ಪರಾತ್ಪರ ಗುರು ಡಾ. ಆಠವಲೆಯವರ ಅಧ್ಯಯನನಿಷ್ಠತೆಯ ಒಂದು ಉದಾಹರಣೆ

ಶ್ರೀ. ರಾಮ ಹೊನಪ

‘ಒಮ್ಮೆ ಗೋವಾದ, ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಓರ್ವ ಗುರೂಜಿಯವರು ಬಂದಿದ್ದರು. ಅವರ ವಾಸ್ತುಶಾಸ್ತ್ರ, ಆಯುರ್ವೇದ, ವಿಶಿಷ್ಟ ಮಾದರಿಯ ಕಲ್ಲುಗಳು ಮುಂತಾದ ವಿವಿಧ ವಿಷಯಗಳ ಬಗ್ಗೆ ಆಳವಾದ ಅಭ್ಯಾಸವಿತ್ತು. ಆ ಗುರೂಜಿಯವರು ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ದೂರ ಮಾಡಲು ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ವಿವಿಧ ದಿಕ್ಕುಗಳಲ್ಲಿ ಸ್ಫಟಿಕಗಳನ್ನು ಇಡಲು ಹೇಳಿದ್ದರು. ಪರಾತ್ಪರ ಗುರುದೇವರು ನನಗೆ, “ಈ ಸ್ಫಟಿಕವನ್ನು ಕೈಯಲ್ಲಿ ಹಿಡಿದು ಸೂಕ್ಷ್ಮದಲ್ಲಿ ಏನು ಅರಿವಾಗುತ್ತದೆಯೆಂದು ನೋಡು !”, ಎಂದು ಹೇಳಿದರು. ಅದರ ನಂತರ ನಾನು ಆ ರೀತಿ ಪ್ರಯೋಗ ಮಾಡಿದೆನು ಹಾಗೂ ಅವರಲ್ಲಿ “ಸ್ಫಟಿಕದಿಂದ ತೊಂದರೆದಾಯಕ ಅಥವಾ ಒಳ್ಳೆಯ ಹೀಗೆ ಏನೂ ಅರಿವಾಗುವುದಿಲ್ಲ. ಯೋಗ್ಯ ಏನಿದೆ ?” ಎಂದು ಕೇಳಿದೆನು. ಆಗ ಅವರು, “ನಿನ್ನ ಉತ್ತರವು ಸರಿಯಾಗಿದೆ”, ಎಂದು ಹೇಳಿದರು. ಅದರ ನಂತರ ನಾನು ಪರಾತ್ಪರ ಗುರು ಡಾಕ್ಟರರಿಗೆ, “ಗುರುಜಿಯವರು ಹೇಳಿದ ಉಪಾಯಗಳ ಯಾವುದೇ ಪರಿಣಾಮವಾಗುವುದಿಲ್ಲವೆಂದರೂ, ನಾವು ಅವರು ಹೇಳಿದಂತೆ ಉಪಾಯವನ್ನು ಮಾಡಿದ್ದೇವೆ. ಅದರ ಹಿಂದಿನ ಕಾರಣವೇನು ?”, ಎಂದು ಕೇಳಿದೆನು. ಆಗ ಅವರು, “ಈ ಮೂಲಕ ನಮ್ಮ ಒಂದು ಹೊಸ ವಿಷಯದ ಅಧ್ಯಯನವಾಗಲಿದೆ. ಮುಂದೆ ಈ ಅಧ್ಯಯನದ ಮುಂಬರುವ ಗ್ರಂಥದಲ್ಲಿ ಒಂದು ಪುಟವಿರಲಿದೆ. ಅದಕ್ಕಾಗಿ ಇದೆಲ್ಲವೂ ನಡೆದಿದೆ”, ಎಂದು ಹೇಳಿದರು. ಇದನ್ನು ಕೇಳಿ ನನಗೆ ಪರಾತ್ಪರ ಗುರು ಡಾಕ್ಟರರ ಅಪಾರ ಅಧ್ಯಯನ ನಿಷ್ಠತೆಯ ಬಗ್ಗೆ ಆಶ್ಚರ್ಯವೆನಿಸಿತು. ಅದರಲ್ಲಿ ವಿಶೇಷವೆಂದರೆ ‘ಪರಾತ್ಪರ ಗುರು ಡಾಕ್ಟರರಿಗೆ ತುಂಬಾ ಶಾರೀರಿಕ ದಣಿವಿದ್ದರೂ ಅವರು ಪ್ರತಿಯೊಂದು ವಿಷಯದ ಕಡೆಗೆ ಅಧ್ಯಯನ ನಿಷ್ಠತೆಯಿಂದ ಹಾಗೂ ಸಮಷ್ಟಿಯ ದೃಷ್ಟಿಯಿಂದ ನೋಡುತ್ತಾರೆ’, ಎಂದು ಗಮನಕ್ಕೆ ಬಂದಿತು.’ – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ಗೋವಾ.