ತಮ್ಮ ಪ್ರಕೃತಿಯಂತೆ ಕಾಲಕ್ಕನುಸಾರ ದೇವತೆಯ ‘ತಾರಕ’ ಅಥವಾ ‘ಮಾರಕ’ ನಾಮಜಪ ಮಾಡಿ ಮತ್ತು ನಾಮಜಪದಿಂದ ದೊರೆಯುವ ಲಾಭವನ್ನು ಹೆಚ್ಚಿಸಿರಿ

೧. ದೇವತೆಗಳ ನಾಮಜಪದ ಉಚ್ಚಾರಗಳು ಅಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರುವುದು ಏಕೆ ಆವಶ್ಯಕವಾಗಿದೆ ?

ದೇವತೆಗಳ ವಿವಿಧ ಉಪಾಸನಾ ಪದ್ಧತಿಗಳ ಪೈಕಿ ಕಲಿಯುಗದಲ್ಲಿ ಅತ್ಯಂತ ಸುಲಭ ಉಪಾಸನೆ ಎಂದರೆ ‘ದೇವತೆಗಳ ನಾಮಜಪ ಮಾಡುವುದು. ದೇವತೆಗಳ ಬಗ್ಗೆ ತುಂಬಾ ಭಾವಜಾಗೃತವಾದ ಬಳಿಕ ದೇವತೆಗಳ ಹೆಸರನ್ನು ಹೇಗೆ ಜಪಿಸಿದರೂ ನಡೆಯುತ್ತದೆ; ಆದರೆ ಸರ್ವಸಾಧಾರಣ ಸಾಧಕರಲ್ಲಿ ಇಷ್ಟೊಂದು ಭಾವವಿರುವುದಿಲ್ಲ. ಆದುದರಿಂದ ದೇವತೆಗಳ ನಾಮಜಪದಿಂದ ದೇವತೆಗಳ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ಆ ನಾಮಜಪದ ಉಚ್ಚಾರವು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರುವುದು ಆವಶ್ಯಕವಾಗಿರುತ್ತದೆ.

೨. ದೇವರ ‘ತಾರಕ ಮತ್ತು ‘ಮಾರಕ ನಾಮಜಪಗಳ ಮಹತ್ವ

ದೇವತೆಗಳ ತಾರಕ ಮತ್ತು ಮಾರಕ ಈ ರೀತಿ ಎರಡು ರೂಪಗಳಿರುತ್ತದೆ. ಭಕ್ತನಿಗೆ ಆಶೀರ್ವಾದ ನೀಡುವ ದೇವತೆಯ ರೂಪವೆಂದರೆ ತಾರಕರೂಪ, ಉದಾ. ಆಶೀರ್ವಾದ ನೀಡುತ್ತಿರುವ ಮುದ್ರೆಯಲ್ಲಿನ ಶ್ರೀಕೃಷ್ಣ. ದೇವತೆಗಳು ಅಸುರರ ಸಂಹಾರ ಮಾಡುವ ರೂಪವೆಂದರೆ ಮಾರಕ ರೂಪ, ಉದಾ. ಶಿಶುಪಾಲನ ಮೇಲೆ ಸುದರ್ಶನಚಕ್ರವನ್ನು ಬಿಡುತ್ತಿರುವ ಶ್ರೀಕೃಷ್ಣ. ದೇವತೆಗಳ ತಾರಕ ಅಥವಾ ಮಾರಕ ರೂಪಕ್ಕೆ ಸಂಬಂಧಿಸಿದ ನಾಮಜಪವೆಂದರೆ ತಾರಕ ಅಥವಾ ಮಾರಕ ನಾಮಜಪ. ದೇವತೆಗಳ ಬಗ್ಗೆ ಸಾತ್ತ್ವಿಕ ಭಾವ ಮೂಡಲು, ಹಾಗೆಯೇ ಚೈತನ್ಯ, ಆನಂದ ಮತ್ತು ಶಾಂತಿಯ ಅನುಭೂತಿಗಳು ಶೀಘ್ರಗತಿಯಲ್ಲಿ ಬರಲು ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ದೇವತೆಗಳ ತಾರಕ ರೂಪದ ನಾಮಜಪ ಆವಶ್ಯಕವಾಗಿರುತ್ತದೆ. ದೇವತೆಗಳಿಂದ ಶಕ್ತಿ ಮತ್ತು ಚೈತನ್ಯವನ್ನು ಗ್ರಹಿಸಲು ಮತ್ತು ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ದೇವತೆಗಳ ಮಾರಕ ರೂಪದ ನಾಮಜಪ ಆವಶ್ಯಕವಾಗಿರುತ್ತದೆ.

