಯಕ್ತಿಗೆ ವೈಯ್ಯಕ್ತಿಕ ಕರ್ಮಭೋಗವು (ಕರ್ಮಫಲನ್ಯಾಯ) ಅನ್ವಯಿಸುತ್ತದೆ.

೧ ಇ. ವರ್ತಮಾನ ಹಾಗೂ ಭವಿಷ್ಯ : ‘ದೇವರ ಮನಸ್ಸಿನಲ್ಲಿ ಏನಿದೆ ?’, ಎಂಬುದು ವರ್ತಮಾನದಲ್ಲಿಯೇ ಗೊತ್ತಾಗುತ್ತದೆ. ವರ್ತಮಾನವು ತಿಳಿದರೆ, ದೇವರ ಆಶೀರ್ವಾದದಿಂದ ಭವಿಷ್ಯವು ತನ್ನಿಂದ ತಾನೆ ಘಟಿಸುತ್ತದೆ. ಆದುದರಿಂದ ಸಾಧಕನಿಗೆ ಭವಿಷ್ಯವನ್ನು ಬೇರೆಯಾಗಿ ತಿಳಿದುಕೊಳ್ಳುವ ಆವಶ್ಯಕತೆ ಎನಿಸುವುದಿಲ್ಲ.

೨. ಸಿದ್ಧಿಗಳ ಮಿತಿ

ಸಿದ್ಧಿಗಳಿಂದಾಗಿ ಭವಿಷ್ಯವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ; ಆದರೆ ಸಿದ್ಧಿಯಲ್ಲಿನ ಶಕ್ತಿಯು ಆಯಾ ಸಮಯದ ಕಾರ್ಯವನ್ನು ಮಾಡುವುದಾಗಿರುತ್ತದೆ; ಆದುದರಿಂದ ಸಿದ್ಧಿಯ ಹಿಂದೆ ಬೀಳದೇ ಈಶ್ವರನ ಕೃಪೆಯನ್ನು ಅಖಂಡವಾಗಿ ಪ್ರಾಪ್ತ ಮಾಡಿಕೊಳ್ಳುವುದಕ್ಕಾಗಿ ಸ್ವತಃ ಸಾಧನೆಯನ್ನು ಮಾಡುವುದು ಆವಶ್ಯಕವಿರುತ್ತದೆ.

೩. ರೂಢಿಯು ಅಶಾಶ್ವತವಾಗಿದ್ದು ಶಾಸ್ತ್ರವು ಶಾಶ್ವತವಾಗಿದೆ

‘ರೂಢಿ’ ಎಂದರೆ ಮಾನವನು ನಿರ್ಮಾಣ ಮಾಡಿದ ಪರಂಪರೆಯಾಗಿದೆ, ಆದರೆ ಶಾಸ್ತ್ರ’ವು ವೇದ, ಪುರಾಣಗಳು ಹಾಗೂ ಧರ್ಮಗ್ರಂಥಗಳು ಸಮ್ಮತಿ ನೀಡಿದವುಗಳಾಗಿವೆ. ಆದುದರಿಂದ ಮಾನವ ನಿರ್ಮಿತ ರೂಢಿಗಳು ಅಶಾಶ್ವತವಾಗಿವೆ ಹಾಗೂ ವೇದ ಮತ್ತು ಋಷಿಮುನಿ ಗಳು ಹಾಕಿ ಕೊಟ್ಟ ನಿಯಮಗಳು ಎಂದರೆ ‘ಶಾಸ್ತ್ರ’ಗಳು ಶಾಶ್ವತವಾಗಿವೆ.

