ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ವಿದ್ಯುತ್ ಶೀತಕಪಾಟಿನಿಂದಾಗಿ (ರೆಫ್ರಿಜರೆಟರ್‌ನಿಂದಾಗಿ) ಆಹಾರ ಪದಾರ್ಥಗಳ ಮೇಲಾಗುವ ದುಷ್ಪರಿಣಾಮ !

ಶ್ರೀ. ಋತ್ವಿಜ ಢವಣ

‘ಇಂದಿನ ಆಧುನಿಕ ಯುಗದಲ್ಲಿ ಸಮಾಜದ ಜನರಿಗೆ ಕೆಲವು ವಿದ್ಯುತ್ ಉಪಕರಣಗಳು ಜೀವನದ ಒಂದು ಅವಿಭಾಜ್ಯ ಅಂಗವಾಗಿವೆ. ಅವುಗಳಲ್ಲಿ ಒಂದು ಎಂದರೆ ‘ವಿದ್ಯುತ್ ಶೀತಕಪಾಟು’ (ರೆಫ್ರಿಜರೆಟರ್) ಆಗಿದೆ. ಸ್ತ್ರೀಯರು ಈ ಬಿಡುವಿಲ್ಲದ ಜೀವನದಲ್ಲಿ ಸಮಯದ ಅಭಾವದಿಂದ ವಾರದಲ್ಲಿ ಒಂದೇ ಬಾರಿಗೆ ಮಾರುಕಟ್ಟೆಯಿಂದ ಹಣ್ಣು, ತರಕಾರಿ ಅಥವಾ ಇತರ ವಸ್ತುಗಳನ್ನು ತಂದು ಶೀತಕಪಾಟಿನಲ್ಲಿಡುತ್ತಾರೆ ಮತ್ತು ಆವಶ್ಯಕತೆಗನುಸಾರ ಅವುಗಳನ್ನು ಬಳಸುತ್ತಾರೆ. ಇದರಿಂದ ಶಾರೀರಿಕ ಸ್ತರದಲ್ಲಿ ಹಾನಿಯಾಗುವುದರೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಅದರ ದುಷ್ಪರಿಣಾಮವು ಗಮನಕ್ಕೆ ಬರುತ್ತದೆ. ನಿಸರ್ಗದ ವಿರುದ್ಧ ಹೋಗಿ ತಂಪು ಮಾಡಿದ ಪದಾರ್ಥಗಳು ಹಾನಿಕರವಾಗಿರುತ್ತವೆ, ಹಾಗೆಯೇ ಅವು ತಂಗಳಾಗುವುದರಿಂದ ಅವುಗಳಲ್ಲಿನ ಪೋಷಕ ತತ್ತ್ವಗಳೂ ನಾಶವಾಗುತ್ತವೆ. ಇದಕ್ಕಾಗಿ ಪದಾರ್ಥವನ್ನು ನೈಸರ್ಗಿಕವಾಗಿ ತಂಪಾಗಿಡುವ, ಹಿಂದಿನಿಂದಲೂ ಬಳಸಲಾಗುವ ಪ್ರಕ್ರಿಯೆಗಳನ್ನು ಅವಲಂಬಿಸುವುದು ಹೆಚ್ಚು ಅನುಕೂಲಕರವಾಗಿರುತ್ತದೆ. ಈ ವಿಷಯದಲ್ಲಿ ಅರಿವಾದ ಅಂಶಗಳನ್ನು ಮತ್ತು ಮಾಡಿದ ಕೆಲವು ಪ್ರಯೋಗಗಳನ್ನು ಇಲ್ಲಿ ಕೊಡಲಾಗಿದೆ.  (ಭಾಗ ೧)

೧. ವಿದ್ಯುತ್ ಶೀತಕಪಾಟಿನಿಂದ ಆಹಾರದ ಮೇಲಾಗುವ ಪರಿಣಾಮ !

