ಈಗ ‘ಸ್ಥೂಲದ ಭೀಕರ ಆಪತ್ಕಾಲ ಆರಂಭವಾಗಿದೆ ಮತ್ತು ಸೂಕ್ಷ್ಮದಲ್ಲಿ ನಿರ್ಣಾಯಕ ಆಪತ್ಕಾಲ ನಡೆಯುತ್ತಿದೆ. ಇದರಿಂದಾಗಿ ಸಾಧಕರ ಆಧ್ಯಾತ್ಮಿಕ ತೊಂದರೆಗಳಲ್ಲಿ ಹೆಚ್ಚಳವಾಗಿದೆ. ಈ ತೊಂದರೆಗಳನ್ನು ದೂರಗೊಳಿಸಲು ಪ್ರಭಾವಿ ಶಸ್ತ್ರಗಳೆಂದರೆ, ‘ನಾಮಜಪ ಮುಂತಾದ ಉಪಾಯ’ಗಳು ಮತ್ತು ಈ ಉಪಾಯಗಳನ್ನು ಗಾಂಭೀರ್ಯತೆಯಿಂದ ಮತ್ತು ಪರಿಣಾಮಕಾರಿಯಾಗಿ ಮಾಡುವುದು. ಸನಾತನದ ಕೆಲವು ಸಂತರು ‘ಸಾಧಕರ ನಾಮಜಪ ಮುಂತಾದ ಉಪಾಯಗಳು ಸರಿಯಾಗಿ ಆಗಬೇಕೆಂದು’, ಪ್ರತಿದಿನ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ಸಾಧಕರು ನಾಮಜಪಾದಿ ಉಪಾಯಗಳನ್ನು ಮಾಡಿದರೆ, ಅವರಿಗೆ ಉಪಾಯಗಳಿಂದ ಎರಡು ಪಟ್ಟು ಲಾಭವಾಗುತ್ತದೆ. ಹೀಗಿದ್ದರೂ ಕೆಲವು ಸಾಧಕರಿಗೆ ಈ ಸಮಯದಲ್ಲಿ ಉಪಾಯ ಮಾಡುವುದರ ಗಾಂಭೀರ್ಯತೆ ಅನಿಸುವುದಿಲ್ಲ. ಕೆಲವು ಸಾಧಕರು ‘ಕೇವಲ ಉಪಾಯದ ಅವಧಿಯನ್ನು ಸರಿದೂಗಿಸಲು’ ಅಂದರೆ, ‘ಕೇವಲ ಉಪಾಯಕ್ಕಾಗಿ ಉಪಾಯ’ ಎಂದು ಕುಳಿತುಕೊಳ್ಳುತ್ತಾರೆ. ಇದರ ಬದಲು ಅವರು ಗಾಂಭೀರ್ಯತೆಯಿಂದ, ಭಾವಪೂರ್ಣವಾಗಿ ನಾಮಜಪ ಮುಂತಾದ ಉಪಾಯಗಳನ್ನು ಮಾಡಿದರೆ, ಅವರಿಗೆ ಉಪಾಯಗಳ ನಿಜವಾದ ಲಾಭವಾಗುವುದು’ ಇಲ್ಲದಿದ್ದರೆ ‘ಉಪಾಯಗಳ ಬಹಳಷ್ಟು ಸಮಯವು ಸುಮ್ಮನೆ ವ್ಯರ್ಥವಾಗುವುದು.’ ಕೆಲವು ಸಾಧಕರಿಗೆ ಉಪಾಯದ ಸಮಯದಲ್ಲಿ ತೊಂದರೆಯಿಂದಾಗಿ ಗ್ಲಾನಿ (ನಿದ್ದೆ) ಬರುವುದು, ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳು ಬರುವುದು, ಉಪಾಯ ಮಾಡಲು ಬೇಸರವಾಗುವುದು ಮುಂತಾದ ತೊಂದರೆಗಳಾಗುತ್ತವೆ. ಇಂತಹ ಸಮಯದಲ್ಲಿ ಅವರು ತಮ್ಮಸುತ್ತಲಿನ ತೊಂದರೆದಾಯಕ ಆವರಣವನ್ನು ತೆಗೆಯುವುದು, ಕಣ್ಣುಗಳ ಮೇಲೆ ವಿಭೂತಿಯುಕ್ತ ನೀರನ್ನು ಸಿಂಪಡಿಸಿಕೊಳ್ಳುವುದು, ಭಜನೆಗಳನ್ನು ಕೇಳುವುದು, ಕೈಯಲ್ಲಿ ಪರಾತ್ಪರ ಗುರು ಡಾ. ಆಠವಲೆ ಅಥವಾ ದೇವತೆಗಳ ಚಿತ್ರವನ್ನು ತೆಗೆದುಕೊಂಡು ಅದರ ಕಡೆಗೆ ನೋಡುತ್ತಾ ಜಪ ಮಾಡುವುದು, ಎದ್ದು ನಿಂತು ಜಪ ಮಾಡುವುದು ಇವುಗಳಂತಹ ಪ್ರಯತ್ನಗಳನ್ನು ತಳಮಳದಿಂದ ಮಾಡಬೇಕು; ಹೀಗಾದರೆ ಮಾತ್ರ ಉಪಾಯಗಳು ಪರಿಣಾಮಕಾರಿಯಾಗಿ ಆಗುವವು.
ಇಂತಹ ಭೀಕರ ಆಪತ್ಕಾಲದಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧಕರ ತೊಂದರೆಗಳು ಸಹನೀಯವಾಗಲು ಸಾಧಕರಿಗೆ ಸೇವೆಗಳಿಗಿಂತ ನಾಮಜಪಾದಿ ಉಪಾಯಗಳಿಗೆ ಪ್ರಾಧಾನ್ಯತೆಯನ್ನು ನೀಡಲು ಹೇಳಿ, ಆ ಮೂಲಕ ಸಾಧಕರಿಗೆ ಚೈತನ್ಯವನ್ನು ಗ್ರಹಣ ಮಾಡುವ ಅಮೂಲ್ಯ ಅವಕಾಶವನ್ನು ನೀಡಿದ್ದಾರೆ. ಇದರ ಬಗ್ಗೆ ಸಾಧಕರು ಕೃತಜ್ಞತೆಯ ಭಾವವನ್ನಿಟ್ಟರೆ, ಅವರು ಉಪಾಯಗಳನ್ನು ಪರಿಣಾಮಕಾರಿಯಾಗಿ ಮಾಡುವಾಗ ಬರುವ ಅಡಚಣೆಗಳನ್ನು ಖಂಡಿತವಾಗಿಯೂ ದೂರಗೊಳಿಸಬಹುದು.
ಸಾಧಕರ ಸೇವೆಗಳ ಜವಾಬ್ದಾರಿಯಿರುವ ಸಾಧಕರು ‘ತೊಂದರೆಗಳಿರುವ ಸಾಧಕರು ಪರಿಣಾಮಕಾರಿ ಉಪಾಯಗಳನ್ನು ಮಾಡುತ್ತಾರಲ್ಲ ?’, ಎಂಬುದರ ಬಗ್ಗೆ ನಿಯಮಿತವಾಗಿ ವರದಿಯನ್ನೂ ತೆಗೆದುಕೊಳ್ಳಬೇಕು.’ – (ಪೂ.) ಶ್ರೀ. ಸಂದೀಪ ಆಳಶಿ (೨೫.೯.೨೦೨೦)