ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

೧. ಕಲಿಯುಗದಲ್ಲಿ ಮಾನವನ ಜೀವನ ಯಂತ್ರದಂತಾಗಿದೆ, ಶ್ರೀ ಗುರುಗಳ ಸ್ಪರ್ಷಮಣಿಯ ಕೇವಲ ಸ್ಪರ್ಶದಿಂದ ಅವನಿಗೆ ಪುನರ್ಜೀವನ ಸಿಗುವುದು ಮಾನವನು ಮಾನವನೆಂದೇ ಜೀವಿಸಬೇಕು. ಪ್ರಸ್ತುತ ಮಾನವನು ಸಂಪೂರ್ಣ ವಿಜ್ಞಾನದ ಗುಲಾಮನಾಗಿದ್ದಾನೆ, ಆದುದರಿಂದ ಅವನಲ್ಲಿನ ಜೀವಂತಿಕೆಯು ಕಡಿಮೆಯಾಗುತ್ತಾ ಹೋಗುತ್ತಿದೆ. ಅವನು ಒಂದು ಯಂತ್ರ ಮಾನವನಲ್ಲಿ ರೂಪಾಂತರನಾಗಿದ್ದಾನೆ. ಮಾನವನ ಜೀವನವು ಯಂತ್ರದಂತಾಗಿರುವುದರಿಂದ ಅವನಲ್ಲಿನ ಕೌಂಟುಂಬಿಕ ಬಾಂಧವ್ಯ, ಪ್ರೇಮಭಾವ ಕಳೆದುಹೋಗಿದೆ. ಅದಕ್ಕಾಗಿ ಸಾಧನೆಯನ್ನು ಮಾಡಬೇಕು. ಸಾಧನೆಯನ್ನು ಮಾಡುವುದರಿಂದ ಮನುಷ್ಯನಿಗೆ ಶ್ರೀ ಗುರುಗಳ ಮತ್ತು ದೇವರ ಸ್ಪರ್ಶವಾಗುತ್ತದೆ. ಜೀವನದಲ್ಲಿ ಶ್ರೀ ಗುರುಗಳ ಸ್ಪರ್ಶಮಣಿಯ ಸ್ಪರ್ಶಕ್ಕೆ ಬಹಳ ಮಹತ್ವವಿದೆ. ಶ್ರೀ ಗುರುಗಳೇ ಸಾಧಕನಲ್ಲಿ ಪ್ರಾಣದ ಸಂಕ್ರಮಣವನ್ನು ಮಾಡಬಹುದು; ಅಂದರೆ ಅವನಲ್ಲಿ ನಂದಿಹೋಗುತ್ತಿರುವ ಆತ್ಮಜ್ಯೋತಿಗೆ ಪುನರ್ಜೀವನವನ್ನು ನೀಡಬಲ್ಲರು. ನರನಿಂದ ನಾರಾಯಣನನ್ನಾಗಿ ಮಾಡುವ ಸಾಮರ್ಥ್ಯವು ಕೇವಲ ಶ್ರೀ ಗುರುಗಳಲ್ಲಿಯೇ ಇರುತ್ತದೆ.

೨. ವಾರ್ತೆಗಳ ಬರವಣಿಗೆಯಿಂದ ಸಮಾಜ ಪ್ರಬೋಧನೆ ಆಗುತ್ತಿದ್ದರೆ, ಮಾತ್ರ ಆ ವಾರ್ತೆಗಳ ಬರವಣಿಗೆಯಿಂದ ಸಾಧನೆಯಾಗುವುದು

