ವಿಜಯದಶಮಿಯಿಂದ ಹಿಂದೂ ಸಮಾಜ ಮತ್ತು ದೇಶಹಿತದ ರಕ್ಷಣೆಗಾಗಿ ಸೀಮೋಲ್ಲಂಘನ ಮಾಡಿರಿ !
‘೨೦೨೧ ರಿಂದ ೨೦೨೩ ರವರೆಗಿನ ೩ ವರ್ಷಗಳ ಕಾಲವು ಜಾಗತಿಕ ಮಹಾಯುದ್ಧದ ಕಾಲವಾಗಿದೆ. ಈ ಕಾಲದಲ್ಲಿ ಭಾರತೀಯ ಸೈನ್ಯಕ್ಕೂ ಸೀಮೋಲ್ಲಂಘನ ಮಾಡಬೇಕಾಗಿದೆ. ಭಾರತೀಯ ಸೀಮೆಯಲ್ಲಿ ಯುದ್ಧವು ಪ್ರಾರಂಭವಾದ ನಂತರ ಶತ್ರುರಾಷ್ಟ್ರಗಳ ಅಡಿಯಾಳಾಗಿರುವ ದೇಶದ ಆಂತರಿಕ ಶತ್ರುಗಳು ಅರಾಜಕತೆಯನ್ನು ಸೃಷ್ಟಿಸಲು ಗೃಹಯುದ್ಧವನ್ನು ಭುಗಿಲೆಬ್ಬಿಸಬಹುದು ಹಾಗೂ ದೇಶದ ದೃಷ್ಟಿಯಿಂದ ಪ್ರತಿಕೂಲವಾಗಿರುವ ಈ ಕಾಲದಲ್ಲಿ ನೆರೆ, ಭೂಕಂಪ, ಯುದ್ಧ ಇತ್ಯಾದಿಗಳಿಂದಾಗಿ ಊರಿಗೆ ಊರೇ ನಾಶವಾಗುವ ಗಂಡಾಂತರವಿದೆ. ಇಂತಹ ಸ್ಥಿತಿಯಲ್ಲಿ ತಮ್ಮ ಕುಟುಂಬದವರ ಮತ್ತು ಯಾವ ಸಮಾಜದಲ್ಲಿ ತಾವು ಇರುತ್ತೇವೋ ಆ ಹಿಂದೂ ಸಮಾಜದ ರಕ್ಷಣೆಗಾಗಿ ಪೊಲೀಸರು ಮತ್ತು ಸೈನ್ಯ ಇವುಗಳ ಸಹಾಯಕ್ಕಾಗಿ ಮನೆಯಿಂದ ಹೊರಗೆ ಬರಬೇಕಾಗುತ್ತದೆ ವರ್ಷಗಟ್ಟಲೇ ‘ನಾನಾಯಿತು ಮತ್ತು ನನ್ನದಾಯಿತು ಈ ಮಾನಸಿಕತೆಯಲ್ಲಿ ಸಿಲುಕಿದ ಹಿಂದೂ ಸಮಾಜಕ್ಕಾಗಿ ಇದು ಒಂದು ರೀತಿಯಲ್ಲಿ ಸೀಮೋಲ್ಲಂಘನವಾಗಲಿದೆ. ಹಿಂದೂಗಳೇ, ಪ್ರತಿವರ್ಷ ಕೇವಲ ಕರ್ಮಕಾಂಡವೆಂದು ಶಸ್ತ್ರಪೂಜೆ, ಅಪರಾಜಿತಾ ಪೂಜೆ ಮತ್ತು ಸೀಮೋಲ್ಲಂಘನ ಮಾಡುವುದಕ್ಕಿಂತ ಈ ವಿಜಯ ದಶಮಿಯಿಂದ ಹಿಂದೂ ಸಮಾಜದ ರಕ್ಷಣೆ ಹಾಗೂ ದೇಶಹಿತ ಇವುಗಳಿಗಾಗಿ ನಿಜವಾದ ಸೀಮೋಲ್ಲಂಘನ ಮಾಡಲು ನಿರ್ಧರಿಸಿರಿ ! – (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.