೪. ಮಾಯಾವೀ ಸ್ಪಂದನಗಳು ಹಾಗೂ ಸಾತ್ತ್ವಿಕ ಸ್ಪಂದನಗಳು

ಮಾಯಾವೀ ಸ್ಪಂದನಗಳ ತೊಂದರೆಯು ತಕ್ಷಣ ತಿಳಿಯುವುದಿಲ್ಲ. ಮೊದಲಿಗೆ ಚೆನ್ನಾಗಿಯೇ ಅನಿಸಬಹುದು; ಆದರೆ ಅದು ಬಹಳ ಸಮಯ ಉಳಿಯುವುದಿಲ್ಲ. ಕಾಲಾಂತರದಲ್ಲಿ ಆ ತೊಂದರೆಯು ಗೊತ್ತಾಗುತ್ತದೆ. ಸಾತ್ತ್ವಿಕ ಸ್ಪಂದನಗಳಿಂದ ಒಳ್ಳೆಯದೆನಿಸುತ್ತದೆ ಹಾಗೂ ಆ ಆನಂದವು ಹೆಚ್ಚು ಕಾಲ ಉಳಿಯುತ್ತದೆ ಹಾಗೂ ಹೆಚ್ಚಾಗಲೂಬಹುದು. ಸಾತ್ತ್ವಿಕ ಸ್ಪಂದನಗಳಿಂದ ಯಾವುದು ಒಳ್ಳೆಯದೆನಿಸುತ್ತದೋ, ಅದು ಉತ್ಸಾಹ ನೀಡುವಂತಹುದಾಗಿರುತ್ತದೆ; ತದ್ವಿರುದ್ಧ ಮಾಯಾವಿ ಸ್ಪಂದನಗಳಿಂದ ಒಂದು ವೇಳೆ, ಒಳ್ಳೆಯದೆನಿಸಿದರೂ, ನಂತರ ಅಸ್ವಸ್ಥತೆ ಎನಿಸತೊಡಗುತ್ತದೆ.

೫. ಸಾಧನೆ

೫ ಅ. ಸಾಧನೆ ಮಾಡುವುದು, ಎಂದರೆ ಯುದ್ಧ ಮಾಡುವುದು :

ಕಲಿಯುಗದಲ್ಲಿ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವುದು ಅಂದರೆ ಒಂದು ಯುದ್ಧವೇ ಆಗಿದೆ. ಈ ಸಾಧನಾಮಾರ್ಗದಲ್ಲಿ ತಪ್ಪಾಯಿತೆಂದು; ಹಿಂದಿರುಗುವುದು ಸಾಧ್ಯವಿಲ್ಲ, ಆದರೆ ಅವುಗಳನ್ನು ಎದುರಿಸಲೇ ಬೇಕಾಗುತ್ತದೆ.

೫ ಆ. ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಯ ನಿಯೋಜನೆ : ವ್ಯಷ್ಟಿ ಸಾಧನೆಯಲ್ಲಿ ನಾವೇ ನಿಯೋಜನೆಯನ್ನು ಮಾಡ ಬೇಕಾಗುತ್ತದೆ, ಆದರೆ ಸಮಷ್ಟಿ ಸಾಧನೆಯ ನಿಯೋಜನೆಯನ್ನು ದೇವರು ನಮ್ಮಿಂದ ತನ್ನಿಂದತಾನೇ ಮಾಡಿಸಿ ಕೊಳ್ಳುತ್ತಾನೆ; ಏಕೆಂದರೆ ಅದು ಈಶ್ವರೇಚ್ಛೆಯಿಂದ ಆಗುತ್ತದೆ.

೫ ಇ. ಸಾಧನೆಯಲ್ಲಿ ಆಧ್ಯಾತ್ಮಿಕ ಉನ್ನತಿಯಾಗುತ್ತಾ ಹೋದಂತೆ ಮುಖದ ಮೇಲಿನ ಆನಂದವು ಹೆಚ್ಚಾಗುತ್ತಾ ಹೋಗುತ್ತದೆ.

೫ ಈ. ಕೊನೆಗೆ ಉತ್ತಮ ಗತಿ ಪ್ರಾಪ್ತಮಾಡಿಕೊಳ್ಳಲು ಜೀವನವಿಡಿ ಸಾಧನೆ ಮಾಡುವುದು ಆವಶ್ಯಕವಿರುವುದು : ನಿಮ್ಮ ಮನಸ್ಸಿನಲ್ಲಿನ ವಿಚಾರಗಳ ಮೇಲೆ ನಿಮ್ಮ ಮುಂದಿನ ಜನ್ಮವು ಅವಲಂಬಿಸಿರುತ್ತದೆ. ಆದುದರಿಂದ ಜೀವವು ನಿರಂತರ ಸತ್‌ನಲ್ಲಿದ್ದು ಈಶ್ವರನ ವಿಚಾರಗಳಲ್ಲಿಯೇ, ಅಂದರೆ ಈಶ್ವರನ ಅನುಸಂಧಾನದಲ್ಲಿದ್ದರೆ, ಅವನಿಗೆ ಜನ್ಮ-ಮೃತ್ಯುವಿನ ಭಯವೇ ಉಳಿಯುವುದಿಲ್ಲ. ಆದುದರಿಂದಲೇ, ‘ಒಂದು ವೇಳೆ, ಕೊನೆಯ ಕ್ಷಣದಲ್ಲಿ ದೇವರ ಸ್ಮರಣೆ ಮಾಡಿದರೆ, ಉತ್ತಮ ಗತಿಯು ಪ್ರಾಪ್ತವಾಗುತ್ತದೆ; ಆದರೆ ಹಾಗೆ ಆಗಲು ಜೀವನಪೂರ್ತಿ ಸಾಧನೆ ಮಾಡುವುದು ಆವಶ್ಯಕವಿರುತ್ತದೆ’, ಎಂದೂ ಹೇಳಲಾಗುತ್ತದೆ.

