ಸಾಧಕರಿಗೆ ಮಹತ್ವದ ಸೂಚನೆ !

ಮುಂಬರುವ ಆಪತ್ಕಾಲದ ತೀವ್ರತೆಯನ್ನು ಗಮನದಲ್ಲಿಟ್ಟು ಕಟ್ಟಡದ ಮೂರನೆಯ ಮಹಡಿಗಿಂತ ಮೇಲಿರುವ (ನಾಲ್ಕನೆಯ ಮಹಡಿ ಮತ್ತು ಮೇಲಿನ ಮಹಡಿ) ನಿವಾಸವನ್ನು (ಫ್ಲ್ಯಾಟ್) ಮಾರಾಟ ಮಾಡಿ ನೆಲಅಂತಸ್ತಿನಿಂದ ಮೂರನೆಯ ಮಹಡಿಯಲ್ಲಿ ಫ್ಲ್ಯಾಟ್ ಖರೀದಿಸಿ !

ಮುಂಬರುವ ಆಪತ್ಕಾಲದಲ್ಲಿ ಭೂಕಂಪ, ಭೂಕುಸಿತ, ಸುನಾಮಿ, ಬಿರುಗಾಳಿ, ಅತಿವೃಷ್ಟಿ ಮುಂತಾದ ಪ್ರಾಕೃತಿಕ ಆಪತ್ತುಗಳನ್ನು ಯಾವಾಗ ಎದುರಿಸಬೇಕಾಗುವುದು ?’, ಎಂದು ಹೇಳಲು ಬರುವುದಿಲ್ಲ. ಇಂತಹ ಆಪತ್ತುಗಳಿಂದ ಅಪಾರ ಆರ್ಥಿಕ ಮತ್ತು ಜೀವದ ಹಾನಿಯಾಗುತ್ತದೆ. ಆಪತ್ಕಾಲದ ಪರಿಸ್ಥಿತಿಯಲ್ಲಿ ವಿದ್ಯುತ್, ನೀರು ಮುಂತಾದವುಗಳು ಸಿಗುವುದಿಲ್ಲ. ಆದುದರಿಂದ ಕಟ್ಟಡಕ್ಕೆ ‘ಲಿಫ್ಟ್’ನ ಸೌಲಭ್ಯವಿದ್ದರೂ ಅದರ ಉಪಯೋಗವನ್ನು ಮಾಡಲು ಬರುವುದಿಲ್ಲ. ಇಂತಹ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುವುದು, ಪರಿವಾರದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಮುಂತಾದವುಗಳನ್ನು ಮಾಡುವಾಗ ಅಡಚಣೆಗಳು ಬರಬಹುದು. ಆಪತ್ಕಾಲದಲ್ಲಿ ನಿರ್ಮಾಣವಾಗುವ ಅನಾನುಕೂಲತೆಗಳನ್ನು ಗಮನದಲ್ಲಿಟ್ಟು ಸಾಧಕರು ಮೂರನೇ ಮಹಡಿಗಿಂತ ಮೇಲಿರುವ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿ ಕೆಳಗಿನ ಮಹಡಿಯಿಂದ ಮೂರನೇ ಮಹಡಿಯಲ್ಲಿರುವ ಫ್ಲ್ಯಾಟ್‌ನ್ನು ಖರೀದಿಸುವ ವಿಚಾರ ಮಾಡಿರಿ.

ಮೇಲೆ ಉಲ್ಲೇಖಿಸಿದಂತೆ ವಾಸ್ತುವನ್ನು ಮಾರುವ ಅಥವಾ ಖರೀದಿಸುವ ಪ್ರಕ್ರಿಯೆಯನ್ನು ಮಾಡುವಾಗ ಆದಾಯ (ಇನ್‌ಕಮ್ ಟ್ಯಾಕ್ಸ್), ಬಂಡವಾಳ ಲಾಭ ತೆರಿಗೆ (ಕ್ಯಾಪಿಟಲ್ ಗೆನ್ ಟ್ಯಾಕ್ಸ್) ಮುಂತಾದವುಗಳಿಗೆ ಸಂಬಂಧಿಸಿದ ಸ್ಥಳೀಯ ಲೇಖಾಪಾಲರ (ಸಿ.ಎ. ಇವರ (ಚಾರ್ಟರ್ಡ ಅಕೌಂಟೆಂಟ್ ಇವರ)) ಮಾರ್ಗದರ್ಶನ ಪಡೆಯಬೇಕು. ಫ್ಲ್ಯಾಟ್ ಖರೀದಿಸುವಾಗ ಕೆಳಗೆ ಕೊಡಲಾದ ಅಂಶಗಳನ್ನು ಗಮನದಲ್ಲಿಡಿ.