ಭಾವಪೂರ್ಣ ಮತ್ತು ತಳಮಳದಿಂದ ಮಾಡಿದ ನಾಮಜಪದಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯಾಗುತ್ತದೆ. ಹಲವರಿಗೆ ಇದು ತಿಳಿದಿಲ್ಲ, ಹಾಗಾಗಿ ಅವರು ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ತಾಂತ್ರಿಕನ ಬಳಿ ಹೋಗುತ್ತಾರೆ. ತಾಂತ್ರಿಕನು ಮಾಡಿದ ಉಪಾಯಯೋಜನೆಯು ಕೇವಲ ತಾತ್ಕಾಲಿಕವಾಗಿರುತ್ತದೆ; ಆದ್ದರಿಂದ ಆ ವ್ಯಕ್ತಿಗೆ ಸ್ವಲ್ಪ ಸಮಯದ ಬಳಿಕ ಕೆಟ್ಟ ಶಕ್ತಿಗಳು ತೊಂದರೆ ಕೊಡಲು ಪ್ರಾರಂಭಿಸುತ್ತವೆ,  ಹಾಗೆಯೇ ತಾಂತ್ರಿಕನು ನಮ್ಮನ್ನು ವಂಚಿಸುವ ಅಪಾಯವೂ ಇರುತ್ತದೆ. ಆದ್ದರಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ನಾಮಜಪವೇ ಉಪಯುಕ್ತವಾಗಿದೆ.

೩. ಸಾಧಕರ ‘ತಾರಕ, ‘ಮಾರಕ ಮತ್ತು ‘ತಾರಕ-ಮಾರಕ ಪ್ರಕೃತಿ

೩ ಅ. ‘ತಾರಕ ಪ್ರಕೃತಿಯಿರುವ ಸಾಧಕರ ಕೆಲವು ಲಕ್ಷಣಗಳು

೩ ಅ ೧. ತಾರಕ ಸಾಧನೆಯನ್ನು ಮಾಡುವವರು : ತಾರಕ ಸಾಧನೆಯನ್ನು ಮಾಡುವ ಸಾಧಕರು ಭಾವಪೂರ್ಣವಾಗಿ ಮತ್ತು ನಿಧಾನವಾಗಿ ನಾಮಜಪವನ್ನು ಮಾಡುತ್ತಾರೆ ಮತ್ತು ಅವರಿಗೆ ನೀಡಿದ ಸೇವೆಯನ್ನೂ ಸಹ ಅವರು ಭಾವಪೂರ್ಣವಾಗಿ ಮಾಡುತ್ತಾರೆ ಇತ್ಯಾದಿ.

೩ ಅ ೨. ವ್ಯಷ್ಟಿ ಸಾಧನೆಯನ್ನು ಮಾಡುವ (ವೈಯಕ್ತಿಕ ಸಾಧನೆಯನ್ನು ಮಾಡುವವರು) : ವಯಸ್ಸಾದ ಸಾಧಕರು, ಅನಾರೋಗ್ಯದಿಂದ ಬಳಲುತ್ತಿರುವ ಸಾಧಕರು ಅಥವಾ ಸೇವೆಗಾಗಿ ಹೊರಗೆ ಹೋಗಲು ಸಾಧ್ಯವಿಲ್ಲದಿರುವ ಸಾಧಕರು ಮನೆಯಲ್ಲಿ ಅಥವಾ ಆಶ್ರಮದಲ್ಲಿದ್ದುಕೊಂಡು ನಾಮಜಪ ಮಾಡುವುದು ಅಥವಾ ಎಷ್ಟು ಸಾಧ್ಯವೋ ಅಷ್ಟು ಸೇವೆಯನ್ನು ಮಾಡುವುದು ಇತ್ಯಾದಿ.