೫ ಉ. ಅಧ್ಯಾತ್ಮದಲ್ಲಿ ಅಹಂ ಅಲ್ಲ, ಆನಂದವಿದೆ : ಒಂದು ಸ್ಥಳದಲ್ಲಿ ನಾವು ನಾಡಿಪಟ್ಟಿಯ ಮೂಲಕ ಭವಿಷ್ಯಕಥನ ಮಾಡುವ ಓರ್ವ ವ್ಯಕ್ತಿಗೆ ರಾಮರಾಜ್ಯಕ್ಕೆ (ಹಿಂದೂ ರಾಷ್ಟ್ರಕ್ಕೆ) ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದೆವು. ಆಗ ಅವರು, ‘ನಮ್ಮ ಕಡೆಗೆ ಎಲ್ಲರೂ ಕೇವಲ ತಮ್ಮ ವೈಯಕ್ತಿಕ, ವ್ಯವಹಾರಿಕ ಹಾಗೂ ಮಾಯೆಯಲ್ಲಿನ ಅಡಚಣೆಗಳನ್ನು ತೆಗೆದುಕೊಂಡು ಬರುತ್ತಾರೆ, ಆದರೆ ನಿಮ್ಮ ಹಾಗೆ ಯಾರೂ ಬಂದಿಲ್ಲ. ೨೦ ವರ್ಷಗಳ ಹಿಂದೆ ಒಬ್ಬರು ಬಂದಿದ್ದರು ಹಾಗೂ ಅವರು ನನಗೆ ಇದೇ ರೀತಿಯ ಪ್ರಶ್ನೆಯನ್ನು ಕೇಳಿದ್ದರು’, ಎಂದು ಹೇಳಿದರು. ಇದನ್ನು ಕೇಳಿ ನನಗೆ ಆನಂದವಾಯಿತು. ಆ ಸಮಯದಲ್ಲಿ ‘ಈ ರೀತಿ ವಿಚಾರ ಮಾಡುವವರು, ನಾವು ಏಕೈಕರಿದ್ದೇವೆ’, ಎಂಬ ಅಹಂನ ವಿಚಾರ ಬರದೇ ‘ನಮ್ಮಂತೆ ಇನ್ನು ಯಾರೋ ಕೇಳುವವರು ಇದ್ದಾರೆ’, ಎಂದು ಆನಂದವಾಯಿತು. ಇದು ಅಧ್ಯಾತ್ಮದಲ್ಲಿನ ಆನಂದವಾಗಿದೆ.

೫ ಊ. ಪ್ರಾರ್ಥನೆ ಹಾಗೂ ತಳಮಳ : ಚೈತನ್ಯದ ಪ್ರಕ್ಷೇಪಣೆಯು ಎಲ್ಲೆಡೆಗೆ ಒಂದೇ ಸಮಾನವಾಗಿ ಆಗುತ್ತಿರುತ್ತದೆ; ಆದರೆ ನಾವು ಅದನ್ನು ಎಷ್ಟು ಪ್ರಮಾಣದಲ್ಲಿ ಗ್ರಹಣ ಮಾಡುತ್ತೇವೆ, ಇದು ನಮ್ಮ ಪ್ರಾರ್ಥನೆ ಹಾಗೂ ತಳಮಳ ಇವುಗಳ ಮೇಲೆ ಅವಲಂಬಿಸಿರುತ್ತದೆ.

