ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

‘ಸನಾತನ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ನಿಸ್ವಾರ್ಥ ಮತ್ತು ನಿರಪೇಕ್ಷವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿನ ಸಾಧಕರು ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು ಈ ಕಾರ್ಯಕ್ಕೆ ಅನೇಕ ವಾಚಕರು, ಹಿತಚಿಂತಕರು ಮತ್ತು ಧರ್ಮ ಪ್ರೇಮಿಗಳು ಜೋಡಿಸಲ್ಪಟ್ಟಿದ್ದಾರೆ.

ಸಾಧಕ-ರೋಗಿಗಳಿಗೆ ಚಿಕಿತ್ಸೆ ನೀಡಲು ಸನಾತನ ಆಶ್ರಮಗಳಲ್ಲಿ ಮರ್ದನ, ಬಿಂದುಒತ್ತಡ, ಪಂಚಕರ್ಮ, ಆಯುರ್ವೇದೀಯ ನ್ಯೂರೋಥೆರಪಿ, ಯೋಗಾಸನ ಈ ವಿಷಯಗಳಲ್ಲಿನ ತಜ್ಞರ ಆವಶ್ಯಕತೆ !

ಈ ಸಾಧಕರಿಗೆ ಉಪಚಾರ ಮಾಡಲು ಸನಾತನದ ರಾಮನಾಥಿ ಮತ್ತು ದೇವದ ಆಶ್ರಮಗಳಲ್ಲಿ ‘ಫಿಸಿಯೋ ಥೆರಪಿಸ್ಟ್’ (ಮರ್ದನ (ಮಾಲಿಶ್), ಬಿಂದು ಒತ್ತಡ, ಪಂಚಕರ್ಮ, ಆಯುರ್ವೇದೀಯ ನ್ಯೂರೋಥೆರೆಪಿ, ಯೋಗಾಸನಗಳು ಈ ವಿಷಯಗಳಲ್ಲಿನ ತಜ್ಞರ) ಆವಶ್ಯಕತೆಯಿದೆ. ಈ ಸೇವೆಯನ್ನು ಪೂರ್ಣವೇಳೆ ಮಾಡುವುದು ಸಾಧ್ಯವಿಲ್ಲದಿದ್ದಲ್ಲಿ ವಾರದಲ್ಲಿನ ಕೆಲವು ದಿನಗಳು ಅಥವಾ ದಿನದಲ್ಲಿ ಕೆಲವು ಗಂಟೆಗಳ ಕಾಲ ಈ ಸೇವೆಯನ್ನು ಮಾಡಬಹುದು.

ಚೈತನ್ಯಮಯ ರಾಮನಾಥಿ ಆಶ್ರಮದಲ್ಲಿ ಸೇವಾನಂದವನ್ನು ಅನುಭವಿಸುವ ಅಮೂಲ್ಯ ಅವಕಾಶ !

ಸನಾತನದ ರಾಮನಾಥಿ ಆಶ್ರಮವೆಂದರೆ ಚೈತನ್ಯದ ಸ್ರೋತ ! ರಾಮನಾಥಿ ಆಶ್ರಮದಲ್ಲಿನ ಅನ್ನಪೂರ್ಣಾ ಕಕ್ಷೆಯಲ್ಲಿ (ಅಡುಗೆ ಮನೆ) ವಿವಿಧ ಸೇವೆಗಳಿಗಾಗಿ ಸಾಧಕರ ಸಂಖ್ಯೆಯು ಕಡಿಮೆ ಇದೆ. ಈ ಸೇವೆಗಳನ್ನು ಮಾಡಲು ಶಾರೀರಿಕ ಕ್ಷಮತೆಯಿರುವ ಸ್ತ್ರೀ ಮತ್ತು ಪುರುಷ ಸಾಧಕರ ಆವಶ್ಯಕತೆಯಿದೆ. ಆಸಕ್ತಿಯುಕ್ತ ಸಾಧಕರು ಪೂರ್ಣವೇಳೆ ಅಥವಾ ಕೆಲವು ಅವಧಿಗಾಗಿ ಆಶ್ರಮದಲ್ಲಿದ್ದು ಈ ಅವಕಾಶದ ಲಾಭವನ್ನು ಪಡೆಯಬಹುದು.

