ಪ್ರಸ್ತುತ ಭಾರತದಾದ್ಯಂತ ‘ಕೊರೋನಾ’ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಇದರಿಂದ ಸಾರ್ವಜನಿಕ ವಾಹನಗಳಲ್ಲಿ ಪ್ರವಾಸ ಮಾಡುವುದು ಅಪಾಯಕಾರಿಯಾಗಿದೆ; ಆದುದರಿಂದ ಎಲ್ಲರೂ ಅನಾವಶ್ಯಕ ಪ್ರವಾಸಗಳನ್ನು ತಪ್ಪಿಸಬೇಕು !
‘ಅತ್ಯಾವಶ್ಯಕ ಕಾರಣಗಳಿಂದ ಅಂತರ್ದೇಶಿಯ (ಡೊಮೆಸ್ಟಿಕ್) ವಿಮಾನ ಪ್ರಯಾಣ ಮಾಡುವ ಪ್ರಸಂಗ ಬಂದರೆ ಯಾವ ರೀತಿ ಕಾಳಜಿಯನ್ನು ತೆಗೆದುಕೊಳ್ಳಬೇಕು ?’, ಎಂಬುದನ್ನು ಕೆಳಗೆ ನೀಡಲಾಗಿದೆ.
೧. ಪ್ರಯಾಣದ ಮೊದಲು ಮಾಡಬೇಕಾದ ಪೂರ್ವತಯಾರಿ
೧ ಅ. ವಿಮಾನ ಟಿಕೀಟು ತೆಗೆಯುವುದು : ವಿಮಾನದ ಟಿಕೀಟು ತೆಗೆಯುವಾಗ ಗಣಕೀಯ ಚೆಕ್-ಇನ್ (ವೆಬ್ ಚೆಕ್-ಇನ್) ಮಾಡಬೇಕು. ಇದರಲ್ಲಿ ನಮಗೆ ವಿಮಾನದಲ್ಲಿನ ಕುಳಿತುಕೊಳ್ಳುವ ವ್ಯವಸ್ಥೆಯ ನಕಾಶೆಯನ್ನು ತೋರಿಸಲಾಗುತ್ತದೆ. ಅದನ್ನು ನೋಡಿ ನಮಗೆ ಆಸನವನ್ನು ಮೀಸಲು (ಸೀಟ್ ಬುಕ್ಕಿಂಗ್) ಮಾಡಲು ಬರುತ್ತದೆ. ‘ವಿಮಾನ ನಿಲ್ದಾಣದಲ್ಲಿ ಇತರರೊಂದಿಗೆ ಕಡಿಮೆ ಸಂಪರ್ಕ ಬರಬೇಕೆಂದು’, ಹೀಗೆ ಮಾಡುವುದು ಒಳ್ಳೆಯದಾಗಿದೆ. ಅದನ್ನು ಮಾಡುವಾಗ ಕೊವಿಡ್-೧೯ ಕ್ಕೆ ಸಂಬಂಧಿಸಿದ ಒಂದು ಪ್ರಶ್ನಾವಳಿಯನ್ನು ತುಂಬಬೇಕಾಗುತ್ತದೆ. ಅದರಲ್ಲಿ ನಮಗೆ ಆರೋಗ್ಯದ ದೃಷ್ಟಿಯಿಂದ ಕೆಲವು ಪ್ರಶ್ನೆಗಳನ್ನು (ಉದಾ. ನಿಮಗೆ ಜ್ವರ, ಶೀತ ಮುಂತಾದ ಲಕ್ಷಣಗಳು ಇವೆಯೇ ?, ನಿಮ್ಮ ಮನೆಯಲ್ಲಿ, ಹಾಗೆಯೇ ಅಕ್ಕಪಕ್ಕದಲ್ಲಿ ‘ಕೊರೋನಾ’ದ ರೋಗಿಗಳು ಇದ್ದಾರೆಯೇ ?) ಕೇಳಲಾಗಿರುತ್ತದೆ. ಅದರ ನಂತರ ವಿಮಾನನಲ್ಲಿನ ಆಸನವನ್ನು ಆಯ್ದಕೊಂಡ ಕೂಡಲೇ, ಗಣಕೀಯ ಪ್ರವೇಶ ಪತ್ರ (ಬೋರ್ಡಿಂಗ್ ಪಾಸ್) ಸಿಗುತ್ತದೆ. ಒಂದು ಬಿಳಿ ಕಾಗದದ ಮೇಲೆ ಪ್ರವೇಶಪತ್ರದ ಪ್ರತಿಯನ್ನು (ಪ್ರಿಂಟ್) ತೆಗೆಯಬೇಕು. ಈಗ ಸಂಚಾರವಾಣಿಯಲ್ಲಿನ ಪ್ರತಿಯನ್ನೂ ಮಾನ್ಯ ಮಾಡಲಾಗುತ್ತದೆ.