೧ ಅ. ಶೀತಕಪಾಟಿನಲ್ಲಿನ ಹವೆಯನ್ನು ತಂಪಾಗಿಡಲು ವಿಷಕಾರಿ ವಾಯುಗಳನ್ನು ಬಳಸುವುದು ಮತ್ತು ಶರೀರಿದ ಮೇಲೆ ಅವುಗಳ ದುಷ್ಪರಿಣಾಮವಾಗುವುದು : ಶೀತಕಪಾಟನ್ನು ತಂಪು ಮಾಡುವ ಪ್ರಕ್ರಿಯೆಗಾಗಿ ‘ಕ್ಲೋರಿನ್’, ‘ಫ್ಲೋರಿನ್’ ಮತ್ತು ‘ಕಾರ್ಬನ್ ಡೈಆಕ್ಸೈಡ್’ ವಾಯುಗಳನ್ನು ಬಳಸಲಾಗುತ್ತದೆ. ಅದಕ್ಕೆ ‘ಸಿ.ಎಫ್.ಸಿ.’ ಎಂದು ಹೇಳುತ್ತಾರೆ. ಈ ವಾಯು ವಿಷಕಾರಿ ಆಗಿರುತ್ತದೆ. ಇಂತಹ ವಿಷಕಾರಿ ವಾಯುಗಳ ಸಹಾಯದಿಂದ ಶೀತಕಪಾಟನ್ನು ತಂಪಾಗಿಡುವಾಗ ಆಗುವ ಪ್ರಕ್ರಿಯೆಯ ಪರಿಣಾಮವು ಶೀತಕಪಾಟಿನಲ್ಲಿ ಇಡಲಾಗುವ ಆಹಾರಪದಾರ್ಥಗಳ ಮೇಲಾಗುತ್ತದೆ. ಇಂತಹ ಆಹಾರಪದಾರ್ಥಗಳನ್ನು ಸೇವಿಸಿದಾಗ ಸಹಜವಾಗಿಯೇ ಅವುಗಳಿಂದ ಶರೀರದ ಮೇಲೆ ದುಷ್ಪರಿಣಾಮವಾಗುತ್ತದೆ.

