ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ವರ್ತಮಾನದಲ್ಲಿ ಧರ್ಮಶಿಕ್ಷಣ ಮತ್ತು ಧರ್ಮಾಚರಣೆಯ ಅಭಾವದಿಂದ ಸಮಾಜದ ಹೆಚ್ಚಿನ ಜನರಲ್ಲಿ ಸ್ವಾರ್ಥ ಅಥವಾ ತಮೋಗುಣವು ಹೆಚ್ಚಾಗುತ್ತಿರುವುದರಿಂದ ಸಮಾಜ, ರಾಷ್ಟ್ರ ಮತ್ತು ಧರ್ಮ ಹಾನಿಯ ಕಾರ್ಯವಾಗುತ್ತಿದೆ. ಈ ತಪ್ಪು ಕರ್ಮವನ್ನು ಸಂಪೂರ್ಣ ಸಮಾಜವು ಭೋಗಿಸಬೇಕಾಗುತ್ತದೆ; ಏಕೆಂದರೆ ಸಮಾಜವು ಅದನ್ನು ದುರ್ಲಕ್ಷಿಸುತ್ತದೆ.

ಪೂ. ರಮಾನಂದ ಅಣ್ಣನವರ ಬೆಂಗಳೂರು ಪ್ರವಾಸದಲ್ಲಿ ಅಲ್ಲಿಯ ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಬಂದ ಅನುಭೂತಿಗಳು

‘ಪೂ. ಅಣ್ಣನವರು ಪ್ರಸಾದ-ಮಹಾಪ್ರಸಾದ, ತಮ್ಮ ಇಷ್ಟಗಳಿಗೆ ಕಡಿಮೆ ಮಹತ್ವವನ್ನು ನೀಡುತ್ತಾರೆ. ಸಾಧಕರಿಂದ ಅವರ ಮಹಾಪ್ರಸಾದ ತಯಾರಿಸುವಲ್ಲಿ ಏನಾದರೂ ತಪ್ಪಾದರೂ, ಅವರು ಅದಕ್ಕೆ ಹೆಚ್ಚು ಮಹತ್ವವನ್ನು ನೀಡದೇ ‘ಚೆನ್ನಾಗಿದೆ, ಎಂದೇ ಹೇಳುತ್ತಾರೆ ಅಥವಾ ‘ಏನೂ ತೊಂದರೆಯಿಲ್ಲ, ಎಂದು ಸಾಧಕರಿಗೆ ಹೇಳುತ್ತಾರೆ.

ಮಂಗಳೂರಿನ ಸನಾತನದ ಸಾಧಕಿ ಕು. ಮಂಜೂಷಾ ಪೈ ಇವರು ಪ್ರಥಮ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೯೯ ಅಂಕಗಳನ್ನುಗಳಿಸಿ ತೇರ್ಗಡೆ !

ಮಂಗಳೂರಿನ ಸನಾತನದ ಸಾಧಕಿ ಸೌ. ಲಕ್ಷ್ಮಿ ಪೈ ಇವರ ಮಗಳಾದ ಕು. ಮಂಜೂಷಾ ಪೈ ಇವರು ಪ್ರಥಮ ಪಿ.ಯು.ಸಿ.ಯಲ್ಲಿ ಶೇ. ೯೯ ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ಕು. ಮಂಜೂಷಾ ಪೈ ಇವರು ಕಳೆದ ೩ ವರ್ಷಗಳಿಂದ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುತ್ತಿದ್ದಾರೆ.

ಸಾಧನೆಯ ಬಗ್ಗೆ ಮಾರ್ಗದರ್ಶನ ಮತ್ತು ಪ್ರತ್ಯಕ್ಷ ತಮ್ಮ ಆಚರಣೆಯಿಂದ ಸಾಧಕರನ್ನು ತಯಾರಿಸುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ಸಾಧನೆಯಲ್ಲಿ ತೊಡಗಿಸಿ ಸಾಧನೆಯನ್ನು ಮಾಡಿಸಿಕೊಂಡರು. ಇದಕ್ಕಾಗಿ ಅವರು ಅಪಾರ ಶ್ರಮವಹಿಸಿದರು. ಒಳ್ಳೆಯ ಜಾಣ ವಿದ್ಯಾರ್ಥಿಗೆ ಕಲಿಸಿ ಯಾರು ಬೇಕಾದರೂ ಉನ್ನತ ದರ್ಜೆಯಲ್ಲಿ ತರಬಹುದು; ಆದರೆ ‘ದಡ್ಡ ವಿದ್ಯಾರ್ಥಿಗೆ ಕಲಿಸಿ ಅವನನ್ನು ಉನ್ನತ ದರ್ಜೆಯಲ್ಲಿ ತರುವುದು ಎಷ್ಟು ಕಠಿಣವಾಗಿರುತ್ತದೆಯೋ, ಇದೂ ಅಷ್ಟೇ ಕಠಿಣವಾಗಿದೆ.