ಉದ್ಯಮಿಗಳಿಗೆ ಸವಿನಯ ವಿನಂತಿ !

ವ್ಯಾಪಾರಿ ಕೆಲಸಕಾರ್ಯದಲ್ಲಿ ವ್ಯಸ್ತವಾಗಿರುವುದರಿಂದ ಅನೇಕ ಉದ್ಯಮಿಗಳಿಗೆ ಪ್ರತ್ಯಕ್ಷ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಮೇಲಿನ ಎರಡೂ ಉದ್ದೇಶಗಳು ಪೂರ್ಣವಾಗಲು ಉದ್ಯಮಿಗಳು ‘ಸನಾತನ ಪಂಚಾಂಗ’ದಲ್ಲಿನ ಜಾಹೀರಾತುಗಳ ಸ್ಥಳದಲ್ಲಿ ಕೇವಲ ತಮ್ಮ ಜಾಹೀರಾತುಗಳನ್ನು ಹಾಕಿ ಪಂಚಾಂಗವನ್ನು ವಿತರಿಸಬಹುದು.

ಸಾಧಕರಿಗಾಗಿ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಮನೆ ಅಥವಾ ಕಾರ್ಯಾಲಯ ಇವುಗಳಿಗಾಗಿ ಎಷ್ಟು ವ್ಯಾಟ್‌ನ ಸೌರಯಂತ್ರವನ್ನು ಅಳವಡಿಸಬೇಕು ? ಅಲ್ಲಿ ಎಷ್ಟು ಪವರ್‌ನ ಬಳಕೆಯಾಗುತ್ತದೆ ?, ವಿದ್ಯುತ್ ಯಂತ್ರವು ಇಲ್ಲದಿದ್ದರೆ ಕನಿಷ್ಠ ಎಷ್ಟು ಪವರ್‌ನ ಆವಶ್ಯಕತೆಯಿದೆ ?’, ಮುಂತಾದ ಬಗ್ಗೆ ಮೊದಲು ಅಭ್ಯಾಸ ಮಾಡಬೇಕು. ಇದಕ್ಕಾಗಿ ಅಂತರ್ಜಾಲದ ಉಪಯೋಗ ಮಾಡಬಹುದು.

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ

ಜಿ. ವೈ. ಶಿತೋಳೆ ಎಂಬ ಯಾವುದೇ ವ್ಯಕ್ತಿಯು ಸನಾತನ ಸಂಸ್ಥೆಯ ಆಶ್ರಮದಲ್ಲಿ ವಾಸಿಸುವುದಿಲ್ಲ ಮತ್ತು ಸನಾತನ ಸಂಸ್ಥೆಯು ಅಂತಹ ಯಾವುದೇ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಈ ವ್ಯಕ್ತಿಯು ಸನಾತನ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಇತರರನ್ನು ದಾರಿ ತಪ್ಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸಾಧಕರು, ವಾಚಕರು ಮತ್ತು ಹಿತಚಿಂತಕರು ಈ ವ್ಯಕ್ತಿಯ ಬಗ್ಗೆ ಎಚ್ಚರದಿಂದಿರಬೇಕು.