೩ ಆ. ‘ಮಾರಕ ಪ್ರಕೃತಿಯಿರುವ ಸಾಧಕರ ಕೆಲವು ಲಕ್ಷಣಗಳು

೩ ಆ ೧. ಮಾರಕ ಸಾಧನೆ ಮಾಡುವವರು : ಆವೇಶದಿಂದ ನಾಮಜಪ ಮಾಡುವುದು, ಸಮಷ್ಟಿಯಲ್ಲಿ (ಎಲ್ಲರ ಮುಂದೆ) ಸ್ಪಷ್ಟವಾಗಿ ಮಾತನಾಡುವುದು ಮತ್ತು ಮಾರ್ಗದರ್ಶನ ಮಾಡುವುದು,  ಸಾಧಕರ ತಪ್ಪುಗಳನ್ನು ಹೇಳಿ ಅವುಗಳನ್ನು ಸರಿ ಮಾಡಿಸಿಕೊಳ್ಳುವುದು, ಸಾಧಕರಿಂದಾಗುವ ತಪ್ಪುಗಳಿಗೆ ಅವರಿಗೆ ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳಲು ಹೇಳುವುದು, ಸ್ವತಃ ತಮಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದ್ದರೂ ಅದರೊಂದಿಗೆ ಹೋರಾಡಿ ಸೇವೆ, ಸಾಧನೆ ಮಾಡುವುದು ಇತ್ಯಾದಿ.

೩ ಆ ೨. ಸಮಷ್ಟಿ ಸಾಧನೆಯನ್ನು ಮಾಡುವ (ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಕಾರ್ಯವನ್ನು ಮಾಡುವವರು) :  ಮುಂದಾಳತ್ವವನ್ನು ವಹಿಸಿ ಸೇವೆಗಳನ್ನು ಮಾಡುವುದು, ಇತರ ಸಾಧಕರಿಂದ ಸೇವೆಯನ್ನು ಮಾಡಿಸಿಕೊಳ್ಳುವುದು, ಸಮಾಜದಲ್ಲಿ ಅಧ್ಯಾತ್ಮಪ್ರಚಾರ ಮಾಡುವುದು, ಧರ್ಮಸಭೆಗಳನ್ನು ತೆಗೆದುಕೊಳ್ಳುವುದು, ಸ್ವಭಾವ ದೋಷ-ನಿರ್ಮೂಲನೆ ಮತ್ತು ಅಹಂ-ನಿರ್ಮೂಲನೆಯ ಪ್ರಕ್ರಿಯೆ ಮಾಡುತ್ತಿರುವವರ ಸತ್ಸಂಗಗಳನ್ನು ತೆಗೆದುಕೊಂಡು ಅವರಿಗೆ ಮಾರ್ಗದರ್ಶನ ಮಾಡುವುದು ಇತ್ಯಾದಿ.

೩ ಇ. ‘ತಾರಕ-ಮಾರಕ ಪ್ರಕೃತಿಯಿರುವ ಸಾಧಕರ ಲಕ್ಷಣಗಳು : ತಾರಕ ಮತ್ತು ಮಾರಕ ಹೀಗೆ ಎರಡೂ ಪ್ರಕೃತಿಗಳ ಮಿಶ್ರಣವೆಂದರೆ ‘ತಾರಕ-ಮಾರಕ ಪ್ರಕೃತಿ. ಈ ರೀತಿಯ ಪ್ರಕೃತಿಯಿರುವ ಸಾಧಕರಲ್ಲಿ ಅಂಶ ‘೩ ಅ ಮತ್ತು ‘೩ ಆ ಇದರಲ್ಲಿನ ಕೆಲವು ಲಕ್ಷಣಗಳಿರುತ್ತವೆ.