೬. ಗುರು

೬ ಅ. ಗುರುಗಳ ಕೂಗಾಟ : ಗುರುಗಳು ಯಾವಾಗ ಕೂಗಾಡುತ್ತಾರೋ, ಆಗ ನಮ್ಮ ಮೇಲಿನ ನಕಾರಾತ್ಮಕ ಆವರಣವು ದೂರವಾಗಿ ಪ್ರಾರಬ್ಧವು ಮುಗಿಯುತ್ತಿರುತ್ತದೆ; ಆದರೆ ಅವರ ಕೂಗಾಟವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಘಟಿಸಿದ ತಪ್ಪನ್ನು ಪುನಃ ಆಗದಿರುವ ಹಾಗೆ ಗಮನ ನೀಡಿದರೆ, ಗುರುಗಳ ಕೃಪೆಯು ನಮ್ಮ ಮೇಲೆ ಅಖಂಡವಾಗಿರುತ್ತದೆ.

೬ ಆ. ಸಾಕ್ಷಿಭಾವ : ಗುರು ಹಾಗೂ ಸಂತರು ನಿಮ್ಮ ತಳಮಳವನ್ನು ನೋಡುತ್ತಾರೆ ಹಾಗೂ ಅದಕ್ಕನುಸಾರ ನಿಮಗೆ ಶಕ್ತಿಯನ್ನು ನೀಡುತ್ತಾರೆ. ಇತರ ಸಮಯದಲ್ಲಿ ಅವರು ಸಾಕ್ಷಿಭಾವದಿಂದ ನೋಡುತ್ತಾರೆ.

೬ ಇ. ಗುರುಛತ್ರದಿಂದಾಗಿ ಸಾಧಕನ ಜೀವನವು ಸಹನೀಯವಾಗುವುದು : ಸಾಧಕನ ಮೇಲೆ ಗುರುಛತ್ರ ಇರುವುದರಿಂದ ಅವನಿಗೆ ಜೀವನದಲ್ಲಿನ ಪ್ರಾರಬ್ಧವು ಸಹನೀಯವಾಗುತ್ತದೆ. ಬಹುತೇಕ ಬಾರಿ ಗುರುಛತ್ರದಿಂದಾಗಿ ಅವನಿಗೆ ತೀವ್ರ ಪ್ರಾರಬ್ಧದ ಅರಿವೂ ಆಗುವುದಿಲ್ಲ; ಆದರೆ ಗುರುಛತ್ರವು ಹೋದರೆ ಸಾಧಕನಿಗೆ ಸಾಮಾನ್ಯ ಜೀವನವನ್ನು ನಡೆಸುವುದೂ ಕಠಿಣವಾಗುತ್ತದೆ.

೭. ಸಂತರು

೭. ಅ. ಸಂತರಿಗೆ ಕಾಲದ ಬಗ್ಗೆ ತಿಳಿಯುತ್ತದೆ : ಒಬ್ಬ ವ್ಯಕ್ತಿಯು ಸಾಧನೆಯಲ್ಲಿ ಹೊಸಬನಿದ್ದರೆ, ಸಂತರು ಅಥವಾ ಗುರುಗಳು ಅವನಿಗೆ ತಕ್ಷಣ (ಸಾಧನೆಯಲ್ಲಿನ) ಎಲ್ಲವನ್ನೂ ಹೇಳಿ ಉಪದೇಶ ಮಾಡುವುದಿಲ್ಲ. ಗುರುಗಳು ಆ ವ್ಯಕ್ತಿಯ ಸಾಧನೆಯಲ್ಲಿನ ಸ್ಥಿತಿ ಹಾಗೂ ಕಾಲವನ್ನು ನೋಡಿ ಅವನಿಗೆ ಉಪದೇಶ ಮಾಡುತ್ತಾರೆ; ಏಕೆಂದರೆ ಪ್ರತಿಯೊಂದು ಜೀವದ ಸಾಧನೆಗಾಗಿ ಪೂರಕವಾಗಿರುವ ಕಾಲದ ಬಗ್ಗೆ ಈಶ್ವರನಿಗೆ (ಸಂತರಿಗೆ) ತಿಳಿಯುತ್ತದೆ.

೭ ಆ. ಸಂತತ್ವದ ಕಡೆಗೆ ಮಾರ್ಗಕ್ರಮಣ : ಯಾವಾಗ ‘ನಿಶ್ಚಯಿಸಿದ ಕೃತಿ ಅಥವಾ ವಿಷಯವನ್ನು ಮಾಡಿದಾಗ ನನ್ನ ಅಹಂ ಹೆಚ್ಚಾಗುವುದಿಲ್ಲ’, ಎಂಬ ವಿಚಾರವೂ ಸಾಧಕನ ಮನಸ್ಸಿನಲ್ಲಿ ಬರುವುದಿಲ್ಲವೋ, ಆಗ ಅವನ ಸಂತತ್ವದ ಕಡೆಗೆ ಮಾರ್ಗಕ್ರಮಣವು ಪ್ರಾರಂಭವಾಗುತ್ತದೆ.

