ನಮ್ಮ ಆತ್ಮೋನ್ನತಿಯ ತಳಮಳ ನಮಗಿಂತ ನಿಮಗೇ ಹೆಚ್ಚು !

ಸೌ. ಶಾರದಾ ಯೋಗಿಶ
ಪೂ. ರಮಾನಂದ ಗೌಡ

ನಮ್ಮ ಆತ್ಮೋನ್ನತಿಯ ತಳಮಳ

ನಮಗಿಂತ ನಿಮಗೇ ಹೆಚ್ಚು

ನಮ್ಮ ತಪ್ಪುಗಳನ್ನು ತಿದ್ದಿ ತೀಡಿದಿರಿ

ದಾರಿತೋರಿದಿರಿ ಪೂಜ್ಯ ಅಣ್ಣ ||೧||

ಸಾಧನೆಯ ಹಾದಿಯಲ್ಲಿ ಮಂದಗತಿ

ಇದ್ದಾಗ ಗುರುತಿಸಿ ಸತ್ಸಂಗ ನೀಡಿ

ಮುಂದಿನ ದಾರಿ ತೋರಿದಿರಿ

ಮಾರ್ಗದರ್ಶನ ಮಾಡಿದಿರಿ ಪೂಜ್ಯ ಅಣ್ಣ ||೨||

ವ್ಯಷ್ಟಿ ಸಮಷ್ಟಿ ಸಾಧನೆಯ ಪಥದಲಿ

ನಮ್ಮನ್ನೆಲ್ಲ ಕರೆದುಕೊಂಡು

ಗುರುಚರಣದವರೆಗೆ ಹೋಗುತ್ತಿದ್ದೀರಿ

ಸಾಧನೆಯಲಿ ಮುಂದಿನ ದಿಶೆ ತೋರಿದಿರಿ ಪೂಜ್ಯ ಅಣ್ಣ ||೩||

ಭಾವ ತಳಮಳ ಶ್ರದ್ಧೆ ಹೆಚ್ಚಿಸಲು ಹೇಳಿದಿರಿ

ಉದಾಹರಣೆಗಳ ಮೂಲಕ ಪ್ರೋತ್ಸಾಹ ನೀಡಿದಿರಿ

ಚೈತನ್ಯ ತುಂಬಿದಿರಿ ಪೂಜ್ಯ ಅಣ್ಣ ||೪||

ಕೆಲವೊಮ್ಮೆ ನಮ್ಮ ದೋಷ ಮತ್ತು ಅಹಂ ತೆಗೆಯಲು ಕಠೋರವಾಗಿ ಹೇಳಿದಿರಿ

ಮತ್ತೆ ಕೆಲವೊಮ್ಮೆ ಪ್ರೇಮಭಾವದಿಂದ ಅರಿವು ಮಾಡಿಕೊಟ್ಟಿದ್ದೀರಿ ಪೂಜ್ಯ ಅಣ್ಣ ||೫||

ಸಂಪೂರ್ಣ ಕರ್ನಾಟಕದ ಸಾಧನೆಯ ಚುಕ್ಕಾಣಿ ಹಿಡಿದಿದ್ದೀರಿ

ನಿಮ್ಮ ಚರಣಕೆ ಕೃತಜ್ಞತೆಯ ಪುಷ್ಪ ಸಮರ್ಪಿಸುವೆವು ಪೂಜ್ಯ ಅಣ್ಣ ||೬||

ಸತತ ಸಾಧಕರ ಸಾಧನೆಯಗಬೇಕು, ಗುರುಕಾರ್ಯ ವೃದ್ಧಿಯಾಗಬೇಕೆಂಬ

ತೀವ್ರ ತಳಮಳ ಇರುವ ಸಮಷ್ಟಿ ಸಂತರನ್ನು ನಮಗೆ ನೀಡಿದ

ಶ್ರೀ ಗುರುಚರಣಗಳಿಗೆ ಅನಂತ ಕೋಟಿ ಕೃತಜ್ಞತೆಗಳು… ||೭ ||

– ಸೌ. ಶಾರದಾ ಯೋಗೀಶ, ಬೆಂಗಳೂರು (೨೮.೫.೨೦೨೦, ಬೆಳಗ್ಗೆ ೧೦.೧೫)