ದೈನಿಕ ‘ಸನಾತನ ಪ್ರಭಾತಕ್ಕಾಗಿ ಲೇಖನಗಳನ್ನು ಕಳುಹಿಸುವಾಗ ಕೇವಲ ನಾವೀನ್ಯಪೂರ್ಣ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಮಾತ್ರ ಸ್ವಲ್ಪದರಲ್ಲಿ ಬರೆದು ಕಳುಹಿಸಬೇಕು !
ಅನೇಕ ಸಾಧಕರು ಸಂಕಲನ ವಿಭಾಗಕ್ಕೆ ಪ್ರಸಾರದಲ್ಲಿನ ಅನುಭವ, ಅನುಭೂತಿ, ಕಲಿಯಲು ಸಿಕ್ಕಿರುವ ಅಂಶಗಳು, ಭಾವಪ್ರಯೋಗ ಮುಂತಾದ ಎಲ್ಲ ಲೇಖನಗಳನ್ನು ದೈನಿಕ ‘ಸನಾತನ ಪ್ರಭಾತದಲ್ಲಿ ಪ್ರಕಟಿಸಲು ಕಳುಹಿಸುತ್ತಾರೆ. ಸದ್ಯ ಸಾಧಕರಿಂದ ಬರುವ ಲೇಖನಗಳ ಸಂಖ್ಯೆಯು ತುಂಬಾ ಹೆಚ್ಚಾಗಿದೆ. ಅಲ್ಲದೇ ಸದ್ಯ ದೈನಿಕ ‘ಸನಾತನ ಪ್ರಭಾತದ ಕೇವಲ ಒಂದೇ, ಅಂದರೆ ಕೇವಲ ‘ಗೋವಾ ಆವೃತ್ತಿ ‘ರತ್ನಗಿರಿ ಆವೃತ್ತಿ ಯನ್ನು ಮಾತ್ರ ಪ್ರಕಾಶಿಸುವುದರಿಂದ ಸಾಧಕರ ಎಲ್ಲ ಲೇಖನಗಳನ್ನು ಕೂಡಲೇ ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಸದ್ಯ ಸಂಚಾರ-ಸಾರಿಗೆಯ ನಿಷೇಧದ ಕಾರಣದಿಂದ ಸಂಕಲನ ಮಾಡುವ ಸಾಧಕರ ಸಂಖ್ಯೆಯೂ ಕಡಿಮೆಯಾಗಿದೆ. ಆದುದರಿಂದ ಇನ್ನು ಮುಂದೆ ಲೇಖನಗಳನ್ನು ಕಳುಹಿಸುವಾಗ ಸಾಧಕರು ಕೆಳಗಿನ ಅಂಶಗಳನ್ನು ಗಮನದಲ್ಲಿ ಕಳುಹಿಸಬೇಕು.
೧. ‘ಸನಾತನ ಪ್ರಭಾತಕ್ಕಾಗಿ ಯಾವ ಲೇಖನಗಳನ್ನು ಕಳುಹಿಸಬೇಕು ?
ಅ. ಪರಾತ್ಪರ ಗುರು ಡಾಕ್ಟರರ ವಿಷಯದಲ್ಲಿನ ವೈಶಿಷ್ಟ್ಯಪೂರ್ಣ ಅನುಭೂತಿಗಳು, ಈ ಹಿಂದಿನ ಅವರ ಭೇಟಿಯ ಪ್ರಸಂಗಗಳು, ಅವರಿಂದ ಕಲಿಯಲು ಸಿಕ್ಕಿದ ಅಂಶಗಳು, ‘ಅವರು ಸೇವೆಯಲ್ಲಿ ಹಾಗೆಯೇ ಸಾಧನೆಯಲ್ಲಿ ನಮ್ಮನ್ನು ಹೇಗೆ ರೂಪಿಸಿದರು ?, ಈ ವಿಷಯದ ಲೇಖನ ಮುಂತಾದವುಗಳನ್ನು ಪ್ರಾಮುಖ್ಯತೆಯಿಂದ ಮತ್ತು ನಿರ್ದಿಷ್ಟವಾಗಿ ಬರೆದು ಕಳುಹಿಸಬೇಕು.