೧ ಆ. ಸಾಹಿತ್ಯಗಳಿಗೆ ‘ಬ್ಯಾಗೇಜ್ ಟ್ಯಾಗ್’ ಹಚ್ಚುವುದು : ಈಗ ವಿಮಾನನಿಲ್ದಾಣಕ್ಕೆ ಹೋದಾಗ ಮೊದಲಿಂತೆ ಸಾಮಾನುಗಳಿಗೆ ‘ಬ್ಯಾಗೇಜ್ ಟ್ಯಾಗ್’ ಹಚ್ಚುವುದಿಲ್ಲ. ಆದುದರಿಂದ ಸಾಮಾನುಗಳಿಗೆ ಹಚ್ಚುವ ಟ್ಯಾಗ್‌ನ (ಬ್ಯಾಗೆಜ್ ಟ್ಯಾಗ್‌ನ) ಮುದ್ರಿಸಿದ ಪ್ರತಿಗಳು ತಮ್ಮ ಜೊತೆಗಿರಬೇಕು. ಈ ಪ್ರತಿಯನ್ನು ತೆಗೆಯುವುದು ಸಾಧ್ಯವಿಲ್ಲದಿದ್ದರೆ, ಒಂದು ಬಿಳಿಕಾಗದದ ಮೇಲೆ ತಮ್ಮ ಹೆಸರು, ಸಂಚಾರವಾಣಿ ಕ್ರಮಾಂಕ ಮತ್ತು ವಿಮಾನ ಕ್ರಮಾಂಕವನ್ನು ಸ್ಪಷ್ಟ ಅಕ್ಷರಗಳಲ್ಲಿ ಬರೆದು ಆ ಕಾಗದವನ್ನು ಬ್ಯಾಗ್‌ಗೆ ಅಂಟಿಸಬೇಕು.
೧ ಇ. ಎಷ್ಟು ಕಿಲೋ ಸಾಹಿತ್ಯಗಳನ್ನು ತೆಗೆದುಕೊಂಡು ಹೋಗಬಹುದು ?
೧ ಇ ೧. ‘ಕ್ಯಾಬಿನ್ ಬ್ಯಾಗೇಜ್’ : ವಿಮಾನದಲ್ಲಿ ತಮ್ಮೊಂದಿಗೆ ಸಂಚಾರಿ ಗಣಕಯಂತ್ರವಿರುವ ಬ್ಯಾಗ್ (ಲ್ಯಾಪ್ ಟಾಪ್ ಬ್ಯಾಗ್) ಮತ್ತು ಚಿಕ್ಕಪುಟ್ಟ ಸಾಹಿತ್ಯ ಗಳ ಒಂದು ಚಿಕ್ಕ ಚೀಲವನ್ನು ಇಟ್ಟುಕೊಳ್ಳಲು ಅನುಮತಿ ಇದೆ. ಈ ಎರಡೂ ಬ್ಯಾಗ್‌ಗಳ ಒಟ್ಟು ತೂಕ ೭ ಕಿಲೋಗಳಿಗಿಂತ ಹೆಚ್ಚು ಇರಬಾರದು. ಮಹಿಳೆಯರ ಪರ್ಸಅನ್ನು ‘ಕ್ಯಾಬಿನ್ ಬ್ಯಾಗೇಜ್’ನಲ್ಲಿ ಪರಿಗಣಿಸುವುದಿಲ್ಲ. ತಮ್ಮ ಬ್ಯಾಗ್‌ನಲ್ಲಿ ಬಿಸಿ ನೀರಿನ ಬಾಟಲಿ (ಥರ್ಮಾಸ್), ಸಾದಾ ನೀರಿನ ಬಾಟಲಿ, ಹಸಿ ಮತ್ತು ಒಣ ಖಾದ್ಯಪದಾರ್ಥ ಮುಂತಾದವುಗಳನ್ನು ತೆಗೆದುಕೊಂಡು ಹೋಗಬಹುದು.
