ಮಹರ್ಲೋಕದಲ್ಲಿನ ಜೀವವು ಸಾಧನೆಯನ್ನು ಮಾಡುತ್ತಾ ಮಾಡುತ್ತಾ ಜನಲೋಕ, ತಪೋಲೋಕ, ಮತ್ತು ಸತ್ಯಲೋಕ ಹೀಗೆ ಪ್ರವಾಸ ಮಾಡುತ್ತಾ ಮೋಕ್ಷಕ್ಕೆ ಹೋಗುತ್ತದೆ. ಈ ಆಧ್ಯಾತ್ಮಿಕ ಪ್ರವಾಸವನ್ನು ಕೆಲವು ಜೀವಗಳು ಬೇಗನೆ ಮತ್ತು ಕೆಲವು ಜೀವಗಳು ದೀರ್ಘಕಾಲದ ನಂತರ ಪೂರ್ಣಗೊಳಿಸುತ್ತವೆ; ಆದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ಜೀವಗಳಿಗೆ ಬೇಸರ ಬರದೇ ಅವುಗಳಿಗೆ ಸತತವಾಗಿ ಆನಂದವು ಸಿಗುತ್ತಿರುತ್ತದೆ. ಅದರ ಹಿಂದಿನ ಕೆಲವು ಕಾರಣಗಳನ್ನು ಮುಂದೆ ಕೊಡುತ್ತಿದ್ದೇವೆ.
೧. ಶರೀರದ ಬಂಧನ ಇಲ್ಲದಿರುವುದು ಅಲ್ಲಿನ ಜೀವಗಳಿಗೆ ಸ್ಥೂಲ ದೇಹವಿರುವುದಿಲ್ಲ. ಅದಕ್ಕಾಗಿ ಅವರಿಗೆ ಬಾಯಾರಿಕೆ – ಹಸಿವು, ರೋಗರುಜಿನಗಳು ಮತ್ತು ದೇಹದ ಮಿತಿ ಇರುವುದಿಲ್ಲ. ಶರೀರದ ಬಂಧನವಿರದ ಕಾರಣ ಲಿಂಗದೇಹವು ಸತತ ಸಾಧನೆಯನ್ನು ಮಾಡಬಹುದು.
೨. ಮನಸ್ಸಿನ ಏರಿಳಿತ ಇಲ್ಲದಿರುವುದು ಪೃಥ್ವಿಯಲ್ಲಿರುವಂತೆ ಅಲ್ಲಿ ಒಳ್ಳೆಯ ಮತ್ತು ಕೆಟ್ಟ ಘಟನೆಗಳಿಂದ ನಿರ್ಮಾಣವಾಗುವ ಪರಿಸ್ಥಿತಿ, ಇತರ ವ್ಯಕ್ತಿಗಳ ಸಂಪರ್ಕದಿಂದ ಘಟಿಸುವ ಪ್ರಸಂಗ ಅಥವಾ ತಮ್ಮ ಮನಸ್ಸಿನ ಏರಿಳಿತ ಹೀಗೆ ಯಾವುದೂ ಘಟಿಸದಿರುವುದರಿಂದ ಅಲ್ಲಿನ ಜೀವಗಳ ಮನಸ್ಸು ಸ್ಥಿರವಾಗಿದ್ದು ಅವರ ಸಾಧನೆಯು ಒಂದೇ ಲಯದಲ್ಲಿ ನಿರಂತರವಾಗಿ ನಡೆದಿರುತ್ತದೆ.
೩. ಕೆಟ್ಟ ಶಕ್ತಿಗಳ ತೊಂದರೆಯು ಇಲ್ಲದಿರುವುದು ಸ್ವರ್ಗಲೋಕದವರೆಗೆ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಬಹುದು. ಮಹರ್ಲೋಕದಿಂದ ಜೀವವು ಕೆಟ್ಟಶಕ್ತಿಗಳಿಂದ ಬಹುಶಃ ಸುರಕ್ಷಿತವಾಗಿರುತ್ತದೆ. ಸಾಮಾನ್ಯವಾಗಿ ಮಹರ್ಲೋಕದಿಂದ ಸತ್ಯಲೋಕದವರೆಗಿನ ಜೀವಗಳಿಗೆ ಯಾವುದೇ ಆಧ್ಯಾತ್ಮಿಕ ತೊಂದರೆಯು ಇರುವುದಿಲ್ಲ.
೪. ಪೃಥ್ವಿಯ ಮೇಲೆ ಸಾಧನೆ ಮಾಡಲು ವಿಶಿಷ್ಟ ಸ್ಥಾನ ಅಥವಾ ವೇಳೆಯ ಬಂಧನವಿರುತ್ತದೆ. ಅಲ್ಲಿ ಇಂತಹ ಯಾವುದೇ ಬಂಧನವಿರುವುದಿಲ್ಲ
೫. ಜೀವಕ್ಕೆ ಯಾವಾಗಲೂ ಅಮೃತದ ಅನುಭವ ಪಡೆಯಲು ಸಾಧ್ಯವಾಗುವುದು ಮನುಷ್ಯನು ಪ್ರತಿದಿನ ತನಗೆ ಇಷ್ಟವಾದ ತಿಂಡಿಯನ್ನು ತಿನ್ನುತ್ತಿದ್ದರೆ ಅವನಿಗೆ ಅದರ ಬಗ್ಗೆ ಕೆಲವೇ ದಿನಗಳಲ್ಲಿಯೇ ಬೇಸರ ಬರುತ್ತದೆ. ಅಲ್ಲಿನ ಜೀವಗಳಿಗೆ ಸಾಧನೆಯಿಂದ ಅಮೃತದ ಚಿರಂತನ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ, ಅಂದರೆ ಸತತವಾಗಿ ಆನಂದವನ್ನು ಅನುಭವಿಸಲು ಬರುತ್ತದೆ. ಆದ್ದರಿಂದ ಅವರಿಗೆ ಅಲ್ಲಿನ ಜೀವನವು ಬೇಸರವನ್ನು ತರದೇ ಅವರು ಅಲ್ಲಿ ದೀರ್ಘಕಾಲ ಆನಂದದಿಂದ ಇರುತ್ತಾರೆ.
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ (೬.೫.೨೦೨೦)