೪. ಸಾಧಕರು ತಮ್ಮ ಪ್ರಕೃತಿಗನುಸಾರ ದೇವತೆಗಳ ‘ತಾರಕ ಅಥವಾ ‘ಮಾರಕ ನಾಮಜಪ ಮಾಡುವುದರ ಮಹತ್ವ

ಸಾಧಕರು ತಮ್ಮ ಪ್ರಕೃತಿಗನುಸಾರ ದೇವತೆಗಳ ತಾರಕ ಅಥವಾ ಮಾರಕತತ್ತ್ವದ ನಾಮಜಪವನ್ನು ಮಾಡಿದರೆ ಅವರಿಗೆ ದೇವತಾದ ಹೆಚ್ಚಚ್ಚು ಲಾಭವಾಗುತ್ತದೆ. ಮೇಲೆ ನೀಡಿರುವ ‘ತಾರಕ ಮತ್ತು ‘ಮಾರಕ ಪ್ರಕೃತಿಯಿರುವ ಸಾಧಕರ ಲಕ್ಷಣಗಳಿಂದ ‘ತಮ್ಮ ಪ್ರಕೃತಿ ಯಾವುದಿದೆ, ಎಂಬುದನ್ನು ನಾವು  ನಿರ್ಧರಿಸಿಕೊಳ್ಳಬೇಕು ಮತ್ತು ಅದಕ್ಕನುಸಾರ  ತಾರಕ ಅಥವಾ ಮಾರಕ ನಾಮಜಪವನ್ನು ಮಾಡಬೇಕು.  ‘ತಾರಕ-ಮಾರಕ ಪ್ರಕೃತಿಯಿರುವ ಸಾಧಕರು ತಾರಕ ಮತ್ತು ಮಾರಕ ಹೀಗೆ ಎರಡೂ ನಾಮಜಪಗಳನ್ನು ಸ್ವಲ್ಪ ಸಮಯ ಮಾಡಿ ನೋಡಬೇಕು ಮತ್ತು ‘ಯಾವ ನಾಮಜಪದಿಂದ ತಮ್ಮ ಮನಸ್ಸು ಹೆಚ್ಚು ಆಸ್ವಾದಿಸುತ್ತದೆಯೋ, ಆ ನಾಮಜಪವನ್ನು ಮಾಡಬೇಕು. ಯಾರಾದರೂ ನಾಮಜಪ ಅಥವಾ ಸಾಧನೆಯನ್ನು ಮಾಡದವರಿದ್ದರೆ,  ಅವರೂ ತಾರಕ ಮತ್ತು ಮಾರಕ ಹೀಗೆ ಎರಡೂ ನಾಮಜಪಗಳನ್ನು ಸ್ವಲ್ಪ ಹೊತ್ತು ನೋಡಬೇಕು ಮತ್ತು ನಿಮಗೆ ಯಾವ ನಾಮಜಪ ಇಷ್ಟವಾಗುತ್ತದೆಯೋ ಅದನ್ನು ಮಾಡಬೇಕು.