೧ ಇ ೨. ‘ಚೆಕ್-ಇನ್ ಬ್ಯಾಗೆಜ್’ : ಮೊದಲು ಪ್ರತಿಯೊಬ್ಬ ಪ್ರವಾಸಿಗನಿಗೆ ಅತ್ಯಧಿಕವೆಂದರೆ ೧೫ ಕಿಲೋಗಳಷ್ಟು ತೂಕದ ಸಾಹಿತ್ಯಗಳನ್ನು ತೆಗೆದುಕೊಂಡು ಹೋಗಲು ಅನುಮತಿಯಿತ್ತು. ಈಗ ೨೦ ಕಿಲೋ ತೂಕದ ಸಾಹಿತ್ಯಗಳನ್ನು ತೆಗೆದುಕೊಂಡು ಹೋಗಬಹುದು. ಅದಕ್ಕಿಂತ ಹೆಚ್ಚು ತೂಕದ ಸಾಹಿತ್ಯಗಳನ್ನು ತೆಗೆದುಕೊಂಡು ಹೋಗುವುದಿದ್ದರೆ ಪ್ರತಿ ಕಿಲೋಗೆ ಅಂದಾಜು ೪೦೦ ರೂಪಾಯಿಗಳಂತೆ ಹೆಚ್ಚಿನ ಮೊತ್ತವನ್ನು ತುಂಬಬೇಕಾಗುತ್ತದೆ. ‘ನಮ್ಮ ಬ್ಯಾಗ್‌ಗಳ ತೂಕ ಎಷ್ಟಿದೆ ?’, ಎಂಬುದನ್ನು ಮೊದಲೇ ನೋಡಿಟ್ಟುಕೊಳ್ಳಬೇಕು.
೧ ಈ. ವಿಮಾನ ಹೊರಡುವ ೨ ಗಂಟೆ ಮೊದಲು ವಿಮಾನನಿಲ್ದಾಣಕ್ಕೆ ತಲುಪಬೇಕು ! : ಮೊದಲಿಗೆ ವಿಮಾನ ಹೊರಡುವ ೧ ಗಂಟೆ ಮೊದಲು ವಿಮಾನ ನಿಲ್ದಾಣವನ್ನು ತಲುಪುವುದು ಆವಶ್ಯಕವಾಗಿತ್ತು. ಈಗ ‘ವಿಮಾನ ಹೊರಡುವ ೨ ಗಂಟೆ ಮೊದಲೇ ತಲುಪಬೇಕು’, ಎಂಬ ನಿಯಮವಿದೆ. ವಿಮಾನ ನಿಲ್ದಾಣವನ್ನು ಸಮಯಕ್ಕೆ ಸರಿಯಾಗಿ ತಲುಪಲು ‘ನಿಲ್ದಾಣವನ್ನು ತಲುಪಲು ಎಷ್ಟು ಸಮಯ ತಗಲುತ್ತದೆ ?’, ಎಂದು ಅಭ್ಯಾಸ ಮಾಡಿ ಮನೆಯಿಂದ ಹೊರಡುವ ಸಮಯವನ್ನು ನಿಶ್ಚಯಿಸಬೇಕು.
೨. ಪ್ರಯಾಣದಲ್ಲಿ ತಮ್ಮೊಂದಿಗೆ ಏನಿರಬೇಕು ?
ಅ. ‘ಸ್ಯಾನಿಟೈಝರ್’ನ (ರೋಗಾಣು ನಿರೋಧಕ) ಬಾಟಲಿಯನ್ನು ಇಟ್ಟುಕೊಳ್ಳಬೇಕು, ಇದರಿಂದ ಅತ್ಯಾವಶ್ಯಕ ಸ್ಥಿತಿಯಲ್ಲಿ ಅದನ್ನು ಉಪಯೋಗಿಸಬಹುದು.
ಆ. ವಿಮಾನನಿಲ್ದಾಣದಲ್ಲಿ ಮತ್ತು ಪ್ರಯಾಣದಲ್ಲಿ ಸಂಪೂರ್ಣ ಸಮಯ ‘ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಮಾಸ್ಕ್‌ನ್ನು ಉಪಯೋಗಿಸುವಾಗ ‘ಮೂಗು ಮತ್ತು ಬಾಯಿ ಎರಡನ್ನೂ ಸರಿಯಾಗಿ ಮುಚ್ಚಿಕೊಂಡಿರಬೇಕು.’
