ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಿಗೆ ವಿನಂತಿ !

ಅಧಿಕ ಮಾಸದಲ್ಲಿ ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳನ್ನು ಇತರರಿಗೆ ನೀಡಿ ಸರ್ವಶ್ರೇಷ್ಠವಾದ ಜ್ಞಾನದಾನದ ಫಲವನ್ನು ಪಡೆಯಿರಿ !

೧. ಅಧಿಕ ಮಾಸದಲ್ಲಿ ಜ್ಞಾನದಾನಕ್ಕೆ ವಿಶೇಷ ಮಹತ್ವ !

೧೮.೯.೨೦೨೦ ರಿಂದ ೧೬.೧೦.೨೦೨೦ ಈ ಕಾಲಾವಧಿಯಲ್ಲಿ ‘ಅಧಿಕ ಮಾಸ ಇದೆ. ‘ಅಧಿಕ ಮಾಸದಲ್ಲಿ ಮಂಗಲಕಾರ್ಯಗಳನ್ನು ಮಾಡದೇ ವಿಶೇಷ ವ್ರತಗಳು ಹಾಗೂ ಪುಣ್ಯಕರ ಕಾರ್ಯವನ್ನು ಮಾಡಬೇಕು, ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಈ ತಿಂಗಳಿನಲ್ಲಿ ದಾನ ನೀಡಿದರೇ ಅದರ ಹೆಚ್ಚು ಪಟ್ಟು ಫಲ ಸಿಗುತ್ತದೆ. ಆದ್ದರಿಂದ ಈ ಕಾಲದಲ್ಲಿ ವಸ್ತ್ರದಾನ, ಅನ್ನದಾನ ಹಾಗೂ ಜ್ಞಾನದಾನಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಭಾರತೀಯ ಸಂಸ್ಕೃತಿಯಲ್ಲಿ ‘ಜ್ಞಾನದಾನ ಮಾಡುವುದು, ಇದು ಸರ್ವಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿದ್ದರಿಂದ ಅನೇಕರು ಇದಕ್ಕಾಗಿ ಪ್ರಯತ್ನಿಸುತ್ತಿರುತ್ತಾರೆ.

೨. ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಜ್ಞಾನದಾನ ಮಾಡುವ ಅತ್ಯುತ್ತಮ ಮಾಧ್ಯಮವಾಗಿದೆ !

ಸನಾತನದ ಬಹುವಿಧ ಹಾಗೂ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಚಿರಂತನ ಜ್ಞಾನದ ಅಮೂಲ್ಯ ಸಂಗ್ರಹವಾಗಿದೆ ! ಸನಾತನವು ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಆಚಾರಧರ್ಮ, ಧರ್ಮಾಚರಣೆ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ಆಪತ್ಕಾಲದಲ್ಲಿ ಜೀವಂತವಾಗಿರಲು ಉಪಾಯ ಇತ್ಯಾದಿ ವಿಷಯಗಳ ಬಗ್ಗೆ ೩೨೪ ಗ್ರಂಥ ಹಾಗೂ ಕಿರುಗ್ರಂಥಗಳನ್ನು ಪ್ರಕಾಶಿಸಿದೆ. ಈ ಗ್ರಂಥವು ಸುಲಭವಾದ ಭಾಷೆಯಲ್ಲಿ ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುತ್ತದೆ, ಅದೇರೀತಿ ಧರ್ಮದ ಬಗ್ಗೆ ಶ್ರದ್ಧೆಯೂ ಹೆಚ್ಚಿಸುತ್ತದೆ. ಆದ್ದರಿಂದ ಅಧಿಕ ಮಾಸದಲ್ಲಿ

ಇಂತಹ ಗ್ರಂಥಗಳ ಮೂಲಕ ಜ್ಞಾನದಾನವನ್ನು ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಮಾಡಿಕೊಳ್ಳಿರಿ.

ಇತರರಿಗಾಗಿ ನೀಡಲು ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳು ಬೇಕಿದ್ದಲ್ಲಿ ತಮ್ಮ ಬೇಡಿಕೆಯನ್ನು ಶೀಘ್ರವಾಗಿ ಸ್ಥಳೀಯ ವಿತರಕರಿಗೆ ನೀಡಿ ಅಥವಾ https://sanatanshop.com/shop/ ಈ ಲಿಂಕ್‌ಗೆ ಭೇಟಿ ನೀಡಿ