ಆ. ಸನಾತನದ ಸಂತರು ಮತ್ತು ಸದ್ಗುರುಗಳ ಬಗೆಗಿನ ವೈಶಿಷ್ಟ್ಯಪೂರ್ಣ ಅನುಭೂತಿ, ಅವರಿಂದ ಕಲಿತ ಅಂಶಗಳನ್ನು ಕಳುಹಿಸಬಹುದು.
ಇ. ಸಾಧಕರಿಗೆ ಬಂದಂತಹ ನಾವೀನ್ಯಪೂರ್ಣ ಅನುಭೂತಿಗಳು, ಸಾಧಕರ ಜೀವನದಲ್ಲಿನ ಕೆಲವು ವಿಶಿಷ್ಟ ಪ್ರಸಂಗಗಳು ಮುಂತಾದ ಲೇಖನಗಳನ್ನು ಸ್ವಲ್ಪದರಲ್ಲಿ ಕಳುಹಿಸಬಹುದು.
ಈ. ಇತರ ಸಾಧಕರ, ಹಾಗೆಯೇ ಬಾಲಸಾಧಕರ ಗುಣವೈಶಿಷ್ಟ್ಯಗಳನ್ನು ಬರೆದು ಕಳುಹಿಸುವಾಗ ಸಾಧಕರು ಅವುಗಳನ್ನು ಸ್ವಲ್ಪದರಲ್ಲಿ ಮತ್ತು ಅವು ಓದುಗರಿಗೆ ತಿಳಿಯುವಂತೆ ಬರೆದು ಕಳುಹಿಸಬೇಕು. ಬಾಲಸಾಧಕರ ವೈಶಿಷ್ಟ್ಯಪೂರ್ಣ ಲೇಖನಗಳನ್ನು ಕಳುಹಿಸುವ ಬಗ್ಗೆ ಸನಾತನ ಪತ್ರಿಕೆಯಲ್ಲಿ ಆಗಾಗ ಚೌಕಟ್ಟುಗಳನ್ನು ಪ್ರಕಟಿಸಲಾಗಿದೆ. ಆ ಚೌಕಟ್ಟುಗಳನ್ನು ಕತ್ತರಿಸಿಟ್ಟುಕೊಂಡು ಅಥವಾ ಆ ಸಂಚಿಕೆಯನ್ನು ತಮ್ಮ ಬಳಿ ಇಟ್ಟುಕೊಂಡು ಎಲ್ಲ ಅಗತ್ಯ ವಿವರಗಳನ್ನು ಪೂರ್ಣಗೊಳಿಸಿದ ಬಳಿಕವೇ ಆ ಲೇಖನಗಳನ್ನು ಸಂಕಲನ ವಿಭಾಗಕ್ಕೆ ಕಳುಹಿಸಬೇಕು.
ಉ. ಇತರ ವಿಷಯಗಳ ಬಗ್ಗೆ ನಾವೀನ್ಯಪೂರ್ಣ ಲೇಖನಗಳನ್ನೂ ಸ್ವಲ್ಪದರಲ್ಲಿ ಬರೆದು ಕಳುಹಿಸಬಹುದು.
ಊ. ತತ್ಕಾಲೀನ ವಿಷಯಗಳನ್ನು ಕಳುಹಿಸುವಾಗ, ಉದಾ. ‘ಕೊರೊನಾ ಮಹಾಮಾರಿಯ ವಿಷಯದ ಲೇಖನವನ್ನು ಕಳುಹಿಸುವಾಗ ಯಾವ ಮಾಹಿತಿಗಳನ್ನು ‘ಸನಾತನ ಪ್ರಭಾತದಲ್ಲಿ ಈಗಾಗಲೇ ಪ್ರಕಟಿಸಲಾಗಿದೆಯೋ, ಅಂತಹ ಲೇಖನಗಳನ್ನು ಪುನಃ ಕಳುಹಿಸಬಾರದು. ಅದಕ್ಕಿಂತ ಬೇರೆ ಮತ್ತು ವೈಶಿಷ್ಟ್ಯಪೂರ್ಣ ಮಾಹಿತಿಯಿದ್ದರೆ ಮಾತ್ರ ಅದನ್ನು ಸಂಕ್ಷಿಪ್ತವಾಗಿ ಬರೆದು ಕಳುಹಿಸಬೇಕು.