ಇ. ವೃದ್ಧರು, ವಿವಿಧ ಕಾಯಿಲೆಗಳಿರುವವರು, ಹಾಗೆಯೇ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳು ಆದಷ್ಟು ಪ್ರಯಾಣವನ್ನು ಮಾಡಬಾರದು. ಪ್ರಯಾಣ ಮಾಡುವುದು ಅನಿವಾರ್ಯವಾಗಿದ್ದರೆ ಪ್ರಯಾಣದಲ್ಲಿ ಪರ್ಸನಲ್ ಪ್ರೋಟೆಕ್ಟಿವ್ ಈಕ್ವಿಪ್‌ಮೆಂಟ್ ಕಿಟ್‌ನ್ನು (ಪಿ.ಪಿ.ಈ. ಕಿಟ್) (ತಲೆಯಿಂದ ಕಾಲುಗಳವರೆಗೆ ಸಂಪೂರ್ಣ ಶರೀರ ಮುಚ್ಚುವಂತಹ, ಪ್ಲಾಸ್ಟಿಕಿನ ಉಡುಪು, ಇದರಲ್ಲಿ ಕೈಗವಸುಗಳು, ಕಾಲುಚೀಲ, ಗಾಗಲ್ (ಕಪ್ಪು ಕನ್ನಡಕ), ಮಾಸ್ಕ್ ಮುಂತಾದವುಗಳಿರುತ್ತವೆ.) ಉಪಯೋಗಿಸಬೇಕು.
ಈ. ಮನೆಯಲ್ಲಿನ ನೀರು, ಹಾಗೆಯೇ ಆಹಾರಪದಾರ್ಥಗಳನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು.
ಉ. ವಿಮಾನದಲ್ಲಿ ಕುಳಿತಾಗ ‘ಫೆಸ್ ಶಿಲ್ಡ್’ (‘ಕೊರೋನಾ’ದಿಂದ ರಕ್ಷಣೆಯಾಗಲು ಮುಖಸ್ತ್ರಾಣ) ಉಪಯೋಗಿಸುವುದು ಕಡ್ಡಾಯವಾಗಿದೆ. ಕೆಲವು ವಿಮಾನ ಕಂಪನಿಗಳಿಂದ ವಿಮಾನದಲ್ಲಿ ಪ್ರವೇಶಿಸುವಾಗ ‘ಫೆಸ್ ಶಿಲ್ಡ್’ನ್ನು ಉಚಿತವಾಗಿ ಕೊಡಲಾಗುತ್ತದೆ.
೩. ವಿಮಾನನಿಲ್ದಾಣದಲ್ಲಿ ತೆಗೆದುಕೊಳ್ಳಬೇಕಾದ ಕಾಳಜಿ
ಅ. ವಿಮಾನನಿಲ್ದಾಣವನ್ನು ಪ್ರವೇಶಿಸುವಾಗ ಪ್ರವೇಶ ಪತ್ರ (ಬೋರ್ಡಿಂಗ್ ಪಾಸ್) ಜೊತೆಗಿರಬೇಕು. ಅದು ಇಲ್ಲದಿದ್ದರೆ ವಿಮಾನನಿಲ್ದಾಣದಲ್ಲಿ ಪ್ರವೇಶ ಸಿಗುವುದಿಲ್ಲ.
ಆ. ವಿಮಾನನಿಲ್ದಾಣದ ಪ್ರವೇಶದ್ವಾರದಲ್ಲಿ ತಪಾಸಣೆಗಾಗಿ ಕೇವಲ ತಾಪಮಾಪನ (ಥರ್ಮಲ್ ಸ್ಕ್ರಿನಿಂಗ್) ಮಾಡಲಾಗುತ್ತದೆ. ಜಂತು ನಿರೋಧಕ (ಸ್ಯಾನಿಟೈಝೆಶನ್) ಮಾಡುವ ಸ್ಪ್ರೆಯಿಂದ ಬ್ಯಾಗ್ ಮತ್ತು ಪಾದತ್ರಾಣಗಳನ್ನು ಜಂತು ನಿರೋಧಕ ಮಾಡಲಾಗುತ್ತದೆ.
