ಕೇಂದ್ರ ಸಚಿವ ರಾಮದಾಸ ಅಠಾವಳೆ ಅವರಿಂದ ವಿಚಿತ್ರ ಬೇಡಿಕೆ !
ಗಡಚಿರೋಲಿಯಲ್ಲಿನ ಮದ್ಯಪಾನ ನಿಷೇಧವನ್ನು ತೆರವುಗೊಳಿಸಲು ರಾಷ್ಟ್ರವಾದಿ ಕಾಂಗ್ರೆಸ್ ನಾಯಕನ ಬೇಡಿಕೆ !

ಭಿವಂಡಿ – ಕಳ್ಳಭಟ್ಟಿ ಮದ್ಯ ಕುಡಿಯುವುದರಿಂದ ಇವತ್ತಿನವರೆಗೆ ಸಾವಿರಾರು ಜನರು ಮೃತಪಟ್ಟಿದ್ದಾರೆ. ಪುಣೆ, ಪಿಂಪ್ರಿ-ಚಿಂಚವಡದಲ್ಲಿ 18 ರಿಂದ 19 ಜನರು ಮೃತಪಟ್ಟರು. ಕಾರ್ಮಿಕ ಜನರು ಕಷ್ಟಪಟ್ಟು ದುಡಿದು ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಮಾನಸಿಕ ಒತ್ತಡದ ಪ್ರಸಂಗದಲ್ಲಿ ಅವರು ಕಳ್ಳಭಟ್ಟಿ ಮದ್ಯ ಕುಡಿಯುತ್ತಾರೆ. ಪೊಲೀಸರು ಎಷ್ಟೇ ದಾಳಿ ಮಾಡಿದರೂ, ಕಳ್ಳಭಟ್ಟಿ ದಂಧೆಗಳು ನಡೆಯುತ್ತಲೇ ಇರುತ್ತವೆ. ಒಂದು ಕಡೆಯ ಕಳ್ಳಭಟ್ಟಿ ಮುಚ್ಚಿದರೂ, ಮತ್ತೊಂದು ಗಲ್ಲಿಯಲ್ಲಿ ಬಾಟಲಿಗಳು ಸಿಗುತ್ತವೆ. ಆದ್ದರಿಂದ ಅದು ಯಾವಾಗಲೂ ಸ್ಥಗಿತಗೊಳ್ಳುವುದೇ ಇಲ್ಲ. ಇದರ ಬದಲಾಗಿ ಕಳ್ಳಭಟ್ಟಿ ಮದ್ಯ ಅಧಿಕೃತಗೊಳಿಸಿರಿ, ಇದರಿಂದ ಸರಕಾರಕ್ಕೆ ಆದಾಯ ಸಿಗುತ್ತದೆ, ಹಾಗೂ ಬಡ ನಾಗರಿಕರ ಪ್ರಾಣ ಉಳಿಯುತ್ತದೆ, ಎನ್ನುವ ಹೇಳಿಕೆಯನ್ನು ಕೇಂದ್ರ ಸಚಿವ ರಾಮದಾಸ ಅಠಾವಳೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. ಅವರು ಭಿವಂಡಿಗೆ ಒಂದು ಕಾರ್ಯಕ್ರಮದ ನಿಮಿತ್ತ ಬಂದಿದ್ದಾಗ ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.
Union Minister Ramdas Athawale backs legalising hand-brewed liquor after the Pune hooch tragedy.
He argues that regulation could curb illicit alcohol deaths and boost state revenue.
An NCP leader has also demanded lifting the liquor ban in Gadchiroli.
Prioritising revenue over… pic.twitter.com/fgTM6lJOLd
— Sanatan Prabhat (@SanatanPrabhat) June 3, 2026
ವಿಷಯುಕ್ತ ಮದ್ಯವನ್ನು ಎಲ್ಲಿಯವರೆಗೆ ಕುಡಿಸುತ್ತೀರಿ ? ಗಡಚಿರೋಲಿ ಜಿಲ್ಲೆಯ ಮದ್ಯಪಾನ ನಿಷೇಧವನ್ನು ಹಿಂಪಡೆಯಿರಿ’, ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖಂಡ ಧರ್ಮರಾವ್ ಬಾಬಾ ಆತ್ರಾಮ್ ಆಗ್ರಹಿಸಿದ್ದಾರೆ. ಮದ್ಯಪಾನ ನಿಷೇಧವನ್ನು ಹಿಂಪಡೆಯುವಂತೆ ಒತ್ತಾಯಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗುವುದಾಗಿಯೂ ಅವರು ತಿಳಿಸಿದರು. (ಮದ್ಯಪಾನ ನಿಷೇಧವನ್ನು ಹಿಂಪಡೆದರೆ, ಯಾವ ಭಾಗಗಳಲ್ಲಿ ಮದ್ಯಪಾನ ನಿಷೇಧವನ್ನು ಜಾರಿಗೆ ತರಲಾಗಿದೆಯೋ, ಅಲ್ಲಿನ ನೀತಿ ಅಥವಾ ತತ್ವಗಳಿಗೆ ಎಳ್ಳುನೀರು ಬಿಟ್ಟಂತೆ ಆಗುತ್ತದೆ ! – ಸಂಪಾದಕರು) ‘ಮೋಹಾ (ಮಹುವಾ) ಮದ್ಯವನ್ನು ಕಾನೂನುಬದ್ಧಗೊಳಿಸಿ. ಆದಿವಾಸಿ ಸಂಸ್ಕೃತಿಯಲ್ಲಿ ಜನನ, ಮದುವೆ, ಮರಣದಂತಹ ಸಂದರ್ಭಗಳಲ್ಲಿ ಜನರು ಮೋಹಾ ಮದ್ಯವನ್ನು ಕುಡಿಯುತ್ತಾರೆ’, ಎಂದೂ ಅವರು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”