೧. ‘ಮನೆಯ ನಿರ್ಮಾಣಕಾರ್ಯವು ಉತ್ತಮ ಗುಣಮಟ್ಟದ್ದಾಗಿರಬೇಕು’, ಇದ್ದಕ್ಕಾಗಿ ಅನುಭವಿ ನಿರ್ಮಾಣ ಕಾರ್ಯದ ವ್ಯವಸಾಯಿಕರು (ಬಿಲ್ಡರ್) ಮತ್ತು ಸ್ಥಾಪತ್ಯ ವಿಶಾರದ (ಆರ್ಕಿಟೆಕ್ಟ್) ಇವರು ಮಾಡಿದ್ದಾರೆಯೇ ?, ಎಂದು ನೋಡಬೇಕು.

೨. ‘ಕಟ್ಟಡ ಅಥವಾ ಫ್ಲ್ಯಾಟ್ ಅಧಿಕೃತವಾಗಿದೆ ಎಂಬ ಬಗ್ಗೆ ಪರಿಶೀಲಿಸಿ. ಕಟ್ಟಡದ ಮಾಲೀಕತ್ವದ ಹಕ್ಕಿನ ಬಗ್ಗೆ ವಿವಾದ ಇಲ್ಲವಲ್ಲ ಎಂಬುದನ್ನು ಪರಿಶೀಲಿಸಿ ಮತ್ತು ಈ ವಾಸ್ತುವಿನ ಮಾಲೀಕತ್ವದ ಬಗ್ಗೆ ಕಾನೂನು ರೀತಿಯಲ್ಲಿ ತನಿಖೆ ನಡೆಸಬೇಕು.

೩. ಆಪತ್ಕಾಲದ ಸ್ಥಿತಿಯಲ್ಲಿ ಕಟ್ಟಡದ ಎತ್ತರದಲ್ಲಿರುವ ಮಹಡಿಗಳು ಕುಸಿದು ಕಟ್ಟಡಕ್ಕೆ ಬಹುದೊಡ್ಡ ಸಂಕಟ ಎದುರಾಗಬಹುದು. ಆದುದರಿಂದ ಎತ್ತರದಲ್ಲಿರುವ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸದೇ ೩-೪ ಮಹಡಿಗಳ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸಿ.

೪. ‘ಭೂಕಂಪ, ಅತಿವೃಷ್ಟಿ, ಬಿರುಗಾಳಿ ಮುಂತಾದ ನೈಸರ್ಗಿಕ ಆಪತ್ತುಗಳ ವಿಚಾರ ಮಾಡಿ ಕಟ್ಟಡದ ನಿರ್ಮಾಣ ಕಾರ್ಯ ಮತ್ತು ‘ಆರ್.ಸಿ.ಸಿ. (ರಿಇನ್‌ಫೋರ್ಸ್ಡ್ ಸಿಮೆಂಟ್ ಕಾಂಕ್ರಿಟ್ (RCC) ಡಿಝೈನ್ ಮಾಡಿದ್ದಾರೆಯೇ ಅಥವಾ ಇಲ್ಲವೇ ?, ಎಂದು ನೋಡಬೇಕು. ‘ಭೂಕಂಪದ ಪರಿಣಾಮವಾಗಬಾರದೆಂದು’ ‘ಆರ್.ಸಿ.ಸಿ. ಡಿಝೈನ್’ ಭೂಕಂಪ ನಿರೋಧಕ ಇರುವುದು ಆವಶ್ಯಕವಾಗಿದೆ.