೭ ಇ. ಸಂತರ ಮಹಾತ್ಮೆ ! : “ಒಂದು ಬಾರಿ ಓರ್ವ ಸಂತರ ಶಿಷ್ಯಳು ಅವರ ಕಡೆಗೆ ಬಂದಳು ಹಾಗೂ ಅವರಿಗೆ, “ನನ್ನ ಪತಿಯು ಅರ್ಬುದರೋಗದಿಂದ ಬಹಳ ಬಳಲುತ್ತಿದ್ದಾರೆ. ನನಗೆ ಅವರ ತೊಂದರೆಯನ್ನು ಹಾಗೂ ಅವರಿಗಾಗುವ ವೇದನೆಯನ್ನು ನೋಡಲು ಆಗುವುದಿಲ್ಲ. ಅದಕ್ಕಾಗಿ ನಾನು ತಮ್ಮಲ್ಲಿ ಪ್ರಾರ್ಥಿಸುತ್ತೇನೆ, ‘ಕೃಪೆ ಮಾಡಿ ತಾವು ನನ್ನ ಪತಿಗೆ ಈ ತೊಂದರೆಯಿಂದ ಮುಕ್ತ ಮಾಡಿರಿ ಹಾಗೂ ಅವರಿಗೆ ಮೃತ್ಯುವನ್ನು ನೀಡಿರಿ”, ಎಂದು ವಿನಂತಿಸಿಕೊಳ್ಳತೊಡಗಿದಳು. ಆಗ ಸಂತರು, “ಅವನ ಮೃತ್ಯುವಿನ ಸಮಯವು ಇನ್ನೂ ಬಂದಿಲ್ಲ; ಆದರೆ ನಿನ್ನ ವಿನಂತಿಯ ಮೇರೆಗೆ ನಾನು ಅವನಿಗೆ ಮರಣವನ್ನು ನೀಡುತ್ತೇನೆ. ನಾಳೆ ಬೆಳಗ್ಗೆ ನಿನ್ನ ಪತಿಯು ದೇಹಪಾಶದಿಂದ ಬಿಡುಗಡೆಯಾಗುವನು”, ಎಂದು ಹೇಳಿದರು. ಅದಕ್ಕೆ ಇತರ ಶಿಷ್ಯರು ಆ ಸಂತರಿಗೆ ಈ ಬಗ್ಗೆ ಕೇಳಿದಾಗ ಅವರು, “ಆ ಶಿಷ್ಯಳ ಪತಿಯ ಮೃತ್ಯು ಎರಡೂವರೆ ತಿಂಗಳ ನಂತರವಿತ್ತು ಹಾಗೂ ದೇವರ ಕಾಲಚಕ್ರದಲ್ಲಿ ನಮಗೂ ಸಹ ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಆದುದರಿಂದ ನನ್ನ ಶಿಷ್ಯಳ ವಿನಂತಿಯ ಮೇರೆಗೆ ನಾನು ಅವಳ ಪತಿಗೆ ಮೃತ್ಯುವನ್ನು ನೀಡಿದೆನು; ಆದರೆ ನನಗೆ ಅವಳ ಪತಿಯ ಮೃತ್ಯುವಿನ ನಂತರ ಅವನ ಲಿಂಗದೇಹವನ್ನು ಭೂಮಂಡಲದಲ್ಲಿಡಬೇಕಾಯಿತು ಹಾಗೂ ಈಶ್ವರನ ಆಯೋಜನೆಗನುಸಾರ ಅವನ ಮೃತ್ಯುಯೋಗವು ಯಾವಾಗ ಬಂದಿತೋ, ಆಗ ನಾನು ಅವನ ಲಿಂಗದೇಹವನ್ನು ವಾತಾವರಣದಲ್ಲಿ ಬಿಟ್ಟು ಅದಕ್ಕೆ ಮುಂದಿನ ಗತಿಯನ್ನು ನೀಡಿದೆನು”, ಎಂದು ಹೇಳಿದರು.
– ಸದ್ಗುರು (ಸೌ.) ಅಂಜಲಿ ಗಾಡಗೀಳ (೨೨.೧೦.೨೦೧೯) (ಸಂಗ್ರಹ : ಶ್ರೀ ದಿವಾಕರ ಆಗವಣೆ)