ಇ. ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಸಮಯದಲ್ಲಿ, ಸುರಕ್ಷಾ ತಪಾಸಣೆ (ಸೆಕ್ಯುರಿಟಿ ಚೆಕ್-ಇನ್), ಹಾಗೆಯೇ ಸಾಮಾನುಗಳ ಸುರಕ್ಷಾ ತಪಾಸಣೆ (ಲಗೆಜ್ ಚೆಕ್-ಇನ್) ಮಾಡುವಾಗ ಸುರಕ್ಷಿತ ಅಂತರ (ಸೊಶಲ್ ಡಿಸ್ಟನ್ಸಿಂಗ್)ವನ್ನು ಪಾಲಿಸಬೇಕು. ಬಹಳಷ್ಟು ವಿಮಾನ ನಿಲ್ದಾಣಗಳ ಹಾಸುಗಲ್ಲುಗಳ (ಟೈಲ್ಸ್‌ಗಳ) ಮೇಲೆ ‘ಇಲ್ಲಿ ನಿಂತುಕೊಳ್ಳಿ’, ಎಂದು ಬರೆದಿರುತ್ತದೆ. ಆ ಸೂಚನೆಗಳನ್ನು ಪಾಲಿಸಬೇಕು.
೪. ಪ್ರತ್ಯಕ್ಷ ವಿಮಾನಪ್ರಯಾಣ ಮಾಡುವಾಗ
ಅ. ವಿಮಾನದಲ್ಲಿನ ಆಸನಗಳ ವ್ಯವಸ್ಥೆಯು ೨ + ೨ ಇದ್ದರೆ, ಅದರಲ್ಲಿ ಸಾಮಾಜಿಕ ಅಂತರದ ನಿಯಮ ವನ್ನು ಪಾಲಿಸದೇ ಎಲ್ಲ ಆಸನಗಳ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ. ಆಸನ ವ್ಯವಸ್ಥೆಯು ೩ + ೩ ಇದ್ದರೆ, ಮಧ್ಯದ ಆಸನವನ್ನು ಖಾಲಿ ಇಡಲಾಗುತ್ತದೆ. ಪಕ್ಕದ ಆಸನದಲ್ಲಿ ಪ್ರವಾಸಿಯು ಕುಳಿತಿದ್ದರೆ ‘ನಮ್ಮ ಮೂಗು ಮತ್ತು ಬಾಯಿ ಮಾಸ್ಕ್‌ನಿಂದ ಮುಚ್ಚಿದೆಯಲ್ಲ ?’, ಎಂದು ಮೇಲಿಂದಮೇಲೆ ಖಚಿತಪಡಿಸಿಕೊಳ್ಳಬೇಕು, ಹಾಗೆಯೇ ‘ಸ್ಯಾನಿಟೈಝರ್’ ಉಪಯೋಗಿಸಬೇಕು.
ಆ. ಈಗ ವಿಮಾನಗಳಲ್ಲಿ ಯಾವುದೇ ಆಹಾರಪದಾರ್ಥಗಳನ್ನು ಅಥವಾ ನೀರನ್ನು ವಿತರಿಸಲಾಗುವುದಿಲ್ಲ.
ಇ. ‘ವಿಮಾನ ಪ್ರಯಾಣದ ಸಮಯದಲ್ಲಿ ಕೇವಲ ವೃದ್ಧ ಪ್ರವಾಸಿಗಳು ಮಾತ್ರ ಪ್ರಸಾಧನ ಗೃಹಗಳನ್ನು (ಬಾತರೂಮ್) ಉಪಯೋಗಿಸಬಹುದು. ಇತರ ಪ್ರವಾಸಿಗರು ಶೌಚಾಲಯವನ್ನು ಉಪಯೋಗಿಸಬಾರದು’, ಎಂದು ಕೆಲವು ವಿಮಾನ ಕಂಪನಿಗಳು ನಿಯಮವನ್ನು ಮಾಡಿವೆ.
ಈ. ‘ವಿಮಾನದಲ್ಲಿನ ಪ್ರವಾಸಿಗರು ಮತ್ತು ಸಿಬ್ಬಂದಿಗಳೊಂದಿಗೆ ಅತಿ ಕಡಿಮೆ ಅಥವಾ ಸಂಪರ್ಕವಾಗದಂತೆ ನೋಡಿಕೊಳ್ಳಬೇಕು.