೫. ಸನಾತನ – ರಚಿತ ‘ಸಪ್ತದೇವತೆಗಳ ತಾರಕ ಮತ್ತು ಮಾರಕ ನಾಮಜಪ ಇವುಗಳ ಮಹತ್ವ

೫ ಅ. ಕಾಲಾನುಸಾರ ನಾಮಜಪಗಳ ನಿರ್ಮಿತಿ : ಯಾವುದೇ ವಿಷಯವನ್ನು ಕಾಲಾನುಸಾರ ಮಾಡಿದರೆ, ಅದರಿಂದ ಹೆಚ್ಚು ಲಾಭವಾಗುತ್ತದೆ.  ‘ಕಾಲಾನುಸಾರ ಸದ್ಯ ದೇವತೆಗಳ ತಾರಕ ಮತ್ತು ಮಾರಕ ತತ್ತ್ವವು ಯಾವ ರೀತಿಯ ನಾಮಜಪದಿಂದ ಹೆಚ್ಚು ಸಿಗುತ್ತದೆ, ಎಂಬುದನ್ನು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿ ನಾಮಜಪಗಳನ್ನು ಧ್ವನಿಮುದ್ರಣ ಮಾಡಲಾಗಿದೆ. ಇದಕ್ಕಾಗಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಂಯೋಜಕರಾದ ಕು. ತೇಜಲ ಪಾತ್ರೀಕರ್‌ರವರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಂತೆ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಆದುದರಿಂದ ಈ ನಾಮಜಪಗಳು ಸಿದ್ಧವಾಗಿವೆ. ಆದ್ದರಿಂದ ಈ ಜಪಗಳನ್ನು ಮಾಡಿದರೆ ಕಾಲಾನುಸಾರ ಆವಶ್ಯಕವಾಗಿರುವ ಆಯಾ ದೇವತೆಗಳ ತಾರಕ ಅಥವಾ ಮಾರಕ ತತ್ತ್ವವು ಪ್ರತಿಯೊಬ್ಬರಿಗೂ ಅವರವರ ಭಾವಕ್ಕನುಸಾರ ಸಿಗಲು ಸಹಾಯವಾಗುತ್ತದೆ.

೫ ಆ. ಕಾಲಾನುಸಾರ ಹೆಚ್ಚಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಗಳನ್ನು ಎದುರಿಸಲು ಉಪಯುಕ್ತ ನಾಮಜಪ :  ವರ್ಷ ೨೦೨೩ ರಲ್ಲಿ ಸಾತ್ತ್ವಿಕ ಮತ್ತು ಆದರ್ಶ ‘ಹಿಂದೂ ರಾಷ್ಟ್ರ (ಈಶ್ವರೀ ರಾಜ್ಯ) ಸ್ಥಾಪನೆಯಾಗಲಿದೆ. ಅದು ಆಗಬಾರದೆಂದು ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳು ತಮ್ಮ ಸಂಪೂರ್ಣ ಶಕ್ತಿಯನ್ನು ಒಟ್ಟುಗೂಡಿಸಿ ವಿರೋಧಿಸುತ್ತಿವೆ. ಅದರಿಂದ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ತುಂಬಾ ಹೆಚ್ಚಾಗುತ್ತಿವೆ. ಮಾರಕ ಭಾವದ ನಾಮಜಪಗಳು ಕಾಲಾನುಸಾರ ಪರಿಣಾಮಕಾರಿಯಾಗಿದೆ. ಹಾಗಾಗಿ ತೀವ್ರ ಆಧ್ಯಾತ್ಮಿಕ ತೊಂದರೆ ಗಳಿರುವ ವ್ಯಕ್ತಿಗಳಿಗೆ ಈ ನಾಮಜಪಗಳಿಂದ ಲಾಭವಾಗಬಹುದು. ಇದಕ್ಕಾಗಿ ಶ್ರೀಕೃಷ್ಣ, ಶ್ರೀರಾಮ, ದತ್ತ, ಶ್ರೀ ಗಣಪತಿ, ಶಿವ, ಹನುಮಂತ ಮತ್ತು ಶ್ರೀ ದುರ್ಗಾದೇವಿ ಹೀಗೆ ಸಪ್ತದೇವತೆಗಳ ಮಾರಕ ಮತ್ತು ತಾರಕ ನಾಮಜಪಗಳನ್ನು ಧ್ವನಿಮುದ್ರಣ ಮಾಡಲಾಗಿದೆ.