ಕೇವಲ ವಾರ್ತೆಗಳನ್ನು ಬರೆದರೆ ಸಾಧನೆಯಾಗುವುದಿಲ್ಲ, ಆ ವಾರ್ತೆಗಳಿಂದ ಸಮಾಜಕ್ಕೆ ಪ್ರಬೋಧನೆ ಸಿಗಬೇಕು, ಹೀಗಾದರೆ ಮಾತ್ರ ಸಾಧನೆಯಾಗುತ್ತದೆ, ಆದುದರಿಂದ ಸಮಾಜಕ್ಕೆ ಪ್ರಬೋಧನೆಯಾಗುವ ಬರವಣಿಗೆಗಳನ್ನು ಬರೆಯಬೇಕು. ಬರವಣಿಗೆಯಿಂದಾಗುವ ಪ್ರಬೋಧನೆಯು ಸಮಾಜದ ಪ್ರಬೋಧನೆಯನ್ನು ಮಾಡುವ ಮತ್ತು ಒಂದು ಆದರ್ಶ ಸಮಾಜವನ್ನು ನಿರ್ಮಿಸಲು ಮಾರ್ಗದರ್ಶಕವಾಗಿರಬೇಕು. ಹೀಗಾದರೇ ಮಾತ್ರ ಪತ್ರಿಕೋದ್ಯಮದಿಂದ, ಅಂದರೆ ಅದಕ್ಕಾಗಿ ಮಾಡಿದ ಬರವಣಿಗೆಯಿಂದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ.

೩. ಸಮಷ್ಟಿ ಸಾಧನೆ ಮಾಡುವಾಗ ಎಲ್ಲ ಕಡೆಗೆ ಗಮನವಿರುವುದೆಂದರೆ ಕಾಲಾನುಸಾರ ಸಾಧನೆ

ಸಮಷ್ಟಿ ಸಾಧನೆ ಮಾಡುವುದೆಂದರೆ, ಎಲ್ಲ ಕಡೆಗೆ ನಮ್ಮ ಗಮನವಿರಬೇಕು. ವ್ಯಷ್ಟಿ ಸಾಧನೆಯಲ್ಲಿ ಬಾಹ್ಯ ಜಗತ್ತಿನೊಂದಿಗೆ ನಮ್ಮ ಸಂಪರ್ಕ ಕಡಿಯುವುದು, ಅಂದರೆ ಧ್ಯಾನ ತಗಲುವುದು ಎಂದಾಗುತ್ತದೆ. ಪ್ರಸ್ತುತ ಕಾಲದಲ್ಲಿ ಇಂತಹ ಧ್ಯಾನ ಬೇಡ ಕಲಿಯುಗಕ್ಕೆ ಆವಶ್ಯಕವಿರುವ ಧ್ಯಾನ ಬೇಕು, ಹೀಗಾದರೆ ಮಾತ್ರ ಅದು ಕಾಲಾನುಸಾರ ಸಾಧನೆಯಾಗುತ್ತದೆ.

೪. ಯಾವುದೇ ಸೇವೆಯನ್ನು ಮಾಡುವಾಗ ಅದನ್ನು ಆ ಪರಿಸ್ಥಿತಿಯಲ್ಲಿನ ದೇವರನ್ನು ಪ್ರಸನ್ನಗೊಳಿಸಲು ಮಾಡುತ್ತಿರುವೆವು ಎಂಬ ಭಾವವನ್ನಿಟ್ಟುಕೊಂಡರೆ ನಿರಪೇಕ್ಷತೆ ಬರುವುದು ಮತ್ತು ಅದರಿಂದಲೇ ಮುಂದೆ ವೈರಾಗ್ಯ ಬರುವುದು