೫. ‘ಕಟ್ಟಡ ಹಾಳಾಗದಿರಲಿ, ಅದರಲ್ಲಿ ಬಿರುಕು ಬೀಳಬಾರದೆಂದು, ಅದರ ನಿರ್ಮಾಣ ಕಾರ್ಯವು ಗಟ್ಟಿಮುಟ್ಟಾದ ಮತ್ತು ಏಕರೂಪ ರಚನೆ (ಹೋಮೊಜೀನಿಯಸ್) ಇರಬೇಕು.

೬. ಕಟ್ಟಡದ ಎತ್ತರದಿಂದಾಗಿ ಹವೆಯ ಒತ್ತಡವನ್ನು ಸಹಿಸುವ ಅದರ ಹೊರಗಿನ ಗೋಡೆಗಳು (outer wall) ಇರದಿದ್ದರೆ ಭವಿಷ್ಯದಲ್ಲಿ ಬಿರುಗಾಳಿ ಬೀಸಿದಾಗ ಆ ಗೋಡೆಗಳು ಬೀಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೊರಗಡೆಯ ಗೋಡೆಗಳಿಗೆ ಬಿರುಗಾಳಿ, ಸುಂಟರಗಾಳಿ, ಅತಿವೃಷ್ಟಿ ಮುಂತಾದವುಗಳಿಂದ ಹಾನಿಯಾಗಬಾರದು ಮತ್ತು ಅವು ಗಟ್ಟಿಯಾಗಿರುವಂತೆ ನೋಡಬೇಕು.

೭. ‘ಗಾಳಿಯ ಸಮತೋಲನ (ಕ್ರಾಸ್ ವೆಂಟಿಲೇಶನ್) ವ್ಯವಸ್ಥಿತವಾಗಿರುವ ದೃಷ್ಟಿಯಿಂದ ಕಟ್ಟಡದ ರಚನೆ (ಡಿಝೈನ್) ಇರುವುದು ಆವಶ್ಯಕವಾಗಿದೆ. ‘ಮನೆ ಅಥವಾ ಫ್ಲ್ಯಾಟ್‌ಗಳಲ್ಲಿ ಗಾಳಿಯ ಸಂಚಾರವಾಗಬೇಕೆಂದು (ವೆಂಟಿಲೇಶನ್‌ಗಾಗಿ) ಸಾಕಷ್ಟು ಕಿಟಕಿಗಳು ಇರುವುದು ಆವಶ್ಯಕವಾಗಿದೆ.

೮. ‘ಫ್ಲ್ಯಾಟ್‌ನ ಮೇಲ್ಛಾವಣಿ, ಗೋಡೆ, ಹಾಸುಗಲ್ಲು ಮುಂತಾದವುಗಳಿಂದ ನೀರು ಸೋರುವುದನ್ನು ತಡೆಗಟ್ಟಲು ಮನೆಗೆ ‘ವಾಟರ್ ಟ್ರೀಟ್‌ಮೆಂಟ್’ ಮಾಡುವುದು ಆವಶ್ಯಕವಾಗಿದೆ.

ಮೇಲಿನ ಹೆಚ್ಚಿನ ಅಂಶಗಳನ್ನು ತಾಂತ್ರಿಕ ದೃಷ್ಟಿಯಿಂದ ತಜ್ಞರಿಂದ ತಿಳಿದುಕೊಳ್ಳಬಹುದು. ಆವಶ್ಯಕತೆಯಿದ್ದರೆ ತಜ್ಞರ ಸಹಾಯ ಪಡೆಯಬೇಕು.

ಸಾಧಕರೇ, ಮುಂಬರುವ ಆಪತ್ಕಾಲದಿಂದ ಪಾರಾಗಲು ಮೇಲೆ ಉಲ್ಲೇಖಿಸಿದಂತೆ ಭೌತಿಕ ಸ್ತರದಲ್ಲಿ ಸಿದ್ಧತೆ ಮಾಡುವುದರೊಂದಿಗೆ ಆಂತರಿಕ  ಸಾಧನೆಯನ್ನು ಹೆಚ್ಚಿಸಿ ಈಶ್ವರನ ಭಕ್ತರಾಗಿ.