೫ ಇ. ಈ ನಾಮಜಪಗಳು ಅಂತ್ಯಕಾಲದಲ್ಲಿರುವ ರೋಗಿಗಳಿಗೆ ಮತ್ತು ವಾಸ್ತುಶುದ್ಧಿಗಾಗಿಯೂ ಲಾಭದಾಯಕವಾಗಿವೆ : ಅಂತ್ಯಕಾಲದಲ್ಲಿರುವ ರೋಗಿಗಳಿಗೆ ಸ್ವತಃ ನಾಮಸ್ಮರಣೆ ಮಾಡುವುದು ಸಾಧ್ಯವಾಗದಿದ್ದರೆ, ಅವರು ಈ ನಾಮಜಪಗಳನ್ನು ಕೇಳಿದರೂ ಅವರಿಗೆ ಲಾಭವಾಗುವುದು. ಈಗ ಕೆಟ್ಟ ಶಕ್ತಿಗಳ ಹೆಚ್ಚಾಗುತ್ತಿರುವ ಆಕ್ರಮಣಗಳಿಂದ ವಾಸ್ತುಗಳ ಮೇಲೆಯೂ ಪರಿಣಾಮವಾಗಿ ಅವೂ ಸಹ ರಜ-ತಮದಿಂದ ಕಲುಷಿತವಾಗುತ್ತಿವೆ. ನಾಮಜಪವನ್ನು ದಿನವಿಡೀ ಮನೆಯಲ್ಲಿ ಹಾಕಿಡುವುದರಿಂದ ವಾಸ್ತುಶುದ್ಧಿಯಾಗಿ ಮನೆಯ ವಾತಾವರಣ ಪ್ರಸನ್ನವಾಗಲು ಸಹಾಯವಾಗುವುದು.

೫ ಈ. ನಾಮಜಪದ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ :  ಜಗತ್ತಿನಾದ್ಯಂತದ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಶೀಘ್ರಗತಿಯಲ್ಲಿ ದೂರವಾಗಲು ಮತ್ತು ಅವರಿಗೆ ದೇವತೆಗಳ ತತ್ತ್ವಗಳ ಹೆಚ್ಚಚ್ಚು ಲಾಭವಾಗಲು, ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ನಾಮಜಪಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಅವರ ಪರೋಕ್ಷ ಸಂಕಲ್ಪವೂ  ಕಾರ್ಯನಿರತವಾಗಿರುವುದರಿಂದ ಈ ನಾಮಜಪಗಳಂತೆ ಸಾಧಕರು ನಾಮಜಪವನ್ನು ಮಾಡಿದರೆ ಅವರ ತೊಂದರೆಗಳು ದೂರವಾಗಲು, ಹಾಗೆಯೇ ಅವರಿಗೆ ದೇವತೆಗಳ ತತ್ತ್ವಗಳಿಂದ ಲಾಭವಾಗಲು ಖಂಡಿತವಾಗಿಯೂ ಸಹಾಯವಾಗುವುದು.

೬. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿರುವ ಮಾರಕ ನಾಮಜಪಗಳ ವೈಶಿಷ್ಟ್ಯಗಳು

ಅ. ಧರ್ಮಸಭೆಗಳಲ್ಲಿ ಘೋಷಣೆಗಳನ್ನು ನೀಡುವಾಗ ಮಾನಸಿಕ ಸ್ತರದ ರಜೋಗುಣ ಹೆಚ್ಚಾಗುತ್ತದೆ.  ಈ ನಾಮಜಪಗಳಲ್ಲಿ ಮಾರಕ ಭಾವವಿರುವುದರಿಂದ ಅವು ರಜ-ಸತ್ವಪ್ರಧಾನವಾಗಿದ್ದರೂ, ಅವುಗಳನ್ನು ಕೇಳಿದರೆ ಮಾನಸಿಕ ಸ್ತರದ ರಜೋಗುಣ ಹೆಚ್ಚಾಗದೇ, ಕೇಳುವವರು ಆಧ್ಯಾತ್ಮಿಕ ರಜೋಗುಣದ ಅನುಭವವನ್ನು ಪಡೆದುಕೊಳ್ಳಬಹುದು !

ಆ. ಮಾರಕ ಭಾವದ ಪ್ರತಿಯೊಂದು ನಾಮಜಪವನ್ನು ಮಾಡುವಾಗ ದೇವತೆಗಳ ಹೆಸರುಗಳಲ್ಲಿ ಅಕ್ಷರಗಳಿಗೆ ಒತ್ತು ನೀಡಿ ಜಪಿಸಲಾಗಿದೆ.