೫. ಇತರ ಮಹತ್ವದ ಅಂಶಗಳು
ಅ. ತಮ್ಮ ಮುಖವನ್ನು ಸ್ಪರ್ಶಿಸಬಾರದು. ಸ್ಪರ್ಶಿಸಿದರೆ ಕೈಗಳನ್ನು ನಿರ್ಜಂತುಕ ಮಾಡಿಕೊಳ್ಳಬೇಕು.
ಆ. ವಿಮಾನನಿಲ್ದಾಣದಲ್ಲಿ, ಹಾಗೆಯೇ ವಿಮಾನದಲ್ಲಿನ ವಸ್ತುಗಳನ್ನು ಅಥವಾ ಆಸನದ ಹಿಂದಿನ ಭಾಗವನ್ನು ಅನಾವಶ್ಯಕ ಸ್ಪರ್ಶಿಸಬಾರದು. ಸ್ಪರ್ಶವಾದರೆ ಕೈಗಳನ್ನು ತಕ್ಷಣ ನಿರ್ಜಂತುಕ ಮಾಡಿಕೊಳ್ಳಬೇಕು. (ಸಾಬೂನಿನಿಂದ ತೊಳೆದುಕೊಳ್ಳಬೇಕು ಅಥವಾ ‘ಸ್ಯಾನಿಟೈಝರ್’ ಹಚ್ಚಿಕೊಳ್ಳಬೇಕು.)
ಇ. ಸದ್ಯ ಬಹುತಾಂಶ ವಿಮಾನನಿಲ್ದಾಣಗಳಲ್ಲಿ ‘ಕಾಂಟ್ಯಾಕ್ಟಲೆಸ್’ (ಸ್ಪರ್ಶಿಸದೇ ಪ್ರಾರಂಭವಾಗುವ ಆಗುವ) ನಲ್ಲಿಗಳಿವೆ. ನಮ್ಮ ಕೈಗಳನ್ನು ಆ ನಲ್ಲಿಗಳ ಕೆಳಗೆ ಹಿಡಿದರೆನಲ್ಲಿಯು ತಾನಾಗಿಯೇ ಚಾಲು ಆಗುತ್ತದೆ. ‘ಸ್ಯಾನಿಟೈಝರ್’ ಹಚ್ಚಿಕೊಳ್ಳುವ ಬದಲು ಸಾಬೂನಿನಿಂದ ಕೈತೊಳೆಯುವುದು ಹೆಚ್ಚು ಸುರಕ್ಷಿತವಾಗಿದೆ. ವಿಮಾನನಿಲ್ದಾಣಗಳಲ್ಲಿ ಕೈಗಳನ್ನು ನಿರ್ಜಂತುಕ ಮಾಡಿಕೊಳ್ಳಲು ಅಲ್ಲಲ್ಲಿ ‘ಸೆನ್ಸರ್’ ಇರುವ ‘ಸ್ಯಾನಿಟೈಝರ್’ ಗಳೂ ಇರುತ್ತವೆ. ಆ ‘ಸ್ಯಾನಿಟೈಝರ್’ ಎದುರು ಕೈಗಳನ್ನು ಹಿಡಿದರೆ ಕೈಗಳು ನಿರ್ಜಂತುಕವಾಗುತ್ತವೆ. ಈ. ಸಾಹಿತ್ಯಗಳನ್ನು ತೆಗೆದುಕೊಂಡು ಹೋಗಲು ಟ್ರಾಲಿಯನ್ನು ಉಪಯೋಗಿಸುವ ಮೊದಲು ‘ಸ್ಯಾನಿಟೈಝರ್’ವನ್ನು ಉಪಯೋಗಿಸಬೇಕು.
ಉ. ವಿಶ್ರಾಂತಿಗಾಗಿ ವಿಶ್ರಾಮಕಕ್ಷೆಯ (ರೆಸ್ಟ್ ರೂಮಿನ) ಬಳಕೆ ಮಾಡುವುದಿದ್ದರೆ ಅಲ್ಲಿಗೆ ಹೋಗುವ ಮೊದಲು ಮತ್ತು ಅಲ್ಲಿಂದ ಹೊರಗೆ ಬರುವಾಗ ಕೈಗಳನ್ನು ನಿರ್ಜಂತುಕ ಮಾಡಿಕೊಳ್ಳಬೇಕು.
