ಕೋಟೆಯ ಮೇಲೆ ಸ್ವಚ್ಛತಾ ಅಭಿಯಾನ ನಡೆಸಿದ ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ನಿತಿನ್ ಬಗಾಟೆ ಅವರಿಂದ ಶಿವಪ್ರೇಮಿಗಳಿಗೆ ಕರೆ
ಮಣಿಯಾರ್ ಅವರಿಂದ ಕೋಟೆಯ ಮಾಲೀಕತ್ವದ ಹಕ್ಕಿನ ಕುರಿತು ಸ್ಪಷ್ಟನೆ

ಗುಹಾಗರ – ತಾಲೂಕಿನ ಐತಿಹಾಸ ಗೋಪಾಲಗಡ ಕೋಟೆಯ ಮೇಲೆ ರತ್ನಾಗಿರಿ ಜಿಲ್ಲಾ ಪೊಲೀಸ್ ದಳದ ವತಿಯಿಂದ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಸ್ವತಃ ಪಾಲ್ಗೊಂಡ ರತ್ನಾಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿತಿನ್ ಬಗಾಟೆ ಅವರು ಕೋಟೆಯ ಭೂಸ್ವಾಧೀನದ ಕುರಿತು ಮಾಹಿತಿಯನ್ನು ನೀಡಿದರು. ‘ಈ ಕೋಟೆ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ. ಆದ್ದರಿಂದ ಕೋಟೆಪ್ರೇಮಿಗಳು ಮತ್ತು ಶಿವಪ್ರೇಮಿಗಳು ಯಾವುದೇ ವದಂತಿ ಅಥವಾ ಸುಳ್ಳು ಮಾತುಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ಏನಾದರೂ ಸಂಶಯಗಳಿದ್ದಲ್ಲಿ ನೇರವಾಗಿ ಪೊಲೀಸರನ್ನು ಸಂಪರ್ಕಿಸಿ’, ಎಂದು ಪೊಲೀಸರು ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೋಟೆಯ ಮಾಲೀಕತ್ವದ ಹಕ್ಕಿನ ಕುರಿತು ಅಯ್ಯಾಜ್ ಮಣಿಯಾರ್ ಅವರೂ ಸಹ ಸ್ಪಷ್ಟನೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ನಿತಿನ್ ಬಗಾಟೆ ಅವರು,
1. ಛತ್ರಪತಿ ಶಿವಾಜಿ ಮಹಾರಾಜರ ನೌಕಾದಳದ ಪ್ರಮುಖ ಭಾಗವಾಗಿದ್ದ ಗೋಪಾಲಗಡ ಕೋಟೆಯ ಮೇಲೆ ರತ್ನಾಗಿರಿ ಜಿಲ್ಲಾ ಪೊಲೀಸ್ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂಪೂರ್ಣ ಪರಿಸರವನ್ನು ಸ್ವಚ್ಛಗೊಳಿಸಿದರು.
2. ಮುಂಬಯಿ ಉಚ್ಚ ನ್ಯಾಯಾಲಯದ ಕೊಲ್ಲಾಪುರ ಪೀಠವು ನೀಡಿರುವ ಆದೇಶದನ್ವಯ, ಪುರಾತತ್ವ ಇಲಾಖೆಗೆ ಗೋಪಾಲಗಡ ಕೋಟೆಯ ಜಾಗದ ಭೂಸ್ವಾಧೀನ ಪ್ರಕ್ರಿಯೆಯನ್ನು ನಡೆಸಿ ಒಂದು ವರ್ಷದೊಳಗೆ ಸ್ವಾಧೀನಕ್ಕೆ ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದೆ. ಇದರಂತೆ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರು ಗುಂಪು ಸಂಖ್ಯೆ 82 ಮತ್ತು 83 ರ 7.5 ಎಕರೆ ಜಾಗದ ಭೂಸ್ವಾಧೀನಕ್ಕಾಗಿ ಜಿಲ್ಲಾಧಿಕಾರಿಗಳೊಂದಿಗೆ ಪತ್ರವ್ಯವಹಾರ ನಡೆಸಿದ್ದು, ಸರಕಾರಿ ದರದಂತೆ ತಗಲುವ ಮೊತ್ತವನ್ನು ತಿಳಿಸುವಂತೆ ಕೋರಿದ್ದಾರೆ.
3. ಗೋಪಾಲಗಡ ಕೋಟೆಯ ಒಳಗಿರುವ 7.5 ಎಕರೆ ಜಾಗವನ್ನು (ಪ್ರಸ್ತುತ ಎಲ್ಲಿ ಮಾವಿನ ತೋಟವಿದೆಯೋ) 1960 ರಲ್ಲಿ ಅಯ್ಯಾಜ್ ಮಣಿಯಾರ್ ಅವರ ಅಜ್ಜ ಖರೀದಿಸಿದ್ದರು. ತದನಂತರ 2016 ರಲ್ಲಿ ರಾಜ್ಯ ಸರಕಾರವು ಈ ಕೋಟೆಯನ್ನು ‘ರಾಜ್ಯ ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಿತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