ಇ. ನಾವು ಈ ನಾಮಜಪಗಳನ್ನು ಹೆಚ್ಚೆಂದರೆ ಶೇ. ೯೦ ರವರೆಗೆ ಮಾಡಬಹುದು. ಉಳಿದ ಶೇಕಡಾ ೧೦ ರಷ್ಟನ್ನು ಈಶ್ವರನೇ ಪೂರ್ಣ ಮಾಡಿಸಿಕೊಳ್ಳುವನು. ನಾವು ಈ ನಾಮಜಪಗಳನ್ನು ಈಗಲೇ ಶೇಕಡಾ ೧೦೦ ರಷ್ಟು ಪೂರ್ಣ ಮಾಡಿದರೆ, ಈಗಿನ ಸ್ಥಿತಿಯಲ್ಲಿ ಅವುಗಳ ಶಕ್ತಿಯನ್ನು ಸಮಾಜವು ತಡೆದುಕೊಳ್ಳಲಾರದು. ಇದರ ಅರ್ಥ ಈಗ ಸಮಾಜದ ಸಾತ್ತ್ವಿಕತೆ ಕಡಿಮೆಯಿರುವುದರಿಂದ ಒಂದು ವೇಳೆ ನಾವು ಶೇ. ೧೦೦ ರಷ್ಟು ಪೂರ್ಣ ಮಾಡಿದರೂ, ಆ ನಾಮಜಪಗಳ ಚೈತನ್ಯವನ್ನು ಸಹಿಸಿಕೊಳ್ಳಲು ಸಾಧ್ಯವಾಗದಿರುವುದರಿಂದ ಬಹಳಷ್ಟು ಜನರಿಗೆ ಈ ನಾಮಜಪಗಳಿಂದ ತೊಂದರೆಗಳಾಗಬಹುದು.

ಈ.  ಸಮಾಜದಲ್ಲಿ ನಾಮಜಪ ಮಾಡುವ ಶೇಕಡಾ ೯೦ ರಷ್ಟು ಜನರ ಒಲವು ಭಾವಪೂರ್ಣವಾಗಿ ನಾಮಜಪ ಮಾಡುವುದರ ಕಡೆಗಿರುತ್ತದೆ. ಹೀಗಿದ್ದರೂ ಇತರ ಶೇ. ೧೦ ರಷ್ಟು ಜನರು, ಯಾರಿಗೆ ಮಾರಕ ಭಾವದ ನಾಮಜಪ ಉಪಯೋಗವಾಗಿದೆಯೋ, ಅವರು ಈ ನಾಮಜಪಗಳಿಂದ ವಂಚಿತರಾಗಬಾರದು ಎಂದು ಅವುಗಳನ್ನು ಧ್ವನಿಮುದ್ರಣ ಮಾಡಲಾಗಿದೆ.

ಸದ್ಯ ಲಭ್ಯವಿರುವ ನಾಮಜಪಗಳು ಮತ್ತು ಉಪಾಯದ ಸಮಯದಲ್ಲಿ ತಾರಕ-ಮಾರಕ ನಾಮಜಪ ಮಾಡುವುದು ಮತ್ತು ಕೇಳುವ ಪದ್ಧತಿ

ಚೈತನ್ಯವಾಣಿ ಆಪ್‌ನಲ್ಲಿ ಈಗ ಶ್ರೀರಾಮ ಮತ್ತು ದತ್ತ ಈ ದೇವತೆಗಳ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |, ‘ಶ್ರೀ ಗುರುದೇವ ದತ್ತ |, ‘ಓಂ ಓಂ ಶ್ರೀ ಗುರುದೇವದತ್ತ ಓಂ ಓಂ | ಮತ್ತು ‘ಓಂ ಈ ತಾರಕ ಮತ್ತು ಮಾರಕ ನಾಮಜಪಗಳು ಉಪಲಬ್ಧವಿವೆ. ಇತರ ದೇವತೆಗಳ ನಾಮಜಪಗಳೂ ಶೀಘ್ರದಲ್ಲಿಯೇ ಲಭ್ಯವಾಗುವವು.