ನಾವು ಪ್ರಾರ್ಥನೆಯನ್ನು ಮಾಡಿ ಸೇವೆಯನ್ನು ಪ್ರಾರಂಭಿಸುವಾಗ ‘ಸೇವೆಯನ್ನು ಯಾರಿಗಾಗಿ ಮಾಡುತ್ತಿದ್ದೇನೆ ?, ಈ ವಿಚಾರಕ್ಕಿಂತ ಆ ಪರಿಸ್ಥಿತಿಯಲ್ಲಿನ ತತ್ತ್ವಕ್ಕೆ ಅಥವಾ ದೇವರನ್ನು ಪ್ರಸನ್ನಗೊಳಿಸಲು ಸೇವೆಯನ್ನು ಮಾಡುತ್ತಿದ್ದೇವೆ, ಎಂಬ ಭಾವ ಮಹತ್ವದ್ದಾಗಿದೆ, ಹೀಗಾದರೆ ಮಾತ್ರ ಆ ಸೇವೆಯು ಅಪೇಕ್ಷಾರಹಿತ ಸೇವೆಯಾಗುತ್ತದೆ. ಇದರಿಂದಲೇ ಒಂದು ದಿನ ವೈರಾಗ್ಯ ಬರುತ್ತದೆ. ವೈರಾಗ್ಯವೆಂದರೆ ಎಲ್ಲವನ್ನು ಮಾಡಿಯೂ ಅದರಲ್ಲಿ ಇಲ್ಲದಂತಿರುವುದು.

೫. ‘ಸಂಸಾರದಲ್ಲಿ ತಮ್ಮ ಮಕ್ಕಳ ತಾಯಿಯಾಗುವುದು ಸಹಜ ಸಾಧ್ಯವಿದೆ; ಆದರೆ ಸಾಧನೆಯನ್ನು ಮಾಡಿದರೆ ನಾವು ಎಲ್ಲರ ತಾಯಿಯಾಗಬಹುದು !

೬. ಪ್ರೇಮಭಾವದ ಮಹತ್ವ

ಅ. ನೀವು ಜನರಿಗಾಗಿ ಜೀವಿಸಿದರೆ, ದೇವರು ನಿಮಗಾಗಿ ಜೀವಿಸುತ್ತಾನೆ. ನೀವು ಜನರದವರಾದರೆ, ದೇವರು ನಿಮ್ಮವನಾಗುತ್ತಾನೆ. ನೀವು ಸಮಷ್ಟಿಗೆ ಪ್ರೇಮವನ್ನು ನೀಡಿದರೆ, ದೇವರ ಪ್ರೀತಿಯು ನಿಮಗೆ ತಾನಾಗಿಯೇ ಪ್ರಾಪ್ತವಾಗುತ್ತದೆ.

ಆ. ದೇವರ ಸ್ಮರಣೆಯನ್ನು ಮಾಡಿದರೆ, ನಮಗೆ ಆನಂದವಾಗುತ್ತದೆ, ಹಾಗೆಯೇ ನಮ್ಮ ನೆನಪಿನಿಂದಲೂ ಇತರರಿಗೂ

ಆನಂದವಾಗಬೇಕು. ದೇವರಂತೆ ನಾವು ಸಹ ಎಲ್ಲರಿಗೂ ಬೇಕು ಬೇಕು ಎಂದೆನಿಸಬೇಕು. ಅದಕ್ಕಾಗಿ ಪ್ರೇಮಭಾವ ಮಹತ್ವದ್ದಾಗಿದೆ.

೭. ದೇವರು ಸೃಷ್ಟಿಯ ನಿರ್ಮಿತಿಯನ್ನು ಮಾಡುವಾಗ ಪ್ರಕೃತಿಯನ್ನು ನಿರ್ಮಿಸಿದನು; ಆದರೆ ಮಾನವನು ಮಾತ್ರ ಅದರ ವಿಕೃತಿಯನ್ನು ಮಾಡಿದನು ಮತ್ತು ದೇವರ ನಿರ್ಮಿತಿಯನ್ನು ಹಾಳು ಮಾಡಿ ಪೃಥ್ವಿಯನ್ನು ವಿನಾಶದ ಕಡೆಗೆ ತೆಗೆದುಕೊಂಡು ಹೋದನು.

– ಸಂಗ್ರಹಕಾರರು, ಶ್ರೀ. ದಿವಾಕರ ಆಗಾವಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೩.೨೦೨೦)