೨. ಯಾವ ಲೇಖನಗಳನ್ನು ಕಳುಹಿಸಬಾರದು ?
ಅ. ಸಾಧಕರು ಮನಸ್ಸಿನ ಸ್ತರದಲ್ಲಿನ ಸವಿಸ್ತಾರ ವಿಚಾರ ಪ್ರಕ್ರಿಯೆಗಳನ್ನು ಬರೆದು ಕಳುಹಿಸಬಾರದು. ಅವುಗಳನ್ನು ವ್ಯಷ್ಟಿ ಸಾಧನೆಯ ಸಭೆಯಲ್ಲಿಯೂ ಹೇಳಬಹುದಾಗಿದೆ.
ಆ. ಸಾಧಕರು ಒಂದೇ ಸಲಕ್ಕೆ ೫-೬ ಕವಿತೆಗಳನ್ನು ಬರೆದು ಕಳುಹಿಸಬಾರದು. ಕೆಲವೊಮ್ಮೆ ಕವಿತೆಗಳಲ್ಲಿನ ಕೆಲವು ಸಾಲುಗಳು ಅಪೂರ್ಣವಾಗಿರುತ್ತವೆ. ಅವುಗಳ ಅರ್ಥವನ್ನು ತಿಳಿದುಕೊಂಡು ಸಂಕಲನ ಮಾಡಲು ಕಠಿಣವಾಗುತ್ತದೆ ಮತ್ತು ಹೆಚ್ಚು ಸಮಯವನ್ನು ಕೊಡಬೇಕಾಗುತ್ತದೆ. ಅನೇಕ ಸಾಧಕರು ತುಂಬಾ ದೊಡ್ಡ ಕವಿತೆಗಳನ್ನು ಕಳುಹಿಸುತ್ತಾರೆ. ಇದರಿಂದ ಕವಿತೆಯಲ್ಲಿನ ಅನಾವಶ್ಯಕ ಭಾಗವನ್ನು ತೆಗೆದು ಅವುಗಳನ್ನು ಸರಿಪಡಿಸಲು ಸಾಧಕರಿಗೆ ಸಮಯವನ್ನು ಕೊಡಬೇಕಾಗುತ್ತದೆ.
ಲೇಖನಗಳನ್ನು ಕಳುಹಿಸುವ ಎಲ್ಲ ಸಾಧಕರು ಲೇಖನದ ಕೆಳಗೆ ತಮ್ಮ ಹೆಸರು, ವಯಸ್ಸು, ಊರು, ದಿನಾಂಕ ಮತ್ತು ಸಂಪರ್ಕ ಕ್ರಮಾಂಕವನ್ನು ಬರೆಯಬೇಕು.
ಜಿಲ್ಲಾಸೇವಕರಿಗೆ ಸೂಚನೆ
ತಮ್ಮ ಜಿಲ್ಲೆಯಲ್ಲಿನ ಎಲ್ಲ ಸಾಧಕರು ‘ಮೇಲಿನ ಎಲ್ಲ ಸೂಚನೆಗಳನ್ನು ಓದಿದ್ದಾರೆಂದು, ಖಚಿತಪಡಿಸಿಕೊಳ್ಳಬೇಕು ಹಾಗೂ ಅದರಂತೆ ಲೇಖನಗಳನ್ನು ಕಳುಹಿಸಲು ಸಾಧಕರಿಗೆ ಪ್ರೋತ್ಸಾಹಿಸಬೇಕು ! – ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೭.೨೦೨೦)