ಅ. ಮೇಲೆ ನೀಡಿರುವ ತಾರಕ ಮತ್ತು ಮಾರಕ ನಾಮಜಪಗಳನ್ನು ಪ್ರಾರಂಭದಲ್ಲಿ ಪ್ರತಿಯೊಂದನ್ನು ಅರ್ಧ ಗಂಟೆ ಮಾಡಬೇಕು ಅಥವಾ ಕೇಳಬೇಕು.

ಆ. ಆಧ್ಯಾತ್ಮಿಕ ತೊಂದರೆಗಳಿರುವವರು ಈ ನಾಮಜಪಗಳ ಪೈಕಿ ಯಾವ ನಾಮಜಪವನ್ನು ಮಾಡುವಾಗ ಅಥವಾ ಕೇಳುವಾಗ ಹೆಚ್ಚು ತೊಂದರೆಯಾಗುತ್ತದೆಯೋ, ಆ ನಾಮಜಪವನ್ನು ಉಪಾಯವೆಂದು ಮಾಡಬೇಕು ಅಥವಾ ಕೇಳಬೇಕು.

ಇ. ಆಧ್ಯಾತ್ಮಿಕ ತೊಂದರೆ ಇಲ್ಲದಿರುವವರು ಈ ನಾಮಜಪಗಳ ಪೈಕಿ ಯಾವ ನಾಮಜಪ ಮಾಡುವಾಗ ಅಥವಾ ಕೇಳುವಾಗ ಹೆಚ್ಚು ಚೆನ್ನಾಗಿ ಅನಿಸುತ್ತದೆಯೋ, ಅವರು  ಆ ನಾಮಜಪವನ್ನು ಉಪಾಯವೆಂದು ಮಾಡಬೇಕು ಅಥವಾ ಕೇಳಬೇಕು.

ಈ ನಾಮಜಪಗಳು ನಮ್ಮ ಜಾಲತಾಣದಲ್ಲಿ, ಹಾಗೆಯೇ ‘ಚೈತನ್ಯವಾಣಿ ಆಪ್ ಈ ಎರಡೂ ಸ್ಥಳಗಳಲ್ಲಿ ಲಭ್ಯವಿವೆ. ಇವುಗಳ ಲಾಭವನ್ನು ತಾವೆಲ್ಲರೂ ಅವಶ್ಯ ತೆಗೆದುಕೊಳ್ಳಬೇಕು. ಈ ನಾಮಜಪಗಳ ಮಾಹಿತಿಯನ್ನು ನಿಮ್ಮ ಕುಟುಂಬದವರಿಗೆ, ಆಪ್ತರಿಗೆ ಮತ್ತು ಸ್ನೇಹಿತರಿಗೂ ಹೇಳಬೇಕು, ಇದರಿಂದ ಅವರೂ ಇದರ ಲಾಭವನ್ನು ಪಡೆದುಕೊಳ್ಳಬಹುದು.

ಈ ನಾಮಜಪಗಳು ಮುಂದೆ ನೀಡಿರುವ ಲಿಂಕ್‌ಗಳಲ್ಲಿ ಲಭ್ಯವಿದೆ

https://www.sanatan.org/mr/audio-gallery

‘ಸನಾತನ ಚೈತನ್ಯವಾಣಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಿರಿ

https://www.sanatan.org/Chaitanyavani

ಈ ನಾಮಜಪಗಳನ್ನು ಕೇಳುವಾಗ ತಮಗೆ ವೈಶಿಷ್ಟ್ಯಪೂರ್ಣ ಅನುಭೂತಿಗಳು ಬಂದರೆ ಅವುಗಳನ್ನು ನಮಗೆ ಆವಶ್ಯ ತಿಳಿಸಿರಿ. ಇದಕ್ಕಾಗಿ ನಮ್ಮ ವಿಳಾಸ [email protected]