೧ ಆ. ತರಕಾರಿ ಅಥವಾ ಹಣ್ಣುಗಳನ್ನು ಗಿಡದಿಂದ ಕಿತ್ತ ಕ್ಷಣದಿಂದಲೇ ಅವುಗಳಲ್ಲಿನ ಚೇತನಾವು ಕಡಿಮೆಯಾಗತೊಡಗುವುದು ಮತ್ತು ಅದರಲ್ಲಿ ಕೆಲವು ಸಮಯದ ನಂತರ ನೈಸರ್ಗಿಕ ರೀತಿಯಲ್ಲಿ ಜೀವಾಣುಗಳು ಉತ್ಪತ್ತಿಯಾಗತೊಡಗುವುದು; ಶೀತಕಪಾಟಿನಲ್ಲಿ ಈ ಪ್ರಕ್ರಿಯೆಯನ್ನು ಅದೇ ಸ್ಥಿತಿಯಲ್ಲಿ ನಿಲ್ಲಿಸುವ ಸೌಲಭ್ಯವಿರುವುದು ಮತ್ತು ಶೀತಕಪಾಟಿನ ಹೊರಗೆ ಬಂದ ತಕ್ಷಣ ಈ ಪ್ರಕ್ರಿಯೆಯು ವೇಗದಿಂದ ಆಗುವುದು : ಶೀತಕಪಾಟಿನಲ್ಲಿ ಇಡುವ ತರಕಾರಿ ಅಥವಾ ಹಣ್ಣುಗಳನ್ನು ಬಹಳ ಸಮಯದ ಮೊದಲೇ ಗಿಡದಿಂದ ? ಕೀಳಲಾಗಿರುತ್ತದೆ. ತರಕಾರಿ ಅಥವಾ ಹಣ್ಣುಗಳನ್ನು ಗಿಡಗಳಿಂದ ಕಿತ್ತ ಕ್ಷಣವೇ ಅದರಲ್ಲಿನ ಚೇತನಾ ಶಕ್ತಿ ಕಡಿಮೆಯಾಗತೊಡಗುತ್ತದೆ ಮತ್ತು ನಿಧಾನವಾಗಿ ಅವು ಕೊಳೆಯತೊಡಗುತ್ತವೆ. ಕಾಲಾಂತರದಲ್ಲಿ ಇಂತಹ ಕೊಯ್ಯಲಾದ ತರಕಾರಿಯಲ್ಲಿ ನೈಸರ್ಗಿಕ ರೀತಿಯಲ್ಲಿ ಜೀವಾಣುಗಳು ಉತ್ಪನ್ನವಾಗಿ ಅವುಗಳ ಕೊಳೆಯುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ವಿದ್ಯುತ್ ಶೀತಕಪಾಟಿನಲ್ಲಿ ಅದನ್ನು ಒಂದೇ ಸ್ಥಿತಿಯಲ್ಲಿ ಇಡು ವಂತಹ ಪ್ರಕ್ರಿಯೆಯು ನಡೆಯುತ್ತದೆ ಮತ್ತು ತರಕಾರಿಗಳನ್ನು ಬಹಳಷ್ಟು ಸಮಯ ಅದೇ ಸ್ಥಿತಿಯಲ್ಲಿ ಇಡಲಾಗುತ್ತದೆ; ಆದರೆ ಇಂತಹ ಸ್ಥಿತಿಯಲ್ಲಿ ತರಕಾರಿಗಳನ್ನು ಶೀತಕಪಾಟಿನಿಂದ ತೆಗೆದಾಗ, ಅವುಗಳಲ್ಲಿ ಜೀವಾಣುಗಳು ಅತಿ ವೇಗದಿಂದ ಹೆಚ್ಚಳವಾಗುತ್ತವೆ.

೧ ಆ ೧. ನೈಸರ್ಗಿಕ ರೀತಿಯಲ್ಲಿ ಬೆಳೆಯುವ ತರಕಾರಿಗಳಿಗೆ ಕಡಿಮೆ ತಾಪಮಾನದ ಅಭ್ಯಾಸವಿಲ್ಲದಿರುವುದು, ಶೀತಕಪಾಟಿನ ಅತ್ಯಂತ ತಂಪು ತಾಪಮಾನದಿಂದಾಗಿ ತರಕಾರಿಗಳು ಒಣಗಿ ಅವುಗಳಲ್ಲಿರುವ ಜೀವಸತ್ತ್ವಗಳು ನಾಶವಾಗುವುದು : ಶೀತಕಪಾಟಿನ ಒಂದು ಭಾಗವೆಂದರೆ, ‘ಫ್ರಾಸ್ಟ್-ಫ್ರೀ ರೆಫ್ರಿಜರೆಟರ್’. ಇದರಲ್ಲಿ ಇಡಲಾದ ತರಕಾರಿಗಳು ಕೆಲವು ಸಮಯದ ನಂತರ ಒಣಗತೊಡಗುತ್ತವೆ; ಏಕೆಂದರೆ ನೈಸರ್ಗಿಕ ರೀತಿಯಲ್ಲಿ ಬೆಳೆದ ತರಕಾರಿಗಳಿಗೆ ಕಡಿಮೆ ತಾಪಮಾನದ ಅಭ್ಯಾಸವಿರುವುದಿಲ್ಲ. ಶೀತಕಪಾಟಿನ ಕಡಿಮೆ ತಾಪಮಾನದಿಂದಾಗಿ ತರಕಾರಿಗಳ ಮೇಲೆ ಪರಿಣಾಮವಾಗ ತೊಡಗುತ್ತದೆ ಮತ್ತು ಅವುಗಳಲ್ಲಿನ ಜೀವಸತ್ತ್ವಗಳೂ ನಾಶವಾಗುತ್ತವೆ.

೧ ಇ. ಬೇಯಿಸಿದ ಆಹಾರದ ತೆಳು ಭಾಗ ಮತ್ತು ನೀರು ಪ್ರತ್ಯೇಕವಾಗುವುದು, ಆ ಪದಾರ್ಥಗಳಲ್ಲಿ ತುಪ್ಪ ಅಥವಾ ಬೆಣ್ಣೆ ಇದ್ದರೆ ಅವು ಸಹ ಹೆಪ್ಪುಗಟ್ಟಿ ಪ್ರತ್ಯೇಕವಾಗುವುದು : ಕೇವಲ ಹಣ್ಣುಗಳು ಅಥವಾ ತರಕಾರಿ ಇವುಗಳಂತಹ ಬೇಯಿಸದ ಪದಾರ್ಥಗಳ ಮೇಲೆಯೇ ಅಲ್ಲ, ಆದರೆ ಶೀತಕಪಾಟಿನಿಂದ ಬೇಯಿಸಿದ ಪದಾರ್ಥಗಳ ಮೇಲೆಯೂ ಅಯೋಗ್ಯ ಪರಿಣಾಮವಾಗುವುದು ಕಂಡು ಬರುತ್ತದೆ. ಶೀತಕಪಾಟಿನಲ್ಲಿ ಇಟ್ಟ ಆಹಾರ ಪದಾರ್ಥವನ್ನು ಬಹಳಷ್ಟು ಸಮಯದ ಮೊದಲೇ ಬೇಯಿಸಲಾಗಿರುತ್ತದೆ. ಸಾರು ಅಥವಾ ಉಸುಳಿ ಇವುಗಳಂತಹ ತೆಳು ಪದಾರ್ಥಗಳನ್ನು ಶೀತ ಕಪಾಟಿನಲ್ಲಿಟ್ಟಾಗ ಅವುಗಳ ಗಟ್ಟಿ ಭಾಗ ಮತ್ತು ನೀರು ಬೇರೆ ಬೇರೆಯಾಗುತ್ತವೆ. ಕೆಲವೊಮ್ಮೆ ಇಂತಹ ಪದಾರ್ಥಗಳಲ್ಲಿ ಬೆಣ್ಣೆ ಅಥವಾ ತುಪ್ಪ ಇದ್ದರೆ ಅವೂ ಸಹ ಬೇರೆಯಾಗಿ ಹೆಪ್ಪುಗಟ್ಟುತ್ತವೆ.

೧ ಈ. ಬ್ರೆಡ್ ತಯಾರಿಸುವಾಗ ಪರಿವರ್ತನೆಗೊಂಡ ಬ್ರೆಡ್‌ನಲ್ಲಿನ ಘಟಕವು ಪದಾರ್ಥದ ಸಂರಚನೆಯನ್ನು ಮೊದಲಿನಂತೆ ಮಾಡುವ ಪ್ರಕ್ರಿಯೆಯಿಂದಾಗಿ ಅದು ಕೆಟ್ಟು ಹೋಗುವುದು : ಬ್ರೆಡ್ ತಯಾರಿಸುವಾಗ ಬ್ರೆಡ್‌ನಲ್ಲಿನ ಪಿಷ್ಟಮಯ ಪದಾರ್ಥ (ಸ್ಟಾರ್ಚ್) ಈ ಘಟಕದ ಸಂರಚನೆಯು ಬ್ರೆಡ್ ತಯಾರಾಗುವಾಗ ಬದಲಾಗುತ್ತದೆ. ಅದರ ಪುಡಿಯು ಎಳೆಯಲ್ಪಡುತ್ತದೆ. ಬ್ರೆಡ್ ತಯಾರಾದ ನಂತರ ಈ ಸಂರಚನೆಯು ಪುನಃ ಮೊದಲಿನಂತಾಗತೊಡಗುತ್ತದೆ. ಶೀತಕಪಾಟಿನಲ್ಲಿರುವ ಕಡಿಮೆ ತಾಪಮಾನದ ವಾತಾವರಣದಿಂದಾಗಿ ಈ ಪ್ರಕ್ರಿಯೆಯು ತೀವ್ರ ಗತಿಯಲ್ಲಾಗುತ್ತದೆ. ಮುಖ್ಯವಾಗಿ ಇದೇ ಪ್ರಕ್ರಿಯೆಯು ಬ್ರೆಡ್ ಕೆಡಲು ಕಾರಣವಾಗುತ್ತದೆ.

೧ ಈ ೧. ಬ್ರೆಡ್‌ನ್ನು ಶೀತಕಪಾಟಿನಲ್ಲಿ ಇಡುವುದರಿಂದ ಅದರಲ್ಲಿನ ನೀರಿನ ಅಂಶವು ಕಡಿಮೆಯಾಗಿ ಅದು ಬಿರುಸಾಗುವುದು : ಬ್ರೆಡ್‌ಅನ್ನು ಶೀತಕಪಾಟಿನಲ್ಲಿಟ್ಟಾಗ ಕೇವಲ ಒಂದೇ ದಿನದ ನಂತರ ಅದು ಬಿರುಸಾಗುತ್ತದೆ. ಬ್ರೆಡ್ ಅನ್ನು ಶೀತಕಪಾಟಿನಲ್ಲಿಟ್ಟಾಗ ಅದರಲ್ಲಿರುವ ನೀರಿನ ಅಂಶವೂ ಇಂಗಿ ಹೋಗುತ್ತದೆ. ಆದ್ದರಿಂದಲೇ ಶೀತಕಪಾಟಿನಲ್ಲಿ ಇಡುವ ಬ್ರೆಡ್ ಕೆಲವು ಸಮಯದ ನಂತರ ತಿಂದರೆ ಬ್ರೆಡ್ಡಿನ ತುಂಡು ಗಂಟಲಿನಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಕೇಕ್‌ನಂತಹ ಪದಾರ್ಥಗಳಲ್ಲಿಯೂ ಇದೇ ರೀತಿಯ ಪ್ರಕ್ರಿಯೆಯು ಕಂಡು ಬರುತ್ತದೆ.

೧ ಉ. ‘ವಾಕ್-ಇನ್ ಫ್ರಿಜ್’ ಇದು ದೊಡ್ಡ ಕೋಣೆಯ ಸ್ವರೂಪದಲ್ಲಿರುವುದು, ಅದರಲ್ಲಿ ‘ಅನೇಕ ಪದಾರ್ಥಗಳನ್ನು ಒಟ್ಟಾಗಿ ಒಂದು ಮುಚ್ಚಿದ ಕೋಣೆಯಲ್ಲಿ ಇಡುವುದರಿಂದ ಯಾವುದೊಂದು ಪದಾರ್ಥವು ಕೆಟ್ಟು ಹೋದರೆ ತಕ್ಷಣ ಗಮನಕ್ಕೆ ಬರದಿರುವುದು, ಕೆಟ್ಟು ಹೋದ ಪದಾರ್ಥದಿಂದ ಇತರ ಪದಾರ್ಥಗಳ ಮೇಲೆ ಪರಿಣಾಮವಾಗುವುದು, ಹಾಗೆಯೇ ಆ ಕೋಣೆಯಲ್ಲಿ ಚಪ್ಪಲಿಗಳನ್ನು ಉಪಯೋಗಿಸಲಾಗುವುದು’, ಇಂತಹ ಅನೇಕ ಕಾರಣಗಳಿಂದ ಅದು ಅಪಾಯಕಾರಿಯಾಗಿರುವುದು : ಶೀತಕಪಾಟಿನಲ್ಲಿ ಇನ್ನೊಂದು ವಿಧವಿದೆ, ಅದು ಎಂದರೆ ‘ವಾಕ್-ಇನ್ ಫ್ರಿಜ್’ ! ಇದರಲ್ಲಿ ಒಂದು ಕೋಣೆಯನ್ನು ಶೀತಕಪಾಟಿನಂತೆ ತಯಾರಿಸಿ ಅಲ್ಲಿ ‘ರೆಫ್ರಿಜರೆಶನ್ ಯುನಿಟ್’ನ್ನು ಅಳವಡಿಸಲಾಗುತ್ತದೆ. ಮುಖ್ಯವಾಗಿ ದೊಡ್ಡ ಔದ್ಯೋಗಿಕ ಸ್ಥಳಗಳಲ್ಲಿ ಅಥವಾ ಪಂಚತಾರಾ ಹೊಟೇಲುಗಳಲ್ಲಿ ಈ ರೀತಿಯ ಶೀತಕಪಾಟುಗಳನ್ನು ಉಪಯೋಗಿಸಲಾಗುತ್ತದೆ; ಆದರೆ ಈ ಪ್ರಕಾರದಲ್ಲಿ ಸ್ಚಚ್ಛತೆಗೆ ಸಂಬಂಧಿಸಿದಂತೆ ಬಹಳಷ್ಟು ಅಡಚಣೆಗಳು ಬರುತ್ತವೆ. ಹೊರಗೆ ಉಪಯೋಗಿಸಲಾಗುವ ಚಪ್ಪಲಿಗಳನ್ನು ಆ ಕೋಣೆಯಲ್ಲಿ ಉಪಯೋಗಿಸಲಾಗುತ್ತದೆ. ಜಾಗವು ದೊಡ್ಡದಿರುವುದರಿಂದ ಬಹಳಷ್ಟು ಪದಾರ್ಥಗಳನ್ನು ಒಟ್ಟಾಗಿ ಇಡಲಾಗುತ್ತದೆ. ಅವುಗಳಲ್ಲಿ ಒಂದು ಪದಾರ್ಥವು ಕೆಟ್ಟು ಹೋದರೆ ಅಲ್ಲಿರುವ ಅನೇಕ ಪದಾರ್ಥಗಳಲ್ಲಿ ಅದು ಗಮನಕ್ಕೇ ಬರುವುದಿಲ್ಲ. ಕೋಣೆಯು ಪೂರ್ತಿಯಾಗಿ ಮುಚ್ಚಿದುದರಿಂದ ಆ ಒಂದು ಕೆಟ್ಟು ಹೋದ ಪದಾರ್ಥಗಳಿಂದ ಇತರ ಪದಾರ್ಥಗಳ ಮೇಲೆಯೂ ಅದರ ಪರಿಣಾಮವಾಗುತ್ತದೆ. ಇಂತಹ ಕೆಲವು ಕಾರಣಗಳಿಂದಾಗಿ ‘ವಾಕ್ -ಇನ್ ರೆಫ್ರಿಜರೆಟರ್’ ಅಪಾಯಕಾರಿಯೆಂದೇ ಹೇಳಬಹುದು. ಮೇಲಿನ ಉದಾಹರಣೆಗಳಿಂದ ನಮಗೆ ವಿದ್ಯುತ್ ಶೀತಕಪಾಟುಗಳ ಅಪಾಯ ಹಾಗೂ ಅದರಿಂದ ‘ಆಹಾರದ ಮೇಲೆಯೂ ಅಯೋಗ್ಯ ಪರಿಣಾಮವಾಗುತ್ತದೆ’, ಎಂದು ಗಮನಕ್ಕೆ ಬರುತ್ತದೆ.’ (ಮುಂದುವರಿಯುವುದು)

– ಶ್ರೀ. ಋತ್ವಿಜ ಢವಣ (‘ಹೊಟೇಲ್ ಮ್ಯಾನೇಜಮೆಂಟ್’ನ ಮಾಜಿವಿದ್ಯಾರ್ಥಿ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೯.೨೦೨೦)