ಪರಾತ್ಪರ ಗುರು ಡಾ. ಆಠವಲೆಯವರ ಮಹಾಮೃತ್ಯುಯೋಗವು ದೂರವಾಗಿ ಅವರಿಗೆ ದೀರ್ಘಾಯುಷ್ಯವು ಪ್ರಾಪ್ತವಾಗಲೆಂದು ಮಾಡಲಾದ ಯಾಗದ ಆಧ್ಯಾತ್ಮಿಕ ಲಾಭವು ಅವರಿಗೆ ಸಿಗದೆ ಸಮಷ್ಟಿಗೆ ಲಾಭವಾಗುವ ಹಿಂದಿನ ಕಾರಣ

ಪರಾತ್ಪರ ಗುರು ಡಾ. ಆಠವಲೆ

‘೨೦೧೯ ನೇ ಇಸವಿಯಲ್ಲಿ ಮಹರ್ಷಿಗಳ ಆಜ್ಞೆಯಂತೆ ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯುಯೋಗವು ದೂರವಾಗಿ ಅವರಿಗೆ ದೀರ್ಘಾಯುಷ್ಯವು ಪ್ರಾಪ್ತವಾಗಲೆಂದು ಸನಾತನ ಸಂಸ್ಥೆಯ ಗೋವಾದ ರಾಮನಾಥಿ ಆಶ್ರಮದಲ್ಲಿ ಒಂದು ಯಾಗವನ್ನು ಮಾಡಲಾಗಿತ್ತು. ಯಾಗದ ಸೂಕ್ಷ್ಮ ಪರೀಕ್ಷಣೆ ಮಾಡುವ ಸೇವೆಯನ್ನು ಭಗವಂತನು ನನ್ನಿಂದ ಮಾಡಿಸಿಕೊಂಡನು. ಆ ಸಮಯದಲ್ಲಿ ಅರಿವಾದ ಅಂಶಗಳನ್ನು ಕೆಳಗೆ ನೀಡಲಾಗಿದೆ. ಯಾಗವು ನಡೆಯುತ್ತಿರುವಾಗ ಅದರಿಂದ ಬಿಳಿ ಬಣ್ಣದ ಈಶ್ವರಿ ಶಕ್ತಿಯು ನಿರ್ಮಾಣವಾಗುತ್ತಿತ್ತು. ಈಶ್ವರಿ ಶಕ್ತಿಯು ಪರಾತ್ಪರ ಗುರು ಡಾಕ್ಟರರ ದಿಕ್ಕಿಗೆ ಹೋಗದೇ ವಾತಾವರಣದಲ್ಲಿ ಎಲ್ಲೆಡೆಗೆ ಹರಡಿ ಕಾರ್ಯವನ್ನು ಮಾಡುವುದು ಅರಿವಾಯಿತು. ಆಗ ನನ್ನ ಮನಸ್ಸಿನಲ್ಲಿ, ‘ಪರಾತ್ಪರ ಗುರು ಡಾಕ್ಟರರಿಗಾಗಿ ಯಾಗವು ನಡೆದಿರುವಾಗ ಅದರಿಂದ ಬರುವ ಶಕ್ತಿಯು ಅವರಿಗೆ ಸಿಗದೇ ಇತರ ಕಡೆಗೆ ಏಕೆ ಹೋಗುತ್ತಿದೆ ?’, ಎಂಬ ಪ್ರಶ್ನೆಯು ಮೂಡಿತು. ಅದಕ್ಕೆ ಸೂಕ್ಷ್ಮದಿಂದ ಮುಂದಿನಂತೆ ಉತ್ತರವು ದೊರಕಿತು, ‘ಪರಾತ್ಪರ ಗುರು ಡಾಕ್ಟರರು ಸಮಷ್ಟಿಯೊಂದಿಗೆ ಏಕರೂಪವಾಗಿದ್ದಾರೆ. ಯಾವಾಗ ಭಾರತದಲ್ಲಿನ ರಾಷ್ಟ್ರ ಹಾಗೂ ಧರ್ಮ ಇವುಗಳ ಹಾಳಾದ ಸ್ಥಿತಿಯಲ್ಲಿ ಸುಧಾರಣೆಯಾಗುವುದೋ, ಆಗಲೇ ಪರಾತ್ಪರ ಗುರು ಡಾಕ್ಟರರಿಗಾಗುತ್ತಿರುವ ಶಾರೀರಿಕ ತೊಂದರೆಯು ದೂರವಾಗಿ ಅವರ ಮೇಲಿನ ಮೃತ್ಯುವಿನ ಸಂಕಟವು ತಪ್ಪಲಿದೆ.’ – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೫.೨೦೨೦)