ಫುಟ್‌ಬಾಲ್ ಪಂದ್ಯದ ನಂತರ ಭುಗಿಲೆದ್ದ ರಾಷ್ಟ್ರವ್ಯಾಪಿ ಗಲಭೆಗಳ ಹಿನ್ನೆಲೆಯಲ್ಲಿ ‘ಬ್ಯೂರೋ ಆಫ್ ಹ್ಯೂಮನ್ ರೈಟ್ಸ್ ಅಂಡ್ ಜಸ್ಟಿಸ್’ ಸಂಸ್ಥೆಯ ಆಗ್ರಹ

ಪ್ಯಾರಿಸ್ (ಫ್ರಾನ್ಸ್) – ಇಲ್ಲಿ ‘ಚಾಂಪಿಯನ್ಸ್ ಲೀಗ್’ ಫುಟ್‌ಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ‘ಪ್ಯಾರಿಸ್ ಸೇಂಟ್-ಜರ್ಮನ್’ (ಪಿ.ಎಸ್.ಜಿ.) ತಂಡವು ‘ಆರ್ಸೆನಲ್’ ತಂಡದ ವಿರುದ್ಧ ವಿಜಯ ಸಾಧಿಸಿತು. ಮೇ 30 ರಂದು ನಡೆದ ಪಂದ್ಯದ ನಂತರ ಇಡೀ ಫ್ರಾನ್ಸ್‌ನಲ್ಲಿ ರಾತ್ರಿಯ ವೇಳೆಯಲ್ಲೇ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯಿತು. ಇದರ ವಿರುದ್ಧ ‘ಬ್ಯೂರೋ ಆಫ್ ಹ್ಯೂಮನ್ ರೈಟ್ಸ್ ಅಂಡ್ ಜಸ್ಟಿಸ್’ ಸಂಸ್ಥೆಯು ತುರ್ತು ಪ್ರಕಟಣೆಯನ್ನು ಹೊರಡಿಸಿದೆ. ಹಿಂಸಾಚಾರವನ್ನು ತೀವ್ರ ಶಬ್ದಗಳಲ್ಲಿ ಖಂಡಿಸಲಾಗಿದ್ದು, ದೇಶದ ಸಾರ್ವಜನಿಕ ಸುವ್ಯವಸ್ಥೆ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು, ಹಾಗೂ ‘ಶೂನ್ಯ ಸಹಿಷ್ಣುತೆ’ಯ (ಜೀರೋ ಟಾಲರೆನ್ಸ್) ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಂಸ್ಥೆಯು ಆಗ್ರಹಿಸಿದೆ.

ಹಿಂಸಾಚಾರದ ವ್ಯಾಪ್ತಿ ಹೀಗಿದೆ…!
ಗೃಹಸಚಿವ ಲಾರೆಂಟ್ ನ್ಯುನೆಜ್ ಘೋಷಿಸಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ರಾತ್ರಿಯ ಅವಧಿಯಲ್ಲಿ ನಡೆದ ಘರ್ಷಣೆಗಳು ಮತ್ತು ಗಲಭೆಗಳ ಅಪರಾಧಕ್ಕಾಗಿ ದೇಶಾದ್ಯಂತ 780 ಜನರನ್ನು ಬಂಧಿಸಲಾಗಿದೆ. ಈ ಹಿಂಸಾಚಾರವು 71 ಮುನ್ಸಿಪಾಲಿಟಿಗಳ (ನಗರಸಭೆಗಳ) ವ್ಯಾಪ್ತಿಯವರೆಗೆ ಹರಡಿತ್ತು. ಈ ಘಟನೆಗಳಲ್ಲಿ ಭದ್ರತಾ ಪಡೆಯ 57 ಸೈನಿಕರು, ಹಾಗೂ 219 ನಾಗರಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಪ್ಯಾರಿಸ್‌ನಲ್ಲಿ ಚಾಕುವಿನಿಂದ ಇರಿಯುವ ಹಲವು ಗಂಭೀರ ಘಟನೆಗಳು ನಡೆದಿವೆ.
ಈ ದಾಳಿಯು ಪೂರ್ವನಿಯೋಜಿತ! – ಬ್ಯೂರೋ ಆಫ್ ಹ್ಯೂಮನ್ ರೈಟ್ಸ್ ಅಂಡ್ ಜಸ್ಟಿಸ್
ಈ ಇಡೀ ಘಟನೆಯು ‘ಫುಟ್‌ಬಾಲ್ ಅಭಿಮಾನಿಗಳ ಸ್ವಯಂಪ್ರೇರಿತ ಮತ್ತು ನೈಸರ್ಗಿಕ ಪ್ರತಿಕಕ್ರಿಯೆಯಾಗಿದೆ’ ಎಂಬ ವಾದವನ್ನು ‘ಬ್ಯೂರೋ ಆಫ್ ಹ್ಯೂಮನ್ ರೈಟ್ಸ್ ಅಂಡ್ ಜಸ್ಟಿಸ್’ ಸಂಸ್ಥೆಯು ದೃಢವಾಗಿ ತಿರಸ್ಕರಿಸಿದೆ. ಇದು ಒಂದು ಪೂರ್ವನಿಯೋಜಿತ ದಾಳಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ. ದೀಪನ್ ಮಿತ್ರ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಮಾತನಾಡುವಾಗ ತಿಳಿಸಿದರು. ಕಳೆದ ವರ್ಷದ ವಿಜಯೋತ್ಸವದ ವೇಳೆಯಲ್ಲೂ ನಾವು ಹಿಂಸಾಚಾರದ ಇಂತಹದ್ದೇ ಪ್ರಕರಣವನ್ನು ನೋಡಿದ್ದೆವು. ಇದು ಈಗ ಒಂದು ‘ದೀರ್ಘಕಾಲದ ಬಿಕ್ಕಟ್ಟಾಗಿ’ ಮಾರ್ಪಟ್ಟಿದೆ, ಇದು ಫ್ರೆಂಚ್ ಗಣರಾಜ್ಯದ ದೀರ್ಘಕಾಲೀನ ಭದ್ರತೆಗೆ ಗಂಭೀರ ಆಪತ್ತನ್ನು ತಂದೊಡ್ಡುತ್ತಿದೆ. ಒಂದು ವೇಳೆ ಆಡಳಿತವು ಈಗಲೇ ಇದರ ಮೇಲೆ ದೃಢವಾದ ನಿಯಂತ್ರಣವನ್ನು ಸಾಧಿಸದಿದ್ದರೆ, ಭವಿಷ್ಯದಲ್ಲಿ ಫ್ರಾನ್ಸ್ ಇದಕ್ಕೆ ಭಾರಿ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಕಠಿಣವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಶ್ರೀ. ಮಿತ್ರ ಅವರು ಈ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ವಿನಂತಿಸಿದರು. ಸಾರ್ವಜನಿಕ ಭದ್ರತಾ ನೀತಿಯನ್ನು ತುರ್ತಾಗಿ ಜಾರಿಗೆ ತರುವಾಗ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಹೊಂದಿರಬೇಕು ಎಂದೂ ಅವರು ಹೇಳಿದರು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid