ಭಕ್ತರಿಗೆ ಆಶ್ವಾಸನೆ ನೀಡುವ ‘ಯೋಗಕ್ಷೇಮಂ ವಹಾಮ್ಯಹಮ್ |’ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ ವಚನಕ್ಕನುಸಾರ ಸಾಧಕರ ಎಲ್ಲ ರೀತಿಯ ಕಾಳಜಿ ವಹಿಸುವ ವಾತ್ಸಲ್ಯಮೂರ್ತಿ ಪರಾತ್ಪರ ಗುರು ಡಾ. ಆಠವಲೆ !

ಶ್ರೀಮತಿ ಮೇಘನಾ ವಾಘಮಾರೆ

‘ಮೇ ೩೦ ರಿಂದ ೧೫ ಡಿಸೆಂಬರ್ ೨೦೧೮ ರ ಕಾಲಾವಧಿಯಲ್ಲಿ ನನಗೆ ಸೊಂಟ ನೋವಿನಿಂದಾಗಿ ಅತಿ ತೀವ್ರ ವೇದನೆಗಳನ್ನು ಎದುರಿಸಬೇಕಾಯಿತು. ಆ ಸಮಯದಲ್ಲಿ ನಾನು ಅನುಭವಿಸಿದ ಪರಾತ್ಪರ ಶ್ರೀ ಗುರುಗಳ ಕೃಪೆ, ಹಾಗೆಯೇ ಆ ಸಮಯದಲ್ಲಿ ನನಗೆ ಬಂದ ಅನುಭೂತಿಗಳನ್ನು ಇಲ್ಲಿ ನೀಡುತ್ತಿದ್ದೇನೆ.

೧. ವೇದನೆಗಳ ಆರಂಭ ಮತ್ತು ಮಾಡಿದ ವಿವಿಧ ಉಪಚಾರಗಳು

೧ ಅ. ನೆಲದ ಮೇಲೆ ಬಿದ್ದ ಕಾಗದದ ತುಂಡುಗಳನ್ನು ತೆಗೆಯಲು ಬಗ್ಗುವುದು ಮತ್ತು ಸೊಂಟದಲ್ಲಿ ತೀವ್ರ ವೇದನೆಗಳಾಗುವುದು : ೩೦.೫.೨೦೧೮ ರಂದು ಬೆಳಗ್ಗೆ ನಾನು ಸೇವೆಯ ವಿಚಾರವನ್ನು ಮಾಡುತ್ತಾ ಸೇವೆಯ ಕೋಣೆಗೆ ಹೋದೆನು. ಆಗ ನನಗೆ ಅಲ್ಲಿ ನೆಲದ ಮೇಲೆ ಬಿದ್ದ ಕೆಲವು ಕಾಗದದ ತುಂಡುಗಳು ಕಾಣಿಸಿದವು. ಅವುಗಳನ್ನು ತೆಗೆಯಲು ನಾನು ಕೆಳಗೆ ಬಗ್ಗಿದೆ ಮತ್ತು ನಂತರ ನನಗೆ ನೆಟ್ಟಗೆ ನಿಲ್ಲಲೇ ಬರಲಿಲ್ಲ. ನನಗೆ ಬಗ್ಗಿದ ಸ್ಥಿತಿಯಲ್ಲಿಯೂ ಇರಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಕುರ್ಚಿಯ ಮೇಲೆ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ನನಗೆ ಬಹಳ ತೀವ್ರ ವೇದನೆಗಳಾಗತೊಡಗಿದವು. ಅವುಗಳನ್ನು ಸಹಿಸುವುದು ನನ್ನ ಕ್ಷಮತೆಯ ಆಚೆಗಿನದಾಗಿತ್ತು. ಸುಮಾರು ೨೦ ನಿಮಿಷಗಳ ನಂತರ ನನಗೆ  ತುಂಬಾ ಪ್ರಯತ್ನ ಮಾಡಿ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಸಾಧ್ಯವಾಯಿತು.

೧ ಆ. ಸಂತರು, ವೈದ್ಯರು ಮತ್ತು ಸಾಧಕರು ಸಹಾಯ ಮಾಡುವುದು ಮತ್ತು ಅವರ ಪ್ರೀತಿಯಿಂದ ಮನಸ್ಸಿಗೆ ಧೈರ್ಯ ಬರುವುದು : ತದನಂತರ ವಿವಿಧ ಚಿಕಿತ್ಸಾಪದ್ಧತಿಗಳ ವೈದ್ಯರು ನನ್ನನ್ನು ಭೇಟಿಯಾಗಿ ಔಷಧೋಪಚಾರಗಳನ್ನು ಮಾಡಿದರು. ಸಾಧಕರೂ ನನಗೆ ಬಹಳ ಸಹಾಯ ಮಾಡಿದರು. ಸನಾತನ ಸಂಸ್ಥೆಯ ಸಂತರು ಮತ್ತು ವೈದ್ಯರಾದ ಪೂ. ವಿನಯ ಭಾವೆಯವರು ಬಹಳಷ್ಟು ಸಮಯ ನಮ್ಮ ಕೋಣೆಯಲ್ಲಿ ಕುಳಿತು ನಾಮಜಪ ಮಾಡುತ್ತಿದ್ದರು. ಅವರು ನಡುನಡುವೆ ನನ್ನನ್ನು ವಿಚಾರಿಸುತ್ತಿದ್ದರು. ಅವರು ಸೇವೆಯನ್ನು ಮಾಡುವ ಸಾಧಕಿಯರಿಗೆ ಮತ್ತು ನನ್ನ ಮಗನಿಗೆ ನನ್ನ ಕಾಲು ಮತ್ತು ಸೊಂಟವನ್ನು ಒತ್ತಲು ಮತ್ತು ಸೊಂಟಕ್ಕೆ ಶಾಖವನ್ನು (ಕಾವು) ಕೊಡಲು ಹೇಳುತ್ತಿದ್ದರು. ಕೆಲವು ಸಂತರು ನನಗೆ ಈ ವೇದನೆಗಳಿಗೆ ಉಪಾಯವೆಂದು ನಾಮಜವನ್ನು ಹುಡುಕಿ ಕೊಟ್ಟರು. ಸಂತರು ಮತ್ತು ಸಾಧಕರ ಈ ಪ್ರೀತಿಯಿಂದಾಗಿ ನನಗೆ ಬಹಳ ಧೈರ್ಯ ಬಂದಿತು. ಮುಂದಿನ ನಾಲ್ಕು ದಿನ ಮಾತ್ರ ‘ಎಲ್ಲವೂ ಹಾಸಿಗೆಯ ಮೇಲೆಯೇ’ ಎಂಬ ಸ್ಥಿತಿ ನನ್ನದಾಗಿತ್ತು.

೧ ಇ. ವಿವಿಧ ಉಪಚಾರಗಳ ನಂತರ ಕೇವಲ ಹತ್ತು-ಹನ್ನೆರಡು ದಿನಗಳವರೆಗೆ ಆರಾಮವೆನಿಸುವುದು ಮತ್ತು ಪ್ರತಿಸಲ ಮೊದಲಿಗಿಂತ ಹೆಚ್ಚು ತೀವ್ರ ವೇದನೆಗಳಾಗುವುದು, ಹೀಗೆ ೬ ತಿಂಗಳುಗಳವರೆಗೆ ಮುಂದುವರಿಯುವುದು ಮತ್ತು ಭಗವಂತನು ಪ್ರತಿಬಾರಿ ಸಹಿಸುವ ಕ್ಷಮತೆಯನ್ನು ಹೆಚ್ಚಿಸುತ್ತಿರುವುದರ ಅರಿವಾಗುವುದು : ಔಷಧಗಳು, ನ್ಯುರೋ ಥೆರಪಿಗನುಸಾರ ಉಪಚಾರ ಮತ್ತು ವಿಶ್ರಾಂತಿ ಹೀಗೆ ಎಲ್ಲವನ್ನೂ ಒಂದೇ ಸಲ ಮಾಡಿದ ನಂತರ ನನಗೆ ೧೦-೧೨ ದಿನಗಳವರೆಗೆ ಆರಾಮವೆನಿಸುತ್ತಿತ್ತು ಮತ್ತು ಪುನಃ ಮೊದಲಿಗಿಂತ ಹೆಚ್ಚು ವೇದನೆಗಳು ಪ್ರಾರಂಭವಾಗುತ್ತಿದ್ದವು. ಹೀಗೆ ಅಕ್ಟೋಬರ್ ತಿಂಗಳ ಕೊನೆಯವರೆಗೆ ಅಂದರೆ ೬ ತಿಂಗಳು ಸತತವಾಗಿ ನಡೆದಿತ್ತು. ಈ ಸಮಯದಲ್ಲಿ ಸೊಂಟದ ‘ಕ್ಷ-ಕಿರಣ ಛಾಯಾಚಿತ್ರ’ (ಎಕ್ಸರೆ) ತೆಗೆಯುವುದು, ‘ಟ್ರ್ಯಾಕ್ಶನ್ ಹಚ್ಚುವುದು’ (ಸೊಂಟಕ್ಕೆ ಪಟ್ಟಿಯನ್ನು ಕಟ್ಟಿ ಅದರ ಎರಡನೆಯ ತುದಿಗೆ ತೂಕಗಳನ್ನು ಕಟ್ಟಿ ನರ ಮತ್ತು ಸ್ನಾಯುಗಳನ್ನು ಎಳೆದಿಡುವುದು) ಇವುಗಳಂತಹ ಉಪಚಾರಗಳೂ ನಡೆದಿದ್ದವು; ಆದರೆ ಗುಣವಾಗುತ್ತಿರಲಿಲ್ಲ. ಈಗ ಹಿಂದೆ ಹೊರಳಿ ನೋಡಿದಾಗ, “ನನಗಾಗುವ ವೇದನೆಗಳು ಪ್ರತಿಬಾರಿಗಿಂತ ತೀವ್ರವಾಗಿದ್ದರೂ, ಭಗವಂತನು ನನಗೆ ಸಹಿಸಲಾಗುವಷ್ಟೇ ವೇದನೆಗಳನ್ನು ಕೊಡುತ್ತಿದ್ದನು ಮತ್ತು ಪ್ರತಿಸಲ ನನ್ನ ಸಹಿಸುವ ಕ್ಷಮತೆಯನ್ನು ಹೆಚ್ಚಿಸುತ್ತಿದ್ದನು, ಎಂದು ನನಗೆ ಅನಿಸುತ್ತದೆ. ಈ ರೀತಿ ೬ ತಿಂಗಳುಗಳು ಮುಗಿದವು.

೧ ಈ. ವೇದನೆಗಳ ತೀವ್ರತೆ ಇದ್ದಕ್ಕಿದ್ದಂತೆ ಹೆಚ್ಚಾಗುವುದು ಮತ್ತು ಎಲ್ಲ ಉಪಚಾರಗಳು ನಡೆದಿದ್ದರೂ ಅಖಂಡ ಮತ್ತು ಅಸಹನೀಯ ವೇದನೆಗಳು ಪ್ರಾರಂಭವಾಗುವುದು : ೩೧.೧೦.೨೦೧೮ ರಂದು ಬೆಳಗ್ಗೆ ಎದ್ದಾಗಿನಿಂದ ಇದ್ದಕ್ಕಿದ್ದಂತೆ ನನ್ನ ಸೊಂಟದ ನೋವು ಅಸಹನೀಯವಾಯಿತು. ಹೆಗೇಗೋ ಮಧ್ಯಾಹ್ನದ ಮಹಾಪ್ರಸಾದದವರೆಗೆ (ಭೋಜನದವರೆಗೆ) ನಾನು ಸಹಿಸಿದೆ. ಅನಂತರ ವೇದನೆಗಳ ತೀವ್ರತೆಯು ತುಂಬಾ ಹೆಚ್ಚಾಯಿತು. ಕಳೆದ ೬ ತಿಂಗಳ ತುಲನೆಯಲ್ಲಿ ಇವು ಅತ್ಯಧಿಕ ತೀವ್ರವಾಗಿದ್ದವು. ನನಗೆ ಪ್ರತಿಯೊಂದು ಶ್ವಾಸದ ಜೊತೆಗೆ ಶ್ರೀ ಗುರುಗಳಿಗೆ ಮೊರೆಯಿಡಬೇಕಾಗುತ್ತಿತ್ತು. ನಡೆಯಲು ಬರುತ್ತಿರಲಿಲ್ಲ. ಕಾಲುಗಳನ್ನು ಎಳೆಯುತ್ತಾ, ಕುಂಟುತ್ತಾ ನಡೆಯಬೇಕಾಗುತ್ತಿತ್ತು. ನನಗೆ ಸರಿಯಾಗಿ ನಿಲ್ಲಲೂ ಆಗುತ್ತಿರಲಿಲ್ಲ. ಔಷಧಿಗಳು, ಶಾಖ ಕೊಡುವುದು, ಮರ್ದನ ಮುಂತಾದ ಎಲ್ಲ ಉಪಚಾರಗಳು ನಡೆದಿದ್ದರೂ ಅಸಹನೀಯ ವೇದನೆಗಳಾಗುತ್ತಿದ್ದವು. ನೋವು ಒಂದು ಕ್ಷಣ ಕಮ್ಮಿಯಾಗುತ್ತಿರಲಿಲ್ಲ.

೨. ಅನಾರೋಗ್ಯದ ಅವಸ್ಥೆಯಲ್ಲಿ ಮಾಡಿದ ಪ್ರಾರ್ಥನೆ

೨ ಅ. ನನಗೆ ಸಕಾರಾತ್ಮಕವಾಗಿದ್ದು ವೇದನೆಗಳನ್ನು ಸ್ವೀಕರಿಸಲು ಸಾಧ್ಯವಾಗಲಿ, ಹಾಗೆಯೇ ವೇದನೆಗಳ ಕಡೆ ಗಮನ ಹೋಗುವ ಬದಲು ಶ್ರೀ ಗುರುಗಳ ಅಖಂಡ ಸ್ಮರಣೆಯಾಗಲಿ, ಎಂದು ಪರಾತ್ಪರ ಗುರುಗಳಿಗೆ ಸಂಪೂರ್ಣ ಶರಣಾಗತಭಾವದಿಂದ ದಿನದಲ್ಲಿ ಅನೇಕ ಬಾರಿ ಪ್ರಾರ್ಥನೆಯಾಗುವುದು : ಈ ಬಾರಿಯ ವೇದನೆಗಳು ಬೇರೆಯೇ ಆಗಿವೆ ಎಂಬುದು ನನ್ನ ಗಮನಕ್ಕೆ ಬಂದಿತು. ನಾನು ಶ್ರೀ ಗುರುಗಳಿಗೆ ಸಂಪೂರ್ಣ ಶರಣಾಗತಭಾವದಿಂದ, ‘ಈ ವೇದನೆಗಳ ಮಾಧ್ಯಮದಿಂದ ಏನೆಲ್ಲ ಘಟಿಸುತ್ತಿದೆಯೋ ಮತ್ತು ಏನೆಲ್ಲ ಘಟಿಸಲಿದೆಯೋ, ಅದನ್ನು ನನಗೆ ಸಕಾರಾತ್ಮಕವಾಗಿದ್ದು ಈಶ್ವರೇಚ್ಛೆ ಎಂದು ಸಂಪೂರ್ಣ ಶೇ. ೧೦೦ ರಷ್ಟು ಸ್ವೀಕರಿಸಲು ಸಾಧ್ಯವಾಗಲಿ. ನನ್ನ ಯಾವುದೇ ಇಚ್ಛೆಗಳು ಯಾವುದರ ಮಧ್ಯ ಬರಬಾರದು. ಈ ಸ್ಥಿತಿಯಲ್ಲಿ ನನ್ನ ಗಮನವು ನೋವಿನ ಕಡೆಗೆ ಹೋಗುವ ಬದಲು ನಿಮ್ಮ ಸ್ಮರಣೆಯಲ್ಲಿ, ನಿಮ್ಮನ್ನು ಅನುಭವಿಸುವಲ್ಲಿ ಕಳೆಯಲಿ ಮತ್ತು ನನಗೆ ಅದರ ಆನಂದ ಸಿಗಲಿ’, ಎಂದು ಪ್ರಾರ್ಥಿಸಿದೆ. ನಾನು ಈ ಪ್ರಾರ್ಥನೆಯನ್ನು ನಿಯಮಿತವಾಗಿ ದಿನದಲ್ಲಿ ಅನೇಕ ಬಾರಿ ಮಾಡುತ್ತಿದ್ದೆನು.

೨ ಆ. ಪ್ರಾರ್ಥನೆಯು ಶ್ರೀ ಗುರುಗಳಿಗೆ ತಲುಪುತ್ತಿರುವುದರ ಅನುಭೂತಿ : ನನ್ನ  ಪ್ರಾರ್ಥನೆಗಳು ಪರಾತ್ಪರ ಗುರುಗಳಿಗೆ ತಲುಪುತ್ತಿದ್ದವು; ಏಕೆಂದರೆ ನನಗೆ ಅಂತಹ ಅನುಭೂತಿಗಳು ಬರುತ್ತಿದ್ದವು.

೧. ಆ ಸಮಯದಲ್ಲಿ ನನ್ನ ದೇಹವು ಅಸಹನೀಯವಾದ ವೇದನೆಗಳನ್ನು ಸಹಿಸುತ್ತಿದ್ದರೂ ನನ್ನ ಮನಸ್ಸು ಮಾತ್ರ ಶಾಂತ, ಸ್ಥಿರ ಮತ್ತು ಆನಂದದಲ್ಲಿರುತ್ತಿತ್ತು.

೨. ಕೆಲವೊಮ್ಮೆ ನಾನು ಹಾಸಿಗೆಯ ಮೇಲೆ ಮಲಗಿರುವಾಗ ‘ದಿಂಬಿನ ಹತ್ತಿರ ಯಾರೋ ಬಂದು ಕುಳಿತಿದ್ದಾರೆ’, ಎಂದು ನನಗೆ ಅರಿವಾಗುತ್ತಿತ್ತು. ಮನಸ್ಸಿಗೆ ಆಧಾರವೆನಿಸುತ್ತಿತ್ತು. ಆರಂಭದಲ್ಲಿ ಮನಸ್ಸು ‘ಇದರಲ್ಲಿ ಕೆಟ್ಟ ಶಕ್ತಿಗಳ ಹಸ್ತಕ್ಷೇಪವಿರಬಹುದೇ ?’, ಎಂಬ ವಿಚಾರದಿಂದ ಸಂದೇಹ ಪಡುತ್ತಿತ್ತು; ಆದರೆ ಹಾಗಿಲ್ಲವೆಂದು ಖಚಿತವಾಗಬೇಕೆಂದು ನನ್ನ ಸುತ್ತಲೂ ಧರ್ಮಗಂಧವು ಹರಡುತ್ತಿತ್ತು.

೩. ಕೆಲವೊಮ್ಮೆ ದಿಂಬಿನ ಹತ್ತಿರವಿಟ್ಟ ಶ್ರೀಕೃಷ್ಣನ ಚಿತ್ರದಿಂದ ಚಂದನದ ಸುಗಂಧವು ಪ್ರಕ್ಷೇಪಿಸುತ್ತಿತ್ತು.

೪. ಕೆಲವೊಮ್ಮೆ ಯಾರಾದರೂ ನನ್ನ ಸಮೀಪ ಬಂದು ನನ್ನ ತಲೆಯ ಮೇಲಿನಿಂದ ಸೂಕ್ಷ್ಮದಿಂದ ವಾತ್ಸಲ್ಯ ಭಾವದಿಂದ ಕೈಯಾಡಿಸುವು ದರ ಅರಿವಾಗುತ್ತಿತ್ತು. ಆ ಸಮಯದಲ್ಲಿಯೂ ನನಗೆ ಧರ್ಮಗಂಧ ಬರುತ್ತಿತ್ತು. ‘ಪರಾತ್ಪರ ಶ್ರೀ ಗುರುಗಳೇ ನನ್ನ ಬಳಿ ಇದ್ದಾರೆ’, ಎಂದು ಅರಿವಾಗಿ ಕೃತಜ್ಞತೆಯಿಂದ ನನ್ನ ಕಣ್ಣುಗಳಲ್ಲಿ ಅಶ್ರು ಬರುತ್ತಿದ್ದವು.

೩. ದೇಹವು ಅಸಹನೀಯವಾದ ವೇದನೆಗಳನ್ನು ಸಹಿಸುತ್ತಿರುವಾಗ ಮನಸ್ಸು ಸ್ಥಿರ ಮತ್ತು ಆನಂದದಲ್ಲಿರುವ ಬಗ್ಗೆ ಸಂತರು ಮತ್ತು ಸಾಧಕರು ಸಾಕ್ಷಿಯನ್ನು ನೀಡುವುದು

ದೇಹವು ಅಸಹನೀಯ ವೇದನೆಗಳನ್ನು ಅನುಭವಿಸುವಾಗ ಇಂತಹ ಸ್ಥಿತಿಯಲ್ಲಿಯೂ ಮನಸ್ಸು ಶಾಂತ, ಸ್ಥಿರ ಮತ್ತು ಆನಂದಲ್ಲಿ ಇರುವುದರ ಸಾಕ್ಷಿಯನ್ನು ನನಗೆ ಸದ್ಗುರು ರಾಜೇಂದ್ರ ಶಿಂದೆಯವರು  ನೀಡಿದರು. (ಆ ಸಮಯದಲ್ಲಿ ಅವರು ರಾಮನಾಥಿ ಆಶ್ರಮದಲ್ಲಿದ್ದರು.) ಅವರು, ‘ಇಷ್ಟು ತೀವ್ರ ವೇದನೆಗಳು ಇರುವಾಗಲೂ ನೀವು ಇಷ್ಟು ಆನಂದದಿಂದ ಹೇಗಿರುವಿರಿ ? ನಿಮ್ಮ ಕಡೆಗೆ ನೋಡಿ ಇಷ್ಟು ವೇದನೆಗಳಿವೆ’, ಎಂದು ಅನಿಸುವುದಿಲ್ಲ, ಎಂದು ಹೇಳಿದರು. ಬಹಳಷ್ಟು ಸಾಧಕರೂ ಈ ರೀತಿ ಹೇಳುತ್ತಿದ್ದರು. ಆಗ ‘ಇವೆಲ್ಲವುಗಳನ್ನು ಮಾಡುವವರು ಮತ್ತು ಮಾಡಿಸಿಕೊಳ್ಳುವವರು ಪರಾತ್ಪರ ಗುರುಗಳೇ ಆಗಿದ್ದಾರೆ’, ಎಂಬ ವಿಚಾರದಿಂದ ಮನಸ್ಸಿನಲ್ಲಿ ಕೃತಜ್ಞತಾಭಾವ ತುಂಬಿ ಬರುತ್ತಿತ್ತು. ಸಂತರು ಮತ್ತು ಸಾಧಕರ ಮಾಧ್ಯಮದಿಂದ ಶ್ರೀ ಗುರುಗಳೇ ನನಗೆ ಆಧಾರ ನೀಡುತ್ತಿದ್ದರು.

೪. ಶ್ರೀ ಗುರುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಾಡಿದ ಸಹಾಯ

೪ ಅ. ಶೌಚಾಲಯದಲ್ಲಿ ಸಿಲುಕಿಕೊಳ್ಳುವುದು ಮತ್ತು ಶ್ರೀ ಗುರುಗಳಿಗೆ ಮೊರೆಯಿಟ್ಟಾಗ ಕೆಲವು ನಿಮಿಷಗಳಲ್ಲಿಯೇ ಮೇಲೆ ಏಳಲು ಬರುವುದು : ಕೋಣೆಯಲ್ಲಿನ ಸಹಸಾಧಕಿಯರು ತಯಾರಾಗಿ ಸೇವೆಗೆ ಹೋದ ನಂತರ ನಾನು ದಿನವಿಡಿ ಕೋಣೆಯಲ್ಲಿ ಒಬ್ಬಳೇ ಇರುತ್ತಿದ್ದೆ. ಇಂತಹ ಸಮಯದಲ್ಲಿ ನಾನು ಒಂದು ಬಾರಿ ವಿದೇಶಿ ಪದ್ಧತಿಯ ಶೌಚಾಲಯದಲ್ಲಿ ಸಿಲುಕಿಕೊಂಡೆನು. ನನಗೆ ಅಲುಗಾಡಲೂ ಸಹ ಆಗುತ್ತಿರಲಿಲ್ಲ ಮತ್ತು ಮೇಲೆ ಏಳಲೂ ಬರುತ್ತಿರಲಿಲ್ಲ. ನಾನು ಶ್ರೀ ಗುರುಗಳಿಗೆ ತುಂಬಾ ಆರ್ತಳಾಗಿ ಮೊರೆಯಿಟ್ಟೆ ಮತ್ತು ಕೆಲವು ನಿಮಿಷಗಳಲ್ಲಿಯೇ ನನಗೆ ಮೇಲೆಳಲು ಸಾಧ್ಯವಾಯಿತು.

೪ ಆ. ‘ಎಲ್ಲವೂ ಶ್ರೀ ಗುರುಗಳ ಆಯೋಜನೆಗನುಸಾರವಾಗಿಯೇ ನಡೆಯುತ್ತದೆ; ಎಂಬುದು ಕಲಿಯಲು ಸಿಕ್ಕಿತು ಮತ್ತು ಶ್ರೀ ಗುರುಗಳು ಘಟಿಸುತ್ತಿರುವುದು ಅರಿವಾಗುವುದು : ಈ ಪ್ರಸಂಗದ ಬಗ್ಗೆ ವಿಚಾರ ಮಾಡಿದಾಗ, ನನಗೆ ನನ್ನ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಲು ಬರುತ್ತದೆ. ನನಗೆ ಯಾರ ಸಹಾಯವನ್ನೂ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ. ಇದು ಶ್ರೀ ಗುರುಗಳು ನನ್ನ ಮೇಲೆ ಮಾಡಿದ ಕೃಪೆಯೇ ಆಗಿದೆ ಎಂಬುದು ಗಮನಕ್ಕೆ ಬಂದಿತು. ಆಗ ನನಗೆ, ಪರಾತ್ಪರ ಗುರು ಪಾಂಡೆ ಮಹಾರಾಜರು, ‘ಭಗವಂತನೇ ಕಾರ್ಯವನ್ನು ಮಾಡುತ್ತಾನೆ. ನಿಮ್ಮ ದೇಹದಲ್ಲಿನ ಆತ್ಮಶಕ್ತಿಯೇ ಕಾರ್ಯವನ್ನು ಮಾಡುತ್ತದೆ. ನಮ್ಮಲ್ಲಿ ಮಾತ್ರ ‘ನಾನು ಯಾರ ಸಹಾಯವನ್ನು ಪಡೆಯದೇ ನನ್ನ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತೇನೆ’, ಎಂಬ ಅಹಂ ಇರುತ್ತದೆ, ಎಂದು ಹೇಳಿದ್ದು ನೆನಪಾಯಿತು, ಈ ಸಮಯದಲ್ಲಿ ‘ಶ್ರೀ ಗುರುಗಳು ನನಗೆ ಇದರಿಂದ ಇದನ್ನೇ ಕಲಿಸಿ ನನ್ನನ್ನು ಘಟಿಸುತ್ತಿದ್ದಾರೆ’, ಎಂದು ಅರಿವಾಯಿತು. ನಂತರ ನನ್ನ ಮನಸ್ಸು ದಿನವಿಡಿ ಕ್ಷಣಕ್ಷಣಕ್ಕೂ ‘ದೇಹದಲ್ಲಿನ ಆತ್ಮಶಕ್ತಿ’ಯನ್ನು ಅನುಭವಿಸುವ ಮತ್ತು ಅದರಲ್ಲಿನ ಆನಂದವನ್ನು ಪಡೆಯುವ ಪ್ರಯತ್ನಿಸುತ್ತಿತ್ತು. ಆಗ, ‘ನನಗಾಗುವ ವೇದನೆಗಳು ಎಷ್ಟು ತೀವ್ರವಾಗಿದ್ದವು ಅಂದರೆ, ನನಗೆ ಅವುಗಳನ್ನು ಸಹಿಸಲು ಸಾಧ್ಯವೇ ಇರಲಿಲ್ಲ. ಶ್ರೀ ಗುರುಗಳು ನನ್ನ ಕಾಲುಗಳನ್ನು ಎತ್ತದಿದ್ದರೆ, ನನ್ನಿಂದ ಕಾಲನ್ನೆತ್ತಲು ಆಗುತ್ತಿರಲಿಲ್ಲ, ಎಂದು ನನ್ನ ಗಮನಕ್ಕೆ ಬಂದಿತು. ಹೇಗೆ ಗಿಡದ ಎಲೆಗಳೂ ದೇವರ ಇಚ್ಛೆಯ ಹೊರತು ಅಲುಗಾಡುವುದಿಲ್ಲವೋ, ಇದು ಸಹ ಹಾಗೆಯೇ ಆಗಿದೆ, ಆಗ ನನಗೆ ‘ದೇಹದ ಚಲನವಲನ, ದೇಹದಿಂದಾಗುವ ಕೃತಿಗಳು, ಮನಸ್ಸಿನಲ್ಲಿ ಬರುವ ವಿಚಾರಗಳು, ಸಂಪರ್ಕಕ್ಕೆ ಬರುವ ವ್ಯಕ್ತಿಗಳು, ಇವೆಲ್ಲವೂ ಶ್ರೀ ಗುರುಗಳ ನಿಯೋಜನೆಗನುಸಾರವೇ ಆಗಿರುತ್ತವೆ’, ಎಂಬುದು ಕಲಿಯಲು ಸಿಕ್ಕಿತು.

೪ ಇ. ಶ್ರೀ ಗುರುಗಳು ಪ್ರಸಾದವನ್ನು ಕಳುಹಿಸಿ ವೇದನೆಗಳು ಸಹಿಸು ವಂತಾಗಲು ಶಕ್ತಿಯನ್ನು ಕೊಡುತ್ತಿರುವುದರ ಅರಿವಾಗುವುದು ಮತ್ತು ‘ಗುರುಸ್ಮರಣೆಯಲ್ಲಿ ಮಗ್ನವಾದಾಗ ಅಸಹನೀಯ ವೇದನೆಗಳು ಮರೆತು ಹೋಗುತ್ತದೆ’, ಎಂಬುದು ಅನುಭವಕ್ಕೆ ಬಂದು ಕೃತಜ್ಞತಾಭಾವ ಜಾಗೃತವಾಗುವುದು : ಇಂತಹದರಲ್ಲಿಯೇ ನನ್ನ ಮಗನಿಂದ ಶ್ರೀ ಗುರುಗಳಿಗೆ ನನ್ನ ಸ್ಥಿತಿಯ ಬಗ್ಗೆ ತಿಳಿದಾಗ ಅವರು ನನಗೆ ಆರಾಮ ಆಗುವವರೆಗೆ ತಿನಿಸನ್ನು (ಪ್ರಸಾದ) ಕಳುಹಿಸಲು ಹೇಳಿದರು. ಮೊದಲ ಪ್ರಸಾದ ನನ್ನ ಕೈಸೇರಿದಾಗ ಅದನ್ನು ‘ಪ್ರಸಾದ’ವೆಂದು ಹಣೆಗೆ ಒತ್ತಿಕೊಳ್ಳುವಾಗ ಕೃತಜ್ಞತೆಯಿಂದ ನನ್ನ ಕಣ್ಣುಗಳಲ್ಲಿ ನೀರು ತುಂಬಿದವು. ಆಗ ‘ಈ ಪ್ರಸಾದದಿಂದ ಶ್ರೀ ಗುರುಗಳು ನನಗೆ ಶಕ್ತಿಯನ್ನು ನೀಡುತ್ತಿದ್ದಾರೆ. ಇಷ್ಟೇ ಅಲ್ಲ, ನನಗಾಗುತ್ತಿರುವ ತೀವ್ರ ವೇದನೆಗಳಲ್ಲಿನ ಶೇ. ೯೯.೯೯ ರಷ್ಟು ವೇದನೆಗಳನ್ನು ಅವರು ಸ್ವತಃ ಸಹಿಸುತ್ತಿದ್ದಾರೆ, ನನಗಾಗುವ ವೇದನೆಗಳು ತೀರಾ ನಗಣ್ಯವಾಗಿವೆ.’ ಎಂಬುದು ನನ್ನ ಗಮನಕ್ಕೆ ಬಂದಿತು. ಈ ರೀತಿ ನನ್ನ ವೇದನೆಗಳು ಸಹಿಸುವಂತಾಗಬೇಕೆಂದು ಶ್ರೀ ಗುರುಗಳು ತೆಗೆದುಕೊಳ್ಳುತ್ತಿರುವ ಕಷ್ಟವನ್ನು ನೋಡಿ ಮನಸ್ಸು ಕೃತಜ್ಞತೆಯಿಂದ ತುಂಬಿ ಬರುತ್ತಿತ್ತು. ನನಗೆ ‘ನನ್ನ ಕೀರ್ತನದಲ್ಲಿ (ಭಕ್ತಿಯಲ್ಲಿ) ಮಗ್ನನಾಗಿ ನೋಡು, ನಿನಗೆ ಜಗತ್ತಿನ ವಿಸ್ಮರಣೆಯಾಗದಿದ್ದರೆ, ಆಮೇಲೆ ಹೇಳು !’ ಎಂಬ ಶ್ರೀಕೃಷ್ಣನ ವಚನ ನೆನಪಾಯಿತು. ನಿಜವೇ ಆಗಿದೆ ಅದು ! ‘ಗುರುಸ್ಮರಣೆಯಲ್ಲಿ ಮಗ್ನವಾದಾಗ ವೇದನೆಗಳನ್ನು ಮರೆಯುತ್ತೇವೆ’, ಎಂಬುದು ನನಗೆ ಅನುಭವಿಸಲು ಸಿಕ್ಕಿತು. ಇದಕ್ಕಾಗಿ ಶ್ರೀ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

೪ ಈ. ಇತರರ ಮಾಧ್ಯಮದಿಂದ ಶ್ರೀ ಗುರುಗಳು ತೆಗೆದುಕೊಂಡ ಕಾಳಜಿ !

೪ ಈ ೧. ಆವಶ್ಯಕತೆಯಿರುವಾಗ ಯಾರದ್ದಾದರೂ ಮಾಧ್ಯಮದಿಂದ ಶ್ರೀ ಗುರುಗಳು ಕಾಳಜಿ ವಹಿಸುವುದು : ಈಗ ಹಿಂದೆ ಹೊರಳಿ ನೋಡಿದಾಗ, ಬೆಳಗ್ಗೆ ನನ್ನನ್ನು ಸ್ನಾನಕ್ಕೆ ಕರೆದುಕೊಂಡು ಹೋಗುವುದು, ಸ್ನಾನವನ್ನು ಮಾಡಿಸುವುದು, ಬಟ್ಟೆಗಳನ್ನು ತೊಳೆಯುವುದು, ಸ್ವತಃ ತಯಾರಾಗುವುದು ಎಲ್ಲವನ್ನೂ ಶ್ರೀ ಗುರುಗಳೇ ಮಾಡಿಸಿಕೊಳ್ಳುತ್ತಿದ್ದರು. ನಾನೇ ಎಲ್ಲವನ್ನು ಮಾಡಿಕೊಳ್ಳುವ ಸ್ಥಿತಿಯಾದರು ಎಲ್ಲಿತ್ತು ! ಯಾವಾಗ ಮತ್ತು ಎಲ್ಲಿ ಅವಶ್ಯಕತೆಯಿತ್ತೋ, ಅಲ್ಲಿ ಯಾರದ್ದಾದರೂ ಮಾಧ್ಯಮದಿಂದ ಅವರೇ ಕಾಳಜಿಯನ್ನು ವಹಿಸುತ್ತಿದ್ದಾರೆ’, ಎಂದು ಗಮನಕ್ಕೆ ಬರುತ್ತದೆ. ಹಾಗಾದರೆ ‘ಏಕೆ ಬೇಕು ಆ ಕರ್ತೃತ್ವ ! ಶ್ರೀ ಗುರುಚರಣಗಳಲ್ಲಿ ಅದು ಅರ್ಪಣೆಯಾಗಲಿ’, ಎಂದು ಪ್ರಾರ್ಥಿಸುತ್ತೇನೆ.

೪ ಈ ೨. ನೀರಡಿಕೆಯಿಂದ ವ್ಯಾಕುಲಗೊಂಡು ಎಚ್ಚರ ತಪ್ಪಿ ಬಿದ್ದಿರುವ ದಾರಿಹೋಕನಿಗೆ ನೀರನ್ನು ಕುಡಿಸುವ ವ್ಯಕ್ತಿಯ ಮಾಧ್ಯಮದಿಂದ ಶ್ರೀ ಗುರುಗಳೇ ಸಹಾಯ ಮಾಡಿದುದರ ನೆನಪಾಗುವುದು ಮತ್ತು ನಾನೂ ಅದನ್ನೇ ಅನುಭವಿಸುವುದು : ನನಗೆ ನಾನು ಓದಿದ ಒಂದು ಕಥೆ ನೆನಪಿಗೆ ಬಂದಿತು. ‘ಒಬ್ಬ ದಾರಿಹೋಕನಿಗೆ ದೂರ ಪ್ರವಾಸ ಮಾಡಲಿಕ್ಕಿತ್ತು. ಅವನು ಅರಣ್ಯ ಮಾರ್ಗದಿಂದ ನಡೆಯುತ್ತಾ ಹೊರಟಿದ್ದನು. ಅವನ ಬಳಿಯಿದ್ದ ನೀರು ಖಾಲಿಯಾಗಿರುತ್ತದೆ. ನೀರಿರುವ ಸ್ಥಾನ ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಅಷ್ಟರಲ್ಲಿಯೇ ಅವನಿಗೆ ಒಂದು ಬಾವಿ ಕಾಣಿಸಿತು. ಅವನಿಗೆ ಆನಂದವಾಗುತ್ತದೆ; ಆದರೆ ಅವನು ಅಲ್ಲಿಗೆ ಹೋಗುವ ಮೊದಲೇ ಎಚ್ಚರತಪ್ಪಿ ದಾರಿಯಲ್ಲಿಯೇ ಬೀಳುತ್ತಾನೆ. ಅಷ್ಟರಲ್ಲಿಯೇ ಅಲ್ಲಿಗೆ ಒಬ್ಬ ವ್ಯಕ್ತಿಯು ಬಂದು ಅವನಿಗೆ ನೀರು ಕುಡಿಸಿ ಅವನನ್ನು ಬದುಕಿಸುತ್ತಾನೆ. ಆ ವ್ಯಕ್ತಿಯ ರೂಪದಲ್ಲಿ ಬಂದು ಶ್ರೀ ಗುರುಗಳೇ ಅವನಿಗೆ ಸಹಾಯ ಮಾಡಿದ್ದರು. ಇದೇ ರೀತಿಯ ಕೆಲವು ಅನುಭೂತಿಗಳನ್ನು  ಶ್ರೀ ಗುರುಗಳು ನನಗೆ ಈ ವೇದನೆಗಳ ಪ್ರಸಂಗದಲ್ಲಿ ನೀಡಿದರು.

೪ ಈ ೩. ಶ್ರೀ ಗುರುಗಳು ಸಹಾಯ ಮಾಡಿದುದರ ಕೆಲವು ಅನುಭೂತಿಗಳು

ಅ. ನಾನು ಬೆಳಗ್ಗೆ ಸ್ನಾನ ಮಾಡಿ ಹೊರಗೆ ಬಂದನಂತರ ನೆನೆಸಿದ ಬಟ್ಟೆಗಳ ಬಕೇಟ್‌ನ್ನು ಎತ್ತಲು ಸಹಾಯ ಮಾಡಲು ಯಾರಾದರೊಬ್ಬರು ಸ್ನಾನಗೃಹಕ್ಕೆ ಪ್ರತಿನಿತ್ಯ ಬರುತ್ತಿದ್ದರು.

ಆ. ಒಂದು ಬಾರಿ ನಾನು ಪ್ರಾತಃಕಾಲ ಸ್ನಾನಗೃಹಕ್ಕೆ ಹೋಗುತ್ತಿದ್ದೆ. ಅಲ್ಲಿರುವ ಚಿಕ್ಕ ಮೆಟ್ಟಿಲು ಹತ್ತಿ ಒಳಗೆ ಹೋಗುವಾಗ ನನ್ನ ಸಮತೋಲನ ತಪ್ಪಿತು. ಹೀಗೆ ಎರಡು ಬಾರಿ ಆಯಿತು. ಬಾಗಿಲಿನ ಚೌಕಟ್ಟು ಕೈಗೆ ಸಿಗುತ್ತಿರಲಿಲ್ಲ. ಮೂರನೇಯ ಬಾರಿ ಸಮತೋಲನ ತಪ್ಪುತ್ತಿರುವಾಗ ನನ್ನ ಕಿವಿಗೆ, ‘ಕಾಕೂ, ನಿಧಾನ ! ಸಾವಕಾಶ’, ಎಂಬ ಶಬ್ದಗಳು ಕೇಳಿಸಿದವು. ಹಿಂದೆ ಹೊರಳಿ ನೋಡಿದಾಗ ಒಬ್ಬ ಎತ್ತರದ ಮತ್ತು ಸದೃಢ ಸಾಧಕಿಯು ನನ್ನ ಹಿಂದೆ ನಿಂತಿದ್ದಳು. ‘ಅವಳು ಅಲ್ಲಿಗೆ ಯಾವಾಗ ಬಂದಳು’, ಎಂಬುದು ನನಗೆ ತಿಳಿಯಲೇ ಇಲ್ಲ. ಅವಳು ಅಲ್ಲಿಗೆ ಬರದೇ ಇದ್ದರೆ, ಇನ್ನೊಂದು ಯಾವುದಾದರೊಂದು ಅಪಘಾತ ಆಗಬಹುದಾಗಿತ್ತು. ‘ಆ ಸಾಧಕಿಯ ರೂಪದಲ್ಲಿ ಬಂದು ಶ್ರೀ ಗುರುಗಳೇ ನನ್ನನ್ನು ಕಾಪಾಡಿದರು’, ಎಂಬ ವಿಚಾರದಿಂದ ನನ್ನ ಭಾವಜಾಗೃತಿಯಾಯಿತು.

ಇ. ದಿನವಿಡಿ ಯಾವ ಯಾವ ಸಮಯದಲ್ಲಿ ನಾನು ಸ್ನಾನಗೃಹಕ್ಕೆ ಹೋಗುತ್ತಿದ್ದೆನೋ, ಆಗ ಯಾರಾದರೂ ಸಾಧಕಿಯರು ನನ್ನ ಸಹಾಯಕ್ಕಾಗಿ ಬರುತ್ತಿದ್ದರು. ಶ್ರೀ ಗುರುಗಳೇ ನನಗಾಗಿ ಯಾರನ್ನಾದರೂ ಕಳುಹಿಸುತ್ತಿದ್ದರು. ನಾನು ಸ್ನಾನಗೃಹದಿಂದ ಹೊರಗೆ ಬರುವವರೆಗೆ ಅವರು ಅಲ್ಲಿ ನಿಂತಿರುತ್ತಿದ್ದರು.

ಈ. ಅಸಹನೀಯ ವೇದನೆಗಳಿಂದ ಹಾಸಿಗೆಯಿಂದ ಏಳುವಾಗ ನನಗೆ ಬಹಳ ತೊಂದರೆಯಾಗುತ್ತಿತ್ತು. ಒಂದು ಸಲ ಸಾಯಂಕಾಲ ಸೆಕೆ ಆಗುತ್ತದೆ ಎಂದು ನಾನು ಪಂಖವನ್ನು ಹಚ್ಚಲು ಏಳುವ ಪ್ರಯತ್ನವನ್ನು ಮಾಡುವಾಗ ಒಬ್ಬ ಸಾಧಕಿಯು ಕೋಣೆಯಲ್ಲಿ ಇಣುಕಿ ನೋಡಿದಳು. ನಾನು ಅವಳಿಗೆ ಪಂಖಾ ಹಚ್ಚಲು ಹೇಳಿದೆನು ಮತ್ತು ನಂತರ ಅವಳು ಅಲ್ಲಿಗೆ ಬಂದಿರುವ ಕಾರಣವನ್ನು ಕೇಳಿದೆನು. ಅವಳು, ‘ನಾನು ಎಲ್ಲಿಗೋ ಹೊರಟಿದ್ದೆ. ಹೋಗುವಾಗ ಹಾಗೆಯೇ ವಿಚಾರ ಬಂದಿತು ಮತ್ತು ಸಹಜವಾಗಿಯೇ ಒಳಗೆ ಇಣುಕಿ ನೋಡಿದೆ. ಯಾವುದೇ ಕಾರಣವಿರಲಿಲ್ಲ’, ಎಂದು ಹೇಳಿದಳು. ಅವಳು ಪಂಖವನ್ನು ಹಚ್ಚಿ ಕೂಡಲೇ ಹೋದಳು. ಆ ಸಾಧಕಿಯ ರೂಪದಲ್ಲಿ ‘ಶ್ರೀ ಗುರುಗಳೇ’ ಬಂದಿದ್ದರು, ಎಂದು ಹೇಳುವುದರ ಆವಶ್ಯಕತೆ ಇಲ್ಲ !

ಉ. ಒಂದು ಬಾರಿ ದೀಪ ಹಚ್ಚುವ ಸಮಯದಲ್ಲಿ ಕೋಣೆಯಲ್ಲಿನ ದಂಡದೀಪ (ಟ್ಯೂಬ್‌ಲೈಟ್)ವನ್ನು ಹಚ್ಚಲು ಏಳುತ್ತಿರುವಾಗ ಓರ್ವ ಸಾಧಕಿಯು ಕೋಣೆಯಲ್ಲಿ ಬಂದಳು. ಅವಳು ದೀಪವನ್ನು ಹಚ್ಚುವ ಬಗ್ಗೆ ನನ್ನನ್ನು ಕೇಳಿದಳು ಮತ್ತು ದೀಪ ಹಚ್ಚಿಕೊಟ್ಟು ಕೂಡಲೇ ಹೋದಳು ! ಹೀಗೆ ಎರಡು ಬಾರಿ ಇಬ್ಬರು ಬೇರೆ ಬೇರೆ ಸಾಧಕಿಯರ ಮಾಧ್ಯಮದಿಂದ ಹೀಗೆ ಆಯಿತು. ‘ದೇವರೇ, ನಾನು ಯಾವ ರೀತಿ ಕೃತಜ್ಞತೆಯನ್ನು ವ್ಯಕ್ತಪಡಿಸಲಿ ?’, ಎಂಬುದೇ ನನಗೆ ತಿಳಿಯುವುದಿಲ್ಲ. ‘ಈ ವೇದನೆಗಳೆಂದರೆ ದೇವರು ನನ್ನನ್ನು ಅಖಂಡ ಕೃತಜ್ಞತಾಭಾವದಲ್ಲಿಡುವ ಮತ್ತು ಕರ್ತೃತ್ವವನ್ನು ಅರ್ಪಿಸಲು ನೀಡಿದ ಅವಕಾಶವಾಗಿದೆ’, ಎಂದಷ್ಟೇ ಗಮನಕ್ಕೆ ಬಂದಿತು. – ಶ್ರೀಮತಿ ಮೇಘನಾ ವಾಘಮಾರೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೦೧.೨೦೧೯) (ಮುಂದುವರಿಯುವುದು)

ಸವೋಚ್ಚ ಸ್ತರದ ಭಕ್ತಿಭಾವದಿಂದ ೬-೭ ತಿಂಗಳು ಮಾರಣಾಂತಿಕ ವೇದನೆಗಳನ್ನು ಸಹಿಸಿದ ರಾಮನಾಥಿ ಆಶ್ರಮದ ಶ್ರೀಮತಿ ಮೆಘನಾ ವಾಘಮಾರೆ !

‘ಶ್ರೀಮತಿ ಮೆಘನಾ ವಾಘಮಾರೆಯವರ ಲೇಖನವನ್ನು ಓದಿ ಭಕ್ತಿ ಮತ್ತು ಭಾವವಿದ್ದರೆ, ಮಾರಣಾಂತಿಕ ವೇದನೆಗಳನ್ನು ಸಹ ಹೇಗೆ ಸಹಿಸಲು ಸಾಧ್ಯವಾಗುತ್ತದೆ, ಎಂಬುದರ ಒಂದು ಉದಾಹರಣೆ ನಮಗೆ ಸಿಕ್ಕಿತು. ಅವರು ಇಷ್ಟು ತೀವ್ರ ವೇದನೆಗಳನ್ನು ೬-೭ ತಿಂಗಳುಗಳವರೆಗೆ ಪ್ರತಿದಿನ ೨೪ ಗಂಟೆಗಳ ಕಾಲ ಹೇಗೆ ಸಹಿಸಿರಬಹುದು, ಎಂಬುದಕ್ಕೆ ಉತ್ತರ ಒಂದೇ, ಅದೆಂದರೆ ಅವರಲ್ಲಿನ ಸರ್ವೋಚ್ಚ ಸ್ತರದ ಭಕ್ತಿಭಾವ !

ಮುಂಬರುವ ಮೂರನೇಯ ಮಹಾಯುದ್ಧದ ಸಮಯದಲ್ಲಿ ಅನೇಕರಿಗೆ ವೇದನೆಗಳನ್ನು ಸಹಿಸುವ ಪ್ರಸಂಗಗಳು ಬರಬಹುದು. ಆಗ ಅವರು ಈ ಲೇಖನವನ್ನು ಪುನಃ ಪುನಃ ಓದಿದರೆ, ಅವರಿಗೆ ಶಾರೀರಿಕ ಮತ್ತು ಮಾನಸಿಕ ವೇದನೆಗಳನ್ನು ಸಹಿಸುವ ಶಕ್ತಿ ಸಿಗುವುದು ಮತ್ತು ಅವರಿಗೆ ನಾಮಸ್ಮರಣೆಯನ್ನೂ ಮಾಡಲು ಸಾಧ್ಯವಾಗುವುದು. ಸಂಪೂರ್ಣ ಮನಕುಲದ ಮುಂದೆ ಒಂದು ಆದರ್ಶವನ್ನಿಟ್ಟ ಶ್ರೀಮತಿ ಮೆಘನಾ ವಾಘಮಾರೆ ಅವರನ್ನು ಎಷ್ಟು ಹೊಗಳಿದರೂ ಅದು ಕಡಿಮೆಯೇ ! ಅವರು ಸ್ಥೂಲದೇಹವನ್ನು ಗೆದ್ದಿದ್ದಾರೆ. ಈಗ ಮುಂದಿನ ಪ್ರಗತಿಯು ಶೀಘ್ರದಲ್ಲಾಗಿ ಅವರು ಮನೋದೇಹ ಮತ್ತು ಕಾರಣದೇಹವನ್ನೂ (ಬುದ್ಧಿ) ಗೆಲ್ಲುವರು ಮತ್ತು ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತರಾಗುವರು, ಎಂದು ನನಗೆ ಖಾತ್ರಿಯಿದೆ.’- (ಪರಾತ್ಪರ ಗುರು) ಡಾ. ಆಠವಲೆ