ಊ. ‘ಕೊರೋನಾ’ದ ಸೋಂಕನ್ನು ತಡೆಗಟ್ಟುವ ದೃಷ್ಟಿಯಿಂದ ಮನೆಯಿಂದ ತೆಗೆದುಕೊಂಡು ಹೋದ, ಹಾಗೆಯೇ ವಿಮಾನನಿಲ್ದಾಣದಲ್ಲಿ ಮಾರಾಟಕ್ಕಿರುವ ಆಹಾರಪದಾರ್ಥಗಳನ್ನು ವಿಮಾನನಿಲ್ದಾಣದಲ್ಲಿ ಮತ್ತು ವಿಮಾನದಲ್ಲಿ ತಿನ್ನುವುದನ್ನು ಸಾಧ್ಯವಿದ್ದಷ್ಟು ತಪ್ಪಿಸಬೇಕು.
ಎ. ಮಾಸ್ಕ್, ಪಿ.ಪಿ.ಈ. ಕಿಟ್, ಕೈಗವಸು ಮುಂತಾದವುಗಳನ್ನು ಎಸೆಯಲು ವಿಮಾನ ನಿಲ್ದಾಣದಲ್ಲಿ ಬೇರೆ ಬೇರೆ ಕಸದ ಪೆಟ್ಟಿಗೆಗಳನ್ನು ಇಟ್ಟಿರುತ್ತಾರೆ. ನಮ್ಮ ಪ್ರಯಾಣ ಪೂರ್ಣವಾದ ನಂತರ ವಿಮಾನ ನಿಲ್ದಾಣದಲ್ಲಿನ ಕಸದ ಪೆಟ್ಟಿಗೆಗಳಲ್ಲಿ ಮಾಸ್ಕ್ ಮುಂತಾದವುಗಳನ್ನು ಎಸೆಯಬೇಕು. ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಬಾರದು.
೬. ಪ್ರಯಾಣದ ನಂತರ ಮನೆಗೆ ಹೋದ ಬಳಿಕ ತೆಗೆದುಕೊಳ್ಳಬೇಕಾದ ಕಾಳಜಿ
ಅ. ಚಪ್ಪಲಿಗಳನ್ನು ಹೊರಗೆ ಇಟ್ಟು ಮನೆಯೊಳಗೆ ಹೋಗಬೇಕು.
ಆ. ಪ್ರಯಾಣದಲ್ಲಿ ಉಪಯೋಗಿಸಿದ ಬಟ್ಟೆಗಳ ಮೇಲೆ ಸಾಧಾರಣ ೧೨ ಗಂಟೆಗಳವರೆಗೆ ರೋಗವನ್ನು ಹರಡುವ ಜಂತುಗಳು ಜೀವಂತವಿರುತ್ತವೆ. ಆದುದರಿಂದ ಪ್ರಯಾಣದಿಂದ ಮನೆಗೆ ಬಂದ ನಂತರ ಆ ಬಟ್ಟೆಗಳನ್ನು ಧರಿಸಿ ಮನೆಯಲ್ಲಿ ತಿರುಗಾಡದೇ ನೇರ ಸ್ನಾನಗೃಹಕ್ಕೆ ಹೋಗಬೇಕು.
ಇ. ಅದರ ನಂತರ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಅದಕ್ಕೂ ಮೊದಲು ‘ಇತರ ಯಾವುದೇ ವಸ್ತುಗಳಿಗೆ ನಮ್ಮ ಸ್ಪರ್ಶವಾಗದಂತೆ’ ಕಾಳಜಿ ವಹಿಸಬೇಕು.
ಈ. ಪ್ರವಾಸದಲ್ಲಿ ಉಪಯೋಗಿಸಿದ ಬಟ್ಟೆಗಳನ್ನು ‘ಡೆಟಾಲ್’ (ಜಂತುನಾಶಕ) ಹಾಕಿದ ನೀರಿನಿಂದ ತೊಳೆಯಬೇಕು ಮತ್ತು ಸಾಧ್ಯವಿದ್ದರೆ ಬಿಸಿಲಿನಲ್ಲಿ ಒಣಗಿಸಬೇಕು.
ತಮ್ಮ ಆರೋಗ್ಯದ ದೃಷ್ಟಿಯಿಂದ ಮೇಲಿನ ಸೂಚನೆಗಳನ್ನು ಪಾಲಿಸಿ ವಿಶೇಷ ಕಾಳಜಿ ವಹಿಸುವುದು ಆವಶ್ಯಕವಾಗಿದೆ !