ಸಾಧಕರಿಗೆ ಸೂಚನೆ ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆಯಾಗಬಹುದು. ಇನ್ನೂ ಮುಂದೆ ಈ ಇಂಧನಗಳೂ ಸಿಗಲಾರದು. ಆಗ ಇಂಧನದಿಂದ ನಡೆಯುವ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ನಿರುಪಯುಕ್ತವಾಗುವವು. ಇಂತಹ ಸಮಯದಲ್ಲಿ ಪ್ರಯಾಣ ಮಾಡುವುದು, ರೋಗಿಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು, ಸಾಮಾನುಗಳನ್ನು ತರುವುದು ಮುಂತಾದವುಗಳಿಗೆ ಸಾರಿಗೆಯ ಪಾರಂಪಾರಿಕ ಸಾಧನಗಳನ್ನು (ಉದಾ. ಎತ್ತಿನಗಾಡಿ, ಕುದುರೆ ಗಾಡಿ ಇವುಗಳನ್ನು) ಉಪಯೋಗಿಸಬೇಕಾಗುವುದು.

ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಮುಂಬರುವ ಕಾಲದಲ್ಲಿ ಎಲ್ಲ ಆಶ್ರಮ ಮತ್ತು ಸೇವಾಕೇಂದ್ರಗಳಿಗೆ ಎತ್ತಿನಗಾಡಿ ಮತ್ತು ಕುದುರೆಗಾಡಿಗಳ ಆವಶ್ಯಕತೆಗಳು ಭಾಸವಾಗಲಿದೆ. ಇಂದಿಗೂ ಗ್ರಾಮೀಣ ಪ್ರದೇಶದ ಕೆಲವು ರೈತರು ಎತ್ತಿನಗಾಡಿಗಳನ್ನು ಬಳಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಗಾಡಿಗಳನ್ನು ತಯಾರಿಸಲಾಗುತ್ತದೆ. ತಮ್ಮ ಪ್ರದೇಶದಲ್ಲಿನ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸುವವರ ಮಾಹಿತಿಯನ್ನು ಸ್ಥಳೀಯ ಸಾಧಕರಿಗೆ ನೀಡಿರಿ.

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳುವ ಅಮೂಲ್ಯ ಅವಕಾಶ !

‘ಪ್ರಸ್ತುತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವು ಸಂಯುಕ್ತವಾಗಿ ‘ಫೇಸ್‌ಬುಕ್’ ಮತ್ತು ‘ಯೂ ಟ್ಯೂಬ್’ ಈ ಸಾಮಾಜಿಕ ಮಾಧ್ಯಮಗಳಲ್ಲಿ ‘ನಾಮಜಪ ಸತ್ಸಂಗ’, ‘ಬಾಲಸಂಸ್ಕಾರ ವರ್ಗಗಳು’, ‘ಭಾವಸತ್ಸಂಗ’ ಹಾಗೂ ಧರ್ಮಸಂವಾದ’ ಈ ‘ಆನ್‌ಲೈನ್ ಸತ್ಸಂಗಗಳ ಮಾಲಿಕೆ’ಗಳ ಆಯೋಜನೆಯನ್ನು ಮಾಡುತ್ತಿವೆ.

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಸಮಾಜಕ್ಕೆ ನಾಮಜಪ ಮುಂತಾದ ಸಾಧನೆಯ ಮಹತ್ವವು ತಿಳಿಯಬೇಕು ಹಾಗೂ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯದ ಪ್ರಸಾರವಾಗಬೇಕು’, ಎಂಬ ದೃಷ್ಟಿಯಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಆನ್‌ಲೈನ್ ಸತ್ಸಂಗ ಮಾಲಿಕೆ’ಯನ್ನು ಪ್ರಸಾರ ಮಾಡಲಾಗುತ್ತಿದೆ. ದೇಶದಾದ್ಯಂತ ಸಂಚಾರಸಾರಿಗೆ ನಿರ್ಬಂಧವು ಜಾರಿಗೆ ಬಂದ ಕಾರಣ ಮನೆಮನೆಗೆ ಹೋಗಿ ಅಧ್ಯಾತ್ಮ ಪ್ರಸಾರ ಮಾಡಲು ಸಾಧ್ಯವಾಗುತ್ತಿಲ್ಲ.