ನೆರೆಯ ತರಬೇತಿ ಕೇಂದ್ರದ ಮುಖ್ಯಸ್ಥರು ಸೇರಿದಂತೆ 3 ಜನರ ಬಂಧನ

ಪಾಟಲಿಪುತ್ರ (ಬಿಹಾರ) – ಇಲ್ಲಿ ಮೇ 2 ರ ರಾತ್ರಿ ಪ್ರಸಿದ್ಧ ಖಾನ್ ಸರ್ ಅವರ ‘ಗ್ಲೋಬಲ್ ಸ್ಟಡೀಸ್ ಕೋಚಿಂಗ್’ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೆ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ पोलिसांनी ‘ಜ್ಞಾನ ಬಿಂದು ಕೋಚಿಂಗ್’ನ ಮುಖ್ಯಸ್ಥ ರೋಷನ್ ಆನಂದ್ ಸೇರಿದಂತೆ ಅವರ ಇಬ್ಬರು ಸಹೋದ್ಯೋಗಿಗಳಾದ ಅಭಿಷೇಕ್ ಮತ್ತು ಗೌರವ್ ಅವರನ್ನು ಬಂಧಿಸಿದ್ದಾರೆ. ಇಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದೂ ಪ್ರತಿಪಾದಿಸಲಾಗಿತ್ತು; ಆದರೆ ಅದು ಸುಳ್ಳೆಂದು ತಿಳಿದುಬಂದಿದೆ.
ಖಾನ್ ಸರ್ ಅವರ ತರಬೇತಿ ಕೇಂದ್ರದ (ಕೋಚಿಂಗ್) ಪಕ್ಕದಲ್ಲೇ ಜ್ಞಾನ ಬಿಂದು ಕೋಚಿಂಗ್ ಇದೆ. ಜ್ಞಾನ ಬಿಂದು ಕೋಚಿಂಗ್ ನ ಫಲಕದ (ಬೋರ್ಡ್) ಮೇಲೆ ಖಾನ್ ಸರ್ ಅವರ ಭಿತ್ತಿಪತ್ರವನ್ನು (ಪೋಸ್ಟರ್) ಅಂಟಿಸಲಾಗಿತ್ತು. ಇದೇ ವಿಷಯವಾಗಿ ವಿವಾದ ಉಂಟಾಗಿ, ನಂತರ ಪ್ರಕರಣವು ತೀವ್ರರೂಪಕ್ಕೆ ತಿರುಗಿತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!