ಕೊರೋನಾ ರೋಗಾಣುಗಳ ಸಂಕ್ರಮಣದಿಂದ ಮೃತಪಟ್ಟ ಜನರ ಮೃತದೇಹಗಳನ್ನು ಶವಾಗಾರದಲ್ಲಿಡುವುದು ಅಥವಾ ಹೂಳುವುದಕ್ಕಿಂತ ಅಗ್ನಿ ಸಂಸ್ಕಾರ ಮಾಡುವುದೇ ಎಲ್ಲ ದೃಷ್ಟಿಯಿಂದ ಯೋಗ್ಯ !

ಮೃತದೇಹವನ್ನು ದಫನ ಮಾಡುವುದು ಅಥವಾ ಅದನ್ನು ಶವಾಗಾರದಲ್ಲಿಡುವುದರಿಂದ ಶಾರೀರಿಕ, ಮಾನಸಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಾಗುವ ಹಾನಿಗಳನ್ನು ತಡೆಯಲು ಮೃತದೇಹದ ಮೇಲೆ ಅಗ್ನಿಸಂಸ್ಕಾರಮಾಡಿ ಅದನ್ನು ದಹನ ಮಾಡುವುದು ಎಲ್ಲ ದೃಷ್ಟಿಯಿಂದಲೂ ಯೋಗ್ಯವಾಗಿದೆ.

ಸಾಧಕರೇ, ಈ ತೀವ್ರ ಆಪತ್ಕಾಲದಲ್ಲಿ ನಾವು ಜೀವಂತರಾಗಿದ್ದೇವೆ, ಅದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಹಾಗೂ ಎಲ್ಲ ಸಂತರ ಚರಣಗಳಲ್ಲಿ ಮನಃಪೂರ್ವಕ ಹಾಗೂ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸೋಣ !

ಸನಾತನ ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟ ಕೆಲವು ಸಂತರು ಪ್ರತಿದಿನ ಸಾಧಕರ ಹಾಗೂ ಹಿಂದುತ್ವನಿಷ್ಠರ ರಕ್ಷಣೆಗಾಗಿ ಜಪ, ತಪ, ಯಜ್ಞ, ಯಾಗ, ಧಾರ್ಮಿಕ ವಿಧಿ ಹಾಗೂ ಅನುಷ್ಠಾನಗಳನ್ನು ಮಾಡುತ್ತಾರೆ. ಅವರ ಕೃಪೆಯಿಂದಲೇ ಸಾಧಕರು ಹಾಗೂ ಹಿಂದುತ್ವನಿಷ್ಠರ ಮೇಲಿನ ಸೂಕ್ಷ್ಮದಲ್ಲಿನ ಆಕ್ರಮಣಗಳನ್ನು ಹಿಂದಿರುಗಿ ಅವರ ರಕ್ಷಣೆಯಾಗುತ್ತಿದೆ.

ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸಮುದ್ರ ಹಾಗೂ ನದಿಗಳನ್ನು ಕಲುಷಿತ ಮಾಡುವುದು, ಅಲ್ಲಿ ಅಭಿವೃದ್ದಿ ಹೆಸರಿನಲ್ಲಿ ಸುಂದರ ಪರಿಸರ ಹಾಳು ಮಾಡುವುದು, ಪ್ರಾಣಿಗಳನ್ನು ಕೊಲ್ಲುವುದು, ಹಾಗೂ ಜಲ ಪ್ರದೂಷಣೆ ಮಾಡಿ, ರಾಸಾಯನಿಕಗಳಿಂದ ಭೂಮಿಯನ್ನು ಬರಡುಗೊಳಿಸಿ ಎಲ್ಲ ಆಪತ್ತುಗಳನ್ನು ಎದುರಿಸಬೇಕಾಗಿದೆ.

ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ವಿಜ್ಞಾನಿಗಳಿಗನುಸಾರ ಈ ಗ್ಯಾಸ್‌ನ ಹೊರಸೂಸುವಿಕೆಯು ಇದೇ ರೀತಿ ಮುಂದುವರಿದರೆ ೨೧ ನೇ ಶತಮಾನದಲ್ಲಿ ಪೃಥ್ವಿಯ ತಾಪಮಾನವು ೩ ಡಿಗ್ರಿಯಿಂದ ೮ ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗುತ್ತದೆ. ಹೀಗಾದರೆ ಇದರಿಂದ ಪರಿಣಾಮಗಳು ಭಯಂಕರವಾಗಿರುವವು. ಜಗತ್ತಿನ ಅನೇಕ ಕಡೆಗಳಲ್ಲಿ ಆಚ್ಛಾದಿತವಾದ ಹಿಮದ ಹೊದಿಕೆಗಳು ಕರಗುವವು, ಸಮುದ್ರದ ಜಲಮಟ್ಟವು ಅನೇಕ ಅಡಿಗಳಷ್ಟು ಹೆಚ್ಚಾಗುವುದು.

ಹಿಂದೂಗಳೇ, ‘ಗೋಗ್ರಾಸವನ್ನು ಆಕಳಿಗೇ ಕೊಡುತ್ತೀರಲ್ಲ ?

ಹಿಂದೂ ಧರ್ಮದಲ್ಲಿ ‘ಗೋಗ್ರಾಸವನ್ನು ಪುಣ್ಯದಾಯಕವೆಂದು ತಿಳಿಯಲಾಗುತ್ತದೆ. ನಮ್ಮಲ್ಲಿ ಹಬ್ಬಹರಿದಿನಗಳಂದು ಗೋಗ್ರಾಸನ್ನು ನೀಡದೇ ಭೋಜನ ಮಾಡದಿರುವ ಹಿಂದೂಗಳಿದ್ದಾರೆ, ಹಾಗೆಯೇ ಈಗಲೂ ನಿಯಮಿತವಾಗಿ ಪ್ರತಿದಿನ ಗೋಗ್ರಾಸ ನೀಡದೇ ಭೋಜನ ಮಾಡದಿರುವ ಹಿಂದೂಗಳೂ ನಮ್ಮಲ್ಲಿದ್ದಾರೆ; ಆದರೆ ಈ ತುತ್ತನ್ನು ಆಕಳಿಗೇ (ಗೋವುಗಳಿಗೇ) ತಿನ್ನಿಸುತ್ತೀರಲ್ಲ, ಎಂಬುದನ್ನು ನೋಡುವುದು ಮಾತ್ರ ಆವಶ್ಯಕವಾಗಿದೆ.

ಶ್ರೀರಾಮನವಮಿಯಂದು ಶ್ರೀರಾಮನ ವೇಶದಲ್ಲಿ ತನ್ನ ತುಂಟತನ ಮರೆತು ಶ್ರೀರಾಮನಂತೆ ಗಂಭೀರ, ಶಾಂತ ಹಾಗೂ ಪ್ರೇಮಮಯ ರೂಪ ತೋರಿಸುವ ಸನಾತನದ ಮೊದಲ ಬಾಲ ಸಂತ ಪೂ. ಭಾರ್ಗವರಾಮ ಪ್ರಭು (೩ ವರ್ಷಗಳು) !

ಪೂ. ಭಾರ್ಗವರಾಮರಿಗೆ ಶ್ರೀರಾಮನಂತೆ ಎಲ್ಲ ವಸ್ತ್ರಾಲಂಕಾರಗಳನ್ನು ತೊಡಿಸಿದ ಬಳಿಕ ಕೊನೆಯಲ್ಲಿ ಅವರ ಕೈಯಲ್ಲಿ ಧನುಷ್ಯ-ಬಾಣಗಳನ್ನು ಕೊಡುವಾಗ ಅವರು ಧನುಷ್ಯ-ಬಾಣಕ್ಕೆ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದರು. ಹಿಂದಿನ ಕಾಲದ ರಾಜರು ಶಸ್ತ್ರಗಳನ್ನು ಧರಿಸುವಾಗ ತಮ್ಮ ಶಸ್ತ್ರಗಳಿಗೆ ವಂದಿಸುತ್ತಿದ್ದರೋ, ಅದೇ ರೀತಿ ಪೂ. ಭಾರ್ಗವರಾಮರು ಧನುಷ್ಯ-ಬಾಣಗಳನ್ನು ಹಿಡಿದುಕೊಳ್ಳೂವ ಮೊದಲು ಅದಕ್ಕೆ ನಮಸ್ಕರಿಸಿದರು.